Sabudana Which is Called Sanjeevini for The Poor is Also Good for Health
ಸಾಬಕ್ಕಿ ಅಥವಾ ಸಬ್ಬಕ್ಕಿ ಎಂದು ಕರೆಯಲ್ಪಡುವ ಸಾಬುದಾನ (Sago) ಧಾನ್ಯವೋ, ಬೀಜವೋ ಎಂಬ ಬಗ್ಗೆ ಹಲವರಿಗೆ ನಿಖರ ಮಾಹಿತಿ ತಿಳಿದಿರಲಿಕ್ಕಿಲ್ಲ. ಅಕ್ಕಿ, ಗೋಧಿಯಂತೆಯೇ ಸಾಬಕ್ಕಿ ಕೂಡಾ ಗಿಡದಲ್ಲಿ ಹಾಗೆಯೇ ಬೆಳೆಯುತ್ತದೆ ಎಂದು ನೀವು ತಿಳಿದರೆ ತಪ್ಪಾದೀತು. ಯಾಕೆಂದರೆ ಈ ಸಾಬಕ್ಕಿಯನ್ನು ಮರಗೆಣಸು ಎಂಬ ಗಡ್ಡೆಯಿಂದ ಮಾಡಿದ್ದು ಎಂದರೆ ನೀವು ನಂಬಲೇಬೇಕು.
ಪ್ರಪಂಚದ ವಿವಿಧ ಭಾಗಗಳಲ್ಲಿ ಸಬ್ಬಕ್ಕಿ (Sabu dana)ಯನ್ನು ಸಾಗೋ, ಸಕ್ಸಾಕ್, ರಾಬಿಯಾ ಮತ್ತು ಸಾಗು (Sago) ಎಂದೂ ಕರೆಯಲ್ಪಡುವ ಸಾಬುದಾನವು ಉಷ್ಣವಲಯದ ತಾಳೆ ಮರಗಳ ಪಿತ್ ಅಥವಾ ಸ್ಪಂಜಿನ ಕೇಂದ್ರದಿಂದ ಹೊರತೆಗೆಯಲಾದ ಖಾದ್ಯ. ಸಬ್ಬಕ್ಕಿ ಅದರ ಅದ್ಭುತ ಆರೋಗ್ಯ (Health) ಪ್ರಯೋಜನಗಳಿಂದ (Benefits) ಫಿಟ್ನೆಸ್ ಕಾಪಾಡಿಕೊಳ್ಳಲು ಬಯಸುವವರಿಗೆ ಇದು ಹೇಳಿ ಮಾಡಿಸಿದ ಪದಾರ್ಥವಾಗಿದೆ.ವಾಸ್ತವವಾಗಿ, ಇದನ್ನು ಪ್ರಪಂಚದಾದ್ಯಂತ ವಿವಿಧ ರೀತಿಯಲ್ಲಿ ಆಹಾರ (Food)ತಯಾರಿಸಿ ತಿನ್ನುತ್ತಾರೆ.
ಕೆಲವರು ಇದನ್ನು ಗಂಜಿ, ಕಿಚಡಿ, ಪ್ಯಾನ್ಕೇಕ್ಗಳು, ರೋಲ್ಗಳು (Pancakes, Rolls) ಮತ್ತು ಫ್ರೈಗಳಾಗಿ ತಯಾರಿಸುತ್ತಾರೆ. ವಾಣಿಜ್ಯಿಕವಾಗಿ ಸಬ್ಬಕ್ಕಿಯನ್ನು ಮುತ್ತುಗಳ ರೂಪದಲ್ಲಿ ಮಾರಾಟ ಮಾಡಲಾಗುತ್ತದೆ, ಇದು ಅಡುಗೆ ಮಾಡಲು ಸುಲಭವಾಗುತ್ತದೆ. ಇದರ ಸೇವನೆಯಿಂದ ದೇಹಕ್ಕೆ ಶಕ್ತಿ ಸಿಗುತ್ತದೆ. ಅಧಿಕ ರಕ್ತದ ಒತ್ತಡ ಇದ್ರೆ ಅದು ನಿಯಂತ್ರಣಕ್ಕೆ ಬರುತ್ತದೆ.
ಇದರಲ್ಲಿ ನಾರಿನಂಶ ಹೇರಳವಾಗಿರುವುದರಿಂದ ಹೊಟ್ಟೆಯುಬ್ಬರ, ಮಲಬದ್ಧತೆಯಂಥ ಸಮಸ್ಯೆಗಳಿಗೆ ಇದು ಉತ್ತಮ ಪರಿಣಾಮ ಒದಗಿಸುತ್ತದೆ. ತಿಂದ ಆಹಾರ ಜೀರ್ಣವಾಗುವ ಸಮಸ್ಯೆ ಇರುವ ಮಂದಿಗೂ ಇದು ಅತ್ಯುತ್ತಮ ಪರಿಹಾರ ನೀಡುವ ಆಹಾರ. ತೂಕ ಏರಿಸಬೇಕೆಂದು ಬಯಸುವ ಮಂದಿಗೆ ಇದು ಒಳ್ಳೆಯ ಆಹಾರದ ಆಯ್ಕೆ. ಇದರಲ್ಲಿ ಕಬ್ಬಿಣಾಂಶವಿರುವುದರಿಂದ ರಕ್ತಹೀನತೆಯಿಂದ (Anaemia) ಬಳಲುವ ಮಂದಿ ಇದನ್ನು ಸೇವಿಸಿದರೆ ಉತ್ತಮ ಪರಿಹಾರ ಕಾಣಬಹುದು.
ಅಷ್ಟೇ ಅಲ್ಲದೆ ಇದರಲ್ಲಿ ಪೊಟಾಶಿಯಂ (Potassium) ಅಧಿಕವಾಗಿರುವುದರಿಂದ ಇದಕ್ಕೆ ರಕ್ತದೊತ್ತಡವನ್ನು ಸಮತೋಲನಕ್ಕೆ ತರುವ ಗುಣವನ್ನು ಹೊಂದಿದೆ.ಇದು ಒಳ್ಳೆಯ ಕೊಲೆಸ್ಟೆರಾಲ್ ಮಟ್ಟವನ್ನು ಸಮತೋಲನದಲ್ಲಿರಿಸುತ್ತದೆ. ಇದರಲ್ಲಿ ನಾರಿನಂಶ ಹಾಗೂ ವಿಟಮಿನ್ ಬಿ ಇರುವುದರಿಂದ ಹೃದಯ ಸಂಬಂಧೀ ತೊಂದರೆಗಳಿಗೆ ಒಳ್ಳೆಯದು.
ಇದರಲ್ಲಿ ಆಂಟಿ ಆಕ್ಸಿಡೆಂಟ್ಗಳು (Anti-Oxidant) ಹಾಗೂ ಅಮೈನೋ ಆಸಿಡ್ಗಳು ಹೇರಳವಾಗಿ ಇರುವುದರಿಂದ ಇದು ಚರ್ಮದ ಆರೋಗ್ಯಕ್ಕೆ ಅತ್ಯುತ್ತಮ. ಸಾಬಕ್ಕಿಯನ್ನು ನೆನೆ ಹಾಕಿ ಅದರ ಪೇಸ್ಟ್ ಅನ್ನು ಮುಖಕ್ಕೆ ಹಚ್ಚುವುದರಿಂದ ನುಣುಪಾದ ಚರ್ಮ ನಿಮ್ಮದಾಗುತ್ತದೆ.