- ನಕಲಿ ಔಷಧಿಗಳ ವಿರುದ್ಧ ಆರೋಗ್ಯ ಇಲಾಖೆಯ (health department new plan) ನಯಾ ಪ್ಲಾನ್
- ಕ್ಯೂಆರ್ ಕೋಡ್ ಮತ್ತು ಬಾರ್‌ಕೋಡ್ ಮೂಲಕ ಔಷಧಿಗಳ ಟ್ರ್ಯಾಕ್–ಟ್ರೇಸ್ ವ್ಯವಸ್ಥೆ ಜಾರಿಗೆ ಆರೋಗ್ಯ ಇಲಾಖೆ ಸಿದ್ಧತೆ
- ಉತ್ಪಾದನೆದಿಂದ ಮಾರಾಟದವರೆಗೆ ಔಷಧಿಗಳ ಮೇಲೆ ನಿಗಾ ವಹಿಸಲು ಕೋಡಿಂಗ್ ವ್ಯವಸ್ಥೆ
Bengaluru: ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ವಸ್ತುಗಳ (health department new plan) ಗುಣಮಟ್ಟದ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನ ಹೆಚ್ಚಾಗುತ್ತಿದೆ.
ಅದರಲ್ಲೂ ಔಷಧಿಗಳ ವಿಷಯದಲ್ಲಿ ನಕಲಿ ಹಾಗೂ ಕಳಪೆ ಗುಣಮಟ್ಟದ ಉತ್ಪನ್ನಗಳು ಹೆಚ್ಚುತ್ತಿರುವುದು ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ.
ರೋಗಿಗಳ ಆರೋಗ್ಯದೊಂದಿಗೆ ನೇರವಾಗಿ ಸಂಬಂಧ ಹೊಂದಿರುವ ಫಾರ್ಮಸಿ (Pharmacy) ಕ್ಷೇತ್ರದಲ್ಲಿ ಈ ರೀತಿಯ ವಂಚನೆಗಳು ಜನರ ಆತಂಕವನ್ನು ಮತ್ತಷ್ಟು ಹೆಚ್ಚಿಸಿವೆ. ಈ ಹಿನ್ನೆಲೆಯಲ್ಲಿ ನಕಲಿ ಔಷಧಿಗಳ ಹಾವಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಕರ್ನಾಟಕ ಆರೋಗ್ಯ ಇಲಾಖೆ ಮಹತ್ವದ ಹಾಗೂ ಕಾಲೋಚಿತ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.

ಔಷಧಿಗಳ ಬಳಕೆ, ವಿತರಣೆ ಮತ್ತು ಮಾಹಿತಿ ವ್ಯವಸ್ಥೆಯಲ್ಲಿ (health department new plan) ಮೂಲಭೂತ ಬದಲಾವಣೆ ತರಲು ಇಲಾಖೆ ಯೋಜನೆ ರೂಪಿಸಿದೆ.
ರಾಜ್ಯದಲ್ಲಿ ಈಗಾಗಲೇ ನಕಲಿ ಹಾಗೂ ಕಳಪೆ ಗುಣಮಟ್ಟದ ಔಷಧಿಗಳನ್ನು ಪತ್ತೆಹಚ್ಚಿ ಅವುಗಳ ಬ್ಯಾಚ್ (Batch) ನಂಬರ್‌ಗಳೊಂದಿಗೆ ನಿಷೇಧಿಸುವ ಕ್ರಮಗಳನ್ನು ಆರೋಗ್ಯ ಇಲಾಖೆ ಕೈಗೊಂಡಿದೆ.
ಆದರೂ, ಒಂದೆಡೆ ಫೇಕ್ ಔಷಧಿಗಳನ್ನು ನಾಶಪಡಿಸಿದರೆ ಮತ್ತೊಂದೆಡೆ ಹೊಸ ನಕಲಿ ಉತ್ಪನ್ನಗಳು ಮಾರುಕಟ್ಟೆಗೆ ಪ್ರವೇಶಿಸುತ್ತಿರುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.
ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು, ಕೇವಲ ದಾಳಿ ಮತ್ತು ನಿಷೇಧ ಸಾಕಾಗುವುದಿಲ್ಲ ಎಂಬ ಅರಿವಿನಿಂದ ಆರೋಗ್ಯ ಇಲಾಖೆ ಈಗ ಔಷಧಗಳ ಬಳಕೆ ಮತ್ತು ಟ್ರ್ಯಾಕಿಂಗ್ (Tracking) ವ್ಯವಸ್ಥೆಯನ್ನೇ ಸಂಪೂರ್ಣವಾಗಿ ಬದಲಾಯಿಸಲು ಮುಂದಾಗಿದೆ.
ಈ ಹೊಸ ನಿಯಮಗಳ ಪ್ರಮುಖ ಅಂಶವೆಂದರೆ ಔಷಧಿ ಪ್ಯಾಕೆಟ್‌ಗಳ (Packet) ಮೇಲೆ ಕಡ್ಡಾಯವಾಗಿ ಬಾರ್‌ಕೋಡ್ ಮತ್ತು ಕ್ಯೂಆರ್ ಕೋಡ್ (QR Code) ಮುದ್ರಿಸುವ ವ್ಯವಸ್ಥೆ.
ಈ ಕೋಡ್‌ಗಳನ್ನು ಸ್ಕ್ಯಾನ್ ಮಾಡಿದ ಕೂಡಲೇ ಸಂಬಂಧಿಸಿದ ಔಷಧಿಯ ಸಂಪೂರ್ಣ ಮಾಹಿತಿ ಸಾರ್ವಜನಿಕರಿಗೆ ಲಭ್ಯವಾಗಲಿದೆ.
ಔಷಧಿ ಯಾವ ಕಂಪನಿಯಲ್ಲಿ ತಯಾರಿಸಲಾಗಿದೆ, ಯಾವ ದಿನಾಂಕದಲ್ಲಿ ಉತ್ಪಾದನೆಯಾಗಿದೆ, ಬ್ಯಾಚ್ ನಂಬರ್ ಏನು, ಎಕ್ಸ್‌ಪೈರಿ ಡೇಟ್ (Expiration Date) ಯಾವುದು, ಬಳಸಿರುವ ಅಂಶಗಳು ಮತ್ತು ಅವುಗಳ ಪ್ರಮಾಣ, ಔಷಧಿಯ ಉಪಯೋಗಗಳು ಹಾಗೂ ಸಂಭವನೀಯ ಸೈಡ್ ಎಫೆಕ್ಟ್‌ಗಳ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ತಿಳಿಯುವಂತಾಗುತ್ತದೆ.
ಇದರಿಂದ ರೋಗಿಗಳು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿ ಮತ್ತು ವಿಶ್ವಾಸ ಹೊಂದಲು ಸಹಾಯವಾಗಲಿದೆ.
ಆರಂಭಿಕ ಹಂತದಲ್ಲಿ ಪ್ರಮುಖ ಔಷಧಿಗಳಿಗೆ ಈ ಕ್ಯೂಆರ್ ಕೋಡ್ ವ್ಯವಸ್ಥೆ ಜಾರಿಯಾಗಲಿದ್ದು, ಹಂತ ಹಂತವಾಗಿ ಇಡೀ ಫಾರ್ಮಾ ಕ್ಷೇತ್ರಕ್ಕೆ ಕೋಡಿಂಗ್ ವ್ಯವಸ್ಥೆಯನ್ನು ವಿಸ್ತರಿಸುವ ಯೋಜನೆ ಆರೋಗ್ಯ ಇಲಾಖೆಯದ್ದು.
ಈ ಕ್ರಮದಿಂದ ಔಷಧಿಗಳ ಟ್ರ್ಯಾಕ್ ಮತ್ತು ಟ್ರೇಸ್ (Track and trace) ಸುಲಭವಾಗಲಿದ್ದು, ನಕಲಿ ಉತ್ಪನ್ನಗಳು ಮಾರುಕಟ್ಟೆಗೆ ನುಗ್ಗುವ ಸಾಧ್ಯತೆ ಬಹಳಷ್ಟು ಕಡಿಮೆಯಾಗಲಿದೆ.
ಈ ಬಗ್ಗೆ ಕೇಂದ್ರ ಸರ್ಕಾರವೂ ಎಲ್ಲಾ ರಾಜ್ಯಗಳ ಆರೋಗ್ಯ ಇಲಾಖೆಗಳೊಂದಿಗೆ ಸಮಾಲೋಚನೆ ನಡೆಸುತ್ತಿದ್ದು, ರಾಷ್ಟ್ರಮಟ್ಟದಲ್ಲಿ ಏಕೀಕೃತ ವ್ಯವಸ್ಥೆ ತರಲು ಅಗತ್ಯ ಮಾಹಿತಿ ಸಂಗ್ರಹಿಸುತ್ತಿದೆ.
ಒಟ್ಟಾರೆ, ನಕಲಿ ಔಷಧಿಗಳ ವಿರುದ್ಧ ಕರ್ನಾಟಕ ಆರೋಗ್ಯ ಇಲಾಖೆ ಕೈಗೊಂಡಿರುವ ಈ ಹೊಸ ರೂಲ್ಸ್‌ಗಳು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಬಹಳ ಮಹತ್ವದ್ದಾಗಿವೆ.
ಇನ್ಮುಂದೆ ಔಷಧಿಗಳ ಬಗ್ಗೆ ಸಂಪೂರ್ಣ ಮಾಹಿತಿ ರೋಗಿಗಳ ಕೈಯಲ್ಲೇ ಇರುವುದರಿಂದ, ತಪ್ಪು ಔಷಧ ಸೇವನೆಯ ಅಪಾಯ ಕಡಿಮೆಯಾಗುವ ಸಾಧ್ಯತೆ ಇದೆ.
ಜೊತೆಗೆ ಫಾರ್ಮಸಿ ಕ್ಷೇತ್ರದಲ್ಲಿ ಪಾರದರ್ಶಕತೆ ಹೆಚ್ಚಾಗಿ, ವಿಶ್ವಾಸಾರ್ಹ ಔಷಧಿಗಳ ಬಳಕೆಗೆ ಉತ್ತೇಜನ ಸಿಗಲಿದೆ. ಇದು ಕೇವಲ ನಿಯಮ ಬದಲಾವಣೆ ಅಲ್ಲ,
ಬದಲಾಗಿ ರೋಗಿಗಳ ಸುರಕ್ಷತೆ ಮತ್ತು ಆರೋಗ್ಯದ ಮೇಲಿನ ಸರ್ಕಾರದ ಬದ್ಧತೆಯನ್ನು ತೋರಿಸುವ ಮಹತ್ವದ ಹೆಜ್ಜೆಯಾಗಿದೆ.