• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಆರೋಗ್ಯ

ಅತಿವೃಷ್ಟಿಯಿಂದ ಮಕ್ಕಳಲ್ಲಿ ಅನಾರೋಗ್ಯ: ಹೆಚ್ಚುತ್ತಿದೆ ಕೈ ಕಾಲು-ಬಾಯಿ ಹುಣ್ಣು ರೋಗ.

Bhavya by Bhavya
in ಆರೋಗ್ಯ, ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌
ಅತಿವೃಷ್ಟಿಯಿಂದ ಮಕ್ಕಳಲ್ಲಿ ಅನಾರೋಗ್ಯ: ಹೆಚ್ಚುತ್ತಿದೆ ಕೈ ಕಾಲು-ಬಾಯಿ ಹುಣ್ಣು ರೋಗ.
0
SHARES
658
VIEWS
Share on FacebookShare on Twitter

ವಾತಾವರಣದಲ್ಲಿನ ಬದಲಾವಣೆ ಹಾಗೂ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಎಲ್ಲೆಡೆ ಕೆಮ್ಮು, ನೆಗಡಿ (Cough, Cold) ಶೀತದ ಜತೆಗೆ ಮಕ್ಕಳಲ್ಲಿ ಕೈ, ಕಾಲು ಮತ್ತು ಬಾಯಿ ಹುಣ್ಣುಗಳು ಕಾಣಿಸಿಕೊಳ್ಳುತ್ತಿದ್ದು ಮಕ್ಕಳು ಹೇಳಿಕೊಳ್ಳಲು ಆಗದೆ, ಸರಿಯಾಗಿ ಆಹಾರ ಸೇವಿಸಲು ಸಾಧ್ಯವಾಗದೆ ಒದ್ದಾಡುವಂತೆ ಮಾಡುತ್ತಿದೆ. ಕೈ, ಕಾಲು ಮತ್ತು ಬಾಯಿ ಹುಣ್ಣಿನ ರೋಗ ಇದ್ದವರಲ್ಲಿನ ವೈರಸ್‌ (Virus) ಮತ್ತೊಬ್ಬರಿಗೆ ಹರಡುವುದರಿಂದ ಇದೊಂದು ಅಂಟು ರೋಗದ ಲಕ್ಷಣದ ಸಾಲಿಗೆ ಸೇರುತ್ತದೆ. ಇದರಿಂದಾಗಿ ಮಕ್ಕಳನ್ನು ಕಾಪಾಡಿಕೊಳ್ಳುವುದು ಅತಿ ಮುಖ್ಯವಾಗಿದೆ.

ಸಾಮಾನ್ಯವಾಗಿ ರೋಗನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳಲ್ಲಿ ಈ ಪ್ರಕರಣಗಳು ಹೆಚ್ಚಾಗಿರುತ್ತವೆ. ಸೋಂಕಿತ ಮಗುವಿನ ಸಂಪರ್ಕ ಹೊಂದುವ ಇತರೆ ಮಕ್ಕಳಿಗೆ ರೋಗ ಹರಡುತ್ತದೆ. ಅಂದರೆ ಆ ಮಗುವಿನ ಬಾಯಿಯಿಂದ ಸ್ರವಿಸುವ ಜೊಲ್ಲು, ಮಲ, ಮೂತ್ರ, ಗುಳ್ಳೆಗಳಿಂದ ಸ್ರವಿಸುವ ದ್ರವ ತಾಗಿದರೆ ಹಾಗೂ ಚರ್ಮತಾಗಿದರೂ ಅದರಲ್ಲಿನ ಸೋಂಕು ಹರಡುತ್ತದೆ. ಇನ್ನು ಈ ರೋಗದ ಮುಖ್ಯ ಲಕ್ಷಣವೆಂದರೆ ಜ್ವರ, ಗಂಟಲು ನೋವು, ಸುಸ್ತು (Fever, Sore Throat, Fatigue) ನಾಲಗೆ ಹಾಗೂ ಬಾಯಿಯಲ್ಲಿ ಹುಣ್ಣು, ಕೈ, ಕಾಲುಗಳಲ್ಲಿ ನೀರು ತುಂಬಿದ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ.

ಕಕ್ಸಾಕಿ ವೈರಾಣು ಅಥವಾ ಎಂಟೆರೊವೈರಸ್‌ 71 ರಿಂದಲೂ ಮಕ್ಕಳಲ್ಲಿ ಕೈ, ಬಾಯಿ ಮತ್ತು ಕಾಲು ರೋಗ ಕಾಣಿಸಿಕೊಳ್ಳುತ್ತದೆ. ಜಾನುವಾರಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುವ ಈ ರೋಗ ಮಾರಣಾಂತಿಕವಾಗಿರುತ್ತದೆ. ಆದರೆ ಇದಕ್ಕೆ ಮನುಷ್ಯರು ಆತಂಕಪಡುವ ಅಗತ್ಯವಿಲ್ಲ. ಈ ರೋಗದಿಂದ ಬಾಯಿ ಒಳಗೆ ಗುಳ್ಳೆಗಳು ಆಗುವುದರಿಂದ ಜೇನು ತುಪ್ಪ ಅಥವಾ ಗ್ಲಿಸರಿನ್‌ (Glycerin) ಸವರುವುದರಿಂದ ಉರಿ ಕಡಿಮೆಯಾಗುತ್ತದೆ. ಕೈಕಾಲುಗಳು ಕೆಲಮಿನ್‌ ಲೋಷನ್‌ (Clamin Lotion) ಹಚ್ಚುವುದರಿಂದ ತಣ್ಣಗಾಗಿ ಕಿರಿಕಿರಿ ಕಡಿಮೆಯಾಗುತ್ತದೆ.ಈ ನೋವಿನಿಂದ ಕೆಲ ಮಕ್ಕಳಲ್ಲಿ ಜ್ವರ ಕಾಣಿಸಿಕೊಳ್ಳುತ್ತದೆ.

ಈ ಸಮಸ್ಯೆ ಹೊಂದಿರುವ ಮಕ್ಕಳಿಗೆ ಎಳನೀರು (Tender Coconut), ಗಂಜಿ, ಹಣ್ಣಿನ ರಸ, ಸೇರಿದಂತೆ ಹಣ್ಣಿನ ದ್ರವ ಆಹಾರಗಳನ್ನು ನೀಡಬೇಕು. ಉಪ್ಪು, ಕಾರ, ಮಸಾಲೆ ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ನೀಡಬಾರದು.ಇನ್ನು ಇದು ಒಬ್ಬರಿಂದೊಬ್ಬರಿಗೆ ಹರಡುವ ರೋಗವಾಗಿರುವುದರಿಂದ ಅಂತಹ ಮಕ್ಕಳನ್ನು ಪೂರ್ಣ ಗುಣ ಹೊಂದುವವರೆಗೂ ಸಾರ್ವಜನಿಕ ಸ್ಥಳಗಳಿಗೆ ಇಲ್ಲವೇ ಶಾಲೆಗೆ ಕಳುಹಿಸದಿರುವುದು ಉತ್ತಮ.

Tags: coldcoughfeverHealthsore throat

Related News

ಷೇರು ಮಾರುಕಟ್ಟೆಯಲ್ಲಿ ಪಾಸಿಟಿವ್ ಬ್ರೇಕ್‌ಔಟ್: 200 DMA ದಾಟಿದ 12 ಕಂಪನಿಗಳ ಮೇಲೆ ಇನ್ವೆಸ್ಟ್ ಮಾಡೋದು ಬೆಸ್ಟ್
ಪ್ರಮುಖ ಸುದ್ದಿ

ಷೇರು ಮಾರುಕಟ್ಟೆಯಲ್ಲಿ ಪಾಸಿಟಿವ್ ಬ್ರೇಕ್‌ಔಟ್: 200 DMA ದಾಟಿದ 12 ಕಂಪನಿಗಳ ಮೇಲೆ ಇನ್ವೆಸ್ಟ್ ಮಾಡೋದು ಬೆಸ್ಟ್

April 17, 2026
ಚಾರಣಿಗರಿಗೆ ಹೊಸ ನಿಯಮಗಳು: ಸುರಕ್ಷತೆಗೆ ರಾಜ್ಯ ಸರ್ಕಾರದ ಕಟ್ಟು ನಿಟ್ಟಿನ SOP ಜಾರಿ
ಪ್ರಮುಖ ಸುದ್ದಿ

ಚಾರಣಿಗರಿಗೆ ಹೊಸ ನಿಯಮಗಳು: ಸುರಕ್ಷತೆಗೆ ರಾಜ್ಯ ಸರ್ಕಾರದ ಕಟ್ಟು ನಿಟ್ಟಿನ SOP ಜಾರಿ

April 17, 2026
ಚಿಕನ್ ಪ್ರಿಯರಿಗೆ ಶಾಕ್ – ರಾಜ್ಯಕ್ಕೆ ಕಾಲಿಟ್ಟ ಹಕ್ಕಿ ಜ್ವರ ವೈರಸ್
ಪ್ರಮುಖ ಸುದ್ದಿ

ಚಿಕನ್ ಪ್ರಿಯರಿಗೆ ಶಾಕ್ – ರಾಜ್ಯಕ್ಕೆ ಕಾಲಿಟ್ಟ ಹಕ್ಕಿ ಜ್ವರ ವೈರಸ್

April 17, 2026
ಇಸ್ರೇಲ್–ಲೆಬನಾನ್ ನಡುವಿನ ಸಂಘರ್ಷಕ್ಕೆ ತಾತ್ಕಾಲಿಕ ಬ್ರೇಕ್: ಅಮೆರಿಕ ಮಧ್ಯಸ್ಥಿಕೆಯಲ್ಲಿ 10 ದಿನಗಳ ಕದನ ವಿರಾಮ
ದೇಶ-ವಿದೇಶ

ಇಸ್ರೇಲ್–ಲೆಬನಾನ್ ನಡುವಿನ ಸಂಘರ್ಷಕ್ಕೆ ತಾತ್ಕಾಲಿಕ ಬ್ರೇಕ್: ಅಮೆರಿಕ ಮಧ್ಯಸ್ಥಿಕೆಯಲ್ಲಿ 10 ದಿನಗಳ ಕದನ ವಿರಾಮ

April 17, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.