ಕೊರೋನಾ (Corona) ಮಹಾಮಾರಿ ಹೆಸರು ಕೇಳಿದ್ರೆ ಈಗಲೂ ಜನ ಬೆಚ್ಚಿಬೀಳುತ್ತಾರೆ. ಕೋವಿಡ್ ಸಮಯದಲ್ಲಿ ಬಲಿಯಾದವರ ಸಂಖ್ಯೆ ಲೆಕ್ಕವಿಲ್ಲದಷ್ಟು. ಈ ಸಾವಿನ ಸಮಯದಲ್ಲೂ ವೈದ್ಯರು ಕೆಲವರ ಜೀವ ಉಳಿಸಲು ಅವರ ಚಿಕಿತ್ಸೆಗಾಗಿ ಸ್ಟೀರಾಯ್ಡ್ ಬಳಕೆ ಮಾಡಿದ್ದರು. ಆ ಸಮಯದಲ್ಲಿ ಜನರ ಜೀವನ ಉಳಿಸಲು ಸಹಾಯ ಮಾಡಿದ್ದು ಇದೇ ಸ್ಟಿರಾಯ್ಡ್. ಆದ್ರೆ ಇದೀಗ ಸ್ಟಿರಾಯ್ಡ್ (Steroid) ಬಳಕೆ ಮಾಡಿದ್ದರಿಂದ ಜನರ ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರುತ್ತಿವೆ.

ಕೋವಿಡ್ ಸಮಯದಲ್ಲಿ ತೆಗೆದುಕೊಂಡ ಅತಿಯಾದ ಸ್ಟೀರಾಯ್ಡ್ನಿಂದ ಯುವಜನರಲ್ಲಿ ಆರೋಗ್ಯ ಸಮಸ್ಯೆಗಳು (Health problems) ಕಾಡುತ್ತಿವೆ. ಈ ಆತಂಕಕಾರಿ ವಿಚಾರದ ಬಗ್ಗೆ ವೈದ್ಯರು ಮಾಹಿತಿ ಬಿಚ್ಚಿಟ್ಟಿದ್ದಾರೆ. ಕೋವಿಡ್ ಟೈಮ್ನಲ್ಲಿ ಜೀವ ಉಳಿಸುವ ಸಲುವಾಗಿ ವೈದ್ಯರು ರೋಗಿಗಳಿಗೆ ಅತೀಯಾದ ಸ್ಟೀರಾಯ್ಡ್ ಬಳಸಿದ್ದರು. ಆದ್ರೆ ಇದೀಗ ಇದೇ ಸ್ಟೀರಾಯ್ಡ್ನಿಂದ ವಯಸ್ಕರು ಆರೋಗ್ಯ ಸಮಸ್ಯೆಯಿಂದ ಒದ್ದಾಡುತ್ತಿದ್ದಾರೆ.
ಅತಿಯಾದ ಸ್ಟೀರಾಯ್ಡ್ನಿಂದ ಯುವಕರಲ್ಲಿ ಕೂಡ ಇದೀಗ ಸೊಂಟ ನೋವು (Hip pain), ಮಂಡಿ ನೋವು (Knee pain) ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಬಹಿರಂಗವಾಗಿದೆ. ಕೋವಿಡ್ ಸೋಂಕಿನ (Covid infection) ಸಂದರ್ಭದಲ್ಲಿ ಜೀವ ಉಳಿಸಲು, ವೈರಸ್ ವಿರುದ್ಧ ಹೋರಾಡಲು ಅತಿಯಾದ ಪ್ರಮಾಣದಲ್ಲಿ ಸ್ಟೀರಾಯ್ಡ್ ಬಳಕೆ ಮಾಡಲಾಗಿತ್ತು. ಆದ್ರೆ ಇದ್ರಿಂದ ಯುವಜನತೆ ಮೊಣಕಾಲು ನೋವು, ಕಾಲು, ನೋವು ಸೊಂಟ ನೋವಿನಿಂದ ಬಳಲುತ್ತಿದದ್ದಾರೆ. ವಯೋವೃದ್ಧರಲ್ಲಿ ಮೊಣಕಾಲು ನೋವು ಸೇರಿದಂತೆ ಕಾಲು ನೋವು, ಸೊಂಟ ನೋವು, ಬೆನ್ನು ನೋವು ಹೆಚ್ಚಾಗಿ ಕಂಡುಬರುತ್ತಿದೆ.
ವಯಸ್ಸಾದವರಿಗೆ ಸಾಮಾನ್ಯವಾಗಿ ಮಂಡಿ ನೋವು, ಸೊಂಟ ನೋವು ಕಾಣಿಸಿಕೊಳ್ಳೋದು ಸಹಜ. ಆದ್ರೆ ಇತ್ತೀಚೆಗೆ ವಯಸ್ಕರಲ್ಲೇ ಈ ಸಮಸ್ಯೆಗಳು ಕಾಡುತ್ತಿವೆ. ವಯೋವೃದ್ಧರಿಗಿಂತ ಹೆಚ್ಚಾಗಿ ವಯಸ್ಕರೇ ಹೆಚ್ಚಾಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅತಿಯಾದ ಸ್ಟೀರಾಯ್ಡ್ ಸೇವನೆ ಯುವಕರಲ್ಲಿ ಕಾರ್ಟಿಲೇಜ್ ನಷ್ಟಕ್ಕೆ (Cartilage loss) ಕಾರಣವಾಗ್ತಿದೆ. ದೇಹದ ಮೂಳೆ ದುರ್ಬಲ (Bone weak), ಸೊಂಟ, ಮಂಡಿ ನೋವುಗಳು ಕಾಣಿಸಿಕೊಳ್ತಿದೆ. ಈ ಬಗ್ಗೆ ವೈದ್ಯರೇ ಮಾಹಿತಿ ನೀಡುತ್ತಿದ್ದಾರೆ.
ಕುಳಿತುಕೊಳ್ಳಲು ಕಷ್ಟ ಆಗುವುದು, ಮೆಟ್ಟಿಲು ಇಳಿಯಲು ಕಷ್ಟಪಡುವುದು, ನಡೆಯುವಾಗ ವಿಪರೀತ ನೋವು ಬಂದ್ರೆ ನಿರ್ಲಕ್ಷ್ಯ ಮಾಡದೆ ಕೂಡಲೇ ವೈದ್ಯರ ಬಳಿ ತಪಾಸಣೆ ಮಾಡಿದ್ರೆ ಒಳ್ಳೆಯದು. ನಿರ್ಲಕ್ಷ್ಯ ಮಾಡಿದರೆ ನಂತರ ಹಿಪ್ ರೀಪ್ಲೇಸ್ಮೆಂಟ್ (Hip replacement), ಅಥವಾ ಮಂಡಿಚಿಪ್ಪು ರಿಪ್ಲೇಸ್ಮೆಂಟ್ (Patella Replacement) ಸರ್ಜರಿಗೆ ಒಳಪಡಬೇಕಾಗಬಹುದು ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.