ಆಯುರ್ವೇದದ (Ayurveda) ಪ್ರಕಾರ ನೆಲ್ಲಿಕಾಯಿ ಆರೋಗ್ಯಕ್ಕೆ (Gooseberry for health) ತುಂಬಾ ಒಳ್ಳೆಯದು ನೆಲ್ಲಿಕಾಯಿಯಲ್ಲಿ ವವಿಟಮಿನ್ ಸಿ (Vitamin C) ಸಮೃದ್ಧವಾಗಿದ್ದು ಇದನ್ನು ತಿನ್ನುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ.ನೆಲ್ಲಿಕಾಯಿ ಸೇವಿಸಿವುದರಿಂದ ಆರೋಗ್ಯದ ಲಾಭದ (Health benefits) ಜೊತೆಗೆ ಸೌಂದರ್ಯಕ್ಕೂ ರಾಮಬಾಣದ ರೀತಿ ಕೆಲಸ ಮಾಡುತ್ತದೆ ಮತ್ತು ಕೂದಲಿನ ಬೆಳವಣಿಗೆಗೂ ಸಹಾಯ ಮಾಡುತ್ತದೆ.
ಇನ್ನು ಪ್ರತಿನಿತ್ಯ 2-3 ಒಣಗಿದ ನೆಲ್ಲಿಕಾಯಿ (Dried gooseberries) ತಿನ್ನುವುದರಿಂದ ದೇಹಕ್ಕೆ ಸಾಕಷ್ಟು ಆರೋಗ್ಯ ಪ್ರಯೋಜನಗಳು ದೊರೆಯುತ್ತವೆ.ಒಣಗಿದ ನೆಲ್ಲಿಕಾಯಿಯಲ್ಲಿ ನಾರಿನಂಶ ಅಧಿಕವಾಗಿದ್ದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.ಕರುಳಿನ ಚಲೆನೆಯನ್ನು ನಿಯಂತ್ರಿಸುತ್ತದೆ.ದೇಹವು ಕಬ್ಬಿಣಾಂಶವನ್ನು (Iron content) ಹೀರಿಕೊಳ್ಳಲು ಸಹಾಯ ಮಾಡುತ್ತದೆ.ಇದರಲ್ಲಿರುವ ಆಂಟಿಆಕ್ಸಿಡೆಂಟ್ಗಳು ಹಾನಿಕಾರಕ ಫ್ರೀ ರಾಡಿಕಲ್ಗಳನ್ನು (Free radicals) ತಟಸ್ಥಗೊಳಿಸುತ್ತದೆ, ಕೋಶಗಳನ್ನು ಹಾನಿಯಿಂದ ರಕ್ಷಿಸುತ್ತದೆ. ಆಮ್ಲಾದಲ್ಲಿನ ಟ್ಯಾನಿನ್ಗಳು ಸಂಕೋಚಕಗಳಾಗಿ ಕಾರ್ಯನಿರ್ವಹಿಸುತ್ತವೆ.
ಒಣಗಿದ ನೆಲ್ಲಿಕಾಯಿಯಲ್ಲಿ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ (Minerals and oxidation) ನಿರೋಧಕಗಳು ಸಮೃದ್ಧವಾಗಿದ್ದು, ಇದನ್ನು ಪೋಷಕಾಂಶಗಳ (Nutrients) ಗಣಿ ಎಂದು ಕರೆಯಲಾಗುತ್ತದೆ. ಚೆನ್ನಾಗಿ ಒಣಗಿಸಿದ ಈ ನೆಲ್ಲಿಕಾಯಿಯನ್ನು ನೀವು ವರ್ಷವಿಡೀ ಉಪಯೋಗಿಸಬಹುದು.ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್ಗಳು ಅಧಿಕವಾಗಿವೆ.ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಸೋಂಕುಗಳು ಮತ್ತು ರೋಗಗಳ ವಿರುದ್ಧ ಹೋರಾಡುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.ನೆಲ್ಲಿಕಾಯಿ ಕಾಲಜನ್ ಅಂಗಾಂಶವನ್ನು (Collagen tissue) ರಕ್ಷಿಸುತ್ತದೆ ಮತ್ತು ವಯಸ್ಸಾದ ಚಿಹ್ನೆಗಳನ್ನು ತಡೆಯುತ್ತದೆ. ವಯಸ್ಸಾದ ವಿರೋಧಿ ಗುಣಗಳಲ್ಲದೇ, ರೋಗನಿರೋಧಕ ಶಕ್ತಿಯನ್ನು (Immunity) ಹೆಚ್ಚಿಸುವ ಗುಣಗಳನ್ನು ಹೊಂದಿದೆ.
ನೆಲ್ಲಿಕಾಯಿ ಬಾಯಿ ಹುಣ್ಣುಗಳನ್ನು (Mouth ulcers) ಕಡಿಮೆ ಮಾಡುತ್ತದೆ. ಮಧುಮೇಹಿಗಳಿಗೂ (Diabetics) ನೆಲ್ಲಿಕಾಯಿ ಒಳ್ಳೆಯದು. ಜೊತೆಗೆ ತೂಕ (Plus weight) ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೂ ನೆಲ್ಲಿಕಾಯಿ ಸಹಾಯಕವಾಗಿದೆ. ಒಣ ನೆಲ್ಲಿಕಾಯಿಯನ್ನು ಹಾಗೆಯೇ ತಿನ್ನಬಹುದು ಅಥವಾ ನೆಲ್ಲಿಕಾಯಿ ಜ್ಯೂಸ್ ಮಾಡಿ ಸಹ ಕುಡಿಯಬಹುದು.ಒಣ ಆಮ್ಲಾದಲ್ಲಿರುವ ಉತ್ಕರ್ಷಣ ನಿರೋಧಕಗಳು (Antioxidants) ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ತಡೆಯುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.ಅಲ್ಲದೇ ತಲೆಹೊಟ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಚರ್ಮದ ಆರೋಗ್ಯವನ್ನೂ ಸಹ ಸುಧಾರಿಸುತ್ತದೆ