vijaya times advertisements
Visit Channel

ಎಚ್ಚರವಿರಲಿ ಮೂಳೆಗಳ ಆರೋಗ್ಯದ ಬಗ್ಗೆ! ; ತಪ್ಪದೇ ಈ ಮಾಹಿತಿ ತಿಳಿದುಕೊಳ್ಳಿ

Health

Health : ಇತ್ತೀಚಿನ ಆಹಾರ ಪದ್ಧತಿ, ಜೀವನ ಶೈಲಿಯಿಂದಾಗಿ, ನಮ್ಮ ಮೂಳೆಗಳು(Bones) ಶಕ್ತಿ ಕಳೆದುಕೊಳ್ಳುತ್ತಿವೆ. ಮೂಳೆಗಳು ದುರ್ಬಲವಾದರೆ ಸ್ನಾಯುಗಳ ಶಕ್ತಿಯನ್ನು ಕುಂದಿಸುತ್ತವೆ.

ದೀರ್ಘಕಾಲದವರೆಗೆ ಮೂಳೆಗಳ ಆರೋಗ್ಯದ ಬಗ್ಗೆ ಗಮನ ನೀಡದಿದ್ದರೆ ಆಸ್ಟಿಯೋಪೊರೊಸಿಸ್‌ನಂತಹ ಕಾಯಿಲೆ ಕಾಣಿಸಿಕೊಳ್ಳಬಹುದು.

health
Human Bone

ಇದರಿಂದ ಕಿಫೋಸಿಸ್ ಅಥವಾ ದುರ್ಬಲವಾದ ಮೂಳೆಗಳಾಗಿ ಬದಲಾವಣೆಗೊಂಡು ಮುರಿತ ಉಂಟಾಗುತ್ತದೆ. ಅಲ್ಲದೇ ಸಂಧಿಗಳು ದುರ್ಬಲಗೊಳ್ಳುತ್ತವೆ ಮತ್ತು ಸಂಧಿವಾತದಂತಹ ಸಮಸ್ಯೆಗಳು ಎದುರಾಗುತ್ತವೆ.

ಈಗ ಆಸ್ಟಿಯೋಪೊರೊಸಿಸ್ ಬಹಳ ಜನರಲ್ಲಿ ಕಾಣಿಸಿಕೊಳ್ಳುತ್ತಿದ್ದು, ರೋಗಕ್ಕೆ ತುತ್ತಾಗುವ ಜನರು ಸಾಮಾನ್ಯವಾಗಿ ಮಣಿಕಟ್ಟು, ಬೆನ್ನೆಲುಬು ಮತ್ತು ಹಿಪ್‌ನ ಮೂಳೆಗಳ ಮುರಿತಕ್ಕೆ ಒಳಗಾಗುತ್ತಾರೆ.

ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ಭಾರತೀಯ ಮಹಿಳೆಯರು 30 ರಿಂದ 60 ವರ್ಷ ವಯಸ್ಸಿನಲ್ಲಿಯೇ ಈ ಸಮಸ್ಯೆಗೆ ಹೆಚ್ಚು ತುತ್ತಾಗುತ್ತಿದ್ದಾರೆ.

ಈ ಸಮಸ್ಯೆಗೆ ಪ್ರಮುಖ ಕಾರಣಗಳೆಂದರೆ ಕಡಿಮೆ ಕ್ಯಾಲ್ಸಿಯಂ ಇರುವ ಪದಾರ್ಥಗಳ ಸೇವನೆ, ಸರಿಯಾದ ರೀತಿಯಲ್ಲಿ ಆಹಾರ ಸೇವಿಸದಿರುವುದು.

ಇದನ್ನೂ ಓದಿ : https://vijayatimes.com/congress-should-be-banned-says-kateel/

ಗ್ಯಾಸ್ಟ್ರೋಇಂಟೆಸ್ಟಿನಲ್ ಶಸ್ತ್ರಚಿಕಿತ್ಸೆಗೆ ಒಳಗಾದವರು, ಸ್ಟೆರಾಯ್ಡ್‌ಗಳನ್ನು ಮತ್ತು ಇತರೆ ಔಷಧಗಳನ್ನು ತೆಗೆದುಕೊಳ್ಳುವ ರೋಗಿಗಳಿಗೆ ಅಡ್ಡ ಪರಿಣಾಮ ಉಂಟಾಗಿ ಮೂಳೆಗಳಲ್ಲಿ ಸವೆತ ಉಂಟಾಗುತ್ತದೆ, ವಿಟಮಿನ್ ಡಿ ಇಂಥವರಲ್ಲಿ ಕಡಿಮೆ ಪ್ರಮಾಣದಲ್ಲಿರುತ್ತದೆ.


ಇನ್ನು, ಹೃದ್ರೋಗ, ಪಾರ್ಶ್ವವಾಯು, ಬೊಜ್ಜು, ಮಧುಮೇಹ ಮತ್ತು ಥೈರಾಯ್ಡ್, ರುಮಟಾಯ್ಡ್ ಅರ್ಥ್ರೈಟಿಸ್, ಸೆಲಿಯಾಕ್ ರೋಗಗಳೂ ಸಹ ಮೂಳೆಗಳ ಆರೋಗ್ಯವನ್ನು ಹದಗೆಡಿಸಬಹುದು.

ಧೂಮಪಾನ, ಮದ್ಯಪಾನ ಮತ್ತು ಮಾದಕದ್ರವ್ಯ ಸೇವನೆ ಕೂಡ ಮೂಳೆಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.
ದೈಹಿಕ ಚಟುವಟಿಕೆ, ದೈಹಿಕವಾಗಿ ಚಟುವಟಿಕೆ ರಹಿತ ಜನರು ಅನಾರೋಗ್ಯಪೂರ್ಣ ಮೂಳೆಗಳನ್ನು ಹೊಂದುವ ಅಪಾಯ ಹೆಚ್ಚು.


ಪುರುಷರಿಗೆ ಹೋಲಿಸಿದರೆ ಮಹಿಳೆಯರು ಕಡಿಮೆ ಮೂಳೆ ಅಂಗಾಂಶವನ್ನು ಹೊಂದಿರುವ ಕಾರಣ ಮಹಿಳೆಯರಲ್ಲಿ ಈ ಅಪಾಯ ಹೆಚ್ಚಿರುತ್ತದೆ.

Health Tips for Bone Disease
Smoking


ಅತ್ಯಂತ ತೆಳ್ಳಗಿರುವ ಅಥವಾ ಕಡಿಮೆ ಬೋನ್‌ಮಾಸ್‌ನಿಂದಾಗಿ ಸಣ್ಣ ದೇಹದ ಚೌಕಟ್ಟು ಹೊಂದಿರುವವರಲ್ಲಿ ಅನಾರೋಗ್ಯಕರ ಮೂಳೆಗಳು ಇರಬಹುದು. ವಯಸ್ಸು ಹೆಚ್ಚಾದಂತೆ ಮೂಳೆಗಳು ತೆಳ್ಳಗಾಗುತ್ತವೆ.


ಜನಾಂಗ ಮತ್ತು ಕುಟುಂಬ ಇತಿಹಾಸ : ಏಷಿಯನ್‌ ಮೂಲದವರಲ್ಲಿ ಅಸ್ಥಿರಂಧ್ರತೆ ಉಂಟಾಗುವ ಅಪಾಯ ಹೆಚ್ಚಿರುತ್ತದೆ. ವಂಶ ಪರಂಪರೆಯಾಗಿ ಈ ರೋಗ ಬರಬಹುದು.


ಹಾರ್ಮೋನ್‌ಗಳ ಮಟ್ಟ : ಥೈರಾಯ್ಡ್‌ಗೆ ಹೆಚ್ಚಿನ ಚಾಲನೆ ನೀಡುವಂತಹ ಹಾರ್ಮೋನ್‌ ದೇಹದಲ್ಲಿ ಹೆಚ್ಚಾಗಿ ಉತ್ಪಾದನೆಯಾದರೆ ಇದರಿಂದ ಮೂಳೆಯ ಹಾನಿ ಉಂಟಾಗಬಹುದು. ಋುತುಬಂಧದ ನಂತರ ಓಸ್ಟ್ರೋಜಿನ್‌ ಮಟ್ಟ ಮಹಿಳೆಯರಲ್ಲಿ ಕಡಿಮೆಯಾಗುವುದು ಕೂಡ ಅಸ್ಥಿರಂಧ್ರತೆ ಕಾಣಿಸಿಕೊಳ್ಳಲು ಮತ್ತೊಂದು ಕಾರಣವಾಗಬಹುದು.

ಇದನ್ನೂ ಓದಿ : https://vijayatimes.com/gold-medal-to-hero-mother/


ಈ ಸಮಸ್ಯೆಗೆ ಪರಿಹಾರಗಳೂ ಇವೆ. ನಿಯಮಿತವಾದ ವ್ಯಾಯಾಮ, ಕ್ಯಾಲ್ಸಿಯಂ ಮತ್ತು ಖನಿಜಾಂಶಗಳು ಇರುವ ಸಮರ್ಪಕವಾದ ಆಹಾರ ಸೇವನೆ, ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು ಸೇರಿದಂತೆ ಹಲವು ಉತ್ತಮ ಜೀವನಶೈಲಿಗಳನ್ನು ರೂಢಿಸಿಕೊಂಡರೆ ಮೂಳೆಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಮದ್ಯಪಾನ ಮತ್ತು ತಂಬಾಕು ಸೇವನೆಯನ್ನು ಬಿಡಬೇಕು.

https://youtu.be/_iQcAOMqcW8


ನಿಮ್ಮ ಮೂಳೆಗಳ ಆರೋಗ್ಯ ಕಾಪಾಡಲು ಡೈರಿ ಉತ್ಪನ್ನಗಳು, ಬಾದಾಮಿ, ಸಾಲ್ಮನ್‌ ಮೀನು, ಸೋಯಾ ಉತ್ಪನ್ನಗಳು ಮುಂತಾದವುಗಳು ಕ್ಯಾಲ್ಷಿಯಂ ಮೂಲಗಳಾಗಿವೆ.

ನಡಿಗೆ, ಆಟ, ಜಾಗಿಂಗ್‌ ಮತ್ತು ಮೆಟ್ಟಿಲು ಹತ್ತುವುದು ಮುಂತಾದ ವ್ಯಾಯಾಮಗಳು ದೃಢವಾದ ಮೂಳೆಗಳ ನಿರ್ಮಾಣಕ್ಕೆ ಕೊಡುಗೆ ನೀಡುವುದಲ್ಲದೆ, ಮೂಳೆಯ ನಷ್ಟದ ಪ್ರಮಾಣವನ್ನೂ ಕಡಿಮೆ ಮಾಡುತ್ತವೆ.

  • ಪವಿತ್ರ

Latest News

ಮನರಂಜನೆ

ನೆಟ್ ಫ್ಲಿಕ್ಸ್ ನಲ್ಲಿ ಕಾಂತಾರ ಹಿಂದಿ, ಇಂಗ್ಲೀಷ್ ಭಾಷೆಯಲ್ಲಿ ಲಭ್ಯವಾಗಲಿದೆ : ರಿಷಬ್ ಶೆಟ್ಟಿ

ಕಾಂತಾರ ಓಟಿಟಿಯಲ್ಲಿ ಮೊದಲ ಬಾರಿಗೆ ಬಿಡುಗಡೆಯಾದ ವೇಳೆ ಕಾಂತಾರ ಚಿತ್ರದ ಅಸಲಿ ವರಾಹ ರೂಪಂ ಹಾಡು ತೆಗೆದು ಹಾಕಲಾಗಿತ್ತು.

ಪ್ರಮುಖ ಸುದ್ದಿ

ದೆಹಲಿ ಮಹಾನಗರ ಪಾಲಿಕೆ ಚುನಾವಣೆ: ಜಯದ ಹಾದಿಯಲ್ಲಿ ಆಪ್

ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲೋ ಪ್ರಕಾರ ಬಿಜೆಪಿ 69 ರಿಂದ 91 ವಾರ್ಡ್ ಗಳಲ್ಲಿ ಗೆಲುವು ಸಾಧ್ಯತೆ ಹಾಗೂ ಕಾಂಗ್ರೆಸ್ 3 ರಿಂದ 7 ವಾರ್ಡ್ ಗಳಲ್ಲಿ ಗೆಲ್ಲುತ್ತದೆ ಎಂದು ಸಮೀಕ್ಷೆ ತಿಳಿಸಿದೆ

ಪ್ರಮುಖ ಸುದ್ದಿ

ಬೆಳಗಾವಿಯಲ್ಲಿ ಕಲ್ಲು ತೂರಾಟ ; ಪುಣೆಯಲ್ಲಿ ಕರ್ನಾಟಕ ಬಸ್‌ಗಳಿಗೆ ಮಸಿ ಬಳಿದ ಶಿವಸೇನಾ!

ಕರ್ನಾಟಕ-ಮಹಾರಾಷ್ಟ್ರ ಮುಖ್ಯಮಂತ್ರಿಗಳ ನಡುವಿನ ವಾಗ್ಸಮರ ಗಡಿ ಭಾಗದಲ್ಲಿ ಘರ್ಷಣಗೆ ಪ್ರಮುಖವಾಗಿದೆ. ಎಂ.ಇ.ಎಸ್ (M.E.S) ಪುಂಡರ ಹಾವಳಿ ಹೆಚ್ಚಾಗಿದ್ದು, ಕರ್ನಾಟಕ ರಾಜ್ಯದ ಬಸ್‌ಗಳನ್ನು ಅಡಗಟ್ಟಿ ಮಸಿ ಹಚ್ಚಿ ಆಕ್ರೋಶ ಹೊರಹಾಕಿದ್ದರು