ನಮ್ಮ ದೇಹ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ಪ್ರೋಟಿನ್ಅತ್ಯಂತ ಮಹತ್ವದ ಅಂಶವಾಗಿದೆ. ನಾವು ಪ್ರತಿದಿನ ಸೇವಿಸುವ ಆಹಾರಗಳಲ್ಲಿ ಹೆಚ್ಚಿನ ಪ್ರೋಟಿನ್ಅಂಶ ಇರುವಿಕೆಯನ್ನು ನಾವು ಖಾತರಿಪಡಿಸಿಕೊಳ್ಳಬೇಕು. ಅದರಲ್ಲೂ ಯುವಜನರ ದೈಹಿಕ ಬೆಳವಣಿಗೆಯಲ್ಲಿ ಪ್ರೋಟಿನ್ ಪ್ರಮುಖ ಪಾತ್ರ ವಹಿಸುತ್ತದೆ. ದೇಹದಲ್ಲಿನ ಸ್ನಾಯುಗಳು, ಕಿಣ್ವಗಳು ಮತ್ತು ಹಾರ್ಮೋನುಗಳಿಗೆ ಪ್ರೋಟಿನ್ ಅತ್ಯಂತ ಅವಶ್ಯಕವಾಗಿದೆ.

ದೇಹದಲ್ಲಿನ ಜೀವಕೋಶಗಳು ಸರಿಯಾಗಿ ಕೆಲಸ ಮಾಡುವಂತೆ ಮಾಡಬೇಕಾದರೆ ಪ್ರೋಟಿನ್ ಅತ್ಯಗತ್ಯ. ಆದರೆ ದೇಹಕ್ಕೆ ಪ್ರೋಟಿನ್ಕೊರತೆಯಾದ್ರೆ ಈ ಕೆಳಗಿನ 10 ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆರಂಭದಲ್ಲೇ ಅದನ್ನು ಗುರುತಿಸಿ ವೈದ್ಯರ ಬಳಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಹಾಗಾದ್ರೆ ದೇಹಕ್ಕೆ ಪ್ರೋಟಿನ್ಕೊರತೆಯಾದ್ರೆ ಕಾಣಿಸಿಕೊಳ್ಳುವ 10 ಆರೋಗ್ಯ ಸಮಸ್ಯೆಗಳ ವಿವರ ಇಲ್ಲಿದೆ ನೋಡಿ.
ಪ್ರೋಟಿನ್ ಕೊರತೆಯ ಪರಿಣಾಮವು ಮೊದಲು ಕೂದಲಿನ ಮೇಲೆ ಕಂಡುಬರುತ್ತದೆ. ಕೂದಲು ಡ್ರೈ ಆಗುತಿದ್ದು, ನಿರ್ಜೀವವಾಗುತ್ತಿದ್ದರೆ, ಕೂದಲು ಅತಿಯಾಗಿ ಉದುರುತ್ತಿದ್ದರೆ, ಪ್ರೋಟಿನ್ ಕೊರತೆಯಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.
ಪ್ರೋಟಿನ್ ಕೊರತೆಯಿಂದಾಗಿ ಉಗುರುಗಳು ಸಹ ಒಡೆಯಲು ಪ್ರಾರಂಭಿಸುತ್ತವೆ.
ಪ್ರೋಟಿನ್ ಕೊರತೆಯಿಂದ ಪದೇ ಪದೇ ಸೋಂಕು ತಗಲುತ್ತಿರುತ್ತದೆ. ನಿರಂತರವಾಗಿ ಅನಾರೋಗ್ಯ ಕಾಡುತ್ತದೆ.
ಪ್ರೋಟಿನ್ ಕೊರತೆಯಿಂದ ಕೂದಲು ಉದುರುವುದು, ಮೂಳೆಗಳು ಮುರಿಯುವುದು, ದೇಹದಲ್ಲಿ ಹೆಚ್ಚು ಸುಸ್ತು ನೋವು ಕಾಣಿಸಿಕೊಳ್ಳುತ್ತದೆ.

ಚರ್ಮದಲ್ಲಿ ಶುಷ್ಕತೆ, ಕೂದಲು ಮತ್ತು ಉಗುರುಗಳಿಗೆ ಸಂಬಂಧಿಸಿದ ಸಮಸ್ಯೆಗಳು ಕಂಡು ಬರುತ್ತವೆ.
ದೇಹದಲ್ಲಿ ಪ್ರೋಟಿನ್ ಕೊರತೆಯಾದಾಗ ಸ್ನಾಯುಗಳ ದೌರ್ಬಲ್ಯ, ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.
ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರಿ, ಇದು ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ.
ಮುಖ್ಯವಾಗಿ ಪ್ರೋಟಿನ್ ಕೊರತೆಯಾದಾಗ ಮುಖ, ಮತ್ತು ಹೊಟ್ಟೆಯ ಭಾಗದಲ್ಲಿ ಊತ ಕಾಣಿಸಿಕೊಳ್ಳುತ್ತದೆ.
ಪ್ರೋಟಿನ್ ಕೊರತೆಯು ಸ್ನಾಯು ನೋವನ್ನು ಉಂಟುಮಾಡಬಹುದು.
ಮಕ್ಕಳ ದೈಹಿಕ ಬೆಳವಣಿಗೆಯನ್ನು ಕುಂಟಿತಗೊಳಿಸುತ್ತದೆ.