Health Tips : ಮಕ್ಕಳು ತಮ್ಮ ಬಾಲ್ಯ ಹಾಗು ಹದಿಹರೆಯುವ ವಯಸ್ಸಿನಲ್ಲಿ ದುರ್ಬಲ ನೆನಪಿನ ಶಕ್ತಿಯಿಂದ(Health Tips For Memory Power) ಬಳಲುತ್ತಿರುತ್ತಾರೆ.
ಕೆಲವೊಮ್ಮೆ ಮಕ್ಕಳು ಆಲಸ್ಯ ತನದಿಂದ ಕೂಡ ಸಮಯವನ್ನು ವ್ಯರ್ಥ ಮಾಡುತ್ತಿರುತ್ತಾರೆ.
ಹಾಗೆ ಚಿಕ್ಕ ಮಕ್ಕಳು ನೆನಪಿನ ಶಕ್ತಿಯ ಕುಂಟಿತದಿಂದಲೂ ಓದಲು, ಬರೆಯಲು ಆಲಸ್ಯ ಪಡುವುದನ್ನು ನಾವು ಇತ್ತೀಚಿನ ದಿನಗಳಲ್ಲಿ ಗಮನಿಸಬಹುದಾದ ವಿಷಯವಾಗಿದೆ.

ಇದರಿಂದ ಅವರ ಶಿಕ್ಷಣ ಮತ್ತು ವೃತ್ತಿಜೀವನದ ಮೇಲೆ ಪರಿಣಾಮ ಬೀರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಅಷ್ಟೇ ಅಲ್ಲದೆ ದುರ್ಬಲ (Health Tips For Memory Power) ನೆನಪಿನ ಶಕ್ತಿಯ ಕಾರಣದಿಂದ ಅನೇಕ ಮಕ್ಕಳು ಖಿನ್ನತೆಗೆ ಒಳಗಾಗುತ್ತಾರೆ.
ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ನೆನಪಿನ ಶಕ್ತಿ ಅತ್ಯಂತ ಮುಖ್ಯ.
ನಾವು ಮಾಡಿದ ಕೆಲಸ ಕಾರ್ಯಗಳನ್ನು ನೆನಪಿಟ್ಟುಕೊಳ್ಳಲು ಮತ್ತು ಆ ಕಾರ್ಯವನ್ನು ನಿರ್ವಹಿಸುವ ಸಾಮರ್ಥ್ಯವು ನಮ್ಮ ಸ್ಮರಣೆಗೆ ಸಂಬಂಧಿಸಿರುತ್ತದೆ.
ಓದುವಿಕೆ ಮತ್ತು ನೆನಪಿಟ್ಟುಕೊಳ್ಳುವಂತಹ ಇತರ ವಿಷಯಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಲಿಕೆಯ ಮೇಲೆ ಪರಿಣಾಮ ಬೀರಬಹುದು.
ಇದನ್ನೂ ಓದಿ : https://vijayatimes.com/snake-catching-video-viral/
ಹೀಗಾಗಿ ಮಕ್ಕಳಲ್ಲಿ ಜ್ಞಾಪಕ ಶಕ್ತಿ ಹೆಚ್ಚಿಸುವುದು ಅತ್ಯವಶ್ಯಕ. ಈ ಕೆಳಗೆ ಸೂಚಿಸಿರುವ ಅತ್ಯುನ್ನತ ಆಹಾರ ಪದಾರ್ಥಗಳನ್ನು ಬಳಸಿ ಮಕ್ಕಳಿಗೆ ಸೇವಿಸಲು ಕೊಡುವುದರಿಂದ ನೆನಪಿನ ಶಕ್ತಿ ಕುಂಟಿತದಿಂದ ಮತ್ತು ಆಲಸ್ಯ ತನದಿಂದ ಹೊರಬರಬಹುದು.
ಮಾಹಿತಿಯನ್ನು ಕೆಳೆಗೆ ತಿಳಿಸಲಾಗಿದೆ ಅನುಸರಿಸಿ.

- 11 ಬಾದಾಮಿಯನ್ನು ತೆಗೆದುಕೊಂಡು ಚೆನ್ನಾಗಿ ಪುಡಿಮಾಡಿ, 2 ಲೋಟದಷ್ಟು ಹಾಲಿಗೆ ಪುಡಿ ಮಾಡಿರುವಂತಹ ಬಾದಾಮಿ ಪೌಡರ್ ಅನ್ನು ಸೇರಿಸಿ, 15 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ ತಣ್ಣಗಾದ ನಂತರ ಕುಡಿಯುವುದರಿಂದ ದುರ್ಬಲ ನೆನಪಿನ ಶಕ್ತಿ ತ್ವರಿತವಾಗಿ ಹೆಚ್ಚಿಸುತ್ತದೆ.
- 1 ಚಮಚ ಬೆಣ್ಣೆಗೆ, 3/4 ಚಮಚ ಕರಿಮೆಣಸಿನ ಪುಡಿ ಸೇರಿಸಿಕೊಳ್ಳಿ ಜೊತೆಗೆ 1 ಚಮಚದಷ್ಟು ಸಕ್ಕರೆ ಸೇರಿಸಿ ಮಿಶ್ರಣ ಮಾಡಿ ದಿನಕ್ಕೆ ಒಮ್ಮೆಯಾದರು ಈ ಮಿಶ್ರಣ ಸೇವಿಸಿದರೆ ನೆನಪಿನ ಶಕ್ತಿ ಸುಧಾರಿಸುತ್ತದೆ.
- ತುಪ್ಪ ನೆನಪಿನ ಶಕ್ತಿಯನ್ನು ಹೆಚ್ಚಿಸುವಲ್ಲಿ ಬಹಳ ಪರಿಣಾಮಕಾರಿ. ಪ್ರತಿದಿನ ಹಣೆಯ ಮೇಲೆ ತುಪ್ಪವನ್ನು ಹಚ್ಚಿ 15 ನಿಮಿಷಗಳ ಕಾಲ ನಿಧಾನವಾಗಿ ಮಸಾಜ್ ಮಾಡುವ ಮೂಲಕ ಮೆದುಳಿನ ಸ್ನಾಯುಗಳಿಗೆ ಶಕ್ತಿಯನ್ನು ನೀಡುವುದರ ಜೊತೆಗೆ ಆಲಸ್ಯವನ್ನು ನಿವಾರಿಸುತ್ತದೆ.
- ಎಸ್.ಪಂಕಜಾ