vijaya times advertisements
Visit Channel

Snoring : ಸುಖ ನಿದ್ರೆಯನ್ನು ಹಾಳು ಮಾಡುವ ಗೊರಕೆಗೆ ಇಲ್ಲಿದೆ ಪರಿಣಾಮಕಾರಿ ಪರಿಹಾರಗಳು ಪಾಲಿಸಿ

Snoring

Health : ನಿಮ್ಮ ಅಥವಾ ನಿಮ್ಮ ಮನೆಯಲ್ಲಿರುವವರ ಗೊರಕೆಯ ಸಮಸ್ಯೆ(Snoring Issues) ನಿಮ್ಮ ನಿದ್ದೆಯನ್ನು ಹಾಳುಮಾಡುತ್ತಿರಬಹುದು.

ಅದೆಷ್ಟೋ ಸನ್ನಿವೇಶಗಳಲ್ಲಿ ಈ ಗೊರಕೆಯ ಸಮಸ್ಯೆ ಗಂಡ -ಹೆಂಡತಿಯರ ದಾಂಪತ್ಯ ಬದುಕಿನ ಮೇಲೆ ಪ್ರಭಾವ ಬೀರುವ ಮೂಲಕ ದಂಪತಿಗಳು ಪರಸ್ಪರ ದೂರವಾಗುವ ಸನ್ನಿವೇಶಗಳನ್ನು ನಾವು ಕೇಳಿದ್ದೇವೆ.

health

ಆದರೆ ಗೊರಕೆಯಂತಹ ಸಮಸ್ಯೆ ಹೊಂದಿರುವ ವ್ಯಕ್ತಿಯನ್ನು ದೂರ ತಳ್ಳುವುದರ ಬದಲಾಗಿ, ಕೆಲವು ಮನೆಮದ್ದುಗಳನ್ನು(Homeremedies) ಬಳಸುವ ಮೂಲಕ ಈ ಸಮಸ್ಯೆಯಿಂದ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.


ಜೇನಿನ ಪರಿಹಾರ : ಜೇನು(Honey) ಗಂಟಲ ಒಳ ಭಾಗದಲ್ಲಿ ಕಟ್ಟಿಕೊಂಡಿರುವ ಕಫವನ್ನು ನಿವಾರಿಸಲು ಮತ್ತು ಊತವನ್ನು ಕಡಿಮೆಗೊಳಿಸಲು ನೆರವಾಗುತ್ತದೆ.

ಇದು ಗೊರಕೆಯನ್ನು ಕಡಿಮೆಯಾಗಿಸಲು ಹೆಚ್ಚಿನ ನೆರವು ನೀಡುತ್ತದೆ. ಇದಕ್ಕಾಗಿ ಒಂದು ಲೋಟ ನೀರಿಗೆ ಒಂದು ದೊಡ್ಡ ಚಮಚ ಜೇನನ್ನು ಸೇರಿಸಿ ಮಲಗುವ ಮುನ್ನ ಕುಡಿಯಿರಿ.

homeremedies


ನಿಮ್ಮ ನಿತ್ಯದ ಆಹಾರದಲ್ಲಿ ಹಸುವಿನ ಹಾಲಿನ ಬದಲು ಸೋಯಾ ಅವರೆಯ ಬಳಕೆಯಿಂದ ಗೊರಕೆ ಕಡಿಮೆಯಾಗುತ್ತದೆ. ಹಸುವಿನ ಹಾಲಿನಲ್ಲಿರುವ ಒಂದು ವಿಶೇಷ ಕಿಣ್ವ ಮೂಗಿನ ಒಳಭಾಗದ ಕೊಳವೆಗಳನ್ನು ಸಂಕುಚಿಸಲು ಕಾರಣವಾಗಿದ್ದು, ಇದರಿಂದ ಗೊರಕೆಯುಂಟಾಗುತ್ತದೆ. ಈ ಹಾಲನ್ನು ಬದಲಿಸುವ ಮೂಲಕ ಗೊರಕೆಯೂ ಕಡಿಮೆಯಾಗುತ್ತದೆ.

ಇದನ್ನೂ ಓದಿ : https://vijayatimes.com/chethan-allegation-over-siddaramaiah/


ಕ್ಯಾಮೋಮೈಲ್ ಹೂವಿನ ಎಣ್ಣೆಯಲ್ಲಿ ಉರಿಯೂತ ನಿವಾರಕ ಗುಣಗಳಿರುವುದರಿಂದ ಗಂಟಲ ಹಿಂಭಾಗದ ಸ್ನಾಯುಗಳನ್ನು ಸಡಿಲಗೊಳಿಸಿ ನಿದ್ದೆಗೆ ಜಾರಲು ನೆರವಾಗುತ್ತದೆ.

ಇದಕ್ಕಾಗಿ ಒಂದು ಲೋಟ ಬಿಸಿನೀರಿನಲ್ಲಿ ಕೆಲವು ಹನಿ ಕ್ಯಾಮೋಮೈಲ್ ಹೂವಿನ ಎಣ್ಣೆ ಮತ್ತು ಅಷ್ಟೇ ಪ್ರಮಾಣದ ಜೇನು ಸೇರಿಸಿ ರಾತ್ರಿ ಮಲಗುವ ಮುನ್ನ ಕುಡಿಯಿರಿ.

snoring


ಏಲಕ್ಕಿಯ(Cardamom) ಪರಿಮಳವನ್ನು ಹೀರುವುದರಿಂದ ಮೂಗಿನ ಹೊಳ್ಳೆ ಕಟ್ಟಿಕೊಂಡಿರುವುದು, ಉಸಿರಾಟವನ್ನು ಸರಾಗಗೊಳಿಸುವುದು ಸಾಧ್ಯವಾಗುತ್ತದೆ.

ಇದಕ್ಕಾಗಿ ಅರ್ಧ ಚಿಕ್ಕ ಚಮಚ ಏಲಕ್ಕಿಯನ್ನು ಒಂದು ಲೋಟ ನೀರಿನಲ್ಲಿ ಚೆನ್ನಾಗಿ ಕುದಿಸಿ ತಣಿಸಿ ರಾತ್ರಿ ಮಲಗುವ ಮುನ್ನ ಗಟಗಟನೇ ಕುಡಿದು ಮಲಗಿ.


ಶೀತವಾದಾಗ ಒಂದು ಹೆಚ್ಚುವರಿ ದಿಂಬನ್ನು ತಲೆಯಡಿ ಇರಿಸಿ ಮಲಗುವುದರಿಂದ ಬೆಳಿಗ್ಗೆ ಎದ್ದಾಗ ಶೀತ ಕಡಿಮೆಯಾಗಿರುವುದು ನಿಮ್ಮ ಗಮನಕ್ಕೆ ಬಂದಿರಬಹುದು. ಏಕೆಂದರೆ ತಲೆಯನ್ನು ಸ್ವಲ್ಪ ಏರಿಸುವುದರಿಂದ ವಾಯುಮಾರ್ಗದ ವಿಸ್ತಾರ ಹೆಚ್ಚಿ ಉಸಿರಾಟ ಸರಾಗವಾಗಲು ಅನುಕೂಲವಾಗುತ್ತದೆ.

https://youtu.be/GWZDuX6MEWs ಹೆಚ್ಚು ಬಸ್ ಟಿಕೆಟ್ ದರದಿಂದ ಬೇಸತ್ತ ಉಡುಪಿ ಜನರು!

ಗೊರಕೆಯ ವಿಷಯದಲ್ಲೂ ಅಷ್ಟೇ, ವಿಸ್ತಾರವಾದ ವಾಯುಮಾರ್ಗ ಗೊರಕೆ ಕಡಿಮೆಗೊಳಿಸಲೂ ನೆರವಾಗುತ್ತದೆ. ನಿಮ್ಮ ದಿಂಬನ್ನು ಪ್ರತಿದಿನದ ಎತ್ತರಕ್ಕಿಂತಲೂ ಸುಮಾರು ನಾಲ್ಕು ಇಂಚು ಎತ್ತರಿಸುವುದರಿಂದ ಉತ್ತಮ ಪರಿಣಾಮವನ್ನು ಪಡೆಯಬಹುದು.


ಧೂಮಪಾನ(Smoking), ಮದ್ಯಪಾನಗಳನ್ನು ತ್ಯಜಿಸಿ. ನಿಮ್ಮ ಅಭ್ಯಾಸಗಳನ್ನು ಕೊಂಚ ಗಮನಿಸಿ. ರಾತ್ರಿ ತಡವಾಗಿ ಮಲಗಿ, ತಡವಾಗಿ ಏಳುವ ಅಭ್ಯಾಸವಿದ್ದರೂ ಗೊರಕೆಯ ಸಮಸ್ಯೆ ಎದುರಾಗುತ್ತದೆ. ಹಾಗಾಗಿ, ಪ್ರತಿದಿನ ಬೇಗನೇ ಮಲಗಿ ಬೇಗನೇ ಏಳುವುದರಿಂದ ಗಾಢನಿದ್ದೆ ಆವರಿಸಿ ಆರೋಗ್ಯ ಉತ್ತಮಗೊಳ್ಳುವುದು.


ನಿಮ್ಮ ಆಹಾರ ಕ್ರಮದಲ್ಲಿರುವ ಹಾಲಿನ ಉತ್ಪನ್ನಗಳನ್ನು ಆದಷ್ಟು ಕಡಿಮೆ ಮಾಡಿದರೆ ಗೊರಕೆಯ ಪ್ರಮಾಣ ಬಹಳ ಕಡಿಮೆಯಾಗುತ್ತದೆ. ನಿಮಗೆ ಅಷ್ಟು ಇಷ್ಟವಾದರೆ ಹಾಲಿನ ಉತ್ಪನ್ನಗಳನ್ನು ಸೇವಿಸಿದ ನಾಲ್ಕು ತಾಸಿನ ನಂತರ ಮಲಗುವ ಅಭ್ಯಾಸ ಮಾಡಿಕೊಳ್ಳಿ.
  • ಪವಿತ್ರ

Latest News

Paneer
ಆರೋಗ್ಯ

ರುಚಿಯಷ್ಟೇ ಅಲ್ಲ, ಆರೋಗ್ಯಕ್ಕೂ ವರದಾನ ನಾವು ಪ್ರತಿದಿನ ಬಳಸುವ ಪನೀರ್

ಪನೀರ್ ಕೇವಲ ಇಷ್ಟಕ್ಕೆ ಮಾತ್ರ ಸೀಮಿತವಾಗಿಲ್ಲ, ನಮ್ಮ ಆರೋಗ್ಯದ ರಕ್ಷಣೆಯಲ್ಲಿ ಕೂಡ ಇದರ ಪ್ರಯೋಜನಗಳು ಅಪಾರ. ಆದರೆ ಹೆಚ್ಚಿನವರಿಗೆ ಇದರ ಬಗ್ಗೆ ಅರಿವೇ ಇಲ್ಲ.

ದೇಶ-ವಿದೇಶ

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಬೆಂಗಾವಲಿಗೆ 42 ಕಾರುಗಳು‌ ; ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು

ಜನಸಾಮಾನ್ಯರ ಪಕ್ಷ ಎಂದೇ ಹೇಳಿಕೊಳ್ಳುವ ಆಮ್‌ ಆದ್ಮಿ ಪಕ್ಷದ ನಾಯಕರು ಈ ರೀತಿಯಾಗಿ ಸಾಮಾನ್ಯ ಜನರ ತೆರಿಗೆ(Tax) ಹಣವನ್ನು ದುಂದುವೆಚ್ಚ ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Mallikarjun Kharge
ರಾಜಕೀಯ

ಮಲ್ಲಿಕಾರ್ಜುನ ಖರ್ಗೆ ಚಿತ್ತ ಕಾಂಗ್ರೆಸ್ ಅಧ್ಯಕ್ಷ ಸ್ಥಾನದತ್ತ ; ಅಧ್ಯಕ್ಷ ಸ್ಥಾನ ಬಹುತೇಕ ಖಚಿತ

ಈ ರಾಜೀನಾಮೆಯನ್ನು ಸೋನಿಯಾ ಗಾಂಧಿ ಅವರು ಅಂಗೀಕರಿಸುವ ಸಾಧ್ಯತೆ ಇದ್ದು, ಹೊಸ ರಾಜ್ಯಸಭಾ ವಿರೋಧ ಪಕ್ಷದ ನಾಯಕನ ಆಯ್ಕೆ ಸಂಬಂಧ ಮುಂದಿನ ದಿನಗಳಲ್ಲಿ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

PFI
ದೇಶ-ವಿದೇಶ

ಬಂಧಿತ PFI ಕಾರ್ಯಕರ್ತರನ್ನು 21 ದಿನಗಳ ಕಸ್ಟಡಿಗೆ ಕಳುಹಿಸಿದ NIA ಕೋರ್ಟ್!

ಬಂಧಿತರ ಮೇಲೆ ಭಯೋತ್ಪಾದನೆಗೆ ಹಣಕಾಸಿನ ನೆರವು ಒದಗಿಸಿರುವ ಮತ್ತು ಹಿಂದೂ ಕಾರ್ಯಕರ್ತರನ್ನು ಹತ್ಯೆ(Murder) ಮಾಡಿರುವ ಆರೋಪವನ್ನು ಹೊರಿಸಲಾಗಿದೆ.