Health Tips in Kannada of Home Made Medicine
Mansoon Health Tips: ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ಮಾತಿದೆ. ಇದು ಗಿಡಮೂಲಿಕೆಗಳ ವಿಚಾರಕ್ಕೆ ಬಂದಾಗ ಸರಿಯಾಗಿ ಹೊಂದಾಣಿಕೆಯಾಗುತ್ತದೆ. ಯಾಕೆಂದರೆ ಅಂಗೈಯಗಲದಷ್ಟು ಇರುವ ಸಸ್ಯಗಳು (Plants) ಊಹಿಸಲಾರದಷ್ಟು ಪ್ರಯೋಜನಗಳನ್ನು ನೀಡುತ್ತವೆ.
ದಿನನಿತ್ಯ ನಮ್ಮ ಕಣ್ಣೆದರು ಕಳೆ ಗಿಡದಂತೆ ಕಾಣುವ ಅದಷ್ಟೋ ಗಿಡಗಳು ಅನೇಕ ಆರೋಗ್ಯ (Health) ವೃದ್ದಿಸುವ ಉತ್ತಮ ಗುಣಗಳನ್ನು ಹೊಂದಿರುತ್ತವೆ. ಅವುಗಳಲ್ಲಿ ಒಂದು ನೆಲನೆಲ್ಲಿ ಗಿಡ. ಮಣ್ಣಿನಲ್ಲಿ ಪುಟ್ಟದಾಗಿ ಬೆಳೆಯುವ ಈ ಗಿಡದ ಎಲೆಗಳು ಚಿಕ್ಕ ಚಿಕ್ಕದಾಗಿರುತ್ತದೆ.
ಮಲೆನಾಡಿನ ನೆಲದಲ್ಲಿ ಹೆಚ್ಚಾಗಿ ಕಂಡುಬರುವ ಈ ಸಸ್ಯ ನೆಲದ ಮೇಲೆ ಹರಡಿಕೊಂಡಿರುತ್ತದೆ. ಇದು ಅನೇಕ ರೈತರ ಆರ್ಥಿಕ ಆದಾಯದ ಬೆಳೆ ಕೂಡ ಆಗಿದೆ. 10 ಸೆಂ.ಮೀ ನಿಂದ 50 ರಿಂದ 60 ಸೆಂ.ಮೀವರೆಗೂ ಈ ಗಿಡ ಬೆಳೆಯುತ್ತದೆ. ರೊಗ ನಿರೋಧಕ ಶಕ್ತಿ ವೃದ್ಧಿಯಿಂದ ಹಿಡಿದು ಮಳೆಗಾಲದಲ್ಲಿ ಕಾಡಿ ಕಾಂಗೆಡಿಸುವ ಜಾಂಡೀಸ್ (Jaundice) ,ಅಪಸ್ಮಾರ, ಜ್ವರ,ಶೀತ, ನೆಗಡಿಯಂತಹ ಸಣ್ಣ ಪುಟ್ಟ ಕಾಯಿಲೆಗಳಿಗೂ ಇದು ಅತ್ಯುತ್ತಮ ಮನೆಮದ್ದಾಗಿದೆ.
ಆಗಾಗ ಬೀಳುವ ಮಳೆ, ಬಿಸಿಲಿನಿಂದ ಆರೋಗ್ಯದಲ್ಲಿ ಏರುಪೇರಾಗಿ ಜ್ವರ, ಶೀತ ಕಾಡುತ್ತದೆ. ಇದಕ್ಕೆ ನೆಲನೆಲ್ಲಿ ಉತ್ತಮ ಮನೆಮದ್ದಾಗಿದೆ. ನೆಲನೆಲ್ಲಿ ಕಷಾಯವನ್ನು ಮಾಡಿ ಸೇವಿಸಿದರೆ ಜ್ವರ (Fever)ಬೇಗನೆ ಗುಣಮುಖವಾಗುತ್ತದೆ. ಅಲ್ಲದೆ ದೇಹದ ತಾಪಮಾನವನ್ನು ನಿಯಂತ್ರಿಸಲು ನೆರವಾಗುತ್ತದೆ. ಅಲ್ಲದೆ ದೇಹದಲ್ಲಿ ಕೆಲವೊಮ್ಮೆ ಉರಿಯ ಅನುಭವವಾಗುತ್ತದೆ. ಇದೂ ಕೂಡ ನೆಲನೆಲ್ಲಿಯ ಬಳಕೆಯಿಂದ ಕಡಿಮೆಯಾಗುತ್ತದೆ. ಇನ್ನು ನೆಲನೆಲ್ಲಿ ನೋಡಲು ಪುಟ್ಟದಾಗಿದ್ದರೂ ಆರೋಗ್ಯ ಗುಣಗಳ ಆಗರವನ್ನೇ ಇರಿಸಿಕೊಂಡಿದೆ.
ಹೀಗಾಗಿ ನಿಮ್ಮಲಿವರ್ ಆರೋಗ್ಯಕ್ಕೆ ನೆಲನೆಲ್ಲಿ ಹೇಳಿ ಮಾಡಿಸಿದ ಔಷಧ (Medicine). ಮದ್ಯಪಾನ ಮಾಡಿ ಲಿವರ್ ಹಾನಿಗೊಳಗಾದವರಿಗೆ ಇದು ಉತ್ತಮವಾಗಿದೆ. ಸಣ್ಣ ಸೊಪ್ಪೆಂದು ಮೂಗು ಮುರಿಯುವವರೇ ಸ್ವಲ್ಪ ನಿಲ್ಲಿ. ನೆಲನೆಲ್ಲಿ ನಿಮ್ಮ ಆರೋಗ್ಯ ಸ್ನೇಹಿತ. ಪುಟ್ಟ ಗಿಡವಾದರೂ ಬೆಟ್ಟದಷ್ಟು ಅರೋಗ್ಯ ಪ್ರಯೋಜನವನ್ನು ಹೊಂದಿರುವ ಸಸ್ಯ.
It is said that idol is small but fame is big. It is a perfect match when it comes to herbs. Because plants that are within the palm of your hand provide unimaginable benefits.
So many plants that look like weeds before our eyes have many health promoting properties. One of them is groundcover. The leaves of this plant growing small in the soil are small.
This plant, which is mostly found in hilly terrain, is sprawling on the ground. It is also an economic income crop for many farmers. This plant grows from 10 cm to 50 to 60 cm. It is the best home remedy for diseases like jaundice, epilepsy, fever, cold, cold, etc.
Frequent rains, sun and fluctuating health cause fever and cold. Nelloni is a good home remedy for this. If you make a decoction of Nelanelli and consume it, fever will be cured quickly. It also helps to regulate body temperature. Also the body sometimes feels burning. This too is reduced by the use of groundnuts. Even though Nenelelli is small to look at, it has retained its health properties.
Therefore, your liver is a tailor-made medicine for your health. It is good for those who have liver damage due to alcohol consumption. Stop for a while, you who break your nose like small greens. Nelanelli is your health friend. Even though it is a small plant, it has a mountain of health benefits.