ನಮ್ಮ ದೇಹಕ್ಕೆ, ಸರಿಯಾದ ಪೋಷಕಾಂಶಗಳು (Health Tips Of Fruits) ದಿನದ ಸರಿಯಾದ ಅವಧಿಯಲ್ಲಿ, ಸರಿಯಾದ ಪ್ರಮಾಣದಲ್ಲಿ ದೊರಕಿದಾಗ ಮಾತ್ರ ದೇಹಕ್ಕೆ ಅತ್ಯುತ್ತಮ ಪೋಷಣೆ ನೀಡಲು ಸಾಧ್ಯವಾಗುತ್ತದೆ.
ಈ ನಿಟ್ಟಿನಲ್ಲಿ ಮುಖ್ಯ ಪೋಷಕಾಂಶಗಳನ್ನು ನೀಡುವ ಅತ್ಯುತ್ತಮ ಆಹಾರಗಳು ಎಂದರೆ ಹಣ್ಣುಗಳು.

ಇವುಗಳಲ್ಲಿ ಪೋಷಕಾಂಶಗಳು, ಖನಿಜಗಳು, ನಾರಿನಂಶ, ನೀರಿನಂಶ ಹಾಗೂ ಎಲೆಕ್ಟ್ರೋಲೈಟುಗಳು ಸಮೃದ್ಧವಾಗಿದ್ದು, ಹಲವು ಬಗೆಯ ಪ್ರಯೋಜನಗಳನ್ನು ಹಾಗೂ ಆರೈಕೆಯನ್ನು ಒದಗಿಸುತ್ತವೆ.
ಆದರೆ, ಹಾಗಂತ ದಿನದ ಯಾವುದೇ ಹೊತ್ತಿನಲ್ಲಿ, ಯಾವುದೇ ಹಣ್ಣನ್ನು (Health Tips Of Fruits) ನಮಗೆ ಇಷ್ಟವಾದಷ್ಟು ಪ್ರಮಾಣದಲ್ಲಿ ತಿನ್ನುವುದು ಸರಿಯಲ್ಲ.
ಪೋಷಕಾಂಶ ತಜ್ಞರ ಪ್ರಕಾರ, ಹಣ್ಣುಗಳನ್ನು ಒಂದು ನಿಯಮಕ್ಕೆ ಅನುಸಾರವಾಗಿ ತಿನ್ನಬೇಕೇ ವಿನಃ ನಮ್ಮ ಮನಸ್ಸಿಗೆ ಬಂದಂತೆ ತಿನ್ನುವುದರಿಂದ ಉತ್ತಮ ಅರೋಗ್ಯ ಪಡೆಯುವುದು ಅಸಾಧ್ಯ. ಹಾಗಾಗಿ, ಹಣ್ಣುಗಳನ್ನು ಬಳಸುವ ವಿಧಾನದಾ ಬಗ್ಗೆ ತಿಳಿಯುವುದು ಅತ್ಯಂತ ಮುಖ್ಯವಾಗುತ್ತದೆ.
https://fb.watch/ghX4znH5C1/ ಹೊಸ ಪಿಂಚಣಿ ಯೋಜನೆ ಬದಲು ಹಳೆ ಪಿಂಚಣಿ ಪದ್ಧತಿಗೆ ಒತ್ತಾಯ!
ನಿಸರ್ಗದ ಪ್ರತಿ ಋತುಮಾನದಲ್ಲಿಯೂ ಬೇರೆ ಬೇರೆ ಹಣ್ಣುಗಳು ಸಿಗುತ್ತದೆ. ಆದಷ್ಟು ಸ್ಥಳೀಯವಾಗಿರುವ ಹಾಗೂ ಆಯಾ ಋತುಮಾನಕ್ಕೆ ಹೆಚ್ಚಾಗಿ ಲಭಿಸುವ ತಾಜಾ ಹಣ್ಣುಗಳನ್ನೇ ಆಯ್ದುಕೊಳ್ಳಿ. ಈ ಹಣ್ಣುಗಳು ಪೋಷಕಾಂಶಗಳಿಂದ ಸಮೃದ್ದವಾಗಿದ್ದು ಅಗ್ಗವೂ ಆಗಿರುತ್ತವೆ.
ಅಲ್ಲದೇ, ನಿಮ್ಮ ದೇಹ ಪ್ರಕೃತಿಗೆ ನಿಮಗೆ ಸ್ಥಳೀಯವಾದ ಆಹಾರಗಳೇ ಹೆಚ್ಚು ಸೂಕ್ತವಾಗಿವೆ. ಆಮದು ಮಾಡಲ್ಪಟ್ಟ ವಿದೇಶೀ ಹಣ್ಣುಗಳನ್ನು ಬಹುಕಾಲ ಫ್ರಿಡ್ಜ್ ನಲ್ಲಿಟ್ಟು ಕೃತಕವಾಗಿ ಹಣ್ಣು ಮಾಡಲಾಗಿರುತ್ತದೆ.
ಇವು ದುಬಾರಿಯೂ ಆಗಿದ್ದು ಎಂದಿಗೂ ನಿಮ್ಮ ಸ್ಥಳೀಯ ಹಣ್ಣುಗಳಿಗೆ ಸಾಟಿಯಾಗಲು ಸಾಧ್ಯವಿಲ್ಲ.

ಒಂದು ವೇಳೆ ನೀವು ತೂಕ ಇಳಿಕೆಯ ಪ್ರಯತ್ನದಲ್ಲಿದ್ದರೆ, ಹಣ್ಣುಗಳನ್ನು ಸೇವಿಸಲು ಅತ್ಯುತ್ತಮ ಸಮಯವೆಂದರೆ ಮಧ್ಯಾಹ್ನಕ್ಕೂ ಮೊದಲು. ಅದರಲ್ಲೂ ಬೆಳಗ್ಗಿನ ಸಮಯ ಅತ್ಯುತ್ತಮ.
ಒಂದು ವೇಳೆ ಬೆಳಗ್ಗಿನ ಹೊತ್ತು ಸಾಧ್ಯವಾಗದೇ ಇದ್ದರೆ, ಸಂಜೆಯ ಹೊತ್ತಿನಲ್ಲಿ ಒಂದು ಕಪ್ ನಷ್ಟು ಪಪ್ಪಾಯಿಯನ್ನು ಸೇವಿಸಬಹುದು, ಬೇರೆ ಹಣ್ಣುಗಳನ್ನಲ್ಲ.
ತದ್ವಿರುದ್ದವಾಗಿ ತೂಕ ಹೆಚ್ಚಿಸ ಬಯಸುವ ವ್ಯಕ್ತಿಗಳು ಸಂಜೆ ಮತ್ತು ರಾತ್ರಿಯ ಹೊತ್ತು ಹಣ್ಣುಗಳನ್ನು ಸೇವಿಸಬಹುದು. ದಿನಕ್ಕೆ ಎರಡು ಹಣ್ಣುಗಳನ್ನು ಮಾತ್ರವೇ ಸೇವಿಸಿ.
ಹಣ್ಣು ತಿನ್ನುವುದು ಅತ್ಯಂತ ಅರೋಗ್ಯಕರವಾದರೂ, ಪ್ರತಿದಿನ ಎರಡು ಹಣ್ಣುಗಳನ್ನು ಮಾತ್ರ ಆಯ್ದುಕೊಳ್ಳಿ, ಪ್ರತೀ ಹಣ್ಣು ಒಟ್ಟು ನಾಲ್ಕರಿಂದ ಐದು ತುಂಡುಗಳಷ್ಟು ಇದ್ದರೆ ಸೂಕ್ತ.
https://youtu.be/QLbWeNvYzSE GATE CRASH ಹಣ ಕೊಟ್ರೆ ರೇಷನ್ !
ಈ ಮೂಲಕ ಈ ಎರಡೂ ಹಣ್ಣುಗಳ ಪೋಷಕಾಂಶಗಳ ಗರಿಷ್ಟ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ ಹಾಗೂ ತ್ವಚೆಯ ಕಾಂತಿ ಹೆಚ್ಚುತ್ತದೆ. ಜೊತೆಗೇ ಮಧುಮೇಹ ಆವರಿಸುವ ಸಾಧ್ಯತೆ ಮತ್ತು ಇನ್ಸುಲಿನ್ ಅಸಹಿಷ್ಣುತೆಯ ಸಾಧ್ಯತೆಯನ್ನೂ ತಗ್ಗಿಸುತ್ತದೆ.
ನಿಮ್ಮ ಅಹಾರಕ್ರಮದಲ್ಲಿ ಹಣ್ಣುಗಳ ರಸವನ್ನೂ ಸೇರಿಸಬಹುದು. ಹಣ್ಣುಗಳ ಬದಲಿಗೆ ಹಣ್ಣಿನ ರಸವನ್ನೂ ಸೇವಿಸಬಹುದು.
ಆದರೆ, ಮಾರುಕಟ್ಟೆಯಲ್ಲಿ ಸಿಗುವ ಯಾವುದೇ ಪಾನೀಯಗಳಲ್ಲಿ ವಾಸ್ತವದಲ್ಲಿ ಹಣ್ಣಿನ ರಸವೇ ಇರುವುದಿಲ್ಲ. ಆದ್ದರಿಂದ ತಾಜಾ ಹಣ್ಣುಗಳನ್ನು ಮಿಕ್ಸಿಯಲ್ಲಿ ರುಬ್ಬಿ ಸೋಸಿದ ರಸವನ್ನು ಸೇವಿಸುವುದು ಉತ್ತಮ.
ಈ ರಸವನ್ನು ಫ್ರಿಜ್ಜಿನಲ್ಲಿರಿಸದೇ, ತಕ್ಷಣವೇ, ತಾಜಾ ಇದ್ದಾಗಲೇ ಕುಡಿದರೆ ಗರಿಷ್ಟ ಪ್ರಯೋಜನ ಪಡೆಯಬಹುದು.

ಪ್ರಮಾಣದ ಮೇಲೆ ನಿಯಂತ್ರಣವಿರಲಿ, ಹಣ್ಣುಗಳು ನೈಸರ್ಗಿಕ ಸಕ್ಕರೆಯನ್ನು ಹೊಂದಿರುವ ಕಾರಣ ಇದನ್ನು ತಿನ್ನಲು ಪ್ರಾರಂಭಿಸಿದ ಬಳಿಕ ಎದುರಿನಲ್ಲಿರುವ ಅಷ್ಟೂ ಪ್ರಮಾಣ ಖಾಲಿಯಾಗುವವರೆಗೂ ತಡೆಯಲು ಸಾಧ್ಯವಾಗುವುದಿಲ್ಲ.
ಪರಿಣಾಮವಾಗಿ ತೂಕ ಏರಿಕೆ, ದೇಹದಲ್ಲಿ ಅತಿಯಾದ ಸಕ್ಕರೆಯ ಸಂಗ್ರಹ, ರಕ್ತದಲ್ಲಿ ಸಕ್ಕರೆಯ ಮಟ್ಟ ಏರುವ ಸಾಧ್ಯತೆ ಮೊದಲಾದವು ಕಾಣಿಸಿಕೊಳ್ಳಬಹುದು. ಆದ್ದರಿಂದ ದಿನಕ್ಕೆ ಎರಡು ಹಣ್ಣುಗಳ ಮಿತಿಯನ್ನು ಹೇರಿಕೊಳ್ಳಿ.
ಪವಿತ್ರ