Health Tips : ದಿನದ ಯಾವುದೇ ವೇಳೆಯಾಗಲಿ, ಕಡಲೆಕಾಯಿ(Health Tips Of GroundNuts) ಸಿಕ್ಕರೆ ಸಾಕು ಎಲ್ಲರೂ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ.

ಹೀಗೆ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾ, ಕಡಲೆಕಾಯಿಯ ರುಚಿಯಲ್ಲಿ ತೇಲಿಹೋಗುವ ನಮಗೆ ಇದರಿಂದ ಎಷ್ಟೆಲ್ಲಾ ಆರೋಗ್ಯಕಾರಿ ಅದ್ಭುತ ಪ್ರಯೋಜನಗಳಿವೆ ಎನ್ನುವುದು ತಿಳಿದೇ ಇರುವುದಿಲ್ಲ.
ಒಂದು ವೇಳೆ ಕಡಲೆಕಾಯಿ ಸೇವನೆಯಿಂದ ಏನೆಲ್ಲಾ ಪ್ರಯೋಜನಗಳಿವೆ ಎಂದು ತಿಳಿದುಬಂದರೆ ಖಂಡಿತ ನಾವು ಕಡಲೆಕಾಯಿ ಸೇವನೆ ಮಾಡುವುದನ್ನು ನಿಲ್ಲಿಸುವುದಿಲ್ಲ.
ಕಡಲೆಕಾಯಿಯಿಂದ ಯಾವ ಆರೋಗ್ಯಕಾರಿ ಪ್ರಯೋಜನಗಳಿವೆ(Health Benefits) ಎನ್ನುವ ಮಾಹಿತಿಯನ್ನು ನೋಡೋಣ.
ಬಡವರ ಬಾದಾಮಿ ಎಂದೇ ಪ್ರಸಿದ್ಧವಾದ ಕಡಲೆಕಾಯಿ ಪ್ರೋಟೀನ್ಗಳ ಆಗರವಾಗಿದ್ದು, ಇದನ್ನು ತಿನ್ನುವುದರಿಂದ ಅನೇಕ ಪ್ರಯೋಜನಗಳು ಇವೆ.
https://youtu.be/nII399KkWTY ವೀರ ಯೋಧರ ಹೆಸರಿನ ತಂಗುದಾಣ ಈಗ ಕುಡುಕರ ತಾಣ!
ಅದರಲ್ಲೂ, ನೆನೆಸಿದ ಕಡಲೆಬೀಜ ತಿಂದರೆ ಇನ್ನೂ ಹೆಚ್ಚಿನ ಲಾಭ ಪಡೆಯಬಹುದು ಎನ್ನುತ್ತಾರೆ ತಜ್ಞರು. ಹಾಗಾದರೆ, ನೆನೆಸಿದ ಕಡಲೆಬೀಜ ಸೇವನೆಯಿಂದ ದೇಹಕ್ಕೆ ಸಿಗುವ ಪ್ರಯೋಜನಗಳೇನು ಎನ್ನುವುದನ್ನು ನೋಡೋಣ.
ರಾತ್ರಿಯಿಡಿ ನೀರಿನಲ್ಲಿ ನೆನೆಸಿದ ಕಡಲೆಬೀಜ ತಿನ್ನುವುದರಿಂದ ನಮ್ಮ ಸ್ನಾಯುಗಳು ಬಲಗೊಳ್ಳುತ್ತವೆ.
ಇದರಲ್ಲಿ ಪ್ರೋಟೀನ್ ಹೇರಳವಾಗಿದ್ದು, ಬಾಡಿ ಬಿಲ್ಡಿಂಗ್ ಗೆ ಸಹಾಯ ಮಾಡುತ್ತದೆ. ನೆನೆಸಿದ ಕಡಲೆ ಬೀಜದ ಸೇವನೆಯಿಂದ ಜೀರ್ಣಕ್ರಿಯೆ ಹೆಚ್ಚುತ್ತದೆ.
ಆದ್ದರಿಂದ, ಉತ್ತಮ ಜೀರ್ಣಕ್ರಿಯೆ ಪಡೆಯಲು ನೆನೆಸಿದ ಕಡಲೆಬೀಜ ತಿನ್ನಿ. ಇನ್ನು, ನಿಮ್ಮ ಹೃದಯದ ಆರೋಗ್ಯ ಚೆನ್ನಾಗಿರಬೇಕು ಎಂದರೆ ನೆನೆಸಿದ ಕಡಲೆಬೀಜ ತಿನ್ನಬೇಕು.

ಇದು ಅನೇಕ ಹೃದಯದ ಸಮಸ್ಯೆಗಳನ್ನು ನಿವಾರಿಸುತ್ತದೆ. ಕಡಲೆಯ ಮತ್ತೊಂದು ಅದ್ಭುತ ಪ್ರಯೋಜನವೆಂದರೆ,
ನೆನೆಸಿದ ಕಡಲೆ ಬೀಜದ ಸೇವನೆಯು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ. ಬೆನ್ನು ನೋವನ್ನು ಕಡಿಮೆ ಮಾಡಲು ನೆನೆಸಿದ ಕಡಲೆಬೀಜ ಸಹಕಾರಿ.
ಇದನ್ನೂ ಓದಿ : https://vijayatimes.com/bmtc-bus-driver-video-viral/
ಜೊತೆಗೆ ಗ್ಯಾಸ್ ಮತ್ತು ಆಮ್ಲೀಯತೆ ಸಮಸ್ಯೆಯನ್ನು ಕೂಡ ಇದು ತೊಡೆದು ಹಾಕುತ್ತದೆ. ನಮ್ಮ ಜ್ಞಾಪಕ ಶಕ್ತಿ ಹೆಚ್ಚಿಸಲು ಮತ್ತು ಕಣ್ಣಿನ ದೃಷ್ಟಿ ಸುಧಾರಣೆ ಮಾಡಿಕೊಳ್ಳಲು ಕೂಡ ನೆನೆಸಿದ ಕಡಲೆ ಬೀಜ. ಸಹಕಾರಿ.
ಆದರೆ, ಈ ನೆನೆಸಿದ ಕಡಲೆಬೀಜವನ್ನು ಯಾವಾಗ ತಿನ್ನಬೇಕು ಎನ್ನುವುದನ್ನೂ ಸಹ ಸರಿಯಾಗಿ ತಿಳಿದುಕೊಂಡಿರಬೇಕು.

ನೆನೆಸಿದ ಕಡಲೆಬೀಜವನ್ನು ಯಾವಾಗಲೂ ಬೆಳಗಿನ ಉಪಾಹಾರಕ್ಕೆ ಮೊದಲೇ ಸೇವಿಸಬೇಕು. ಏಕೆಂದರೆ, ಕಡಲೆಬೀಜಗಳು ತೂಕ ನಷ್ಟಕ್ಕೆ ಸಂಬಂಧಿಸಿರುವುದರಿಂದ ತಿಂಡಿಗೂ ಮೊದಲೇ ಸೇವಿಸಬಹುದು ಉತ್ತಮ. ಕಡಲೆಬೀಜದಲ್ಲಿ ಅಧಿಕ ಕ್ಯಾಲೋರಿಗಳಿರುವ ಕಾರಣ,
ಇದನ್ನೂ ಓದಿ : https://vijayatimes.com/parle-crosses-2-billion/
ಹೆಚ್ಚಾಗಿ ತಿನ್ನುವುದೂ ಸೂಕ್ತವಲ್ಲ. ಸಮತೋಲಿತ ಆಹಾರದ ಭಾಗವಾಗಿಯೂ ಕಡಲೆಬೀಜವನ್ನು ನಿಯಮಿತವಾಗಿ ಸೇವಿಸುವುದರಿಂದ ತೂಕ ನಷ್ಟಕ್ಕೆ ಮತ್ತು ಆರೋಗ್ಯ ಸುಧಾರಣೆಗೂ ಸಹಕಾರಿಯಾಗುತ್ತದೆ.