Health Tips : ಪ್ರತಿಯೊಬ್ಬರಿಗೂ ಪ್ರಯಾಣವು (Travelling) ವಿಭಿನ್ನ ರೀತಿಯ ಅನುಭವ ನೀಡುತ್ತದೆ. ಅನೇಕರು ಬಸ್, ರೈಲು, ಕಾರು ಅಥವಾ ವಿಮಾನದಲ್ಲಿ ಪ್ರಯಾಣಿಸುತ್ತಾರೆ.
ಹೀಗೆ ಪ್ರಯಾಣಿಸುವಾಗ ಕೆಲವರಿಗೆ ವಾಂತಿ, ತಲೆತಿರುಗುವಿಕೆ ಮತ್ತು ವಾಕರಿಕೆ ಬರುತ್ತದೆ.
ಇದಕ್ಕೆ ಕಾರಣ ಮತ್ತು ಪರಿಹಾಗಳ ಬಗ್ಗೆ ತಿಳಿದುಕೊಳ್ಳುವುದು ಉತ್ತಮ. ಪ್ರಯಾಣ ಮಾಡುವಾಗ ವಾಂತಿ ತಡೆಯಲು ಪರಿಣಾಮಕಾರಿ ಮನೆ ಮದ್ದುಗಳು ಇಲ್ಲಿದೆ.
ಪ್ರಯಾಣ ಮಾಡುವಾಗ ನಿಮ್ಮ ಚೀಲದಲ್ಲಿ ಒಂದೆರಡು ಬಾಳೆಹಣ್ಣು (Banana) ಇರಿಸಿ. ಈ ಹಣ್ಣು(Fruit) ಪೊಟ್ಯಾಸಿಯಮ್ (Pottasium) ಮರುಸ್ಥಾಪಿಸುವ ಗುಣವನ್ನು ಹೊಂದಿದೆ.
ಇದು ಹೆಚ್ಚಿನ ಪ್ರಮಾಣದಲ್ಲಿ ವಾಂತಿಯನ್ನು ಹೋಗಲಾಡಿಸುತ್ತದೆ. ಲಾಂಗ್ ಡ್ರೈವ್‍ನಲ್ಲಿ ವಾಂತಿ ಅಥವಾ ತಲೆಸುತ್ತು ಬಂದಾಗ ಬಾಳೆಹಣ್ಣು ತಿಂದರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ.
ಇದನ್ನೂ ಓದಿ : https://vijayatimes.com/indian-railways-took-isro-help/
ಪ್ರಯಾಣಕ್ಕೂ ಮುನ್ನ ಒಂದು ಲೋಟ ಬಿಸಿಯಾದ ಪುದೀನಾ ಟೀ(Pudina Tea) ಸೇವಿಸಬೇಕು. ಇನ್ನೂ ಉತ್ತಮವೆಂದರೆ ಕೆಲವು ಪುದೀನಾ ಎಲೆಗಳನ್ನು ಚಿಕ್ಕ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಕೈಯಲ್ಲಿಯೇ ಹಿಡಿದುಕೊಳ್ಳುವುದು ಒಳ್ಳೆಯದು.
ವಾಹನ ಪ್ರಯಾಣ ಆರಂಭಿಸಿದ ತಕ್ಷಣ ಒಂದೆರಡು ಪುದೀನಾ ಎಲೆಗಳನ್ನು(Pudina Leaves) ಬಾಯಿಗೆ ಹಾಕಿಕೊಂಡು ಜಗಿಯುತ್ತಾ ಇದ್ದರೆ ವಾಕರಿಕೆ ಬರುವುದಿಲ್ಲ.
ಕಾಳು ಮೆಣಸು(Black Pepper) ಮತ್ತು ನಿಂಬೆ (Lemon) ತಲೆನೋವು, ಪಿತ್ತ, ತಲೆತಿರುಗುವಿಕೆಯನ್ನು ತಡೆಯುತ್ತದೆ. ಉಪ್ಪು ಅಥವಾ ಕಾಳುಮೆಣಸನ್ನು ಬಿಸಿಯಾದ ನಿಂಬೆ ರಸದೊಂದಿಗೆ ಸೇರಿಸಿ ಪ್ರಯಾಣಕ್ಕೆ ಮೊದಲು ಕುಡಿಯಬೇಕು.
ಒಂದು ಕಪ್ ನಿಂಬೆ ಜ್ಯೂಸ್‌ಗೆ ಚಿಟಿಕೆಯಷ್ಟು ಕಾಳುಮೆಣಸಿನ ಪುಡಿಯನ್ನು ಸೇರಿಸಿ ಕುಡಿದ ಬಳಿಕ ಪ್ರಯಾಣ ಆರಂಭಿಸಬೇಕು. ಇದು ಪ್ರಯಾಣದ ಅವಧಿಯಲ್ಲಿ ಎದುರಾಗುವ ತಲೆನೋವು, ವಾಕರಿಕೆ ಮೊದಲಾದವುಗಳನ್ನು ತಡೆಗಟ್ಟುತ್ತದೆ.
https://youtu.be/OfYo9EOEIJ4 COVER STORY | ಗ್ಯಾಸ್ ಮೋಸ!
ಒಂದು ಲೋಟ ನೀರನ್ನು ಕುದಿಸಿ ಇದಕ್ಕೆ ಒಂದು ಚಿಕ್ಕ ಚಮಚ ಚೆಕ್ಕಪುಡಿ (Cinnamon Powder) ಹಾಗೂ ಒಂದು ಚಮಚ ಜೇನು ತುಪ್ಪವನ್ನು ಬೆರೆಸಬೇಕು. ಪ್ರಯಾಣಕ್ಕೂ ಮುನ್ನ ಈ ನೀರನ್ನು ಬಿಸಿಬಿಸಿಯಾಗಿ ಸೇವಿಸಿ ಹೊರಡಬಹುದು. ಇದರಿಂದಲೂ ವಾಕರಿಕೆ ಆಗುವುದಿಲ್ಲ.
ವಿಶೇಷವಾಗಿ ಬಸ್ ಪ್ರಯಾಣದ ಅವಧಿಗೂ ಮುನ್ನ ಒಂದೆರಡು ಲವಂಗಗಳನ್ನು (Clove) ಬಾಯಿಗೆ ಹಾಕಿ ಜಗಿಯುತ್ತಿರಬೇಕು. ಪೂರ್ಣ ನೀರಾದ ಬಳಿಕ ನುಂಗಬೇಕು.
ಈರುಳ್ಳಿ ರಸ (Onion Juice) ಇದು ವಾಂತಿ (Vomit) ಮತ್ತು ಪಿತ್ತೋದ್ರೇಕವನ್ನು ಕ್ಷಣಮಾತ್ರದಲ್ಲಿ ನಿಲ್ಲಿಸುತ್ತದೆ.
ಇದನ್ನೂ ಓದಿ : https://vijayatimes.com/dead-body-kept-18-months-in-home/
ಮಿಕ್ಸಿಗೆ ಹಾಕಿ ಕೆಲವು ಈರುಳ್ಳಿಗಳನ್ನು ಪುಡಿಮಾಡಿ ಮತ್ತು ಅದರಿಂದ ರಸ ತೆಗೆಯಿರಿ. ಇದಕ್ಕೆ ನೀವು ಪುದೀನಾ ಸಾರವನ್ನು ಸೇರಿಸಬಹುದು. ಈ ಮಿಶ್ರಣವು ಪಿತ್ತೋದ್ರೇಕ ಮತ್ತು ವಾಂತಿಯನ್ನು ನಿಲ್ಲಿಸುವಲ್ಲಿ ಅದ್ಭುತವಾಗಿ ಕೆಲಸ ಮಾಡಲಿದೆ.
- ಪವಿತ್ರ