ನಮಗೆಲ್ಲ ತಿಳಿದಿರುವ ಹಾಗೆ ಇಂದಿನ ಪೀಳಿಗೆಯವರು ಯಾವ ರೀತಿಯಲ್ಲಿ ಒತ್ತಡದ ಜೀವನವನ್ನು ನಡೆಸುತ್ತಿದ್ದಾರೆ ಎಂಬುವ ವಿಷಯ ನಮಗೆಲ್ಲ ತಿಳಿದಿರುವುದೇ. ಅಂದಿನ ಕಾಲದವರು ತಿನ್ನುವುದಕ್ಕಾಗಿ ದುಡಿಯುತ್ತಿದ್ದರು. ಆದರೆ ಇಂದಿನ ಕಾಲದವರು ದುಡಿಯುವುದಕ್ಕೆ ಮಾತ್ರ ಎನ್ನುವಂತಾಗಿದೆ . ಆದರೆ ಈಗಿನ ಪೀಳಿಗೆಯವರಿಗೆ ಊಟ ಮಾಡಲು ಸಹ ಸಮಯವಿಲ್ಲದಂತಾಗಿದೆ.

ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆ ಮಾತು ಪ್ರತಿಯೊಬ್ಬರಿಗೂ ತಿಳಿದಿರುವುದೇ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ವಹಿಸಿದರೆ ಆರೋಗ್ಯಕ್ಕೆ ಒಳ್ಳೆಯದು ಎನ್ನುವುದೇ ಈ ಗಾದೆಯ ಅರ್ಥ. ಸರಿಯಾದ ಸಮಯಕ್ಕೆ ಆಹಾರ ಸೇವನೆ. ಸರಿಯಾದ ಸಮಯಕ್ಕೆ ಊಟ ಮಾಡುವುದರಿಂದ ನಮ್ಮ ಆರೋಗ್ಯದಲ್ಲಿ ಯಾವುದೇ ರೀತಿ ಅನಾರೋಗ್ಯ ಕಂಡುಬರುವುದಿಲ್ಲ, ಹಾಗೆಯೇ ಸರಿಯಾದ ಸಮಯದಲ್ಲಿ ಆಹಾರವನ್ನು ಸೇವಿಸುವುದರಿಂದ ನಮ್ಮ ಜೀರ್ಣಕ್ರಿಯೆಯೂ ಸುಲಭವಾಗಿ ಆಗುತ್ತದೆ.
ಅದರಲ್ಲೂ ಬೆಳಗ್ಗೆ ವೇಳೆಯಲ್ಲಿ ತಿನ್ನುವ ಆಹಾರ ನಮಗೆ ತುಂಬಾ ಮುಖ್ಯವಾಗುತ್ತದೆ. ಬೆಳಗಿನ ತಿಂಡಿಗೆ ಮತ್ತೆ ಊಟಕ್ಕೂ 4 ಗಂಟೆಗಳ ಅಂತರವಿದ್ದರೆ ಇನ್ನೂ ಒಳ್ಳೆಯದು. ಹಾಗೆಯೇ ನಮ್ಮ ದೇಹಕ್ಕೆ ಎಷ್ಟು ಆಹಾರ ಬೇಕಾಗುತ್ತದೆ ಅಷ್ಟೇ ಆಹಾರವನ್ನು ಸೇವಿಸುವುದು ಉತ್ತಮವಾಗುತ್ತದೆ. ಬೆಳಿಗ್ಗೆಯ ಆಹಾರ ಪದ್ಧತಿಯ ಅನುಕೂಲಗಳು. ಸರಿಯಾದ ಸಮಯಕ್ಕೆ ಆಹಾರ ಸೇವಿಸುವುದರಿಂದ ಗ್ಯಾಸ್ಟ್ರಿಕ್ ನಂತಹ ತೊಂದರೆಯಿಂದ ದೂರವಿರಬಹುದು. ಆ ದಿನ ಉತ್ಸಾಹದಿಂದ ಇರಲು ಸಹಕಾರವಾಗುತ್ತೆ. ಕೆಲಸಗಳನ್ನು ಆಯಾಸವಿಲ್ಲದೆ ಮಾಡಬಹುದು.

ಇಂದಿನ ಪೀಳಿಗೆಯ ಯುವಕ ಯುವತಿಯರಂತೂ ಹಿಡಿದ ಕೆಲಸವನ್ನು ಮಾಡುವ ತನಕ ಊಟದ ಬಗ್ಗೆ ಗಮನಿಸುವುದಿಲ್ಲ. ಊಟ ಮಾಡುವುದರಿಂದ ದೇಹದ ತೂಕ ಹೆಚ್ಚಾಗುತ್ತದೆ ಎಂಬ ಕಲ್ಪನೆಯಿಂದಲೇ ಬಹಳಷ್ಟು ಜನ ಸರಿಯಾದ ಸಮಯಕ್ಕೆ ಆಹಾರವನ್ನು ಸೇವಿಸುವುದಿಲ್ಲ. ಬಹಳಷ್ಟು ಜನರು ಮೂರು ಹೊತ್ತು ಊಟ ಮಾಡಿದರೂ ಸಹ ಸರಿಯಾದ ಸಮಯದಲ್ಲಿ ಸೇವಿಸುವುದಿಲ್ಲ. ಇದರಿಂದ ಆರೋಗ್ಯ ಕೆಡಬಹುದು , ಪ್ರಾಚೀನದಿಂದಲೂ ಅನೇಕ ರೋಗಗಳು ಬರುವ ಸಾಧ್ಯತೆ ಇರುತ್ತದೆ. ಹಾಗೆಯೇ ಗ್ಯಾಸ್ಟ್ರಿಕ್ ನಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಆಹಾರವನ್ನು ಸೇವಿಸದಿದ್ದರೆ ನಮ್ಮ ದೇಹದಲ್ಲಿ ಯಾವುದೇ ರೀತಿಯ ಶಕ್ತಿ ಇರುವುದಿಲ್ಲ. ಆಹಾರವನ್ನು ಸರಿಯಾದ ಸಮಯದಲ್ಲಿ ಸೇವಿಸದಿದ್ದರೆ ಬಹಳಷ್ಟು ಪರಿಣಾಮವಾಗುತ್ತದೆ. ಆಲಸ್ಯತನ ಹೆಚ್ಚುತ್ತದೆ. ಆಹಾರ ಸೇವಿಸದಿದ್ದರೆ ಆಗುವಂತಹ ಅನಾನುಕೂಲಗಳು :

- ಮೂರ್ಛೆ
- ತಲೆತಿರುಗುವಿಕೆ
- ರಕ್ತದೊತ್ತಡ ಕುಸಿತ
- ನಿಧಾನ ಹೃದಯಬಡಿತ
- ದೌರ್ಬಲ್ಯ
- ಹೊಟ್ಟೆ ನೋವು
- ಅಂಗ ವೈಫಲ್ಯ
ದೀರ್ಘಕಾಲದಿಂದ ಅಸಿಡಿಟಿಯಿಂದ ಬಳಲುತ್ತಿರುವವರು ಈಗಿನಿಂದಲೇ ಸಾಮಾನ್ಯ ಪ್ರಮಾಣದ ಆಹಾರವನ್ನು ಸೇವಿಸುವುದು ಉತ್ತಮ.
- Keerthana