ಅಧಿಕ ರಕ್ತದೊತ್ತಡ ಎಂಬುದು ಇತ್ತೀಚಿನ ದಿನಗಳಲ್ಲಿ ಯುವಕರಲ್ಲೂ ಕಾಣಿಸಿಕೊಳ್ಳುವ ಮೂಲಕ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಇದು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೀಗಾಗಿ ಅಧಿಕ ರಕ್ತದೊತ್ತಡ (healthy food for bp) ಇರುವವರು ರಕ್ತದೊತ್ತಡವನ್ನು ಸದಾ ನಿಯಂತ್ರಣದಲ್ಲಿಡುವುದು ಅತಿಮುಖ್ಯ.
ಔಷಧಿಗಳ ಸೇವನೆ ಮೂಲಕ ರಕ್ತದೊತ್ತಡವನ್ನು ನಿಯಂತ್ರಿಸುವ ಬದಲು ನಮ್ಮ ಆಹಾರದಲ್ಲೇ ಕೆಲ ಬದಲಾವಣೆ ಮಾಡಿಕೊಳ್ಳುವ ಮೂಲಕವೂ ನಾವು ಅಧಿಕ ರಕ್ತದೊತ್ತಡವನ್ನು ಪರಿಣಾಮಕಾರಿ ನಿಯಂತ್ರಿಸಬಹುದು.
ನಮ್ಮ ಆಹಾರದಲ್ಲಿ ಪೊಟ್ಯಾಸಿಯಂ(Potassium) ಮತ್ತು ಮೆಗ್ನೀಸಿಯಂನಂತಹ (Magnesium)ಪೋಷಕಾಂಶಗಳನ್ನು ಸೇರಿಸುವುದರಿಂದ ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧನೆಯೊಂದು ಹೇಳಿದೆ.
ಹೀಗಾಗಿ ಅಧಿಕ ರಕ್ತದೊತ್ತಡ ಇರುವವರು ಸೇವಿಸಬೇಕಾದ ಆಹಾರಗಳ ಮಾಹಿತಿ ಇಲ್ಲಿದೆ ನೋಡಿ.

ಕುಂಬಳಕಾಯಿ ಬೀಜಗಳು : ಮೆಗ್ನೀಸಿಯಂ (Magnesium)ಮತ್ತು ಪೊಟ್ಯಾಸಿಯಂ (Potassium) ಸೇರಿದಂತೆ ರಕ್ತದೊತ್ತಡ ನಿಯಂತ್ರಣಕ್ಕೆ ಬೇಕಾದ ಪೋಷಕಾಂಶಗಳ ಮೂಲ ಇದಾಗಿದೆ.
ಇದರಲ್ಲಿನ ಅಮೈನೋ ಆಮ್ಲಗಳು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಅವಶ್ಯಕವಾಗಿದೆ.
ಸಿಟ್ರಸ್ ಹಣ್ಣುಗಳು(Citrus fruit) : ಅಧಿಕ ರಕ್ತದೊತ್ತಡ ಕಡಿಮೆಗೊಳಿಸುವ ಶಕ್ತಿಯನ್ನು ದ್ರಾಕ್ಷಿ, ಕಿತ್ತಳೆ ಮತ್ತು ನಿಂಬೆಹಣ್ಣಿನಂತಹ ಸಿಟ್ರಸ್ ಹಣ್ಣುಗಳು ಹೊಂದಿವೆ.
ಈ ಹಣ್ಣುಗಳು ವಿಟಮಿನ್ಗಳು(Vitamin), ಖನಿಜಗಳಿದ್ದ ಕೂಡಿದ್ದು, ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವ ಮೂಲಕ ಹೃದಯವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.
ಪಾಲಕ್ ಸೊಪ್ಪು : ಪಾಲಕ್ ಸೊಪ್ಪಿನಲ್ಲಿ ನೈಟ್ರೇಟ್(Nitrate) ಅಧಿಕವಾಗಿರುತ್ತದೆ. ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಂಗಳಿಂದ ಕೂಡಿದ್ದು, ಇದು ಅಧಿಕ ರಕ್ತದೊತ್ತಡ (healthy food for bp) ಹೊಂದಿರುವ ಜನರಿಗೆ ಅತ್ಯುತ್ತಮ ಆಯ್ಕೆಯಾಗಿದೆ.
ಬೆರ್ರಿ ಹಣ್ಣುಗಳು : ಬೆರ್ರಿ ಹಣ್ಣುಗಳು ಅನೇಕ ಪ್ರಭಾವಶಾಲಿ ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ.
ಚೋಕ್ಬೆರ್ರಿ(Chokeberry), ಕ್ಲೌಡ್ಬೆರ್ರಿ(Cloudberry), ಬ್ಲೂಬೆರ್ರಿ, ರಾಸ್ಬೆರ್ರಿ, ಮತ್ತು ಸ್ಟ್ರಾಬೆರಿಗಳು ರಕ್ತದೊತ್ತಡವನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿವೆ.

ಕ್ಯಾರೆಟ್ಗಳು : ಪಿ-ಕೌಮರಿಕ್(P-Coumaric) ಮತ್ತು ಫೀನಾಲಿಕ್ (Phenolic)ಸಂಯುಕ್ತಗಳಿಂದ ಅಧಿಕವಾಗಿರುವ ಕ್ಯಾರೆಟ್, ಅಧಿಕ ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಫ್ಯಾಟಿ ಮೀನು : ಫ್ಯಾಟಿ ಮೀನುಗಳು(Fatty fish) ಒಮೆಗಾ-೩ ಕೊಬ್ಬಿನ ಮೂಲವಾಗಿದೆ. ಇದು ಹಲವು ಪ್ರಯೋಜನಗಳನ್ನು ಹೊಂದಿದ್ದು,
ಅಧಿಕ ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಂಶೋಧನೆಗಳ ಪ್ರಕಾರ, ಒಮೆಗಾ-೩-ಸಮೃದ್ಧ ಫ್ಯಾಟಿ ಮೀನುಗಳ ಹೆಚ್ಚಿನ ಸೇವನೆಯು ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ.
ಟೊಮೇಟೊ(Tomato) : ಇದರಲ್ಲಿ ಪೊಟ್ಯಾಸಿಯಂ ಮತ್ತು ಪಿಗ್ಮೆಂಟ್ ಲೈಕೋಪೀನ್ (Pigment Lycopene)ಸೇರಿದಂತೆ ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿವೆ.
ಲೈಕೋಪೀನ್ ಹೃದಯದ ಆರೋಗ್ಯದ ಮೇಲೆ ಪ್ರಯೋಜನಕಾರಿ ಪರಿಣಾಮ ಬೀರಿ, ಹೃದಯ ಕಾಯಿಲೆಯ ಅಪಾಯಕಾರಿ ಅಂಶಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.