- ಆರೋಗ್ಯವಂತರಿಗೂ ಕೈ ಕೊಡುತ್ತಿರುವ ಹೃದಯ
- ಶಾಲೆಯಲ್ಲೇ ಹೃದಯಾಘಾತಕ್ಕೆ ಶಿಕ್ಷಕ ಬ* (Heart attack cases increase)
- ಶಾಲಾ ಬಸ್ ಚಾಲನೆ ವೇಳೆ ಚಾಲಕನಿಗೆ ಹೃದಯಾಘಾತ
Davangere: ಇತ್ತೀಚಿನ ದಿನಗಳಲ್ಲಿ ಹೃದಯಾಘಾತ (Heart Attack) ಹೆಚ್ಚಾಗಿ ಸಂಭವಿಸುತ್ತಿದೆ.
ಹಿಂದೆಲ್ಲ ತೂಕ ಹೆಚ್ಚಳದಿಂದ, ರಕ್ತದೊತ್ತಡದಿಂದ ಈ ಹೃದಯಾಘಾತ ಸಂಭವಿಸುತ್ತಿತ್ತು. ಆದರೆ ಇತ್ತೀಚೆಗೆ ಚಿಕ್ಕಮಕ್ಕಳಿಗೂ ಹಾರ್ಟ್ ಅಟ್ಯಾಕ್ ಆಗುತ್ತಿದೆ.
ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಇತ್ತೀಚೆಗೆ ಹಾರ್ಟ್ ಅಟ್ಯಾಕ್ ಸಮಸ್ಯೆಗಳೇ ಯುವಕರನ್ನು ಕಾಡುತ್ತಿದೆ. ಇದೀಗ ಒಂದೇ ದಿನ ಕಿಲ್ಲರ್ ಹಾರ್ಟ್ ಅಟ್ಯಾಕ್‌ನಿಂದಾಗಿ ಮೂರು ಜನ ಬ*ಯಾಗಿದ್ದಾರೆ.
ಶಾಲಾ ಬಸ್ ಚಾಲಕ ಬಸ್ ಚಲಿಸುತ್ತಿದ್ದಾಗ ಅಸು ನೀಗಿದರೆ. 26 ವರ್ಷದ ಯುವತಿಯೊಬ್ಬಳು ಮತ್ತು 42 ವರ್ಷದ ದೈಹಿಕ ಶಿಕ್ಷಕ ಕುಸಿದು ಬಿದ್ದು ಹೃದಯಾಘಾತದಿಂದ ಸಾ*ನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.
ಶಾಲಾ ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ ಸಂಭವಿಸಿರುವಂತಹ ಘಟನೆ ಜಿಲ್ಲೆಯ ಸವಣೂರು ತಾಲೂಕಿನ ಕಳಲಗೊಂಡ ಬಳಿ ನಡೆದಿದೆ.
ಪಕ್ಕಿರೇಶ್(25) ಹೃದಯಾಘಾತದಿಂದ ಮೃ*ಪಟ್ಟ ಬಸ್ ಚಾಲಕ.ಖಾಸಗಿ ಶಾಲೆಯ ಬಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಪಕ್ಕಿರೇಶ ಸಂಜೆ ಶಾಲೆಯಿಂದ
ವಾಪಸ್ ಮಕ್ಕಳನ್ನು ಮನೆಗೆ ಡ್ರಾಪ್ ಮಾಡುತ್ತಿದ್ದ ವೇಳೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದೆ.

ಈ ಹಿನ್ನೆಲೆಯಲ್ಲಿ ಚಾಲಕ ರಸ್ತೆಬದಿಯಲ್ಲಿ ಬಸ್ ನಿಲ್ಲಿಸಿದ್ದಾರೆ. ಈ ವೇಳೆ ಮಕ್ಕಳು ಕೂಗಾಡಿ, ಚೀರಾಡಿ ಸ್ಥಳೀಯರನ್ನು ಕರೆದಿದ್ದಾರೆ.
ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಚಾಲಕ ಹೃದಯಾಘಾತದಿಂದ ಸಾ*ನ್ನಪ್ಪಿದ್ದಾರೆ. ಅದೃಷ್ಟವಶಾತ್ ಶಾಲಾ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.
ಇನ್ನು ದಾವಣಗೆರೆಯ ಹೊನ್ನಾಳಿ ಪಟ್ಟಣದ ದುರ್ಗಿಗುಡಿಯಲ್ಲಿ ಹೃದಯಾಘಾತದಿಂದ ದೈಹಿಕ ಶಿಕ್ಷಕ ಸಾ*ನ್ನಪ್ಪಿದ್ದು, ಮೃ*ರನ್ನು ರವಿಕುಮಾರ್ (42) ಎಂದು ಗುರುತಿಸಲಾಗಿದೆ. ಶಾಲಾ ಆವರಣದಲ್ಲೇ ದೈಹಿಕ ಶಿಕ್ಷಕ ರವಿಕುಮಾರ್ ಸಂಜೆ ಕುಸಿದು ಬಿದ್ದು ಸಾ*ನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಇನ್ನು ಕೊಪ್ಪಳ ಜಿಲ್ಲೆಯಲ್ಲಿ ಹೃದಯಾಘಾತದಿಂದ 26 ವರ್ಷದ ಯುವತಿ ಸಾ*ನ್ನಪ್ಪಿದ್ದು, 26 ವರ್ಷದ ಮಂಜುಳಾ ಹೂಗಾರ್ ಎಂದು ಗುರುತಿಸಲಾಗಿದೆ.
ಕೊಪ್ಪಳದ ಶಿವಗಂಗಾ ಲೇಔಟ್ ನಿವಾಸಿ ಮಂಜುಳಾ, ಲೋ ಬಿಪಿಯಾಗಿ ಆಸ್ಪತ್ತೆಗೆ ಸಾಗಿಸೋ ವೇಳೆ ಮಾರ್ಗ ಮಧ್ಯೆ ಸಾ*ನ್ನಪ್ಪಿದ್ದಾರೆ ಎನ್ನಲಾಗಿದೆ. ಆ ಬಳಿಕ ಪರಿಶೀಲಿಸಿದ ವೈದ್ಯರು ಹೃದಯಾಘಾತ ಎಂದು ದೃಢಪಡಿಸಿದ್ದಾರೆ.
ಆಧುನಿಕ ಜೀವನಶೈಲಿಯಲ್ಲಿ ಒತ್ತಡವು ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ಕೆಲಸದ ಒತ್ತಡ, ಕೌಟುಂಬಿಕ ಸಮಸ್ಯೆಗಳು, ಆರ್ಥಿಕ ಒತ್ತಡ,
ಡಿಜಿಟಲ್ ಓವರ್‌ಲೋಡ್‌ನಂತಹ ಕಾರಣಗಳಿಂದ ಒತ್ತಡವು ಎಲ್ಲರ ಜೀವನದಲ್ಲಿ ಸಾಮಾನ್ಯವಾಗಿದೆ.
ಇದನ್ನು ಓದಿ : ನರಮಂಡಲದ ಸಮಸ್ಯೆಗಳು ಹೆಚ್ಚಾಗಲು ಮೂಲ ಕಾರಣ ಕೋವಿಡ್ ಲಸಿಕೆಗಳು : ನಿಮ್ಹಾನ್ಸ್
ಆದರೆ, ಈ ಒತ್ತಡವನ್ನು ನಿರ್ಲಕ್ಷಿಸಿದರೆ ಅದು ಕೇವಲ ಮಾನಸಿಕ ಆರೋಗ್ಯವನ್ನಷ್ಟೇ ಅಲ್ಲ, ದೈಹಿಕ ಆರೋಗ್ಯದ ಮೇಲೂ, (Heart attack cases increase) ವಿಶೇಷವಾಗಿ ಹೃದಯದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ.