• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಆರೋಗ್ಯ

ಪುಟ್ಟ ಮಕ್ಕಳಲ್ಲಿ ಹೆಚ್ಚುತ್ತಿದೆ ಹೃದಯಾಘಾತ : ಈ ಸಡನ್‌ ಬೆಳವಣಿಗೆಗೆ ಕೊರೋನಾ ಕಾರಣನಾ.. ಹೇಗೆ…

Rashmitha Anish by Rashmitha Anish
in ಆರೋಗ್ಯ
ಪುಟ್ಟ ಮಕ್ಕಳಲ್ಲಿ ಹೆಚ್ಚುತ್ತಿದೆ ಹೃದಯಾಘಾತ : ಈ ಸಡನ್‌ ಬೆಳವಣಿಗೆಗೆ ಕೊರೋನಾ ಕಾರಣನಾ.. ಹೇಗೆ…
0
SHARES
31
VIEWS
Share on FacebookShare on Twitter

ವಯಸ್ಸಾದವರಿಗೆ ಹೃದಯಘಾತ(Heart attack) ಆಗೋದು ಸಾಮಾನ್ಯ. ಅದಕ್ಕೆ ನಾನಾ ಕಾರಣಗಳನ್ನು ವೈದ್ಯ ಲೋಕ ಪತ್ತೆ ಹಚ್ಚಿದೆ. ಆದ್ರೆ ಈಗ ವೈದ್ಯ ಲೋಕವನ್ನೇ ಬೆಚ್ಚಿ (Heart attacks small children) ಬೀಳಿಸುವಂಥಾ ಭಯಾನಕ ಬೆಳವಣಿಗೆಯೊಂದು ನಡೆಯುತ್ತಿದೆ.

ಈ ವಿದ್ಯಮಾನ ಇಡೀ ಪ್ರಪಂಚಕ್ಕೆ ದೊಡ್ಡ ಸವಾಲಾಗಿದೆ. ಇದು ಪಾಲಕರಲ್ಲಂತು ಭಾರೀ ಆತಂಕ ಮೂಡಿಸಿದೆ. ಆ ಬೆಳವಣಿಗೆ ಯಾವುದು ಗೊತ್ತಾ? ಮಕ್ಕಳಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಸಮಸ್ಯೆ.

ಹೌದು, ಕೊರೋನಾ(Corona) ಕಾಟದ ಬಳಿಕ ಪುಟ್ಟ ಪುಟ್ಟ ಮಕ್ಕಳು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಒಂದೇ ತಿಂಗಳಲ್ಲಿ ಕರ್ನಾಟಕ(Karnataka) ರಾಜ್ಯವೊಂದರಲ್ಲೇ ಎಂಟಕ್ಕೂ ಹೆಚ್ಚು ಮಕ್ಕಳು ಹೃದಯಾಘಾತಕ್ಕೆ ಬಲಿಯಾಗಿರೋದು ಸುದ್ದಿಯಾಗಿತ್ತು.

ಇನ್ನು ಸುದ್ದಿಯಾಗದೆ ಸದ್ದಿಲ್ಲದೆ ಇಹಲೋಕ ತ್ಯಜಿಸಿದ ಕಂದಮ್ಮಗಳೆಷ್ಟೋ? ಹಾಗಾದ್ರೆ ಮಕ್ಕಳನ್ನು ಸಡನ್‌ ಆಗಿ ಕಾಡುತ್ತಿರೋ ಈ ಸಮಸ್ಯೆಗೆ ಕಾರಣಗಳೇನು?

ಕೋರೋನಾ ಬಳಿಕ ಈ ಬೆಳವಣಿಗೆಯಾಗುತ್ತಿದೆಯಾ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹುಡುಕೋಣ ಬನ್ನಿ.

Heart attacks small children

ಮಕ್ಕಳಲ್ಲಿ ಹೃದಯಾಘಾತ ಹೆಚ್ಚಲು ಕಾರಣಗಳೇನು?

  • ವ್ಯಾಯಾಮದ ಕೊರತೆ: ಮುಖ್ಯವಾಗಿ ಕೊರೋನಾ ನಂತ್ರ ಮಕ್ಕಳನ್ನು ಹೃದಯಾಘಾತ ಕಾಡಲು ಮುಖ್ಯ ಕಾರಣ ವ್ಯಾಯಾಮದ ಕೊರತೆ. ಕೊರೋನಾ ಸಂದರ್ಭದಲ್ಲಿ ಶಾಲೆ ಮುಚ್ಚಲಾಗಿತ್ತು. ಮಕ್ಕಳಿಗೆ ಆನ್‌ಲೈನ್‌ ಕ್ಲಾಸ್‌ಗಳನ್ನು ಮಾಡಲಾಯಿತು. ಮಕ್ಕಳು ಕಂಪ್ಯೂಟರ್‌, ಲ್ಯಾಪ್‌ಟಾಪ್‌(Laptop), ಮೊಬೈಲ್‌ಗಳ(Mobile) ಮುಂದೆ ಕುಳಿತು ದಿನವಿಡೀ ಪಾಠ ಕೇಳುವಂತೆ ಮಾಡಲಾಯಿತು. ಇದರಿಂದ ಮಕ್ಕಳು ದೈಹಿಕ (Heart attacks small children) ಚಟುವಟಿಕೆಗಳಿಂದ ವಂಚಿತರಾದರು. ಬಗೆ ಬಗೆಯ ತಿಂಡಿ ತಿನಿಸುಗಳನ್ನು ತಿನ್ನುತ್ತಾ ದಿನವಿಡೀ ಮೊಬೈಲ್‌, ಕಂಪ್ಯೂಟರ್‌ ಮುಂದೆ ಎರಡು ವರ್ಷ ಕಳೆದ ಮಕ್ಕಳನ್ನು ಬೊಜ್ಜಿನ ಸಮಸ್ಯೆ ಕಾಡಲಾರಂಭಿಸಿತು. ಮತ್ತೆ ಈಗ ಆಫ್‌ಲೈನ್‌ ಕ್ಲಾಸ್‌ ಪ್ರಾರಂಭವಾದ್ದರಿಂದ ತೀವ್ರ ದೈಹಿಕ ಚಟುವಟಿಕೆಗಳನ್ನು ಪ್ರಾರಂಭಿಸಲಾಯಿತು. ಇದು ಹೃದಯದ ಮೇಲೆ ಒಂದೇ ಸಮನೆ ಒತ್ತಡ ಬೀಳುವಂತೆ ಮಾಡಿ ಹೃದಯಾಘಾತಕ್ಕೆ ಕಾರಣವಾಗುತ್ತಿದೆ.
  • ಅಪೌಷ್ಟಿಕಾಂಶ ಆಹಾರಗಳ ಸೇವನೆ: ಈಗಿನ ಮಕ್ಕಳು ಜಂಕಪೂಡ್ ಗಳಿಗೆ(Junk food) ಹೆಚ್ಚೆಚ್ಚು ಮೋರೆ ಹೋಗುತ್ತಿದ್ದಾರೆ ಉದಾ : ಚಿಪ್ಸ್‌, ಪಾಸ್ತಾ, ಪಿಜ್ಜಾ, ಪಾನಿಪುರಿ, ಗೋಬಿ ಮಂಚೂರಿ, ಬರ್ಗರ್ ಹೀಗೆ ಜಂಕ್‌ ಫುಡ್‌ಗಳನ್ನೇ ಮುಖ್ಯ ಆಹಾರವನ್ನಾಗಿಸಿದ್ದಾರೆ. ಈ ಆಹಾರ ಪದಾರ್ಥಗಳಲ್ಲಿ ಅಧಿಕ ಸಕ್ಕರೆ, ಎಣ್ಣೆ, ಕೆಮಿಕಲ್, ಕಲರ್ ಇರೋದ್ರಿಂದ ದೇಹದ ಮೇಲೆ ಗಂಭೀರ ಪರಿಣಾಮ ಬೀಳುತ್ತಿದೆ. ಅಲ್ಲದೆ ಜಂಕ್‌ ಫುಡ್‌ಗಳಲ್ಲಿ ಯಾವುದೇ ಪೌಷ್ಟಿಕಾಂಶ ಇಲ್ಲದ ಕಾರಣ ರಕ್ತಹೀನತೆ ಸಮಸ್ಯೆ ಕೂಡ ಎದುರಾಗುತ್ತಿದೆ.
  • ಅತಿಯಾದ ಒತ್ತಡ: ಮಕ್ಕಳ ಬುದ್ದಿಮಟ್ಟ, ಅವರ ಮೆದುಳಿನ ಸಾಮರ್ಥ್ಯದ ಮಟ್ಟವನ್ನು ಪರೀಕ್ಷಿಸದೆಯೇ ಪಠ್ಯಪುಸ್ತಕಗಳನ್ನು ರಚಿಸಲಾಗುತ್ತಿದೆ. ವಿಪರೀತ ಹೋಮ್ ವರ್ಕ್‌ಗಳನ್ನು ಕೊಟ್ಟು ಒತ್ತಡ ಹೇರಲಾಗುತ್ತಿದೆ. ಇದು ಮಕ್ಕಳ ಆರೋಗ್ಯ ಅದ್ರಲ್ಲೂ ಮುಖ್ಯವಾಗಿ ಹೃದಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. .
  • ವಿಪರೀತ ಮೊಬೈಲ್ ಬಳಕೆ: ಕರೋನಾ (COVid- 19) ಸಮಯದಲ್ಲಿ ಶಾಲೆಗಳು ಮುಚ್ಚಿದು ಪಾಲಕರು ಮಕ್ಕಳನ್ನು ಹೊರಗಡೆ ಆಟವಾಡಲು ಬಿಡಲು ಭಯಪಡುತಿದ್ದರು. ಆಗ ಮಕ್ಕಳಿಗೆ ಮೊಬೈಲೇ ಟೈಂಪಾಸ್‌ಗೆ ಒಂದು ಸಾಧನವಾಗಿತ್ತು. ಆದ್ರೆ ಅಂದು ಟೈಂಪಾಸ್‌ಗೆ ನೀಡಿದ ಮೊಬೈಲ್‌ ಇಂದು ಮಕ್ಕಳಿಗೆ ಚಟವಾಗಿದೆ. ಈಗ ಮಕ್ಕಳು ಮೊಬೈಲ್ ಇಲ್ಲದೆ ಊಟ ಮಾಡುವದಿಲ್ಲ ಆ ಮಟ್ಟಕ್ಕೆ ಮೊಬೈಲ್ಗೆ ಅಡಿಕ್ಟ್ ಆಗಿದ್ದಾರೆ. ಇದರಿಂದ ಮಕ್ಕಳ ಕಣ್ಣುಗಳು ಹಾಳುಗುತ್ತಿವೆ. ಮಕ್ಕಳಲ್ಲಿ ಕ್ರಿಯಾಶೀಲತೆ ಕಡಿಮೆಯಾಗುತ್ತದೆ. ದೈಹಿಕ ಚಟುವಟಿಕೆಗಳೇ ಇಲ್ಲದೆ ಸ್ಥೂಲ ಕಾಯದ(Fat) ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಇದರಿಂದ ಡಯಾಬಿಟೀಸ್‌, ರಕ್ತದೊತ್ತಡದಂಥಾ ಕಾಯಿಲೆ ತುತ್ತಾಗುತ್ತಿದ್ದಾರೆ.

ಹೃದಯಘಾತದ ಲಕ್ಷಣಗಳು :

  • 1.ಉಸಿರಾಟದ ತೊಂದರೆ.
  • 2. ಸುಸ್ತು.
  • 3. ಅತಿಯಾದ ಹೃದಯಬಡಿತ.
  • 4. ತುಂಬಾ ಬೆವರುವುದು.
  • 5. ಕಾಲುಗಳು, ಮಣಿಗಂಟು , ಹೊಟ್ಟೆ ಕೇಳಬಾಗದಲ್ಲಿ ಊತ.
  • 6. ಎದೆ ನೋವು.

ಹೃದಯಘಾತ ಸಮಸ್ಯೆಗೆ ಪರಿಹಾರಗಳು :

ಪೋಷಕರು ಮಕ್ಕಳನ್ನು ಮೊಬೈಲ್ ಬಳಕೆಯಿಂದ ದೂರವಿರಿಸಿ ಹೊರಗಡೆ ಆಟವಾಡಲು ಹಾಗೂ ಯೋಗಾಸನ(Yoga), ವಿವಿದ ಚಟುವಟಿಕೆಗಳಲ್ಲಿ ಮಕ್ಕಳು ತೊಡಗಿಸಿಕೊಳ್ಳುವಂತೆ ಮಾಡಬೇಕು.

ಮನೆಯಲ್ಲಿ ತಯಾರಿಸಿದ ಆಹಾರಪದಾರ್ಥಗಳ ಸೇವನೆಗೆ ಮೊದಲ ಆದ್ಯತೆ ನೀಡಬೇಕು. ಮೊಳಕೆಕಾಳು, ಡ್ರೈ ಫ್ಫ್ರೂಟ್(Dry fruits), ತರಕಾರಿಗಳು & ಹಣ್ಣುಗಳನ್ನು ಸೇವಿಸುವದರಿಂದ ದೇಹಕ್ಕೆ ವಿಟಮಿನ್ ದೊರೆಯುತ್ತದೆ.

ಇದರಿಂದ ಹೃದಯಘಾತವನ್ನು ತಡೆಗಟ್ಟಬಹುದು. ಜೀವನದಲ್ಲಿ ಬದುಕಿ ಬಾಳಬೇಕಾದ ಪುಟ್ಟ ಮಕ್ಕಳು ಹೃದಯಘಾತಕ್ಕೆ ಬಲಿಯಾಗುತ್ತಿರುವುದು ಶೋಚನೀಯ ಸಂಗತಿಯಾಗಿದೆ.

ಸೂಚನೆ : ಹೃದಯಘಾತ ಸಮಸ್ಯೆಯ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣವೇ ವೈದರನ್ನು ಸಂಪರ್ಕಸಿ. ಸಾವಿನ ಅಂಚಿನಿಂದ ತಪ್ಪಿಸಿಕೊಳ್ಳಬಹುದಾಗಿದೆ.

  • ರುಕ್ಮಿಣಿ
Tags: childrenHealthheartattack

Related News

ಚಳಿಗಾಲದಲ್ಲಿ ಮುಖದ ಕಾಂತಿಯನ್ನು ಹೆಚ್ಚಿಸುವುದು ಹೇಗೆ
ಆರೋಗ್ಯ

ಚಳಿಗಾಲದಲ್ಲಿ ಮುಖದ ಕಾಂತಿಯನ್ನು ಹೆಚ್ಚಿಸುವುದು ಹೇಗೆ

February 1, 2023
ಅವರೇ ಕಾಳಲ್ಲಿ ಅಡಗಿದೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅಪರೂಪದ ಸತ್ವ
ಆರೋಗ್ಯ

ಅವರೇ ಕಾಳಲ್ಲಿ ಅಡಗಿದೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅಪರೂಪದ ಸತ್ವ

January 28, 2023
ಬದನೆಕಾಯಿ ತಿಂದ್ರೆ ಬೊಜ್ಜು ಕರಗುತ್ತೆ, ರೋಗ ನಿರೋಧಕ ಶಕ್ತಿ ಹೆಚ್ಚುತ್ತೆ ಗೊತ್ತಾ?
ಆರೋಗ್ಯ

ಬದನೆಕಾಯಿ ತಿಂದ್ರೆ ಬೊಜ್ಜು ಕರಗುತ್ತೆ, ರೋಗ ನಿರೋಧಕ ಶಕ್ತಿ ಹೆಚ್ಚುತ್ತೆ ಗೊತ್ತಾ?

January 26, 2023
ಸೋಯಾ ಆರೋಗ್ಯಪೂರ್ಣ ಆಹಾರ ಅಲ್ವಾ? ಯಥೇಚ್ಛವಾಗಿ ಸೋಯಾ ತಿಂದ್ರೆ ಏನು ತೊಂದ್ರೆ ಆಗುತ್ತೆ?
ಆರೋಗ್ಯ

ಸೋಯಾ ಆರೋಗ್ಯಪೂರ್ಣ ಆಹಾರ ಅಲ್ವಾ? ಯಥೇಚ್ಛವಾಗಿ ಸೋಯಾ ತಿಂದ್ರೆ ಏನು ತೊಂದ್ರೆ ಆಗುತ್ತೆ?

January 19, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.