ನೇಪಾಳಕ್ಕೆ ಅಪ್ಪಳಿಸಿದ (heavy floods in Nepal) ಜಲಪ್ರಳಯ: 165 ಮಂದಿ ಸಾವು
ಭೋಟೆಕೋಶಿ ನದಿಯ ಹಠಾತ್ ಉಕ್ಕೇರಿಕೆಯಿಂದ ಭಾರೀ ವಿನಾಶ; ಭಾರತದಲ್ಲೂ ಹೈ ಅಲರ್ಟ್
133 ಭಾರತೀಯರು ನಾಪತ್ತೆ; ಬಿಹಾರ, ಉತ್ತರ ಪ್ರದೇಶದಲ್ಲಿ ಕಟ್ಟೆಚ್ಚರ
ಉತ್ತರ ನೇಪಾಳದ ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಹಠಾತ್ ಪ್ರವಾಹ ಭಾರೀ (heavy floods in Nepal) ಅನಾಹುತ ಸೃಷ್ಟಿಸಿದೆ.
ಪ್ರವಾಹದ ರಭಸಕ್ಕೆ ಸೇತುವೆಗಳು, ಮನೆಗಳು, ರಸ್ತೆಗಳು ಹಾಗೂ ವಿದ್ಯುತ್ ಮೂಲಸೌಕರ್ಯಗಳು ಕೊಚ್ಚಿಹೋಗಿದ್ದು, ಹಲವು ಪ್ರದೇಶಗಳು ಸಂಪರ್ಕ ಕಳೆದುಕೊಂಡಿವೆ.
ಈ ದುರಂತದಲ್ಲಿ ಇದುವರೆಗೆ 165 ಮಂದಿ ಮೃತಪಟ್ಟಿದ್ದು, ಹಲವರು ನಾಪತ್ತೆಯಾಗಿದ್ದಾರೆ ಎಂದು ನೇಪಾಳ ಪ್ರವಾಸೋದ್ಯಮ ಮಂಡಳಿ ತಿಳಿಸಿದೆ. ನಾಪತ್ತೆಯಾದವರಲ್ಲಿ 133 ಮಂದಿ ಭಾರತೀಯರು ಇರುವುದರಿಂದ ಭಾರತದಲ್ಲೂ ಆತಂಕ ಹೆಚ್ಚಾಗಿದೆ.

ಘಟನೆಯ ಹಿನ್ನೆಲೆಯಲ್ಲಿ ನೇಪಾಳ ಸರ್ಕಾರ ತುರ್ತು ರಕ್ಷಣಾ ಕಾರ್ಯಾಚರಣೆಗೆ (heavy floods in Nepal) ಮುಂದಾಗಿದ್ದು, ಪ್ರಧಾನಿ ಬಲೇಂದ್ರ ಶಾ (Balendra Shah) ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ತುರ್ತು ಸಭೆ ನಡೆಸಿದ್ದಾರೆ.
ಚೀನಾದ ಟಿಬೆಟ್ (Tibet) ಪ್ರದೇಶದ ಭೋಟೆಕೋಶಿ ನದಿಯಲ್ಲಿ ಹಠಾತ್ ನೀರಿನ ಪ್ರಮಾಣ ಏರಿಕೆಯಾಗಿರುವುದೇ ಈ ಭೀಕರ ಪ್ರವಾಹಕ್ಕೆ ಕಾರಣವೆಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ. ಸ್ಥಳೀಯವಾಗಿ ದೊಡ್ಡ ಪ್ರಮಾಣದ ಮಳೆಯಾಗದಿದ್ದರೂ ಪ್ರವಾಹ ಸಂಭವಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಹಿಮನದಿ ಸರೋವರ ಸ್ಫೋಟ ಅಥವಾ ಮೇಲ್ಹಿಮಾಲಯ ಪ್ರದೇಶದಲ್ಲಿ ಹಿಮ ಕರಗುವಿಕೆಯಿಂದ ನದಿಗೆ ಏಕಾಏಕಿ ಅಪಾರ ಪ್ರಮಾಣದ ನೀರು ಹರಿದು ಬಂದಿರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಟಿಬೆಟ್ ಗಡಿಯಿಂದ ಭಾರೀ ಪ್ರಮಾಣದ ನೀರು ನೇಪಾಳದತ್ತ ಹರಿದುಬಂದಿದ್ದು, ನುವಾಕೋಟ್ (Nuwakot) ಮತ್ತು ಧಾಡಿಂಗ್ (Dhading) ಸೇರಿದಂತೆ ಹಲವು ಜಿಲ್ಲೆಗಳ ಮೇಲೆ ಪರಿಣಾಮ ಬೀರಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ದೃಶ್ಯಗಳು ಪ್ರವಾಹದ ಭೀಕರತೆಯನ್ನು ತೋರಿಸುತ್ತಿವೆ.
ಪ್ರವಾಹದಿಂದ ನಾಪತ್ತೆಯಾದವರ ಪೈಕಿ ವಿದೇಶಿ ಪ್ರವಾಸಿಗರ ಸಂಖ್ಯೆಯೂ ಗಮನಾರ್ಹವಾಗಿದೆ. ನೇಪಾಳ ಪ್ರವಾಸೋದ್ಯಮ ಮಂಡಳಿಯ ಮಾಹಿತಿ ಪ್ರಕಾರ, 291 ವಿದೇಶಿಯರು ಮತ್ತು 93 ನೇಪಾಳಿ ನಾಗರಿಕರು ಸೇರಿದಂತೆ ಒಟ್ಟು 384 ಮಂದಿ ಕಾಣೆಯಾಗಿದ್ದಾರೆ.
ವಿದೇಶಿಯರಲ್ಲಿ 133ಮಂದಿ ಭಾರತೀಯರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಸುವಾ ಜಿಲ್ಲೆಯಲ್ಲಿ ನೇಪಾಳ ಪೊಲೀಸ್ ಇಲಾಖೆಯ ಕನಿಷ್ಠ 26 ಸಿಬ್ಬಂದಿಯೂ ನಾಪತ್ತೆಯಾಗಿದ್ದಾರೆ.
ಸಶಸ್ತ್ರ ಪೊಲೀಸ್ ಪಡೆಯ ಏಳು ಸಿಬ್ಬಂದಿಯ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ನುವಾಕೋಟ್ ಮತ್ತು ಧಾಡಿಂಗ್ ಜಿಲ್ಲೆಗಳಿಂದ ಕನಿಷ್ಠ ಎಂಟು ಶವಗಳನ್ನು ಪತ್ತೆಹಚ್ಚಲಾಗಿದೆ
ಎಂದು ನೇಪಾಳದ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ರಕ್ಷಣಾ ತಂಡಗಳು ನಾಪತ್ತೆಯಾದವರಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿವೆ.
ಪರಿಸ್ಥಿತಿಯ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ನೇಪಾಳಿ ಸೇನೆ ಹೆಲಿಕಾಪ್ಟರ್‌ಗಳು ಹಾಗೂ ವಿಪತ್ತು ಪರಿಹಾರ ಸಿಬ್ಬಂದಿಯನ್ನು ಪೀಡಿತ ಪ್ರದೇಶಗಳಿಗೆ ಕಳುಹಿಸಿದೆ.
ಆದರೆ ಪ್ರವಾಹದಿಂದ ಹಲವು ರಸ್ತೆಗಳು, ಸೇತುವೆಗಳು ಮತ್ತು ವಿದ್ಯುತ್ ಸಂಪರ್ಕಗಳು ಹಾನಿಗೊಳಗಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ.
ನೇಪಾಳ ವಿದ್ಯುತ್ ಪ್ರಾಧಿಕಾರದ ಪ್ರಮುಖ ಜಲವಿದ್ಯುತ್ ಹಾಗೂ ಪ್ರಸರಣ ಸೌಲಭ್ಯಗಳಿಗೂ ಹಾನಿಯಾಗಿದೆ. ರಸುವಾಗಧಿ, ಚಿಲಿಮೆ, ತ್ರಿಶೂಲಿ ಸೇರಿದಂತೆ ಹಲವು ವಿದ್ಯುತ್ ಯೋಜನೆಗಳು ಮತ್ತು ಸಬ್‌ಸ್ಟೇಷನ್‌ಗಳು ಪ್ರವಾಹದ ಹೊಡೆತಕ್ಕೆ ಸಿಲುಕಿವೆ.
ಪರಿಣಾಮವಾಗಿ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಹೆದ್ದಾರಿಗಳ ಮೇಲೂ ಪ್ರವಾಹದ ಪರಿಣಾಮ ಬಿದ್ದು, ಸಂಚಾರ ಸ್ಥಗಿತಗೊಂಡಿದೆ.
ನೇಪಾಳದಲ್ಲಿ ಉಂಟಾದ ಈ ಪ್ರಕೃತಿ ವಿಕೋಪದ ಪರಿಣಾಮ ಭಾರತಕ್ಕೂ ಆತಂಕ ಎದುರಾಗಿದೆ. ಪ್ರವಾಹದ ನೀರು ಗಂಡಕ್ ನದಿಯ ಮೂಲಕ ಬಿಹಾರದ ಆರು ಜಿಲ್ಲೆಗಳತ್ತ ಹರಿಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಅಲ್ಲಿನ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳ ತಂಡಗಳನ್ನೂ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಉತ್ತರ ಪ್ರದೇಶದಲ್ಲಿಯೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ತುರ್ತು ಸಂಪರ್ಕ ಸಂಖ್ಯೆಗಳು (Emergency Contact Numbers)
ಖಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿ (ಭಾರತೀಯ ನಾಗರಿಕರಿಗಾಗಿ):
+977 985 131 6807
+977 970 910 7500
ನೇಪಾಳ ಪ್ರವಾಸೋದ್ಯಮ ಮಂಡಳಿ (Nepal Tourism Board) & ಸ್ಥಳೀಯ ಸಹಾಯವಾಣಿ:
ಉಚಿತ ತುರ್ತು ಸಂಖ್ಯೆ (Toll Free): 1234
ಹಾಟ್‌ಲೈನ್ (Hotline): 1144
ಟೂರಿಸ್ಟ್ ಪೊಲೀಸ್ (Tourist Police): +977 985 128 9445
ಇದನ್ನು ಓದಿ : https://vijayatimes.com/not-achhe-din-but-expensive-days/