• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಮಾಹಿತಿ

ಬೆಂಗಳೂರಲ್ಲಿ ಆಗಸ್ಟ್ 9ರವರೆಗೆ ಮಳೆಯ ಮುನ್ಸೂಚನೆ: ಕರ್ನಾಟಕದ 29 ಜಿಲ್ಲೆಗಳಿಗೆ ಎಚ್ಚರಿಕೆ ಘೋಷಣೆ!

Shwetha Mohan by Shwetha Mohan
in ಮಾಹಿತಿ, ರಾಜ್ಯ, ವಿಜಯ ಟೈಮ್ಸ್‌
ಬೆಂಗಳೂರಲ್ಲಿ ಆಗಸ್ಟ್ 9ರವರೆಗೆ ಮಳೆಯ ಮುನ್ಸೂಚನೆ: ಕರ್ನಾಟಕದ 29 ಜಿಲ್ಲೆಗಳಿಗೆ ಎಚ್ಚರಿಕೆ ಘೋಷಣೆ!
0
SHARES
37
VIEWS
Share on FacebookShare on Twitter
  • ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಮುಂದುವರೆದ ಮಳೆ
  • ಕರ್ನಾಟಕದ 29 ಜಿಲ್ಲೆಗಳಿಗೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ
  • ಹಲವು ಜಿಲ್ಲೆಗಳಿಗೆ ಯಲ್ಲೋ ಅಲರ್ಟ್

Bengaluru: ಕಳೆದೆರಡು ದಿನಗಳಿಂದ ಬೆಂಗಳೂರಿನ ಹಲವೆಡೆ ಮಳೆಯಾಗುತ್ತಿದ್ದು. ರಾಜ್ಯದ ಎಲ್ಲಡೆ ಮುಂಗಾರು(Monsoon rain) ಚುರುಕು ಹಿಡಿದಿದ್ದು,

ಮುಂದಿನ ಕೆಲವು ದಿನಗಳು ಭಾರೀ ಮಳೆಯ ಅಬ್ಬರ ರಾಜ್ಯದ ಹಲವು ಜಿಲ್ಲೆಗಳ ಮೇಲೆ ಬೀಳಲಿದ್ದು, ಹವಾಮಾನ ಇಲಾಖೆ(Meteorological Department) ಇದೀಗ 29 ಜಿಲ್ಲೆಗಳಿಗೆ ಅಲರ್ಟ್‌ ಘೋಷಿಸಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ದಕ್ಷಿಣ ಮತ್ತು ಉತ್ತರ ಭಾಗಗಳಲ್ಲಿ ಆಗಸ್ಟ್ 9ರವರೆಗೆ ಮುಂಗಾರು ವ್ಯಾಪಕ ಮಳೆ ನೀಡುವ ಸೂಚನೆ ಇದೆ.

ಯೆಲ್ಲೋ ಮತ್ತು ಆರೆಂಜ್ ಅಲರ್ಟ್‌ ಹಿನ್ನಲೆ:

ವಿಜಯನಗರ, ಶಿವಮೊಗ್ಗ, ರಾಮನಗರ, ಚಾಮರಾಜನಗರ, ಬೆಂಗಳೂರು ನಗರ ಹಾಗೂ ಗ್ರಾಮಾಂತರ, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಹಾವೇರಿ, ಗದಗ, ಧಾರವಾಡ, ಬೀದರ್ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಘೋಷಣೆಯಾಗಿದೆ.

Heavy rain expected
Heavy rain alert
ಇವುಗಳಲ್ಲಿ ಸಾಧಾರಣದಿಂದ ಭಾರೀ ಮಳೆಯ ಸಾಧ್ಯತೆ ಇದ್ದು, ಜಾಗರೂಕತೆ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಇದೇ ವೇಳೆ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ತುಮಕೂರು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಆರೆಂಜ್‌ ಅಲರ್ಟ್‌ ನೀಡಿದೆ.

ಇದು ಭಾರೀ ಮಳೆಯ ಎಚ್ಚರಿಕೆಯ ಸೂಚನೆಯಾಗಿದ್ದು, ಜನತೆ ಅನಗತ್ಯವಾಗಿ ಹೊರಗೆ ಹೋಗದೇ ಸುರಕ್ಷಿತ ಸ್ಥಳಗಳಲ್ಲಿ ಇರುವುದು ಸೂಕ್ತ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಾಜ್ಯದ ಹಲವೆಡೆ ಮಳೆಯ ವರದಿ:

ರಾಯಲ್ಪಾಡು, ಆಗುಂಬೆ, ಜಿಕೆವಿಕೆ, ಕೃಷ್ಣರಾಜಪೇಟೆ, ಹೊಸಕೋಟೆ, ಧರ್ಮಸ್ಥಳ, ಗೌರಿಬಿದನೂರು, ಮೂಡುಬಿದಿರೆ, ಪುತ್ತೂರು, ಬಂಟವಾಳ, ಕಾರ್ಕಳ, ಬೀದರ್, ಭಾಗಮಂಡಲ, ಕುಣಿಗಲ್, ತಿಪಟೂರು, ಕೊಟ್ಟಿಗೆಹಾರ, ದೇವರಹಿಪ್ಪರಗಿ ಮೊದಲಾದ ಕಡೆಗಳಲ್ಲಿ ಈಗಾಗಲೇ ಉತ್ತಮ ಮಳೆಯಾಗುತ್ತಿದೆ.

ಬೆಂಗಳೂರಿನಲ್ಲಿ ಸ್ಥಿರ ಮಳೆ:

ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಮಳೆ ಬೀಳುತ್ತಿದೆ. ಸೋಮವಾರ ಸಂಜೆ ಆರಂಭವಾದ ಮಳೆ ತಡರಾತ್ರಿ ವರೆಗೆ ಮುಂದುವರೆದಿದೆ. ಹವಾಮಾನ ಇಲಾಖೆ ಪ್ರಕಾರ, ಇತ್ತೀಚಿನ ದಿನಗಳಲ್ಲಿ ನಗರದ ವಿವಿಧ ಭಾಗಗಳಲ್ಲಿ ತಾಪಮಾನ ಈ ಕೆಳಗಿನಂತೆ ದಾಖಲಾಗಿದೆ:


HAL: ಗರಿಷ್ಠ ಉಷ್ಣಾಂಶ 29.0°C, ಕನಿಷ್ಠ 20.0°C
ನಗರ ಪ್ರದೇಶ: ಗರಿಷ್ಠ 29.0°C, ಕನಿಷ್ಠ 20.2°C
ಕೆಐಎಎಲ್: ಗರಿಷ್ಠ 29.2°C, ಕನಿಷ್ಠ 19.8°C
ಜಿಕೆವಿಕೆ: ಗರಿಷ್ಠ 29.6°C, ಕನಿಷ್ಠ 19.4°C

ಇತರ ಪ್ರಮುಖ ನಗರಗಳ ತಾಪಮಾನ:
ಹೊನ್ನಾವರ: ಗರಿಷ್ಠ 30.3°C, ಕನಿಷ್ಠ 25.0°C
ಕಾರವಾರ: ಗರಿಷ್ಠ 31.8°C, ಕನಿಷ್ಠ 24.8°C
ಮಂಗಳೂರು ಏರ್‌ಪೋರ್ಟ್: ಗರಿಷ್ಠ 29.1°C, ಕನಿಷ್ಠ 23.5°C
ಶಕ್ತಿನಗರ: ಗರಿಷ್ಠ 30.8°C, ಕನಿಷ್ಠ 23.5°C
ಬೀದರ್: ಗರಿಷ್ಠ 30.0°C, ಕನಿಷ್ಠ 22.0°C
ವಿಜಯಪುರ: ಗರಿಷ್ಠ 30.5°C, ಕನಿಷ್ಠ 21.0°C
ಧಾರವಾಡ: ಗರಿಷ್ಠ 29.0°C, ಕನಿಷ್ಠ 20.4°C
ಗದಗ: ಗರಿಷ್ಠ 30.2°C, ಕನಿಷ್ಠ 20.8°C
ಕಲಬುರಗಿ: ಗರಿಷ್ಠ 32.5°C, ಕನಿಷ್ಠ 24.4°C
ಹಾವೇರಿ: ಗರಿಷ್ಠ 28.6°C, ಕನಿಷ್ಠ 21.8°C
ಕೊಪ್ಪಳ: ಗರಿಷ್ಠ 31.9°C, ಕನಿಷ್ಠ 24.3°C
ರಾಯಚೂರು: ಗರಿಷ್ಠ 33.0°C, ಕನಿಷ್ಠ 24.0°C

ಸುರಕ್ಷತೆಗಾಗಿ ಸೂಚನೆ:

ಹವಾಮಾನ ಇಲಾಖೆ ನೀಡಿದ ಎಚ್ಚರಿಕೆಯ ಹಿನ್ನೆಲೆಯಲ್ಲಿ, ಸಾರ್ವಜನಿಕರು ಅನಗತ್ಯ ಪ್ರಯಾಣದಿಂದ(travel) ದೂರವಿರಬೇಕು. ನೀರಿನಿಂದ ಕೂಡಿದ ಪ್ರದೇಶಗಳನ್ನು ತಪ್ಪಿಸಿ, ಮಕ್ಕಳನ್ನು ಸುರಕ್ಷಿತವಾಗಿ ಇರಿಸಬೇಕು.

ಇದನ್ನು ಓದಿ :  ರಾಜ್ಯದಲ್ಲಿ ಮುಂದುವರೆದ ವರುಣನ ಆರ್ಭಟ: 3 ಜಿಲ್ಲೆಗೆ ರೆಡ್ ಹಾಗೂ 4 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ

ರೈತರು ತಮ್ಮ ಬೆಳೆಗಳಿಗೆ ಸೂಕ್ತ ಜಾಗೃತಿ ವಹಿಸಬೇಕಾಗಿದೆ. ನಗರ ಪ್ರದೇಶಗಳಲ್ಲಿ ಡ್ರೇನೇಜ್(Drainage) ವ್ಯವಸ್ಥೆ ಚೆನ್ನಾಗಿಲ್ಲದಿದ್ದರೆ ಮುಂಗಾರು ಹೊಡೆತದಿಂದ ತೊಂದರೆ ಉಂಟಾಗಬಹುದು. ಹಾಗೂ ಕರಾವಳಿ ಭಾಗದಲ್ಲಿ ಮಳೆ ಸುರಿಯುವ ಸಾಧ್ಯತೆ ಹೆಚ್ಚಿರುವ ಕಾರಣ ಮೀನುಗಾರರಿಗೆ(fishermen) ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.

Tags: bengaluruHeavy rain alertKarnatakaMeteorological DepartmentMonsoon rainvijaya times

Related News

CET ಪರೀಕ್ಷಾರ್ಥಿಗಳಿಗೆ ಎಚ್ಚರಿಕೆ: ನಕಲಿ ಲಿಂಕ್‌ಗಳಿಂದ ಸೈಬರ್ ವಂಚನೆ ಹೆಚ್ಚಳ,KEA ಮಹತ್ವದ ಸೂಚನೆ
ಪ್ರಮುಖ ಸುದ್ದಿ

CET ಪರೀಕ್ಷಾರ್ಥಿಗಳಿಗೆ ಎಚ್ಚರಿಕೆ: ನಕಲಿ ಲಿಂಕ್‌ಗಳಿಂದ ಸೈಬರ್ ವಂಚನೆ ಹೆಚ್ಚಳ,KEA ಮಹತ್ವದ ಸೂಚನೆ

April 14, 2026
ಯುಪಿಐ ಪೇಮೆಂಟ್ ತಪ್ಪಾದ ಖಾತೆಗೆ ಮಾಡಿದರೆ ಹಣ ವಾಪಸ್ ಸಿಗುತ್ತದೆಯಾ? ಅಂತಹ ಸಂದರ್ಭದಲ್ಲಿ ಎನ್ ಮಾಡ್ಬೇಕು?ಇಲ್ಲಿದೆ ಸಂಪೂರ್ಣ ಮಾಹಿತಿ
ಡಿಜಿಟಲ್ ಜ್ಞಾನ

ಯುಪಿಐ ಪೇಮೆಂಟ್ ತಪ್ಪಾದ ಖಾತೆಗೆ ಮಾಡಿದರೆ ಹಣ ವಾಪಸ್ ಸಿಗುತ್ತದೆಯಾ? ಅಂತಹ ಸಂದರ್ಭದಲ್ಲಿ ಎನ್ ಮಾಡ್ಬೇಕು?ಇಲ್ಲಿದೆ ಸಂಪೂರ್ಣ ಮಾಹಿತಿ

April 14, 2026
ಬೆಂಗಳೂರಲ್ಲಿ ಹೊಸ ಪಾರ್ಕಿಂಗ್ ರೂಲ್ಸ್: ಜಯನಗರದ 42 ರಸ್ತೆಗಳಲ್ಲಿ ‘ಪೇ ಆಂಡ್ ಪಾರ್ಕ್’ ನಿಯಮ ಜಾರಿ
Vijaya Time

ಬೆಂಗಳೂರಲ್ಲಿ ಹೊಸ ಪಾರ್ಕಿಂಗ್ ರೂಲ್ಸ್: ಜಯನಗರದ 42 ರಸ್ತೆಗಳಲ್ಲಿ ‘ಪೇ ಆಂಡ್ ಪಾರ್ಕ್’ ನಿಯಮ ಜಾರಿ

April 14, 2026
ಹಾರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ: ಇರಾನ್ ವಿರುದ್ಧ ಅಮೆರಿಕ ನೌಕಾ ದಿಗ್ಬಂಧನ ಜಾರಿ
ದೇಶ-ವಿದೇಶ

ಹಾರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ: ಇರಾನ್ ವಿರುದ್ಧ ಅಮೆರಿಕ ನೌಕಾ ದಿಗ್ಬಂಧನ ಜಾರಿ

April 14, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.