Bangalore : ಕಳೆದೆರಡು ದಿನಗಳಿಂದ ಫೆಂಗಲ್ ಚಂಡಮಾರುತದ ಪರಿಣಾಮ (Cyclone Fengal) ಕೇವಲ ಪುದುಚೇರಿ,ತಮಿಳುನಾಡಷ್ಟೇ (Puducherry, Tamil Nadu) ಅಲ್ಲ ಕರ್ನಾಟಕ, ಆಂಧ್ರಪ್ರದೇಶದ (Karnataka, Andhra Pradesh) ಜನರಲ್ಲೂ ಆತಂಕ ಸೃಷ್ಟಿಸಿದೆ. ಮೊದಲು ಚಂಡಮಾರುತವು ಪುದುಚೇರಿ ಕರಾವಳಿಗೆ ಅಪ್ಪಳಿಸಿತ್ತು .ತಮಿಳುನಾಡು, ದಕ್ಷಿಣ ಆಂಧ್ರಪ್ರದೇಶ (Tamil Nadu, South Andhra Pradesh) , ಕೇರಳ ಮತ್ತು ಕರ್ನಾಟಕದ ಒಳನಾಡಿನ ಹಲವಾರು ಭಾಗಗಳಲ್ಲಿ ಭಾರೀ ಮತ್ತು ಅತಿ ಹೆಚ್ಚು ಮಳೆಯಾಗಿರುವ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ (Red Alert) ಘೋಷಿಸಲಾಗಿದೆ. ಪುದುಚೇರಿಯು ಕಳೆದ 30 ವರ್ಷಗಳಲ್ಲಿ ಕಾಣದ ದಾಖಲೆಯ ಮಳೆಯನ್ನು ಕಾಣುವುದಷ್ಟೇ ಅಲ್ಲದೆ ಪ್ರವಾಹದಂಥಾ ಸ್ಥಿತಿ ನಿರ್ಮಾಣವಾಗಿದೆ.
ಕಳೆದ ಎರಡು ಗಂಟೆಗಳಲ್ಲಿ ಪುದುಚೇರಿಯ ಪ್ರವಾಹ ಪ್ರದೇಶಗಳಲ್ಲಿ ಭಾರತೀಯ ಸೇನೆ (Indian Army) 100ಕ್ಕೂ ಹೆಚ್ಚು ಜನರನ್ನು ರಕ್ಷಿಸಿದೆ. ಪುದುಚೇರಿಯ ಕೃಷ್ಣನಗರ ಪ್ರದೇಶದ (Krishnanagar area) ಕೆಲವು ಪ್ರದೇಶಗಳಲ್ಲಿ ಐದು ಅಡಿಗಳಷ್ಟು ನೀರಿನ ಮಟ್ಟ ತಲುಪಿದೆ. ಸುಮಾರು 500 ಮನೆಗಳಲ್ಲಿ ಸಿಲುಕಿರುವ ನಾಗರಿಕರನ್ನು ಸೇನೆ ರಕ್ಷಿಸಿದೆ. ಇನ್ನು ಚಂಡಮಾರುತದಿಂದಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ನೂರಾರು ಜನರನ್ನು ಸುರಕ್ಷಿತ ಸ್ಥಳಕ್ಕೆ (Safe place) ಸ್ಥಳಾಂತರಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪುದುಚೇರಿಯಲ್ಲೂ ತಗ್ಗುಪ್ರದೇಶದಲ್ಲಿ ವಾಸವಾಗಿದ್ದ ಜನರನ್ನು ಜಿಲ್ಲಾಡಳಿತ ಸ್ಥಳಾಂತರಿಸಿದ್ದು, ಜನರಿಗೆ ಎಸ್ ಎಂಎಸ್ (SMS) ಮೂಲಕ ಸೂಚನೆ ನೀಡಲಾಗಿತ್ತು ಎಂದು ವರದಿ ವಿವರಿಸಿದೆ.
ಇನ್ನು ಡಿಸೆಂಬರ್ 2 ಮತ್ತು 3 ರಂದು ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.4,153 ದೋಣಿಗಳು ದಡಕ್ಕೆ ಮರಳಿವೆ ಮತ್ತು ಅಗತ್ಯವಿದ್ದರೆ 2,229 ಪರಿಹಾರ ಶಿಬಿರಗಳು ಬಳಕೆಗೆ ಸಿದ್ಧವಾಗಿವೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.ನೆರೆಯ ತಮಿಳುನಾಡಿನಲ್ಲಿ ಫೆಂಗಲ್ ಚಂಡಮಾರುತ (Cyclone Fengal in Tamil Nadu) ಅವಾಂತರಗಳನ್ನೇ ಸೃಷ್ಟಿಸಿದೆ. ಶ್ರೀಲಂಕಾದಲ್ಲಿ ಭೀತಿ ಸೃಷ್ಟಿಸಿದ್ದ ಫೆಂಗಲ್ ಚಂಡಮಾರುತ (Cyclone Fengal) ತಮಿಳುನಾಡನ್ನು ಬೆಚ್ಚಿಬೀಳಿಸಿದೆ. ತಮಿಳುನಾಡು ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೆರಿ ಕರಾವಳಿಗೆ ಸೈಕ್ಲೋನ್ (Cyclone to Puducherry coast) ಅಪ್ಪಳಿಸಿದೆ. ಚಂಡಮಾರುತ ಬಂದಪ್ಪಳಿಸಿದ್ದಕ್ಕೆ ಭಾರೀ ಮಳೆಯಾಗಿದ್ದು, ಮಹಾನಗರ ಚೆನ್ನೈಯಲ್ಲಿ ನೆರೆ ಸೃಷ್ಟಿಯಾಗಿದೆ.ಇದರ ಪರಿಣಾಮ ಕರ್ನಾಟಕದ ಮೇಲೂ ತಟ್ಟಿದೆ. ಬೆಂಗಳೂರಿನಲ್ಲಿ ಭಾನವಾರ (Sunday in Bangalore) ಇಡೀ ದಿನ ಜಿಟಿಜಿಟಿ ಮಳೆಯಾಗಿದ್ದು, ರಾತ್ರಿ ಇಡೀ ಮಳೆ ಸುರಿದಿದೆ.ಅತ್ತ ಕೇರಳಕ್ಕೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ (Red alert) .