Visit Channel

ಗುಜರಾತ್ ನಲ್ಲಿ ಭಾರೀ ಮಳೆ

Untitled-design-2021-06-09T223737.414

ಅಹ್ಮದ್​ಬಾದ್ ಜು 26​: ಗುಜರಾತ್​ನ​ ಅನೇಕ ಪ್ರದೇಶಗಳಲ್ಲಿ ವಿಪರೀತ ಮಳೆಯಾಗುತ್ತಿದ್ದು, ಸದ್ಯ 56 ರಸ್ತೆಗಳು ಬ್ಲಾಕ್​ ಆಗಿವೆ. ವಾಹನ ಸಂಚಾರ ಸಾಧ್ಯವಿಲ್ಲದಂತಾಗಿದೆ ಎಂದು ಗುಜರಾತ್​ ಸರ್ಕಾರ ತಿಳಿಸಿದೆ. ನಾಳೆಯವರೆಗೂ ಇದೇ ಪ್ರಮಾಣದ ಮಳೆ ಬೀಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಹಾಗೇ ಜು.29ರವರೆಗೂ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚಿಸಲಾಗಿದೆ.
ಇಂದು ಮುಂಜಾನೆ 6ಗಂಟೆಗೆ ಕೊನೆಯಾಗುವಂತೆ 24 ಗಂಟೆಯಲ್ಲಿ ಸೌರಾಷ್ಟ್ರ ಸೇರಿ ಗುಜರಾತ್​​ನ ಅನೇಕ ಕಡೆಗಳಲ್ಲಿ ವಿಪರೀತ ಮಳೆಯಾಗಿದೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (SEOC) ತಿಳಿಸಿದೆ. ಅದರಲ್ಲೂ ಸೌರಾಷ್ಟ್ರದ ರಾಜಕೋಟಾ ಜಿಲ್ಲೆಯ ಲೊಧಿಕಾ ತಾಲೂಕಿನಲ್ಲಿ 24 ಗಂಟೆಯಲ್ಲಿ ಅತಿಹೆಚ್ಚು ಅಂದರೆ 198 ಮಿಮೀ ಮಳೆಯಾಗಿದೆ. ಹಾಗೇ, ಛೋಟೌಡ್​ಪುರ್​​ನಲ್ಲಿ 190 ಎಂಎಂ, ಕ್ವಾಂತ್​ನಲ್ಲಿ 182 ಮಿಮೀ ಮಳೆಬಿದ್ದಿದೆ. ಇದರ ಹೊರಾತಿಗೆ ಮಹೀದಾಗರ್​, ಖೇದಾ, ವಡೋದರಾ, ಪಂಚಮಹಲ್​, ಅರ್ವಲ್ಲಿ, ಮೊರ್ಬಿ ಸೇರಿ ಹಲವೆಡೆ 100 ಮಿಮೀ ಗೂ ಅಧಿಕ ಪ್ರಮಾಣದಲ್ಲಿ ಮಳೆ ಯಾಗಿದೆ.

Latest News

Pakistan
ದೇಶ-ವಿದೇಶ

ಪಾಕಿಸ್ತಾನ : ಗರ್ಭಿಣಿ ಮಹಿಳೆ ಮೇಲೆ ಭದ್ರತಾ ಸಿಬ್ಬಂದಿ ಹಲ್ಲೆ ; ಭಾರೀ ಆಕ್ರೋಶ

ನೋಮನ್ ಗ್ರ್ಯಾಂಡ್ ಸಿಟಿ ಅಪಾರ್ಟ್ಮೆಂಟ್ ಕಟ್ಟಡದ ಹೊರಗೆ ಭದ್ರತಾ ಸಿಬ್ಬಂದಿ ಗರ್ಭಿಣಿ ಮಹಿಳೆಯನ್ನು ಥಳಿಸಿದ್ದಾರೆ ಎಂದು ಪಾಕ್ ಮೂಲದ ಜಿಯೋ ನ್ಯೂಸ್ ವರದಿ ಮಾಡಿದೆ.

Culprits
ಪ್ರಮುಖ ಸುದ್ದಿ

ಹಾಲಿನ ವ್ಯಾಪಾರದ ಸೋಗಿನಲ್ಲಿ ಖೋಟಾ ನೋಟು ದಂಧೆ ; ಬಿಜೆಪಿ ಮುಖಂಡ ಸೇರಿ ಮೂವರ ಬಂಧನ

ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದು, ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

rss
ರಾಜಕೀಯ

RSS ಭಾರತದಲ್ಲಿನ ತಾಲಿಬಾನ್ ಇದ್ದಂತೆ : ಕಾಂಗ್ರೆಸ್‌

ಆರ್‌ಎಸ್‌ಎಸ್‌ ಎಂದಿಗೂ ಭಾರತೀಯತೆಯನ್ನು ಒಪ್ಪಿಲ್ಲ, ಮುಂದೆಯೂ ಒಪ್ಪುವುದಿಲ್ಲ. ಪ್ರತ್ಯೇಕ ಐಡೆಂಟಿಟಿಯಲ್ಲಿ ಇರಲು ಭಯಸುವ ಆರ್‌ಎಸ್‌ಎಸ್‌, ಭಾರತದಲ್ಲಿನ ತಾಲಿಬಾನ್ ಇದ್ದಂತೆ.