• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ಅಮೆರಿಕದಲ್ಲಿ ಭಾರಿ ಹಿಮಪಾತ: 5,600ಕ್ಕೂ ಹೆಚ್ಚು ವಿಮಾನ ರದ್ದು, ಶಾಲೆಗಳಿಗೆ ರಜೆ

Teju Srinivas by Teju Srinivas
in ದೇಶ-ವಿದೇಶ, ಪ್ರಮುಖ ಸುದ್ದಿ, ವಿಜಯ ಟೈಮ್ಸ್‌
ಅಮೆರಿಕದಲ್ಲಿ ಭಾರಿ ಹಿಮಪಾತ: 5,600ಕ್ಕೂ ಹೆಚ್ಚು ವಿಮಾನ ರದ್ದು, ಶಾಲೆಗಳಿಗೆ ರಜೆ
0
SHARES
22
VIEWS
Share on FacebookShare on Twitter
  • ಹಿಮಪಾತಕ್ಕೆ ಅಮೆರಿಕದ ಈಶಾನ್ಯ (Heavy snowfall in America) ಭಾಗ ಸ್ತಬ್ಧ
  • ಈಶಾನ್ಯ ಭಾಗದಲ್ಲಿ 2 ಅಡಿ ಹಿಮ ಸುರಿದು ಜನಜೀವನ ಅಸ್ತವ್ಯಸ್ತ; ಶಾಲೆಗಳಿಗೆ ತುರ್ತು ರಜೆ ಘೋಷಣೆ
  • 5,600ಕ್ಕೂ ಹೆಚ್ಚು ವಿಮಾನ ರದ್ದು, ಸಾವಿರಾರು ಮನೆಗಳಲ್ಲಿ ವಿದ್ಯುತ್ ವ್ಯತ್ಯಯ

New York: ಅಮೆರಿಕದ ಈಶಾನ್ಯ ಭಾಗದಲ್ಲಿ ಭಾರಿ ಹಿಮಬಿರುಗಾಳಿ (Heavy snowfall in America) ಅಪ್ಪಳಿಸಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ಮೇರಿಲ್ಯಾಂಡ್‌ನಿಂದ ಮೈನೆವರೆಗೆ ವ್ಯಾಪಿಸಿರುವ ಈ ಚಂಡಮಾರುತವು ಕಳೆದ ಒಂದು ದಶಕದ ಅತ್ಯಂತ ಪ್ರಬಲ ಹಿಮಪಾತವೆಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ನ್ಯೂಯಾರ್ಕ್ ಸೇರಿದಂತೆ ಹಲವು ಪ್ರಮುಖ ನಗರಗಳಲ್ಲಿ ಹಿಮದ ದಪ್ಪ ಪದರ ರಚನೆಯಾಗಿದ್ದು, ಕೆಲ ಪ್ರದೇಶಗಳಲ್ಲಿ 2 ಅಡಿ (ಸುಮಾರು 60 ಸೆಂಟಿಮೀಟರ್) ಗಿಂತ

ಹೆಚ್ಚು ಹಿಮ ಸುರಿದಿದೆ. ರಸ್ತೆ, ರೈಲು ಮತ್ತು ವಿಮಾನ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದ್ದು, ಅಧಿಕಾರಿಗಳು ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

Heavy snowfall in America

ತೀವ್ರ ಗಾಳಿ ಮತ್ತು ನಿರಂತರ ಹಿಮಪಾತದ ಪರಿಣಾಮವಾಗಿ ಸಾರಿಗೆ ವ್ಯವಸ್ಥೆ ಮೇಲೆ ಭಾರೀ ಪರಿಣಾಮ ಬೀರಿದೆ. ಸೋಮವಾರ ಮಾತ್ರವೇ ಅಮೆರಿಕಾದಾದ್ಯಂತ 5,600ಕ್ಕೂ ಹೆಚ್ಚು

ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಮಂಗಳವಾರ ನಿಗದಿಯಾಗಿದ್ದ ಸುಮಾರು 2,000 ವಿಮಾನಗಳ ಸೇವೆಗಳನ್ನು ಮುನ್ನೆಚ್ಚರಿಕೆಯಾಗಿ ಸ್ಥಗಿತಗೊಳಿಸಲಾಗಿದೆ.

ಸುಮಾರು 2,500 ವಿಮಾನಗಳ ಹಾರಾಟದಲ್ಲಿ ವಿಳಂಬ ಉಂಟಾಗಿದೆ. ಪ್ರಮುಖ ವಿಮಾನ (Heavy snowfall in America) ನಿಲ್ದಾಣಗಳಲ್ಲಿ ಪ್ರಯಾಣಿಕರು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಅನೇಕರು ತಮ್ಮ ಪ್ರಯಾಣ ಯೋಜನೆಗಳನ್ನು ಬದಲಾಯಿಸಬೇಕಾದ ಅನಿವಾರ್ಯತೆಯೂ ಎದುರಾಗಿದೆ.

ಹಿಮಬಿರುಗಾಳಿಯ ಪರಿಣಾಮ ಶಾಲೆಗಳು ಮತ್ತು ಸರ್ಕಾರಿ ಕಚೇರಿಗಳಿಗೂ ತಟ್ಟಿದೆ. ಹಲವಾರು ರಾಜ್ಯಗಳಲ್ಲಿ ಶಾಲೆಗಳಿಗೆ ತಾತ್ಕಾಲಿಕ ರಜೆ ಘೋಷಿಸಲಾಗಿದೆ.

ಕೆಲವು ಪ್ರದೇಶಗಳಲ್ಲಿ ಆನ್‌ಲೈನ್ ತರಗತಿಗಳಿಗೆ ಮಾರ್ಪಾಡು ಮಾಡಲಾಗಿದೆ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಸ್ತೆಗಳ ಮೇಲೆ ಹಿಮದ ದಟ್ಟ ಪದರದಿಂದ ವಾಹನ ಸಂಚಾರ ಅಪಾಯಕಾರಿಯಾಗಿದೆ. ಹಲವೆಡೆ ವಾಹನಗಳು ಸಿಲುಕಿಕೊಂಡಿರುವ ಘಟನೆಗಳೂ ವರದಿಯಾಗಿವೆ.

ತುರ್ತು ಸೇವಾ ಸಿಬ್ಬಂದಿ ಹಿಮ ತೆರವು ಕಾರ್ಯಾಚರಣೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.

ವಿದ್ಯುತ್ ವ್ಯತ್ಯಯವೂ ಜನರಿಗೆ ಮತ್ತೊಂದು ಸಂಕಷ್ಟ ತಂದಿದೆ. ಗಾಳಿ ಮತ್ತು ಹಿಮದ ಒತ್ತಡದಿಂದ ವಿದ್ಯುತ್ ಕಂಬಗಳು ಹಾಗೂ ಮರಗಳು ಕುಸಿದು ಅನೇಕ ಮನೆಗಳು ಕತ್ತಲಲ್ಲಿ ದಿನದೂಡಬೇಕಾದ ಪರಿಸ್ಥಿತಿ ಉಂಟಾಗಿದೆ.

ಕೆಲವು ಪ್ರದೇಶಗಳಲ್ಲಿ ಸಾವಿರಾರು ಮನೆಗಳಿಗೆ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ. ಸ್ಥಳೀಯ ಆಡಳಿತಗಳು ತುರ್ತು ಆಶ್ರಯ ಕೇಂದ್ರಗಳನ್ನು ತೆರೆಯಲಾಗಿದ್ದು,

ಅಗತ್ಯವಿರುವವರಿಗೆ ಆಹಾರ ಮತ್ತು ಹೀಟಿಂಗ್ ಸೌಲಭ್ಯ ಒದಗಿಸಲಾಗುತ್ತಿದೆ. ಆರೋಗ್ಯ ಇಲಾಖೆ ಶೀತದಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.

ಹವಾಮಾನ ಇಲಾಖೆ ಮುಂದಿನ ಕೆಲವು ದಿನಗಳಿಗೂ ತೀವ್ರ ಚಳಿ ಮತ್ತು ಹಿಮಪಾತ ಮುಂದುವರಿಯುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ. ಅನಾವಶ್ಯಕವಾಗಿ ಹೊರಗೆ

ತೆರಳಬಾರದು, ಪ್ರಯಾಣಗಳನ್ನು ಮುಂದೂಡಬೇಕು ಹಾಗೂ ಸುರಕ್ಷತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.

ವ್ಯಾಪಾರ-ವಹಿವಾಟು, ದೈನಂದಿನ ಚಟುವಟಿಕೆಗಳು ಮತ್ತು ಸಾರ್ವಜನಿಕ ಸೇವೆಗಳು ಹಿಮಬಿರುಗಾಳಿಯಿಂದ ತಾತ್ಕಾಲಿಕವಾಗಿ ಕುಂಠಿತಗೊಂಡಿವೆ. ಆದರೆ ಪರಿಸ್ಥಿತಿ ಹಂತ ಹಂತವಾಗಿ ಸುಧಾರಿಸುವ ನಿರೀಕ್ಷೆಯಿದೆ.

ಇದನ್ನು ಓದಿ : https://vijayatimes.com/rahul-gandhi-slams-india-us-deal/

Tags: amerciachildrennewyorkschoolsnowfall

Related News

ಬಿಎಂಟಿಸಿ ಬಸ್‌ಗಳಲ್ಲಿ ಹೊಸ ಸ್ಮಾರ್ಟ್ ಟಿಕೆಟ್ ವ್ಯವಸ್ಥೆ:ಶೀಘ್ರದಲ್ಲೇ ಎಲ್ಲಾ ಬಸ್‌ಗಳಲ್ಲಿ ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರ (ETM) ಅಳವಡಿಕೆ
ಪ್ರಮುಖ ಸುದ್ದಿ

ಬಿಎಂಟಿಸಿ ಬಸ್‌ಗಳಲ್ಲಿ ಹೊಸ ಸ್ಮಾರ್ಟ್ ಟಿಕೆಟ್ ವ್ಯವಸ್ಥೆ:ಶೀಘ್ರದಲ್ಲೇ ಎಲ್ಲಾ ಬಸ್‌ಗಳಲ್ಲಿ ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರ (ETM) ಅಳವಡಿಕೆ

March 11, 2026
ಬೆಲೆ ಕಡಿಮೆ, ಮೈಲೇಜ್ ಹೆಚ್ಚು: ಮಧ್ಯಮ ವರ್ಗದವರಿಗಾಗಿ ಭಾರತದಲ್ಲಿ ಮಾರಾಟವಾಗುವ ಟಾಪ್ 5 ಮೈಲೇಜ್ ಬೈಕ್‌ಗಳು
ಪ್ರಮುಖ ಸುದ್ದಿ

ಬೆಲೆ ಕಡಿಮೆ, ಮೈಲೇಜ್ ಹೆಚ್ಚು: ಮಧ್ಯಮ ವರ್ಗದವರಿಗಾಗಿ ಭಾರತದಲ್ಲಿ ಮಾರಾಟವಾಗುವ ಟಾಪ್ 5 ಮೈಲೇಜ್ ಬೈಕ್‌ಗಳು

March 11, 2026
ಸ್ನೇಹ ಬೇರೆ, ವ್ಯವಹಾರ ಬೇರೆ: ಸಂಕಷ್ಟದ ಸಮಯದಲ್ಲಿ ಕೈಹಿಡಿದಿದ್ದ ಭಾರತಕ್ಕೆ ಕೈ ಕೊಡಲು ಪ್ಲಾನ್ ಮಾಡಿದ ರಷ್ಯಾ
ದೇಶ-ವಿದೇಶ

ಸ್ನೇಹ ಬೇರೆ, ವ್ಯವಹಾರ ಬೇರೆ: ಸಂಕಷ್ಟದ ಸಮಯದಲ್ಲಿ ಕೈಹಿಡಿದಿದ್ದ ಭಾರತಕ್ಕೆ ಕೈ ಕೊಡಲು ಪ್ಲಾನ್ ಮಾಡಿದ ರಷ್ಯಾ

March 11, 2026
ಮಹಿಳಾ ಸರ್ಕಾರಿ ನೌಕರರಿಗೆ ‘ಕಮ್ ಅರ್ಲಿ – ಗೋ ಅರ್ಲಿ’ ಯೋಜನೆ: ಮಹಾರಾಷ್ಟ್ರ ಸರ್ಕಾರದ ಹೊಸ ಹೆಜ್ಜೆ
ದೇಶ-ವಿದೇಶ

ಮಹಿಳಾ ಸರ್ಕಾರಿ ನೌಕರರಿಗೆ ‘ಕಮ್ ಅರ್ಲಿ – ಗೋ ಅರ್ಲಿ’ ಯೋಜನೆ: ಮಹಾರಾಷ್ಟ್ರ ಸರ್ಕಾರದ ಹೊಸ ಹೆಜ್ಜೆ

March 11, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.