• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ರಾಜಕೀಯ

ರಾಜಧಾನಿಯಲ್ಲಿ ಕುಮಾರಸ್ವಾಮಿ ರಣಕಹಳೆ: ಹೆಬ್ಬಾಳ ಅಭ್ಯರ್ಥಿ ಡಾ.ಮೋಹಿದ್ ಅಲ್ತಾಫ್‌ಗೆ ಮತದಾರರಿಂದ ಭರ್ಜರಿ ಬೆಂಬಲ

Rashmitha Anish by Rashmitha Anish
in ರಾಜಕೀಯ, ರಾಜ್ಯ
ರಾಜಧಾನಿಯಲ್ಲಿ ಕುಮಾರಸ್ವಾಮಿ ರಣಕಹಳೆ: ಹೆಬ್ಬಾಳ ಅಭ್ಯರ್ಥಿ ಡಾ.ಮೋಹಿದ್ ಅಲ್ತಾಫ್‌ಗೆ ಮತದಾರರಿಂದ ಭರ್ಜರಿ ಬೆಂಬಲ
0
SHARES
518
VIEWS
Share on FacebookShare on Twitter

Bengaluru: ರಾಜಧಾನಿ ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ(Kumarswamy) ಚುನಾವಣಾ ರಣಕಹಳೆ ಊದಿದರು. ಬೆಂಗಳೂರಿನ ಹೆಬ್ಬಾಗಿಲು ಹೆಬ್ಬಾಳ(Hebbal) ವಿಧಾನಸಭಾ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ (hebbal jds pancharatna yatre) ನಡೆಸಿ ತಮ್ಮ ಶಕ್ತಿ ಪ್ರದರ್ಶಿಸಿದ್ರು.

hebbal jds pancharatna yatre


ಹೆಬ್ಬಾಳದ ಜೆಡಿಎಸ್‌ ಅಭ್ಯರ್ಥಿ ಡಾ. ಮೋಹಿದ್‌ ಅಲ್ತಾಫ್‌(Dr.Mohid Altaf) ಅವರಿಗೆ ರಥಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಮತದಾರರು ಭರ್ಜರಿಯಾಗಿ ಬೆಂಬಲ ಸೂಚಿಸಿದ್ರು.


ಪಂಚರತ್ನ ರಥಯಾತ್ರೆಯ ವೇಳೆ ಸೇರಿದ್ದ ಸಾವಿರಾರು ಸಂಖ್ಯೆಯ ಅಭಿಮಾನಿಗಳನ್ನು ಕಂಡು ಭಾವುಕರಾದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ,

ಬೆಂಗಳೂರನ್ನು ರಾಷ್ಟ್ರೀಯ ಪಕ್ಷಗಳು ಕಳೆದ 15 ವರ್ಷಗಳಿಂದ ಎಟಿಎಂ ಮಾಡಿಕೊಂಡಿವೆ. ಬಿಬಿಎಂಪಿಯಲ್ಲಿ ಲೂಟಿ ಮಾಡಿದ ಹಣದಲ್ಲಿ ಕುಕ್ಕರ್‌(Cooker) ಮತ್ತು ಸೀರೆಯನ್ನ ಹಂಚುತ್ತಿವೆ ಎಂದು ಆರೋಪಿಸಿದರು.

ಜೆಡಿಎಸ್‌ ಪಕ್ಷ ಪ್ರಾಮಾಣಿಕವಾಗಿ ಜನರ ಪರವಾಗಿ ಕೆಲಸ ಮಾಡಿತು. ನಾಡಿನ ಜನರ ಏಳಿಗೆಗೆ ಶ್ರಮಿಸಿತ್ತು. 

ಅಂತೆಯೇ ಈ ಬಾರಿ ಹೆಬ್ಬಾಳ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ಡಾ.ಸೈಯದ್‌ ಮೋಹಿದ್‌ ಅಲ್ತಾಫ್‌ ಅವರನ್ನು ಆರಿಸಿದ್ರೆ ಸುಸಜ್ಜಿತ ಸರ್ಕಾರಿ ಮಾದರಿ ಶಾಲೆ, 

ಹೈಟೆಕ್‌ ಆಸ್ಪತ್ರೆಗಳು, ಯುವಕರಿಗೆ ಉದ್ಯೋಗವಕಾಶಗಳು, ಮಹಿಳೆಯರಿಗೆ ಸಾಲ ಸೌಲಭ್ಯಗಳು, 

ವಸತಿಹೀನ ಕಾರ್ಮಿಕರಿಗೆ, ಬಡವರಿಗೆ ಮನೆಗಳು ಹೀಗೆ ಕ್ಷೇತ್ರದಲ್ಲಿ ಏನೆಲ್ಲಾ ಅಭಿವೃದ್ಧಿ ಕಾರ್ಯಗಳು ಆಗಬೇಕೋ ಅದೆಲ್ಲವನ್ನು ಮಾಡುತ್ತಾರೆ ಅನ್ನೋ ಭರವಸೆಯನ್ನು ಮಾಜಿ ಮುಖ್ಯಮಂತ್ರಿಗಳು ನೀಡಿದರು.

ರಾಧಾಕೃಷ್ಣ ದೇವಾಲಯದಲ್ಲಿ ರಥಯಾತ್ರೆಗೆ ಚಾಲನೆ: ಪಂಚರತ್ನ ರಥಯಾತ್ರೆಗೆ(Pancharatna Rathyatra) ಬೆಂಗಳೂರಿನ ಸಂಜಯನಗರದಲ್ಲಿರುವ ರಾಧಾಕೃಷ್ಣ ದೇವಾಲಯದಲ್ಲಿ ಕುಮಾರಸ್ವಾಮಿ ಅವರು ಚಾಲನೆ ನೀಡಿದರು. ಬೆಂಗಳೂರಿನ ಹೆಬ್ಬಾಳದಲ್ಲಿ ಜಾತ್ಯತೀತ ಜನತಾ ದಳದ (JDS) ಚುನಾವಣಾ ರಣ ಕಹಳೆ.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪಂಚರತ್ನ ರಥಯಾತ್ರೆಗೆ ಬೆಂಗಳೂರಿನ ಸಂಜಯನಗರದಲ್ಲಿರುವ (Sanjaynagar) ರಾಧಾಕೃಷ್ಣ ದೇವಾಲಯದಿಂದ ಚಾಲನೆ ನೀಡಿದರು.


ಬೆಂಗಳೂರಿನ ಮೇಖ್ರಿ ಸರ್ಕಲ್‌ನಿಂದ ಭಾರೀ ಜನಸ್ತೋಮದ ಜಯಘೋಷದೊಂದಿಗೆ ಪ್ರಾರಂಭಗೊಂಡ ರಥಯಾತ್ರೆ (hebbal jds pancharatna yatre) ನಾಗಶೆಟ್ಟಿ ಹಳ್ಳಿ ಬಸ್ ನಿಲ್ದಾಣ,

ಭೂಪಸಂದ್ರ ಮುಖ್ಯ ರಸ್ತೆ, ಹೆಬ್ಬಾಳ ಫ್ಲೈಓವರ್ ಸುಮಂಗಲಿ ಸೇವಾಶ್ರಮ ರಸ್ತೆ, ಕನಕನಗರ ರಸ್ತೆ, ದೇವೇಗೌಡ ರಸ್ತೆ, ರವೀಂದ್ರನಾಥ ಟ್ಯಾಗೋರ್ ವೃತ್ತ ಹೀಗೆ ಹೆಬ್ಬಾಳ ವಿಧಾನಸಭಾ ಕ್ಷೇತ್ರಾದ್ಯಂತ ಸಂಚಲನ ಮಾಡಿತು.

hebbal jds pancharatna yatre


ರಥಯಾತ್ರೆಗೆ ಸ್ವಾಗತ ಕೋರಲು ಮಹಿಳೆಯರು, ಮಕ್ಕಳು, ವೃದ್ಧರಾದಿಯಾಗಿ ಎಲ್ಲಾ ವರ್ಗದ ಮಂದಿ ಬಹಳ ಉತ್ಸಾಹದಿಂದ ಕಾದುಕುಳಿತಿದ್ದರು.

ಕುಮಾರಸ್ವಾಮಿ ಹಾಗೂ ಜೆಡಿಎಸ್‌ ಅಭ್ಯರ್ಥಿ ಡಾ. ಮೋಹಿದ್‌ ಅಲ್ತಾಫ್‌ ಅವರು ಆಗಮಿಸುತ್ತಿದ್ದಂತೆ ಜನರು ಪ್ರೀತಿಯಿಂದ ಸ್ವಾಗತಿಸಿದರು.

ಹೂ ಮಳೆಗೈದರು. ಹಾರ, ಶಾಲು ಹಾಕಿ ಗೌರವಿಸಿ ತಮ್ಮ ಬೆಂಬಲ ಸೂಚಿಸಿದರು.

ಸಂಜೆ 6 ಗಂಟೆಗೆ ಆರಂಭವಾದ ಪಂಚರತ್ನ ರಥಯಾತ್ರೆಯ ಬಳಿಕ ರಾತ್ರಿ 9 ಗಂಟೆಗೆ ಹೆಚ್‌ಎಂಟಿ(HMT) ಮೈದಾನದಲ್ಲಿ ಬೃಹತ್‌ ಜೆಡಿಎಸ್‌ ಸಮಾವೇಶ ಪ್ರಾರಂಭವಾಯಿತು,

ಈ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ಕನ್ನಡಿಗರ ಪಕ್ಷ, ಈ ನೆಲದ ಪಕ್ಷ, ಪ್ರಾದೇಶಿಕ ಪಕ್ಷ ಜೆಡಿಎಸ್‌ ಅನ್ನು ಮುಗಿಸಲು ನಾನಾ ಪ್ರಯತ್ನಗಳು ನಡೆಯುತ್ತಿವೆ.

ಜೆಡಿಎಸ್‌ ಅನ್ನು ಬಿಜೆಪಿ ಬಿ ಪಕ್ಷ ಅಂತ ಕಾಂಗ್ರೆಸ್‌ ಜೆಡಿಎಸ್‌ ಅನ್ನೂ ನಾಶ ಮಾಡಲು ಹೇಳುತ್ತಿದೆ.

ಇದು ಶುದ್ಧ ಸುಳ್ಳು. ನಮಗೆ ಜನಾಶೀರ್ವಾದ ಇರುವವರೆಗೂ ಜೆಡಿಎಸ್‌ ಮುಗಿಸಲು ಸಾಧ್ಯ ಇಲ್ಲ. ರಾಷ್ಟ್ರೀಯ ಪಕ್ಷಗಳಿಂದ ಈ ನಾಡಿಗೆ ಬರೀ ಮೋಸವೇ ಆಗಿದ್ದು ಎಂದು ಕಿಡಿಕಾರಿದರು.

ಅಭಿವೃದ್ದಿ ಬಗ್ಗೆ ಬಿಜೆಪಿ ಯವರ ಬಳಿ ಚರ್ಚೆ ಮಾಡೋಕೆ ಏನೂ ವಿಷಯ ಇಲ್ಲ. ಹಾಗಾಗಿ ಅವರು ಹಲಾಲ್‌ ಕಟ್‌ (Halal Cut) ಮತ್ತು ಜಟ್ಕಾ ಕಟ್‌,

ಹಿಜಾಬ್‌(Hijab) ನಂತಹ ವಿಷಯಗಳನ್ನು ಮುಂದಕ್ಕೆ ತರುತ್ತಿದ್ದಾರೆ.


ಚುನಾವಣೆ ಸಂಧರ್ಭದಲ್ಲಿ ಇದನ್ನು ಮುನ್ನೆಲೆಗೆ ತರುತ್ತಾರೆ, ದ್ವೇಷದ ವಿಷ ಬೀಜ ಬಿತ್ತಿ ಜನರ ಹೆಣ ಬೀಳುವಂತೆ ಮಾಡುತ್ತಾರೆ.

ರಾಜ್ಯದಲ್ಲಿ ಪ್ರತಿಮೆಗಳ ರಾಜಕಾರಣವೂ ನಡಿಯುತ್ತಿದೆ. ಉರಿಗೌಡ ನಂಜೇಗೌಡ ಅಂತ ಕಟ್ಟು ಕತೆಯನ್ನೂ ಹೇಳ್ತಾ ಇದ್ದಾರೆ.

ಬಿಜೆಪಿ ಯ ದುರಾಡಳಿತದಿಂದ ಜನರು ಬೇಸತ್ತಿದ್ದಾರೆ. ಮುಂದಿನ ದಿನಗಳಲ್ಲಿ ಆಪರೇಷನ್‌ ಕಮಲ ಮಾಡಿದರೂ ಬಿಜೆಪಿ ಅಧಿಕಾರಕ್ಕೆ ಬರಲ್ಲ ಎಂದು ವಾಗ್ದಾಳಿ ನಡೆಸಿದರು.

ಹೆಬ್ಬಾಳ ಕ್ಷೇತ್ರಕ್ಕೆ ಜೆಡಿಎಸ್‌ ವಿದ್ಯಾವಂತ, ಪ್ರಾಮಾಣಿಕ ಹಾಗೂ ದೂರ ದೃಷ್ಟಿವುಳ್ಳ ಯುವ ನಾಯಕನನ್ನು ಕಣಕ್ಕಿಳಿಸಿದೆ.

ನಿಮಗೆ ಅಭಿವೃದ್ಧಿ ಬೇಕಾ ಅಥವಾ ಬರೀ ಕುಕ್ಕರ್‌, ಸೀರೆ ಕೊಟ್ಟು ತೃಪ್ತಿ ಪಡಿಸೋ ನಾಯಕರು ಬೇಕೋ ಅನ್ನೋದನ್ನು ಹೆಬ್ಬಾಳದ ಜನತೆ ನಿರ್ಧರಿಸಿಬೇಕು.

ಈ ಬಾರಿ ಡಾ. ಸಯ್ಯದ್‌ ಮೋಹಿದ್‌ ಅಲ್ತಾಫ್‌(Dr.Syed Mohid Altaf) ಅವರನ್ನು ಗೆಲ್ಲಿಸಿ ನನಗೆ ಇನ್ನಷ್ಟು ಶಕ್ತಿ ತುಂಬಿಸಿ ಎಂದು ಕುಮಾರ ಸ್ವಾಮಿ(Kumarswamy) ಜನತೆಯಲ್ಲಿ ಮನವಿ ಮಾಡಿದ್ರು.

ಮೈಸೂರಿನಲ್ಲಿ ಪಂಚರಥಯಾತ್ರೆ ಸಮಾರೋಪ: ಮೈಸೂರಿನಲ್ಲಿ ಮಾರ್ಚ್‌ 26ರಂದು ಪಂಚರಥಯಾತ್ರೆಯ ಸಮಾರೋಪ ಸಮಾರಂಭ ನಡೆಯಲಿದೆ.

ಈ ಯಾತ್ರೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರೊಂದಿಗೆ(Devegowda) ರೋಡ್‌ ಶೋ(Road Show) ನಡೆಸಲು ಚಿಂತಿಸಿದ್ದೇವೆ. ಆದರೆ, ಅದಕ್ಕೆ ವೈದ್ಯರ ಅನುಮತಿ ಅಗತ್ಯವಿದೆ ಎಂದು ಹೇಳಿದರು.

ಬೃಹತ್‌ ಸಮಾವೇಶದಲ್ಲಿ ಜೆಡಿಎಸ್‌ನ ರಾಷ್ಟ್ರಿಯ ಉಪಾಧ್ಯಕ್ಷರಾದ ಉಬೇದುಲ್ಲಾ ಖಾನ್‌ ಆಜ್ಮಿ, ಬೆಂಗಳೂರು ಜೆಡಿಎಸ್‌ ನಗರಾಧ್ಯಕ್ಷ ಆರ್‌. ಪ್ರಕಾಶ್‌,(R.Prakash) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಝಫರುಲ್ಲಾ ಖಾನ್‌ ಮುಂತಾದವರು ನಾಯಕರು ಭಾಗವಹಿಸಿದ್ದರು.

Tags: JDSKarnatakapolitics

Related News

ಕಾಂಗ್ರೇಸ್ ಸರ್ಕಾರದ ಗ್ಯಾರಂಟಿ ಯೋಜನೆ ಬಗ್ಗೆ ಜೂ.1ಕ್ಕೆ ಸಂಪುಟ ಸಭೆ: ಡಿ.ಕೆ.ಶಿವಕುಮಾರ್‌
Vijaya Time

ಕಾಂಗ್ರೇಸ್ ಸರ್ಕಾರದ ಗ್ಯಾರಂಟಿ ಯೋಜನೆ ಬಗ್ಗೆ ಜೂ.1ಕ್ಕೆ ಸಂಪುಟ ಸಭೆ: ಡಿ.ಕೆ.ಶಿವಕುಮಾರ್‌

May 29, 2023
ನೂತನ ಸಚಿವ ಸಂಪುಟದ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ??? ಇಲ್ಲಿದೆ ಮಾಹಿತಿ
Vijaya Time

ನೂತನ ಸಚಿವ ಸಂಪುಟದ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ??? ಇಲ್ಲಿದೆ ಮಾಹಿತಿ

May 29, 2023
ಜೂನ್ 12ಕ್ಕೆ ಪಾಟ್ನಾದಲ್ಲಿ ಮಹಾಘಟ್‌ ಬಂಧನ್‌ ಸಭೆ: ನಿತೀಶ್‌ ಕುಮಾರ್‌ ಆಹ್ವಾನ ಸ್ವೀಕರಿಸಿದ ಕಾಂಗ್ರೆಸ್‌
Vijaya Time

ಜೂನ್ 12ಕ್ಕೆ ಪಾಟ್ನಾದಲ್ಲಿ ಮಹಾಘಟ್‌ ಬಂಧನ್‌ ಸಭೆ: ನಿತೀಶ್‌ ಕುಮಾರ್‌ ಆಹ್ವಾನ ಸ್ವೀಕರಿಸಿದ ಕಾಂಗ್ರೆಸ್‌

May 29, 2023
ಅತ್ತ ಸಂಸತ್‌ ಭವನ ಉದ್ಘಾಟನೆ, ಇತ್ತ ದೇಶಕ್ಕೆ ಕೀರ್ತಿ ತಂಡ ಕುಸ್ತಿಪಟುಗಳ ಬಂಧನ: ಹಾಡುಹಗಲೇ ಪೊಲೀಸ್‌ ಗೂಂಡಾಗಿರಿ
Vijaya Time

ಅತ್ತ ಸಂಸತ್‌ ಭವನ ಉದ್ಘಾಟನೆ, ಇತ್ತ ದೇಶಕ್ಕೆ ಕೀರ್ತಿ ತಂಡ ಕುಸ್ತಿಪಟುಗಳ ಬಂಧನ: ಹಾಡುಹಗಲೇ ಪೊಲೀಸ್‌ ಗೂಂಡಾಗಿರಿ

May 29, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.