ಕೀನ್ಯಾಜೂ.24,: ತರಬೇತಿಗಾಗಿ ಸೈನಿಕರನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್ ನೈರೋಬಿಯ ಹೊರವಲಯದಲ್ಲಿ ಅಪಘಾತಕ್ಕೀಡಾಗಿ 17 ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಕೀನ್ಯಾದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಜಿಯಾಡೊ ಕೌಂಟಿಯ ಒಲೆ–ತೆಪೆಸಿಯಲ್ಲಿ ಸಂಭವಿಸಿದ ಈ ಅವಘಡದಲ್ಲಿ ಆರು ಮಂದಿಯನ್ನು ರಕ್ಷಿಸಲಾಗಿದ್ದು, ಅವರೆಲ್ಲ ತೀವ್ರವಾಗಿ ಗಾಯಗೊಂಡಿದ್ದಾರೆ. ಕೀನ್ಯಾ ಮಿಲಿಟರಿ ಈ ಹೆಲಿಕಾಪ್ಟರ್ ಅಪಘಾತವನ್ನು ದೃಢಪಡಿಸಿದೆ, ಆದರೆ ಹೆಚ್ಚಿನ ವಿವರಗಳನ್ನು ನೀಡಿಲ್ಲ.
ಹೆಲಿಕಾಪ್ಟರ್ನಲ್ಲಿ 23 ಸೈನಿಕರು ಪ್ರಯಾಣಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.