• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಬೆಳಗಾವಿಯಲ್ಲಿ 31 ಕೃಷ್ಣಮೃಗಗಳ ಸಾವು ಪ್ರಕರಣ: Hemorrhagic Septicemia ಸೋಂಕು ಕಾರಣ

Teju Srinivas by Teju Srinivas
in ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌
ಬೆಳಗಾವಿಯಲ್ಲಿ 31 ಕೃಷ್ಣಮೃಗಗಳ ಸಾವು ಪ್ರಕರಣ: Hemorrhagic Septicemia ಸೋಂಕು ಕಾರಣ
0
SHARES
61
VIEWS
Share on FacebookShare on Twitter
  • ಬೆಳಗಾವಿಯ 31 ಕೃಷ್ಣಮೃಗಗಳ ಸಾವು ಪ್ರಕರಣ (hemorrhagic septicemia in blackbucks) ಹೆಮರೈಜಿಕ್ ಸೆಪ್ಟೀಸಿಮಿಯಾ ಸೋಂಕೇ ಪ್ರಮುಖ ಕಾರಣ
  • ಸೋಂಕು ನಿಯಂತ್ರಣಕ್ಕೆ ಕಠಿಣ ಜೈವಿಕ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಲು ಅಧಿಕಾರಿಗಳಿಗೆ ನಿರ್ದೇಶನ
  • ಮೃಗಾಲಯಕ್ಕೆ ಭೇಟಿನೀಡಿದ ಸಚಿವ ಸತೀಶ್ ಜಾರಕಿಹೋಳಿ ತ್ವರಿತ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ

Belgavi: ಬೆಳಗಾವಿಯ ಭೂತರಾಮನಹಟ್ಟಿಯ ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ (hemorrhagic septicemia in blackbucks) ಇತ್ತೀಚಿನ ದಿನಗಳಲ್ಲಿ ಸಂಭವಿಸಿದ ಕೃಷ್ಣಮೃಗಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಹೊರಬಿದ್ದಿದೆ.

ಒಟ್ಟು 31 ಕೃಷ್ಣಮೃಗಗಳು ಸಾವಿಗೀಡಾಗಿರುವ ಈ ಘಟನೆ ರಾಜ್ಯದಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿಸಿತ್ತು. ಈಗ, ಪ್ರಯೋಗಾಲಯ ವರದಿ ಈ ಸಾವಿಗೆ ಹೆಮರೈಜಿಕ್ ಸೆಪ್ಟೀಸಿಮಿಯಾ (HS) ಅಥವಾ ಗಳಲೆ ರೋಗವೇ ಕಾರಣ ಎಂದು ಖಚಿತಪಡಿಸಿದೆ.

hemorrhagic septicemia in blackbucks

ಈ ಹಿನ್ನೆಲೆಯಲ್ಲಿ, ಕರ್ನಾಟಕ ಮೃಗಾಲಯ ಪ್ರಾಧಿಕಾರದಿಂದ ರಚಿಸಲಾದ ಉನ್ನತ (hemorrhagic septicemia in blackbucks) ಮಟ್ಟದ ತಜ್ಞರ ಸಮಿತಿ ಮಂಗಳವಾರ ಮೃಗಾಲಯಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಸಂಶೋಧಿಸಿತು.

ಸದಸ್ಯ ಕಾರ್ಯದರ್ಶಿ ಸುನೀಲ ಪನ್ವಾರ್ ಹಾಗೂ ಹಿರಿಯ ವನ್ಯಜೀವಿ ಪಶುವೈದ್ಯರಾದ ಡಾ. ಪ್ರಯಾಗ್ ನೇತೃತ್ವದ ತಂಡವು ಸಾವಿನ ಮಾದರಿಗಳು, ಆವರಣದ ಸ್ವಚ್ಛತೆ ಮತ್ತು ಸೋಂಕಿನ ಹರಡುವಿಕೆಯನ್ನು ವಿಶ್ಲೇಷಿಸಿ ಅಂತಿಮ ವರದಿ ನೀಡಿದೆ.

ಈಗಾಗಲೇ ಎಚ್ಚರಿಕೆಯ ಕ್ರಮವಾಗಿ ಮೃಗಾಲಯದೊಳಗೆ ಕಡ್ಡಾಯ ಜೈವಿಕ ಸುರಕ್ಷತಾ ನಿಯಂತ್ರಣೆಗಳನ್ನು ಜಾರಿಗೆ ತರಲು ನಿರ್ದೇಶಿಸಲಾಗಿದೆ.

ವಾಸಸ್ಥಲದ ನೈರ್ಮಲ್ಯ ಸುಧಾರಣೆ, ಸೋಂಕು ಹರಡುವ ಸಾಧ್ಯತೆಯ ಪ್ರದೇಶಗಳಲ್ಲಿ ನಿರಂತರ ಸ್ಯಾನಿಟೈಸೇಶನ್ ಕಾರ್ಯ, ಹಾಗೂ ಉಳಿದಿರುವ ಪ್ರಾಣಿಗಳ ಆರೋಗ್ಯ ಮೇಲ್ವಿಚಾರಣೆಗಾಗಿ ವಿಶೇಷ ಪಶುವೈದ್ಯರ ತಂಡವನ್ನು ನಿಯೋಜಿಸಲಾಗಿದೆ.

ಮೃಗಾಲಯದಲ್ಲಿ ಉಳಿದಿರುವ ಸಿಂಹ, ಹುಲಿ, ಚಿರತೆ, ಜಿಂಕೆ ಪ್ರಭೇದಗಳು ಮತ್ತು ಅಪರೂಪದ ಪಕ್ಷಿಗಳ ಆರೋಗ್ಯ ಸ್ಥಿತಿಗೆ ವಿಶೇಷ ಗಮನ ನೀಡಲು ಸೂಚಿಸಲಾಗಿದೆ.

ಹೆಚ್ಚಿನ ಒತ್ತಡಕ್ಕೆ ಒಳಗಾಗುವ ಹಾಗೂ ಅಳಿವಿನಂಚಿನಲ್ಲಿರುವ ಜೀವಿಗಳ ಮೇಲೆ 24/7 ಪಶುವೈದ್ಯಕೀಯ ನಿಗಾ ಅವಶ್ಯಕವೆಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.

ಈ ನಡುವೆ, ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೋಳಿ ಅವರು ಕೃಷ್ಣಮೃಗದ ಸಾವುಗಳ ಕುರಿತು ಮಂಗಳವಾರ ಮೃಗಾಲಯಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಸಚಿವರು ಅಧಿಕಾರಿಗಳೊಂದಿಗೆ ಮಾತನಾಡಿ, ಈ ರೀತಿಯ ಸಮೂಹಸಾವು ಪುನರಾವರ್ತನೆಗೊಳ್ಳದಂತೆ ತ್ವರಿತ ಮತ್ತು ಪರಿಣಾಮಕಾರಿ ಕ್ರಮಗಳನ್ನು ಜಾರಿಗೆ ತರಬೇಕು ಎಂದು ಸೂಚಿಸಿದರು.

ಸೋಂಕು ಪ್ರಸ್ತುತ ಕೃಷ್ಣಮೃಗಗಳಲ್ಲಷ್ಟೇ ಕಂಡುಬಂದಿದ್ದು, ಇತರ ಪ್ರಭೇದಗಳು ಸುರಕ್ಷಿತವಾಗಿವೆ ಎಂದು ಮೃಗಾಲಯದ ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯೆಯಾಗಿ ಜಾರಕಿಹೋಳಿ, ಮೃಗಾಲಯದಲ್ಲಿ ಮೂಲಸೌಕರ್ಯ ಸುಧಾರಣೆ, ವಿಜ್ಞಾನಾಧಾರಿತ ನಿಗಾವ್ಯವಸ್ಥೆ ಹಾಗೂ ತಜ್ಞರ ಶಿಫಾರಸಿನ ಅನುಷ್ಠಾನಕ್ಕಾಗಿ ಸರ್ಕಾರ ಸಂಪೂರ್ಣ ಸಹಕಾರ ನೀಡುತ್ತದೆ ಎಂದು ಭರವಸೆ ನೀಡಿದರು.

ಹಾಗಾಗಿ ಮುಂಬರುವ ದಿನಗಳಲ್ಲಿ ಈ ರೀತಿಯ ಸಾವುಗಳನ್ನು ತಡೆಯಲು ಸರ್ಕಾರ ಮತ್ತು ಮೃಗಾಲಯ ಪ್ರಾಧಿಕಾರಗಳು ಸಮಗ್ರ ಮೃಗಸಂರಕ್ಷಣಾ ನೀತಿಯನ್ನು ಜಾರಿಗೆ ತರಲಿರುವ ನಿರೀಕ್ಷೆಯಿದೆ.

ಇದನ್ನು ಓದಿ : ಹೊಸ ಫ್ಲೈಓವರ್ ವೀಕ್ಷಿಸಿದ ಡಿಸಿಎಂ: ಡಿಕೆಶಿ ಸವಾರಿಗೆ ಬಳಸಿದ್ದ ಸ್ಕೂಟರ್‌ ಮೇಲಿದೆ 34 ಕೇಸ್; 18,500 ರೂ ದಂಡ!
Tags: belgaviDeathdeerinfection

Related News

ಡಾರ್ಕ್ ಚಾಕೊಲೇಟ್ ಸೀಕ್ರೆಟ್: ಹೃದಯದಿಂದ ಮೆದುಳಿನವರೆಗೆ 5 ಲಾಭಗಳು
ಆರೋಗ್ಯ

ಡಾರ್ಕ್ ಚಾಕೊಲೇಟ್ ಸೀಕ್ರೆಟ್: ಹೃದಯದಿಂದ ಮೆದುಳಿನವರೆಗೆ 5 ಲಾಭಗಳು

October 7, 2026
ಸುಪ್ರೀಂ ಕೋರ್ಟ್‌ನಲ್ಲಿ 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ (JCI) ಹುದ್ದೆಗಳಿಗೆ ಅರ್ಜಿ ಆಹ್ವಾನ
ಪ್ರಮುಖ ಸುದ್ದಿ

ಸುಪ್ರೀಂ ಕೋರ್ಟ್‌ನಲ್ಲಿ 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ (JCI) ಹುದ್ದೆಗಳಿಗೆ ಅರ್ಜಿ ಆಹ್ವಾನ

October 7, 2026
ಫೈಜರ್ ಹೆಸರಿನಲ್ಲಿ ನಕಲಿ ಔಷಧಿ ದಂಧೆ: 15 ಸಾವಿರಕ್ಕೂ ಹೆಚ್ಚು ವಯಲ್‌ಗಳ 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆ
ಪ್ರಮುಖ ಸುದ್ದಿ

ಫೈಜರ್ ಹೆಸರಿನಲ್ಲಿ ನಕಲಿ ಔಷಧಿ ದಂಧೆ: 15 ಸಾವಿರಕ್ಕೂ ಹೆಚ್ಚು ವಯಲ್‌ಗಳ 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆ

October 7, 2026
ಸೈಟ್ ಕ್ಲೀನಿಂಗ್ ಡ್ರೈವ್: ಎರಡು ತಿಂಗಳಲ್ಲಿ 709 ಖಾಲಿ ನಿವೇಶನ ಸ್ವಚ್ಛಗೊಳಿಸಿದ ಪಾಲಿಕೆ,372 ಮಾಲೀಕರಿಗೆ ನೋಟಿಸ್
ಪ್ರಮುಖ ಸುದ್ದಿ

ಸೈಟ್ ಕ್ಲೀನಿಂಗ್ ಡ್ರೈವ್: ಎರಡು ತಿಂಗಳಲ್ಲಿ 709 ಖಾಲಿ ನಿವೇಶನ ಸ್ವಚ್ಛಗೊಳಿಸಿದ ಪಾಲಿಕೆ,372 ಮಾಲೀಕರಿಗೆ ನೋಟಿಸ್

October 7, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.