ಮಳೆಗಾಲದಲ್ಲಿ ಆರೋಗ್ಯಯುತ ತ್ವಚೆ ಪಡೆಯಲು ಇಲ್ಲಿವೆ ಸಲಹೆಗಳು

ಇದು ಎಲ್ಲೆಲ್ಲೂ ಸಾಕಷ್ಟು ತೇವಾಂಶವಿರುವ ಮಳೆಗಾಲ. ಬೇಸಿಗೆಯಲ್ಲಿದ್ದಂತೆ ಈ ಕಾಲದಲ್ಲಿ ಇರಲು ಸಾಧ್ಯವಿಲ್ಲ. ಕಾಲಕ್ಕೆ ತಕ್ಕಂತೆ ನಾವು, ನಮ್ಮ ಅಭ್ಯಾಸಗಳು ಬದಲಾಗಬೇಕು. ಅದರಲ್ಲಿ ತ್ವಚೆಯ ರಕ್ಷಣೆಗೆ ಬಳಸುವ ಉತ್ಪನ್ನವೂ ಒಂದು. ಋತುಮಾನ ಯಾವುದೇ ಇರಲಿ ಮೂಲಭೂತ ತ್ವಚೆ ರಕ್ಷಣೆಯ ದಿನಚರಿಯನ್ನು ಅನುಸರಿಸುವುದು ಬಹಳ ಮುಖ್ಯವಾಗಿದೆ. ಇಲ್ಲಿ ನಾವು ಮಾನ್ಸೂನ್ ಗೆ ತಕ್ಕಂತೆ ನಿಮ್ಮ ತ್ವಚೆಯ ರಕ್ಷಣೆಯ ವಿಧಾನಗಳನ್ನು ಹೇಗೆ ಬದಲಾಯಿಸಿಕೊಳ್ಳಬಹುದು ಎಂಬುದನ್ನು ಹೇಳದ್ದೇವೆ.

ಮಳೆಗಾಲದಲ್ಲಿ ನಿಮ್ಮ ತ್ವಚೆಯನ್ನು ಹೇಗೆ ಕಾಪಾಡಿಕೊಳ್ಳುವುದು ಎಂಬುದನ್ನು ಈ ಕೆಳಗೆ ವಿವರಿಸಲಾಗಿದೆ:

 1. ಮಾಯಿಶ್ಚರೈಸರ್:
  ಮಳೆಗಾಲದಿಂದ ಸಾಕಷ್ಟು ತೇವಾಂಶ ರೂಪಿತವಾಗಿರುವುದರಿಂದ ನಿಮ್ಮ ಮಾಯಿಶ್ಚರೈಸರನ್ನು ಲೈಟ್ ಇರುವುದಕ್ಕೆ ಬದಲಾಯಿಸಿ ಅಥವಾ ತೆಳುವಾಗಿ ಹಚ್ಚಿ. ಇದರಿಂದ ನಿಮ್ಮ ತ್ವಚೆಗೆ ಅಗತ್ಯವಿರುವಷ್ಟು ಲಭ್ಯವಾಗುವುದು.
 2. ಸನ್ ಸ್ಕ್ರೀನ್:
  ಪ್ರತಿ ಋತುವಿನಲ್ಲೂ ಸನ್‌ಸ್ಕ್ರೀನ್ ಅತ್ಯಗತ್ಯವಾಗಿರುತ್ತದೆ. ದಿನವಿಡೀ ಚರ್ಮವು ತೇವಾಂಶ ಮತ್ತು ಜಿಡ್ಡಿನ ಭಾವನೆಯಿಂದ ದೂರವಿರಲು ಜೆಲ್ ಆಧಾರಿತ ವಾಟರ್ ಪ್ರೂಫ್ ಸನ್‌ಸ್ಕ್ರೀನ್ ಬಳಸುವುದು ಅಗತ್ಯವಾಗಿರುತ್ತದೆ. ಮೋಡವಿರುವ ದಿನದಂದು ಸಹ ಯುವಿಎ ಮತ್ತು ಸೂರ್ಯನ ಯುವಿಬಿ ಕಿರಣಗಳಿಂದ ರಕ್ಷಿಸಲು ದಿನಕ್ಕೆ ಎರಡು ಬಾರಿ ಸನ್‌ಸ್ಕ್ರೀನ್ ಹಚ್ಚುವುದು ಮುಖ್ಯವಾಗಿರುತ್ತದೆ. ಇದು ನಮ್ಮ ಮೊಬೈಲ್ ಅಥವಾ ಕಂಪ್ಯೂಡರ್ ನಿಂದ ಹೊರಬರುವ ಹಾನಿಕಾರಕ ನೀಲಿ ಕಿರಣಗಳಿಂದಲೂ ರಕ್ಷಣೆ ನೀಡುವುದು.
 3. ಮೇಕಪ್ ಉತ್ಪನ್ನಗಳು:
  ಮಳೆಗಾಲದಲ್ಲಿ ಮೇಕ್ ಅಪ್ ಬಳಸುವ ಪ್ರಾಡಕ್ಟ್ ಗಳನ್ನು ಕೂಡಾ ಬಹಳ ಜಾಗರೂಕತೆಯಿಂದ ಆರಿಸಬೇಕು. ನೀರನ್ನು ಹಿಡಿದಿಟ್ಟುಕೊಳ್ಳುವಂತಹ ಮೇಕಪ್ ಉತ್ಪನ್ನಗಳನ್ನು ಬಳಸಿ. ಇದರಿಂದ ತೇವಾಂಶದ ಸಮಸ್ಯೆ ಇರುವುದಿಲ್ಲ.

4.ದೇಹದ ತೇವಾಂಶ:
ತೇವಾಂಶವು ಚರ್ಮವನ್ನು ತೇವವಾಗಿಸಲು ಕಾರಣವಾಗುವುದರಿಂದ, ಮುಖದ ಚರ್ಮವನ್ನು ಮಾತ್ರವಲ್ಲದೆ ದೇಹದ ಚರ್ಮವನ್ನೂ ಒಣಗಿಸುವುದು ಮುಖ್ಯ. ಮುಖದಿಂದ ಯಾವುದೇ ಹೆಚ್ಚುವರಿ ತೇವಾಂಶ / ಬೆವರುವಿಕೆಯನ್ನು ಹೀರಿಕೊಳ್ಳಲು ಪುಡಿಯ ಬದಲು ಬ್ಲಾಟಿಂಗ್ ಶೀಟ್‌ಗಳನ್ನು ಬಳಸಬಹುದು. ಅಂಡರ್ ಆರ್ಮ್ಸ್, ತೊಡೆ ಸಂದಿ, ಕುತ್ತಿಗೆಯಡಿಯಲ್ಲಿ ಡಸ್ಟಿಂಗ್ ಪೌಡರ್ನ್ನು ಬಳಸುವುದರಿಂದ ಯಾವುದೇ ಸೋಂಕುಗಳು ಬೆಳೆಯದಂತೆ ತಡೆಯಬಹುದು. .

 1. ಕೂದಲ ರಕ್ಷಣೆಗೆ:
  ಈ ಮಾನ್ಸೂನ್ ಸಮಯದಲ್ಲಿ ಕೂದಲು ಒದ್ದೆಯಾಗುವುದರಿಂದ, ಕೂದಲು ಉಬ್ಬಿಕೊಡು, ಕೊಳಕಾದಂತೆ ಕಾಣುತ್ತದೆ. ಆದ್ದರಿಂದ ಚೆನ್ನಾಗಿ ತೊಳೆದು ಒಣಗಿಸಿಕೊಳ್ಳಿ. ನಾವು ಸಾಮಾನ್ಯವಾಗಿ ನೆತ್ತಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡುತ್ತೇವೆ. ಇದರಿಂದ ರಕ್ತಪರಿಚಲನೆ ಸುಧಾರಣೆಯಾಗುವುದು ಆದರೆ ಕೂದಲಿನ ಹೊರಪದರಕ್ಕೆ ಯಾವುದೇ ಲಾಭ ಸಿಗುವುದಿಲ್ಲ. ಆದ್ದರಿಂದ ನೀವು ನಿಮ್ಮ ಕೂದಲನ್ನು ತೊಳೆದ ನಂತರ ಆಂಟಿ ಫ್ರಿಜ್ ಸೀರಮ್ ಬಳಸಿ.
 2. ಕೂದಲಿಗೆ ಕಲರ್ ಮಾಡಿದ್ದರೆ ಹೀಗೆ ಮಾಡಿ:
  ಕೂದಲಿಗೆ ಕಲರಿಂಗ್ ಮಾಡಿರುವುದುರಿಂದ ಅದು ತನ್ನ ನೈಸರ್ಗಿಕ ಬಣ್ಣ ಮತ್ತು ಕೂದಲಿನ ವಿನ್ಯಾಸವನ್ನು ಕಳೆದುಕೊಂಡಿರುತ್ತದೆ. ಇನ್ನು ಮಳೆಗಾಲದಲ್ಲಿ ಇದರ ಬಣ್ಣ ಮತ್ತಷ್ಟು ಬದಲಾಗಿ, ಆ ಬಣ್ಣಗಳು ಬಣ್ಣವನ್ನು ಕಳೆದುಕೊಳ್ಳುತ್ತವೆ. ಇದಕ್ಕಾಗಿ ಕೂದಲಿನ ಬಣ್ಣವನ್ನು ರಕ್ಷಿಸಲು ರೂಪಿಸಲಾದ ಶ್ಯಾಂಪೂಗಳನ್ನು ದಯವಿಟ್ಟು ಬಳಸಿ. ಪ್ರಯಾಣ ಮಾಡುವಾಗ ನಿಮ್ಮ ಕೂದಲನ್ನು ಮುಚ್ಚಿಕೊಳ್ಳಿ.

Latest News

ದೇಶ-ವಿದೇಶ

‘ಡಾನಿ’ ಬುಡಕಟ್ಟು ಜನಾಂಗದಲ್ಲಿ ಬೆರಳನ್ನು ಕತ್ತರಿಸುವುದೇ ಸಂಪ್ರದಾಯವಂತೆ!

ಇಂಡೋನೇಷ್ಯಾದ, ಪಪುವಾ ಗಿನಿಯಾ ದ್ವೀಪದಲ್ಲಿ ವಾಸಿಸುವ ಎಲ್ಲಾ ಡಾನಿ ಬುಡಕಟ್ಟಿನ ಮಹಿಳೆಯರನ್ನು ಕತ್ತರಿಸಿದ ಬೆರಳುಗಳಿಂದ ಬದುಕಲು ಒತ್ತಾಯಿಸಲಾಗುತ್ತದೆ.

ರಾಜಕೀಯ

`ನನ್ನಲ್ಲೂ ದಾಖಲೆಗಳಿವೆ ; `ಸರ್ಟಿಫಿಕೇಟ್ ಕೋರ್ಸ್ʼಗಿಂತ ಬೃಹತ್ ಚಾಪ್ಟರ್ 1, 2, 3 ಆಗುತ್ತವೆ, ಬಿಚ್ಚಲೇ? : ಹೆಚ್.ಡಿಕೆ

ಕಟ್ಟಡಗಳ ಹೆಸರಿನಲ್ಲಿ ಕಮೀಷನ್ ಕಾಂಚಾಣ, ಅಧಿಕಾರಿಗಳನ್ನು ಒಳಕ್ಕೆ ಹಾಕಿಕೊಂಡು ಡೀಲ್ ಮಾಡುವ ಅಶ್ವತ್ ನಾರಾಯಣ್, ಇದೇನಾ ನೀವು ನೀಡುತ್ತಿರುವ ಉನ್ನತ ಶಿಕ್ಷಣ?

ಆರೋಗ್ಯ

ಸಕ್ಕರೆ ಖಾಯಿಲೆ ಇರುವವರು ಈ ಹಣ್ಣುಗಳನ್ನು ಸೇವಿಸಬಹುದು ; ತಪ್ಪದೇ ಈ ಮಾಹಿತಿ ಓದಿ

ತಜ್ಞರ ಪ್ರಕಾರ, ಸಕ್ಕರೆ ಕಾಯಿಲೆ ಇರುವವರು ಈ 5 ವಿಧದ ಹಣ್ಣುಗಳನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಅಂತಹ ಹಣ್ಣುಗಳ ವಿವರ ಇಲ್ಲಿದೆ ನೋಡಿ.

ದೇಶ-ವಿದೇಶ

ದೇಶದ ಹೆಮ್ಮೆ ತ್ರಿವರ್ಣ ಧ್ವಜವೂ ಕೂಡ ಬಿಜೆಪಿಗೆ ವ್ಯಾಪಾರದ ಸರಕಾಗಿದೆ : ಬಿ.ಕೆ.ಹರಿಪ್ರಸಾದ್

38×11,80,000=4.484 ಕೋಟಿ, ಹೇಗಿದೆ ಮೋದಿ ಸರ್ಕಾರದ ಲೂಟಿ? ಕೇಂದ್ರದ ಮೋದಿ ಸರ್ಕಾರ ವಸೂಲಿ ಬಾಜಿತನಕ್ಕೆ ರಾಷ್ಟ್ರಧ್ವಜವನ್ನ ಬಳಸಿಕೊಂಡಿರುವುದು ಅಕ್ಷಮ್ಯ ಅಪರಾಧ