ಚಳಿಗಾಲ (Winter) ಬಂದರೆ ಎಲ್ಲರಿಗೂ ಒಂದೆ ಚಿಂತೆ ಅದುವೆ ಆರೋಗ್ಯವನ್ನ (Health) ಹೇಗೆ ಕಾಪಾಡಿಕೊಳ್ಳಬೇಕು ಮತ್ತು ಯಾವ ರೀತಿಯಾದ ಆಹಾರ ಸೇವನೆ ನಮ್ಮ ದೇಹಕ್ಕೆ ಒಳ್ಳೆಯದು . ಚಳಿಗಾಲದಲ್ಲಿ ಕೇವಲ ತಂಪಾದ ಆಹಾರ (Cool food) ಪದಾರ್ಥಗಳನ್ನು ಹೆಚ್ಚಾಗಿ ತಿಂದುಕೊಂಡು ಇರಲು ಖಂಡಿತ ಸಾಧ್ಯವಿಲ್ಲ. ಆರೋಗ್ಯಕ್ಕೆ ಉಪಯುಕ್ತವಾದ ಆಹಾರ ಪದ್ಧತಿಯನ್ನು ಅಳವಡಿಸಿಕೊಂಡು , ದೇಹಕ್ಕೆ (Body) ಬೇಕಾದ ಉತ್ತಮ ವ್ಯಾಯಾಮಗಳ ಅಭ್ಯಾಸ ದಿಂದ ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದರ ಜೊತೆಗೆ, ಜೀರ್ಣಾಂಗ ವ್ಯವಸ್ಥೆಯ (Digestive system) ತೊಂದರೆ ಮತ್ತು ಚಳಿಗಾಲದಲ್ಲಿ ಎದುರಾಗುವ ಕೀಲು ನೋವುಗಳು ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.
ಈ ರೀತಿಯ ಸಮಸ್ಯೆಗಳಿಗಳಿಂದ ದೂರವಾಗಲು ಮತ್ತು ರೋಗ ನಿರೋಧಕ ಶಕ್ತಿಯನ್ನು (Immunity) ಹೆಚ್ಚುಮಾಡಬಹುದಾದ ನಿಮ್ಮ ಸಂಪೂರ್ಣ ಆರೋಗ್ಯವನ್ನು ಕಾಪಾಡುವಂತಹ ವಿಶೇಷವಾಗಿ ಚಳಿಗಾಲದಲ್ಲಿ ದೇಹದ ತಾಪಮಾನವನ್ನು ಸರಿದೂಗಿಸುವಂತಹ ಅನೇಕ ಆಹಾರ
ಪದಾರ್ಥ ಗಳಿದ್ದು ಅವುಗಳ ಬಗ್ಗೆ ತಿಳಿದುಕೊಳ್ಳೋಣ.
- ಹಸಿರು ತರಕಾರಿಗಳು : (Green Vegetables)
ಹಸಿರು ತರಕಾರಿಗಳಲ್ಲಿ ನಮ್ಮ ದೇಹಕ್ಕೆ ಬೇಕಾದ ಉಪಯುಕ್ತ ಪೌಷ್ಟಿಕಾಂಶಗಳಿದ್ದು (Nutrients) ಇವುಗಳನ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ನಮ್ಮ ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನ (Immunity) ಹೆಚ್ಚಿಸಿ ಉರಿ ಊತ ಉಂಟಾಗದಂತೆ ನೋಡಿಕೊಳ್ಳಬಹುದು. ಪುದಿನ ಸೊಪ್ಪು, ಮೆಂತ್ಯ ಸೊಪ್ಪು,ಪಾಲಕ್ ಸೊಪ್ಪುಬೆಳ್ಳುಳ್ಳಿ, ಸಾಸಿವೆ, ಮತ್ತು ಇತರ ಹಸಿರು ತರಕಾರಿಗಳನ್ನು (Vegetables) ನಿತ್ಯ ಊಟದಲ್ಲಿ ಸೇವನೆ ಮಾಡುವುದು ಉತ್ತಮ. - ಸೀಸನಲ್ ಹಣ್ಣುಗಳು : (Seasonal fruits)
ನಮ್ಮ ಚರ್ಮದ ಆರೋಗ್ಯಕ್ಕೆ (Skin health) ಹೆಚ್ಚಿನ ಪ್ರಮಾಣದಲ್ಲಿ ನೀರಿನ ಅಂಶದ ಅಗತ್ಯವಿದ್ದು ಪೇರು ಹಣ್ಣು, ಸೇಬು ಹಣ್ಣು ಸೀತಾಫಲಗಳಂತಹ ಹಣ್ಣುಗಳ ಸೇವನೆಯಿಂದ ಇವುಗಳಲ್ಲಿ ನಾರಿನ ಅಂಶ ಕೂಡ ಹೇರಳವಾಗಿರುತ್ತದೆ. ಅಪಾರ ಪ್ರಮಾಣದ ಪೌಷ್ಟಿಕ ಸತ್ವಗಳನ್ನು ಒಳಗೊಂಡಿರುವ ಇವುಗಳನ್ನು ಚಳಿಗಾಲದಲ್ಲಿ ಆರಾಮದಾಯಕವಾಗಿ ಸೇವನೆ ಮಾಡಬಹುದು.
3.ಎಳ್ಳು ಸೇವನೆ (Sesame consumption)
ವಿಟಮಿನ್ ‘ ಇ ‘ ಮತ್ತು ಫ್ಯಾಟಿ ಆಮ್ಲಗಳ ಪ್ರಮಾಣ ಎಳ್ಳಿನ ಬೀಜಗಳಲ್ಲಿ (Sesame seeds) ಹೇರಳವಾಗಿದ್ದು, ನಮ್ಮ ಮೈ ಚರ್ಮ, ತಲೆ ಕೂದಲು ಮತ್ತು ಮೂಳೆಗಳಿಗೆ (my skin, scalp hair and bones) ಇವುಗಳಿಂದ ಹೆಚ್ಚಿನ ಪ್ರಯೋಜನವಿದೆ . ನೀವು ಇವುಗಳಿಂದ ನಾನಾ ಬಗೆಯ ಖಾದ್ಯಗಳನ್ನು ತಯಾರು ಮಾಡಿ ಸೇವನೆ ಮಾಡಿದರೆ ನಿಮ್ಮ ಆರೋಗ್ಯವನ್ನ ಉತ್ತಮ ರೀತಿಯಲ್ಲಿ ಕಾಯ್ದುಕೊಳ್ಳಬಹುದು .
4.ಕಡಲೆ ಬೀಜಗಳು (Chickpea seeds)
ಕಡಲೆ ಬೀಜಗಳಲ್ಲಿ (Chickpea seeds) ಪ್ರೋಟಿನ್ ಅಂಶದ ಪ್ರಮಾಣ ತುಂಬಾ ಹೆಚ್ಚಾಗಿರುತ್ತದೆ . ವಿಟಮಿನ್ ಬಿ (Vitamin B) , ಅಮೈನೋ ಆಮ್ಲ, ಪಾಲಿಫಿನಾಲ್ ಅಂಶಗಳಿರುವುದರಿಂದ ಇವುಗಳಿಂದ ನೀವು ಚಟ್ನಿ, ಸಲಾಡ್ ಇತ್ಯಾದಿಗಳನ್ನು ತಯಾರಿಸಿ ಸೇವಿಸಬಹುದು.
- ತುಪ್ಪ ಸೇವನೆ (Ghee consumption)
ನಾವು ಆರೋಗ್ಯಕರವಾಗಿರಬೇಕಾದರೆ ನಮ್ಮ ದಿನನಿತ್ಯದ ಊಟದಲ್ಲಿ ತುಪ್ಪ ಇರಲೇಬೇಕು (There should be ghee) . ತುಪ್ಪದಲ್ಲಿ ಅದ್ಭುತವಾದ ವಿಟಮಿನ್ ಮತ್ತು ಖನಿಜಾಂಶ (Vitamin and mineral content) ಇರುವಂತಹ ಆರೋಗ್ಯಕರವಾದ ತುಪ್ಪ ನಿಮ್ಮ ಬೆಳಗಿನ ಉಪಹಾರದ ಸಂದರ್ಭದಲ್ಲಿ ಚಪಾತಿ, ರೊಟ್ಟಿ,ಮತ್ತು ಅನ್ನ ಇತ್ಯಾದಿಗಳೊಂದಿಗೆ ಬೆರೆಸಿ ಸೇವಿಸಿಸುವುದು ಉತ್ತಮವಾಗಿರುತ್ತದೆ. - ನಿಯಮಿತ ಬೆಣ್ಣೆ ಸೇವನೆ . (Regular consumption of butter)
ಚಳಿಗಾಲದಲ್ಲಿ ನಮ್ಮ ಮೂಳೆ ಹಾಗೂ ಕೀಲುಗಳ ಭಾಗದಲ್ಲಿ (Side of joints) ನೋವು ಹುರಿ ಊತ ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯ ಹಾಗಾಗಿ ಮೂಳೆಗಳ ಆರೋಗ್ಯಕ್ಕೆ ಬೆಣ್ಣೆ ಸೇವನೆಯು ಅನುಕೂಲವಾಗುತ್ತದೆ. ನಮ್ಮ ಕುತ್ತಿಗೆ ಹಾಗೂ ಬೆನ್ನು ಹುರಿಯ ನೋವು ಗಳಿಗೆ ಮುಕ್ತಿ ಸಿಗುತ್ತದೆ .