ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ವಿಧಾನ ಇಲ್ಲಿವೆ

ರೋಗ ನಿರೋಧಕ ಶಕ್ತಿ ಎಲ್ಲಾ ಕಾಲಕ್ಕೂ ಅಗತ್ಯವಾಗಿರುವಂತದ್ದು, ಆದ್ದರಿಂದ ವ್ಯಕ್ತಿ ಹುಟ್ಟಿದಾಗಿನಿಂದಲೇ ಅದನ್ನ ಬೆಳೆಸಿಕೊಳ್ಳುವ ಪ್ರಯತ್ನ ಮಾಡಬೇಕು. ಬೆಂಕಿ ಬಿದ್ದ ಮೇಲೆ ಬಾವಿ ತೋಡುವ ಬದಲು, ಮೊದಲೇ ಎಚ್ಚೆತ್ತುಕೊಂಡರೇ ಒಳಿತಲ್ಲವೇ?

ಅದಕ್ಕಾಗಿ ಹುಟ್ಟಿನಿಂದಲೇ ರೋಗ ನಿರೋಧಕ ಶಕ್ತಿಯನ್ನು ಬೆಳೆಸುವುದು ತುಂಬಾ ಒಳ್ಳೆಯದು. ಹಾಗಾದರೆ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವುದು ಹೇಗೆ ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿದೆಯೇ? ಈ ಸ್ಟೋರಿ ನೋಡಿ.

ಹುಟ್ಟಿನಿಂದಲೇ  ರೋಗನಿರೋಧಕ ಶಕ್ತಿಯನ್ನು ಬೆಳೆಸುವ ಕೆಲವು ಸರಳ ವಿಧಾನಗಳು ಇಲ್ಲಿವೆ:

1. ನಿಮ್ಮ ಮಗುವಿಗೆ ಎದೆಹಾಲು ನೀಡಿ:

ಮಗುವಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ತಾಯಿಯ ಹಾಲು ಪ್ರಮುಖ ಪಾತ್ರಹಿಸುತ್ತದೆ. ಅದರಲ್ಲಿರುವ ಕೊಲೊಸ್ಟ್ರಮ್ ಮಗುವಿಗೆ ಬಹಳ ಸಹಕಾರಿ. ಕನಿಷ್ಠ ಆರು ತಿಂಗಳವರೆಗೆ ಎದೆಹಾಲು ನೀಡಿ. ಆ ಸಂದರ್ಭದಲ್ಲಿ ಉತ್ತಮ ರೋಗನಿರೋಧಕ ಶಕ್ತಿಯನ್ನು ಹೊಂದಿರುತ್ತಾರೆ, ಸೋಂಕುಗಳು ಮತ್ತು ಅಲರ್ಜಿಗಳಿಗೆ ಕಡಿಮೆ ಒಳಗಾಗುತ್ತಾರೆ ಎಂದು ಅಧ್ಯಯನಗಳು ತೋರಿಸಿವೆ.

2. ಸರಿಯಾದ ಸಮಯಕ್ಕೆ ಚುಚ್ಚುಮದ್ದು ಕೊಡಿಸಿ:

ಶಿಶುವೈದ್ಯರು ಸಲಹೆ ನೀಡುವ ವ್ಯಾಕ್ಸಿನೇಷನ್ ನ್ನು ಸರಿಯಾದ ಸಮಯಕ್ಕೆ ಹಾಕಿಸಿ. ಎಲ್ಲಾ ಮಕ್ಕಳಿಗೆ, ವಿಶೇಷವಾಗಿ ಆಸ್ತಮಾ ಮತ್ತು ಇತರ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿರುವವರಿಗೆ ಇದು ಅತ್ಯಗತ್ಯ. ಸರಿಯಾದ ಸಮಯಕ್ಕೆ ಚುಚ್ಚುಮದ್ದು ನೀಡುವುದು ಮುಂದಾಗುವ ಅಪಾಯಗಳನ್ನು ಕಡಿಮೆ ಮಾಡುತ್ತದೆ.

3. ಆರೋಗ್ಯಕರ ಆಹಾರ ನೀಡಿ:

ನಿಮ್ಮ ಮಗುವಿಗೆ ತರಕಾರಿ ಹಾಗೂ ಹಣ್ಣುಗಳನ್ನು ಸಮೃದ್ಧವಾಗಿ ನೀಡಿ. ವಿಟಮಿನ್ ಸಿ ಹೆಚ್ಚಿರುವ ಹೆಚ್ಚಿನ ಕಿತ್ತಳೆ ಮತ್ತು ಸಿಟ್ರಸ್ ಹಣ್ಣು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಸೋಂಕುಗಳ ವಿರುದ್ಧ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ. ಪಾಲಕ ನಂತಹ ಹಸಿರು ಎಲೆಗಳ ತರಕಾರಿಗಳು ಕಬ್ಬಿಣಾಂಶದಿಂದ ಕೂಡಿದ್ದು, ಬಿಳಿ ರಕ್ತ ಕಣಗಳು ಮತ್ತು ಪ್ರತಿಕಾಯಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ. ಬೀಜಗಳು, ಧಾನ್ಯಗಳು ಮತ್ತು ಬೀನ್ಸ್ ಪ್ರಮುಖ ಒಮೆಗಾ ಕೊಬ್ಬಿನಾಮ್ಲಗಳನ್ನು ಹೊಂದಿರುತ್ತವೆ. ಮೊಟ್ಟೆಗಳು ಪ್ರೋಟೀನ್‌ನ ಉತ್ತಮ ಮೂಲವಾಗಿದ್ದು, ದೈನಂದಿನ ಆಹಾರದಲ್ಲಿ ವಿವಿಧ ರೂಪಗಳಲ್ಲಿ ಸೇರಿಸಬಹುದು.

4. ಆರೋಗ್ಯಕರ ಕರುಳನ್ನು ಕಾಪಾಡಿಕೊಳ್ಳಿ:

ಕರುಳಿನ ಆರೋಗ್ಯವು ಉತ್ತಮ ಜೀರ್ಣಾಂಗ ವ್ಯವಸ್ಥೆಗೆ ಬಹುಮುಖ್ಯವಾಗಿದೆ. ಅಲ್ಲಿ ಎಲ್ಲಾ ಸೋಂಕುಗಳು ಉಂಟಾಗುತ್ತವೆ. ಪ್ರೋಬಯಾಟಿಕ್ ಸಮೃದ್ಧವಾಗಿರುವ ಆಹಾರವು ಕರುಳಿನ ಪ್ರದೇಶವನ್ನು ಬಲಪಡಿಸುತ್ತದೆ ಮತ್ತು ಉತ್ತಮ ಬ್ಯಾಕ್ಟೀರಿಯಾದ ಬೆಳವಣಿಗೆಗೆ ಸಹಾಯ ಮಾಡುತ್ತದೆ. ದೈನಂದಿನ ಆಹಾರದಲ್ಲಿ ಪ್ರೋಬಯಾಟಿಕ್‌ಗಳನ್ನು ಸೇರಿಸಲು ಮೊಸರು ಉತ್ತಮ ಮಾರ್ಗವಾಗಿದೆ. ಮಕ್ಕಳಿಗೆ ಹಣ್ಣಿ ಜೊತೆ ಮೊಸರು ಸೇರಿಸಿ ಕೊಡಬಹುದು.

5. ಸಾಕಷ್ಟು ನಿದ್ರೆ  ಮಾಡಿ:

ಹೆಚ್ಚಿನ ಮಕ್ಕಳಿಗೆ 10 ರಿಂದ 14 ಗಂಟೆಗಳ ನಿರಂತರ ನಿದ್ರೆ ಬೇಕು. ಮಲಗುವ ಮೊದಲು ಬಿಸಿನೀರಿನ ಸ್ನಾನ, ಲಘು ಮಸಾಜ್ ಅಥವಾ ಸ್ವಲ್ಪ ಸಮಯದವರೆಗೆ ಒಟ್ಟಿಗೆ ಓದಬಹುದು. ಶಕ್ತಿಯುತ ಮತ್ತು ಚೆನ್ನಾಗಿ ವಿಶ್ರಾಂತಿ ಪಡೆದ ಮಗು ಸೋಂಕುಗಳನ್ನು ದೂರವಿಡಲು ಉತ್ತಮವಾಗಿ ತಯಾರಾಗಿರುತ್ತದೆ.

6. ಸಕ್ರಿಯವಾಗಿರಿ:

ಫಿಟ್ ನೆಸ್ ಕಾಪಾಡಿಕೊಳ್ಳುವಲ್ಲಿ ವ್ಯಾಯಾಮವು ದೊಡ್ಡ ಪಾತ್ರವನ್ನು ವಹಿಸುತ್ತದೆ. ಗಾರ್ಡನ್ ನಲ್ಲಿ ಒಂದು ಗಂಟೆಯ ಚಟುವಟಿಕೆ ಅಥವಾ ಒಳಾಂಗಣ ಆಟದ ಮೈದಾನವು ಮಗುವಿನ ಆರೋಗ್ಯದಲ್ಲಿ ಅದ್ಭುತಗಳನ್ನು ಮಾಡುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಒಟ್ಟಿಗೆ ವ್ಯಾಯಾಮ ಮಾಡುವುದು ಅಥವಾ ಆಡುವುದರಿಂದ ಕುಟುಂಬದಲ್ಲಿ ಬಂಧ ಸದೃಢವಾಗಿರಲು ಕಾರಣವಾಗಿರುತ್ತದೆ.

7. ನೈರ್ಮಲ್ಯದ ಅಭ್ಯಾಸ ಮಾಡಿಸಿ:

ಉತ್ತಮ ನೈರ್ಮಲ್ಯವು ಸೂಕ್ಷ್ಮಜೀವಿಗಳು ಮತ್ತು ಸೋಂಕುಗಳನ್ನು ದೂರವಿರಿಸುತ್ತದೆ. ಆಟದ ನಂತರ, ಊಟಕ್ಕೆ ಮೊದಲು ಮತ್ತು ನಂತರ ಕೈ ತೊಳೆಯುವುದು ಮತ್ತು ಶೌಚಾಲಯವನ್ನು ಬಳಸಿದ ನಂತರ ಸರಳವಾದ ಅಭ್ಯಾಸಗಳನ್ನು ಒತ್ತಿಹೇಳಬೇಕು.

8. ಸೆಕೆಂಡ್ ಹ್ಯಾಂಡ್ ಹೊಗೆಯನ್ನು ತಪ್ಪಿಸಿ:

ಸೆಕೆಂಡ್ ಹ್ಯಾಂಡ್ ಹೊಗೆಯ ದುಷ್ಪರಿಣಾಮಗಳು ಎಲ್ಲರಿಗೂ ತಿಳಿದಿವೆ, ಏಕೆಂದರೆ ಅದರಲ್ಲಿರುವ ವಿಷವು ಆರೋಗ್ಯಕರ ಕೋಶಗಳನ್ನು ಕೊಲ್ಲುತ್ತದೆ. ಮಕ್ಕಳು ವಯಸ್ಕರಿಗಿಂತ ವೇಗವಾಗಿ ಉಸಿರಾಡುತ್ತಾರೆ, ಆದ್ದರಿಂದ ಪರಿಸರದಲ್ಲಿ ಹೆಚ್ಚು ಹೊಗೆ ಇದ್ದರೆ ಅದನ್ನು ಉಸಿರಾಡಬಹುದು. ಹೊಗೆ ಮುಕ್ತ ಸ್ಥಳವು ಎಲ್ಲರಿಗೂ ಉತ್ತಮ ಪ್ರಯೋಜನಗಳನ್ನು ಹೊಂದಿದೆ.

Latest News

ದೇಶ-ವಿದೇಶ

“ನಮ್ಮ ಮೆಸ್ ಊಟವನ್ನು ಪ್ರಾಣಿಗಳೂ ಸಹ ತಿನ್ನಲು ಸಾಧ್ಯವಿಲ್ಲ”; ಕಣ್ಣೀರಿಟ್ಟ ಪೇದೆ, ವೀಡಿಯೋ ವೈರಲ್

ಅಷ್ಟೇ ಅಲ್ಲದೇ ನನ್ನನ್ನು ಕೆಲಸದಿಂದ ವಜಾಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ” ಎಂದು ದಾರಿಹೋಕರ ಬಳಿ ಮನೋಜ್ ಕುಮಾರ್ ಅಳಲು ತೋಡಿಕೊಂಡಿದ್ದಾರೆ.

ದೇಶ-ವಿದೇಶ

ರೇಷನ್ ಕಾರ್ಡ್ ಹೊಂದಿರುವ ಬಡವರಿಗೆ ರಾಷ್ಟ್ರಧ್ವಜ ಖರೀದಿಸುವಂತೆ ಒತ್ತಾಯಿಸುತ್ತಿದ್ದಾರೆ : ರಾಹುಲ್ ಗಾಂಧಿ

ಇದು ಬಿಜೆಪಿ ಸರ್ಕಾರದ ಪ್ರಚಾರ ಪಿತೂರಿ. ಈ ರೀತಿ ಮಾಡುವ ಮೂಲಕ ಬಿಜೆಪಿಯು “ರಾಷ್ಟ್ರೀಯತೆ”ಯನ್ನು ಮಾರಾಟ ಮಾಡುತ್ತಿದೆ ಮತ್ತು ಬಡವರ ಆತ್ಮಗೌರವಕ್ಕೆ ಧಕ್ಕೆ ತಂದಿದೆ ಎಂದು ಆರೋಪಿಸಿದ್ದಾರೆ.

ರಾಜಕೀಯ

`ಬ್ಲ್ಯಾಕ್‌ ಮೇಲ್‌ ಕುಮಾರಸ್ವಾಮಿʼ ; ಕಣ್ಣೀರ ಕೋಡಿಯಿಂದ ಕುಟುಂಬಕ್ಕೆ ಲಾಭವೇ ಹೊರತು ಜನತೆಗೇನು ಲಾಭ? : ಅಶ್ವಥ್ ನಾರಾಯಣ್‌

ನೀವು ಈವರೆಗೆ ಹೇಳಿದ ಸುಳ್ಳುಗಳನ್ನು ಎಣಿಸಲು ಸಾಧ್ಯವೇ? ಎಂದು ಸಚಿವ(Minister) ಅಶ್ವಥ್‌ ನಾರಾಯಣ್(Ashwath Narayan) ಪ್ರಶ್ನಿಸಿದ್ದಾರೆ.

ದೇಶ-ವಿದೇಶ

ಇಬ್ಬರು ಭಯೋತ್ಪಾದಕರನ್ನು ಹತ್ಯೆಗೈದ ಭಾರತೀಯ ಸೇನೆ ; ದಾಳಿಯಲ್ಲಿ ಮೂವರು ಯೋಧರು ಹುತಾತ್ಮ!

ಸ್ವಾತಂತ್ರ್ಯ ದಿನಾಚರಣೆ(Independence Day) ಸಂದರ್ಭದಲ್ಲಿ ಉಗ್ರರು ದೇಶದ ವಿವಿಧ ಭಾಗಗಳಲ್ಲಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.