Belagavi : ಟಿಪ್ಪು ಸುಲ್ತಾನ್ (Tippu Sultan) ಹಾಗೂ ಔರಂಗಜೇಬನನ್ನು (high alert in Belgaum) ವೈಭವೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದನ್ನು ವಿರೋಧಿಸಿ
ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಹಿಂದೂ ಪರ ಸಂಘಟನೆಗಳು ನಡೆಸಿದ ಪ್ರತಿಭಟನೆಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ನೆರೆಯ ಕೊಲ್ಲಾಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಹಿನ್ನೆಲೆಯಲ್ಲಿ
ಮಹಾರಾಷ್ಟ್ರದ ಗಡಿಯಲ್ಲಿರುವ ಬೆಳಗಾವಿ ಜಿಲ್ಲೆಯ ಮೇಲೆ ಪೊಲೀಸರು ನಿಗಾ ಇರಿಸಿದ್ದಾರೆ. ಬೆಳಗಾವಿ ಭಾಗದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಕೊಲ್ಲಾಪುರದಲ್ಲಿ ಇದೀಗ ಜೂನ್ 19ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿದೆ.
ಹಿಂಸಾಚಾರದ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಕೊಲ್ಲಾಪುರ (Kolhapur) ಜಿಲ್ಲಾ ಉಸ್ತುವಾರಿ ಸಚಿವ ದೀಪಕ್ ಕೇಸರಕರ್ (Deepak Kesarkar) ನೇತೃತ್ವದಲ್ಲಿ ನಿನ್ನೆ ರಾತ್ರಿ ಶಾಂತಿ ಸಭೆ ನಡೆಯಿತು.
ಪಕ್ಷಗಳ ಮುಖಂಡರು ಮತ್ತು ಸಮುದಾಯಗಳ ಪ್ರಮುಖ ಮುಖಂಡರೊಂದಿಗೆ ಶಾಂತಿ ಸಭೆ ನಡೆಸಲಾಯಿತು. ಸಭೆಯಲ್ಲಿ ಸಚಿವ ದೀಪಕ್ ಕೇಸರಕರ್ ಅವರು ಅಧಿಕಾರಿಗಳಿಂದ ಭದ್ರತೆಯ ಕುರಿತು ಮಾಹಿತಿ ಪಡೆದರು.
ಕೊಲ್ಲಾಪುರ ಡಿಸಿ ಭಗವಾನ್ ಕಾಂಬಳೆ, ಎಸ್ಪಿ ಮಹೇಂದ್ರ ಪಂಡಿತ್ (Mahendra Pandit) ಅವರು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಪ್ರಸ್ತುತ ಕೊಲ್ಹಾಪುರ ಜಿಲ್ಲಾಧಿಕಾರಿ ಭಗವಾನ್ ಕಾಂಬಳೆ ಅವರು
ಕೊಲ್ಲಾಪುರದಲ್ಲಿ ಕರ್ಫ್ಯೂವನ್ನು (Curfew) ಜೂನ್ 19 ರವರೆಗೆ ವಿಸ್ತರಿಸಿ ಎಂಬ ಆದೇಶ ಹೊರಡಿಸಿದ್ದಾರೆ. ಇಂದು (ಜೂನ್ 8) ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಕೊಲ್ಲಾಪುರದಲ್ಲಿ ಇಂಟರ್ನೆಟ್ ಸೇವೆಯನ್ನು ಕೂಡ
ಸ್ಥಗಿತಗೊಳಿಸಲಾಗಿದೆ. ನಿನ್ನೆ ಸಂಜೆ 5 ಗಂಟೆಯಿಂದ ನೆಟ್ವರ್ಕ್ (Internet) ಸೇವೆಯನ್ನು ಸ್ಥಗಿತಗೊಳಿಸಲಾಗಿದ್ದು, ಬೆಳಗಾವಿ ಕೂಡ ಹೈ ಅಲರ್ಟ್ (High Alert) ಆಗಿದೆ.
ಮತ್ತೊಂದೆಡೆ ಬೆಳಗಾವಿ ಗಡಿ ಭಾಗದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಬೆಳಗಾವಿ ಭಾಗದ ಗಡಿ ಗ್ರಾಮಗಳಲ್ಲಿ ಮಧ್ಯರಾತ್ರಿಯವರೆಗೂ ಪೊಲೀಸರು
(high alert in Belgaum) ಗಸ್ತು ತಿರುಗಲಿದ್ದಾರೆ. ಬೆಳಗಾವಿ ಭಾಗದ ಗಡಿ ಗ್ರಾಮಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು. ನಿಪ್ಪಾಣಿ (Nippani) ,
ಕೋಗನೊಳ್ಳಿ, ಬೋರಗಾಂವ, ಅಕ್ಕೋಳ, ಎಕ್ಸಾಂಬಾ, ಬೇಡ್ಕಿಹಾಳ, ಮನಕಾಪುರ (Manakapura) , ಸಿದ್ನಾಳ, ಮಂಗೂರು, ಚಂದೂರ ಸೇರಿದಂತೆ ಹಲವು ಗ್ರಾಮಗಳಲ್ಲಿ
ಪೊಲೀಸ್ ಅಧಿಕಾರಿಗಳು ಗಸ್ತು ತಿರುಗುತ್ತಿದ್ದಾರೆ ಮತ್ತು ವದಂತಿಗಳಿಗೆ ಕಿವಿಗೊಡಬೇಡಿ ಎಂದು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಘಟನೆಯ ಹಿನ್ನೆಲೆ
ಔರಂಗಜೇಬನ (Aurangzeb) ವೈಭವೀಕರಿಸಿದ ವಾಟ್ಸಪ್ ಸ್ಟೇಟಸ್ ಮಹಾರಾಷ್ಟ್ರದಾದ್ಯಂತ ವೈರಲ್ ಆಗುತ್ತಿದ್ದಂತೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನಿನ್ನೆ (ಜೂನ್ 7) ಹಿಂದೂ ಪರ ಸಂಘಟನೆಗಳು ಕರೆದಿದ್ದ ಕೊಲ್ಲಾಪುರ
ಬಂದ್ನಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆದವು. ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿದ್ದು, ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಲಾಠಿ ಪ್ರಹಾರ ಹಾಗೂ ಅಶ್ರುವಾಯು ಸಿಡಿಸಿದ್ದಾರೆ. ವಿವಾದಾತ್ಮಕ ವಾಟ್ಸಾಪ್
ಸ್ಟೇಟಸ್ ಪೋಸ್ಟ್ (Post) ಮಾಡುವವರನ್ನು ಬಂಧಿಸುವಂತೆ ಆಗ್ರಹಿಸಿ ಹಿಂದೂಪರ ಸಂಘಟನೆಗಳು ಮಹಾರಾಷ್ಟ್ರದ ಕೊಲ್ಹಾಪುರ ಬಂದ್ಗೆ ಕರೆ ನೀಡಿವೆ. ಕೊಲ್ಲಾಪುರದ ಛತ್ರಪತಿ
ಶಿವಾಜಿ ಮಹಾರಾಜ ಚೌಕ್ನಲ್ಲಿ ನಿನ್ನೆ ಬೆಳಗ್ಗೆ 10ಕ್ಕೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಸಹಸ್ರಾರು ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದರು.ಈ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ
ನಡೆಸಿದ್ದರಿಂದ ಪರಿಸ್ಥಿತಿ ಇನ್ನಷ್ಟು ಉದ್ವಿಘ್ನಗೊಂಡಿತ್ತು. ಸಿಕ್ಕ ಸಿಕ್ಕ ಅಂಗಡಿಗಳ ಮೇಲೆ ಉದ್ರಿಕ್ತರು ಕಲ್ಲು ತೂರಾಟ ನಡೆಸಿದ್ದರು. ಎರಡು ಗುಂಪುಗಳ ಮಧ್ಯೆ ಕೊಲ್ಲಾಪುರದ (Kolhapur) ಹಲವೆಡೆ ಘರ್ಷಣೆ ತೀವ್ರಗೊಳ್ಳುತ್ತಿದ್ದಂತೆ
ಪೊಲೀಸರು ಅಶ್ರುವಾಯು ಪ್ರಯೋಗಿಸಿ ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದರು.
ರಶ್ಮಿತಾ ಅನೀಶ್