Bengaluru : ಕಾಂಗ್ರೆಸ್ (Congress) ಪಕ್ಷವು ಕರ್ನಾಟಕ ಕುರುಕ್ಷೇತ್ರವನ್ನು ಗೆದ್ದುಕೊಂಡು ಗಮನಾರ್ಹ ಬಹುಮತವನ್ನು ಗಳಿಸಿದೆ. ಇದರಿಂದ ಪಕ್ಷದೊಳಗೆ ಮುಖ್ಯಮಂತ್ರಿ ಸ್ಥಾನದ ಹೋರಾಟ (High Command Decision) ತೀವ್ರಗೊಂಡಿದೆ. ಕೆಪಿಸಿಸಿ ಮುಖ್ಯಸ್ಥ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಈ ಸ್ಥಾನಕ್ಕೆ ಆಕಾಂಕ್ಷಿಗಳಾಗಿದ್ದಾರೆ.

ಚುನಾವಣೆಗೂ ಮುನ್ನ ಒಗ್ಗಟ್ಟಿನ ಮಹತ್ವ ಸಾರುತ್ತಿದ್ದ ಈ ಇಬ್ಬರು ನಾಯಕರು ಈಗ ಮುಖ್ಯಮಂತ್ರಿಯಾಗುವ ಹಠಕ್ಕೆ ಬಿದ್ದಿದ್ದಾರೆ.
ಪಕ್ಷಕ್ಕೆ ಬಹುಮತ ದೊರಕಿಸುವಲ್ಲಿ ಅವರ ವೈಯಕ್ತಿಕ ಕೊಡುಗೆಗಳು ಪ್ರಮುಖವಾಗಿವೆ ಎಂಬುದು ಅವರ ತರ್ಕ. ಇದರಿಂದ ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ನಿರ್ಧಾರಕ್ಕೆ ತೊಡಕಾಗಿದೆ.
ಯಾರು ಸಿಎಂ ಆಗಬೇಕೆಂದು ಈಗಾಗಲೇ ಶಾಸಕ ಅಭಿಪ್ರಾಯ ಸಂಗ್ರಹಿಸಲಾಗಿದೆ,ಇಬ್ಬರು ನಾಯಕರ ನಡುವೆ ಆಗುತ್ತಿರುವ ತೀವ್ರ ಪೈಪೋಟಿಯಿಂದಾಗಿ (High Command Decision) ಕಾಂಗ್ರೆಸ್ ಪಕ್ಷಕ್ಕೆ ಡ್ಯಾಮೇಜ್ ಆಗದಂತೆ ಈಗ ನೋಡಿಕೊಳ್ಳಬೇಕಿದೆ.
ಹೀಗಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಇಂದು ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ್ನ (DK Shivakumar)
ಎದುರು ಬದುರು ಕೂರಿಸಿಕೊಂಡು ಮಾತುಕತೆ ಮೂಲಕ ಅಂತಿಮ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ. ಸದ್ಯಕ್ಕೆ ಈಗ ಎಲ್ಲರ ಚಿತ್ತ ದೆಹಲಿಯತ್ತ ನೆಟ್ಟಿದೆ.
ಇದನ್ನೂ ಓದಿ : https://vijayatimes.com/mallikarjun-kharge-court-summons/
ಅಭಿಪ್ರಾಯ ಸಂಗ್ರಹ :
ನಿನ್ನೆ ನಡೆದ ಮೊದಲ ಶಾಸಕಾಂಗ ಸಭೆಯಲ್ಲಿ ಸಿದ್ದರಾಮಯ್ಯಗೆ ಬಹುತೇಕ ಶಾಸಕರ ಬೆಂಬಲ ಇದೆ.
ಆದರೆ ಶಾಸಕರ ಅಭಿಪ್ರಾಯಕ್ಕಿಂತ ಮುಖ್ಯವಾಗಿ ಹೈಕಮಾಂಡ್ (High Command) ಸಿಎಂ ಯಾರು ಎನ್ನುವುದನ್ನು ನಿರ್ಧರಿಸಬೇಕು ಎಂದು ಪಟ್ಟು ಹಿಡಿಡಿದ್ದಾರೆ ಡಿಕೆ ಶಿವಕುಮಾರ್.
ಹೈಕಮಾಂಡ್ ಈಗಾಗಲೇ ಹಿರಿಯ ನಾಯಕರಾದ ಸುಶೀಲ್ ಕುಮಾರ್ ಶಿಂಧೆ (Sushilkumar Shinde), ಎಐಸಿಸಿ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಸಿಂಗ್ (AICC General Secretary Jitendra Singh), ಮತ್ತು ದೀಪಕ್ ಬಬಾರಿಯಾರನ್ನ ವೀಕ್ಷಕರಾಗಿ ಕಳಿಸಿದೆ.
ಈ ನಡುವೆ ಇಂದು ಸೋನಿಯಾ ಗಾಂಧಿ (Sonia Gandhi) ಹಾಗೂ ರಾಹುಲ್ ಗಾಂಧಿ (Rahul Gandhi) ಜೊತೆ ಮುಂದಿನ ಸಿಎಂ ಆಯ್ಕೆ ಬಗ್ಗೆ ಮಹತ್ವದ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಚರ್ಚೆ ನಡೆಸಲಿದ್ದಾರೆ,
ಇವರು ಈಗಾಗಲೇ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ.ಇಂದು (ಮೇ 15) ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಇಬ್ಬರೂ ದೆಹಲಿಗೆ ತೆರಳಲಿದ್ದಾರೆ ಎಂದು ವರದಿಯಾಗಿದೆ.

ಡಿಕೆ ಶಿವಕುಮಾರ್ ಪಟ್ಟು ಏನು?
ಡಿಕೆ ಪ್ರಕಾರ,ಈ ಬಾರಿ ಒಕ್ಕಲಿಗ ಸಮುದಾಯದಿಂದ (Okkaliga community) ಅಪಾರ ಬೆಂಬಲವಿದೆ. ಗಮನಾರ್ಹವೆಂದರೆ ಹಳೆ ಮೈಸೂರು ಭಾಗದಲ್ಲಿ ಗೆದ್ದಿರುವ ಸ್ಥಾನಗಳಲ್ಲಿ ಗಣನೀಯ ಏರಿಕೆಯಾಗಿದೆ.
ಹೆಚ್ಚುವರಿಯಾಗಿ, ಒಕ್ಕಲಿಗ ಸಮುದಾಯದಿಂದ ಕಾಂಗ್ರೆಸ್ ಪಕ್ಷವು ಶೇಕಡಾ 5 ರಷ್ಟು ಹೆಚ್ಚು ಮತಗಳನ್ನು ಪಡೆದಿದೆ.
ಅಂದರೆ ನನ್ನ ಮುಖ್ಯಮಂತ್ರಿ ಹುದ್ದೆಗೆ ಒಕ್ಕಲಿಗ ಸಮುದಾಯದ ಮತಗಳು ಹೆಚ್ಚುವರಿಯಾಗಿವೆ.
ಹೀಗಾಗಿ ಮುಂದಿನ ಸಿಎಂ ಆಗಿ ನನ್ನನ್ನು ನೇಮಿಸುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಡಿಕೆಶಿ ಮನವಿ ಮಾಡಿದ್ದಾರೆ.
ಸಿದ್ದರಾಮಯ್ಯ ವಾದವೇನು?
ಸಿದ್ದರಾಮಯ್ಯ ಮೊದಲು ಶಾಸಕರ ಅಭಿಪ್ರಾಯ ಸಂಗ್ರಹಿಸಲಿ. ಶಾಸಕರು ಪ್ರತಿನಿಧಿಸುವ ವ್ಯಕ್ತಿಗೆ ಸಿಎಂ ಸ್ಥಾನ ನೀಡಬೇಕು. ಹೈಕಮಾಂಡ್ ತನ್ನ ತೀರ್ಮಾನಗಳನ್ನು ತೆಗೆದುಕೊಳ್ಳಲು ಶಾಸಕರು ಸಿದ್ಧರಾಗಿದ್ದಾರೆ.
ಮುಂದಿನ ಮುಖ್ಯಮಂತ್ರಿಯನ್ನು ಪಕ್ಷದ ಆದ್ಯತೆ ಮತ್ತು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಸಿದ್ದರಾಮಯ್ಯ ಕೂಡ ಈ ಹಿಂದೆ ಹೇಳಿದ್ದರು.
ಇನ್ನು ಡಿಕೆಶಿ ಕೂಡ ಶಾಸಕಾಂಗ ಪಕ್ಷದ ಸಭೆ ಹಾಗೂ ಹಿರಿಯರು ಮುಂದಿನ ಸಿಎಂ ಯಾರು ಎಂಬುದನ್ನು ನಿರ್ಧರಿಸಲಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : https://vijayatimes.com/dk-shivakumar-vs-siddaramaiah/
ತೆರೆಮರೆಯಲ್ಲಿ ನಡೆಯುತ್ತಿದೆ ಕದನ
ಕರ್ನಾಟಕದಲ್ಲಿ ಭಾರಿ ಗೆಲುವಿನ ಸಂಭ್ರಮದಲ್ಲಿದ್ದ ಕಾಂಗ್ರೆಸ್ ಹೈಕಮಾಂಡ್‌ಗೆ ಚಿಂತೆ ಶುರುವಾಗಿದೆ.
ಸಿಎಂ ಕುರ್ಚಿಗಾಗಿ ತೆರೆಮರೆಯಲ್ಲಿ ನಡೆಯುತ್ತಿರುವ ಕಿತ್ತಾಟ ಟೆನ್ಶನ್ ಕ್ರಿಯೇಟ್ ಮಾಡುತ್ತಿದೆ. ಯಾರನ್ನು ಸಿಎಂ ಆಗಿ ನೇಮಿಸಬೇಕು? ಪಕ್ಷಕ್ಕೆ ಯಾರು ಒಳ್ಳೆದು.. ಮುಂಬರುವ ಲೋಕಸಭೆ ಚುನಾವಣೆಯನ್ನು ಅಳೆದು ತೂಗಿ,
ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಬೇಕಿದೆ.
ಇದರ ಪರಿಣಾಮವಾಗಿ ಬೆಂಗಳೂರಿನಲ್ಲಿ ತಡರಾತ್ರಿಯವರೆಗೂ ನಡೆದ ರಾಷ್ಟ್ರೀಯ ಶಾಸಕಾಂಗ ಅಧಿವೇಶನವು (National Legislative Session) ಭೋಜನದ ಜೊತೆ ಶಾಸಕರಿಂದ ಅಭಿಪ್ರಾಯ ಸಂಗ್ರಹಿಸಿತು.
- ರಶ್ಮಿತಾ ಅನೀಶ್