- ಗೊಂದಲ ಬಗೆಹರಿಸಿಕೊಳ್ಳಲು ಸಿಎಂ (Chief Minister) , ಡಿಸಿಎಂಗೆ ದಿಲ್ಲಿಗೆ ಬುಲಾವ್.
- ಡ್ಯಾಮೇಜ್ ಕಂಟ್ರೋಲ್ (Damage Control) , ಮುಜುಗರ ತಡೆಗೆ (High command entry for honeytrap) ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಆಪರೇಷನ್.
- 27ಕ್ಕೆ ದೂರು ನೀಡುವುದಾಗಿ ಸಚಿವ ಕೆ. ಎನ್ ರಾಜಣ್ಣ (K. N. Rajanna) ಘೋಷಣೆ.
Bengaluru: ಕಳೆದ ಕೆಲ ದಿನಗಳಿಂದ ಕರ್ನಾಟಕದಲ್ಲಿ (Karnataka) ತಲ್ಲಣ ಸೃಷ್ಟಿಸಿರುವ ಹನಿಟ್ರ್ಯಾಪ್ (Honeytrap) ವಿಚಾರ ದಿನ ಕಳೆದಂತೆ ಗಂಭೀರ ಸ್ವರೂಪ (Serious nature) ಪಡೆಯುತ್ತಿರುವ ಹೊತ್ತಿನಲ್ಲೇ ಹೈಕಮಾಂಡ್‌ನ ಮಧ್ಯ (High command) ಪ್ರವೇಶವಾಗಿದೆ. ಎಐಸಿಸಿ (AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಭೇಟಿಯಾಗಿ ವಿವಾದಾತ್ಮಕ ವಿಚಾರದಿಂದ ಪಕ್ಷ, ಸರಕಾರಕ್ಕೆ ಮುಜುಗರ, ಹಾನಿಯಾಗದೆ ಪಾರಾಗುವ ಬಗ್ಗೆ ಚರ್ಚಿಸಿರುವುದು ಮಹತ್ವ ಪಡೆದುಕೊಂಡಿದೆ. ಹನಿಟ್ರ್ಯಾಪ್ ವಿಚಾರ ಸೇರಿದಂತೆ ರಾಜ್ಯ ಕಾಂಗ್ರೆಸ್ (State Congress) ಹಾಗೂ ಸರಕಾರಕ್ಕೆ ಸಂಬಂಧ ವಿಚಾರ (Government) , ಸವಾಲುಗಳಿದ್ದರೆ ಆ ಬಗ್ಗೆ ಚರ್ಚಿಸಲು ಸಿಎಂ, ಡಿಸಿಎಂ (DCM, CM) ದಿಲ್ಲಿಗೆ ಬರುವಂತೆ ಮಲ್ಲಿಕಾರ್ಜುನ ಖರ್ಗೆಯವರು ಸೂಚನೆ ನೀಡಿದ್ದಾರೆ.

ಈ ನಡುವೆ, ತಮ್ಮ ಮೇಲೆ ಹನಿಟ್ರ್ಯಾಪ್ ಷಡ್ಯಂತ್ರ (Honeytrap conspiracy) ನಡೆದಿದೆ ಎಂದು ಆರೋಪಿಸಿರುವ ಸಚಿವ ಕೆ.ಎನ್.ರಾಜಣ್ಣ (K.N.Rajanna) ಅವರು ಗುರುವಾರ ದೂರು ನೀಡುವುದಾಗಿ ಪ್ರಕಟಿಸಿದ್ದಾರೆ. ಅವರ ಈ ನಡೆ ಬಗ್ಗೆ ಕುತೂಹಲ ಮೂಡಿದೆ. ವಿಧಾನಸಭೆ ಕಲಾಪದಲ್ಲಿ (Assembly session) ಗುರುವಾರ ರಾಜಣ್ಣ ಅವರು ತಮ್ಮ ವಿರುದ್ಧ ಹನಿಟ್ರ್ಯಾಪ್ ನಡೆದಿದ್ದು, ಅದಕ್ಕೆ ದಾಖಲೆಗಳಿರುವುದಾಗಿಯೂ (Documents) ಹೇಳಿದ್ದರು. ಜತೆಗೆ, ನ್ಯಾಯಾಧೀಶರು (Judge) ಸೇರಿದಂತೆ 48 ಮಂದಿಯನ್ನು ಈ ಖೆಡ್ಡಾಗೆ ಕೆಡವಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದರು (Serious allegations) . ಈ ವಿಚಾರವೇ ಸದ್ಯ ರಾಜ್ಯ ಸರಕಾರವನ್ನು (State Govt) ಇಕ್ಕಟ್ಟಿಗೆ ಸಿಲುಕಿಸಿದೆ. ಪಕ್ಷದ ರಾಷ್ಟ್ರೀಯ ನಾಯಕರನ್ನೂ (National leaders) ಈ ಜಾಲಕ್ಕೆ ಕೆಡವುವ ಪ್ರಯತ್ನ ನಡೆದಿದೆ ಎಂಬುದರ ಬಗ್ಗೆ ಚರ್ಚೆ ಹೊರಳಿದ್ದು, ಪಕ್ಷಕ್ಕೆ ಇನ್ನಷ್ಟು ಮುಜುಗರ ಉಂಟಾಗುವ ಭೀತಿ ಕಾಡುತ್ತಿರುವಂತಿದೆ.
ಇನ್ನು ಭಾನುವಾರ ಬೆಳಗ್ಗೆ ಮಲ್ಲಿಜಾರ್ನುನ ಖರ್ಗೆಯವರನ್ನು (Mallikarjun Kharge) ಭೇಟಿಯಾಗಲು ಸಿದ್ದರಾಮಯ್ಯ ಮುಂದಾಗಿದ್ದರು. ಸಿದ್ದರಾಮಯ್ಯನವರಿಗೆ (Siddaramaiah) ಅನಾರೋಗ್ಯದ ಕಾರಣಕ್ಕೆ ಖರ್ಗೆಯವರೇ ಭೇಟಿಯಾಗಲು ಕಾವೇರಿ ನಿವಾಸಕ್ಕೆ(Kaveri residence) ತೆರಳಿದರು. ಸಚಿವ ಪ್ರಿಯಾಂಕ್ ಖರ್ಗೆ, ಸಿಎಂ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜು (Political Secretary K. Govindaraju) ಇದ್ದರು. ಬಳಿಕ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಅವರೊಂದಿಗೆ ಹನಿಟ್ರ್ಯಾಪ್ ಸೇರಿದಂತೆ ರಾಜ್ಯ ರಾಜಕೀಯದಲ್ಲಿನ (State politics) ಬೆಳವಣಿಗೆಗಳ ಬಗ್ಗೆ ಪ್ರತ್ಯೇಕವಾಗಿ ಚರ್ಚೆ ನಡೆಸಿದ್ದಾರೆ. ಸದ್ಯ ಎದುರಾಗಿರುವ ಹನಿಟ್ರ್ಯಾಪ್ ವಿಚಾರದ (Honeytrap idea) ಗೊಂದಲವನ್ನು ಆದ್ಯತೆ ಮೇರೆಗೆ ಬಗೆಹರಿಸಬೇಕು. ಈ ವಿಚಾರದಲ್ಲಿಏನಾದರೂ ಗೊಂದಲವಿದ್ದರೆ ಹಾಗೂ ಕೆಪಿಸಿಸಿ ಪುನಾರಚನೆ (KPCC Reorganization) ಸೇರಿದಂತೆ ಯಾವುದೇ ಗಂಭೀರ ವಿಚಾರಗಳ ಬಗ್ಗೆ ಸ್ಪಷ್ಟತೆ ಬೇಕಾದರೆ ಡಿಸಿಎಂ ಜತೆಗೆ ದಿಲ್ಲಿಗೆ ಬರುವಂತೆ (High command entry for honeytrap) ಖರ್ಗೆಯವರು ಸಿದ್ದರಾಮಯ್ಯನವರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಆ ಮೂಲಕ ಹನಿಟ್ರ್ಯಾಪ್ ವಿಚಾರ ದಿಲ್ಲಿನಾಯಕರ ಅಂಗಳ ತಲುಪಿದಂತಾಗಿದ್ದು, ಮುಂದೆ ಯಾವ ಸ್ವರೂಪ ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.