• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ರಾಜ್ಯ

ಬಿಎಮ್‌ಆರ್‌ಸಿಎಲ್ ಅನ್ನು ಅಗತ್ಯ ಸೇವೆ ಎಂದು ಘೋಷಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ: ಹೈಕೋರ್ಟ್ ಸ್ಪಷ್ಟನೆ

Teju Srinivas by Teju Srinivas
in ರಾಜ್ಯ, ವಿಜಯ ಟೈಮ್ಸ್‌
ಬಿಎಮ್‌ಆರ್‌ಸಿಎಲ್ ಅನ್ನು ಅಗತ್ಯ ಸೇವೆ ಎಂದು ಘೋಷಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ: ಹೈಕೋರ್ಟ್ ಸ್ಪಷ್ಟನೆ
0
SHARES
45
VIEWS
Share on FacebookShare on Twitter
  • ಬಿಎಂಆರ್‌ಸಿಎಲ್ ಆಡಳಿತ ಕೇಂದ್ರದ ಕೈಯಲ್ಲಿ: ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಬ್ರೇಕ್
  • ಕೈಗಾರಿಕಾ ವಿವಾದ ಕಾಯ್ದೆಯಡಿ ಪ್ರಕಟಿಸಿದ್ದ ನೋಟಿಫಿಕೇಶನ್ ಅಮಾನ್ಯ
  • ಬಿಎಂಆರ್‌ಸಿಎಲ್ ಪ್ರತ್ಯೇಕ ಸಂಸ್ಥೆ ಅಲ್ಲ ರೈಲ್ವೆ ಕಂಪನಿ ಎಂದು ತೀರ್ಪು ನೀಡಿದ ಹೈಕೋರ್ಟ್

Bengaluru: ಕರ್ನಾಟಕ ಹೈಕೋರ್ಟ್ (High Court) ಮಹತ್ವದ ತೀರ್ಪೊಂದನ್ನು ನೀಡುತ್ತಾ, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಅನ್ನು ‘ಅತ್ಯವಶ್ಯಕ ಸೇವೆ’ ಅಥವಾ ‘ಅಗತ್ಯ ಸೇವೆ’ ಎಂದು ಘೋಷಿಸುವ ಆಡಳಿತಾತ್ಮಕ ಹಕ್ಕು ರಾಜ್ಯ ಸರ್ಕಾರಕ್ಕಿಲ್ಲ ಎಂದು ಸ್ಪಷ್ಟಪಡಿಸಿದೆ.

ಈ ಹಿನ್ನೆಲೆಯಲ್ಲಿ, 2017 ರ ಜುಲೈ 7ರಂದು ಕಾನೂನು ಮತ್ತು ಗೃಹ ಇಲಾಖೆಯು ಹೊರಡಿಸಿದ್ದ ಆದೇಶವನ್ನು ಏಕಸದಸ್ಯ ಪೀಠ ರದ್ದುಪಡಿಸಿದೆ. (High Court clarifies about metro)

ಬಿಎಮ್‌ಆರ್‌ಸಿಎಲ್ ಅನ್ನು ‘ಅತ್ಯವಶ್ಯಕ ಸೇವೆ’ ಅಥವಾ ‘ಅಗತ್ಯ ಸೇವೆ’ ಎಂದು ಘೋಷಿಸುವ ಹಕ್ಕು ರಾಜ್ಯ ಸರ್ಕಾರಕ್ಕಿಲ್ಲ

ತೀರ್ಪಿನ ಪ್ರಕಾರ, ಬಿಎಂಆರ್‌ಸಿಎಲ್ ಯಾವುದೇ ಪ್ರತ್ಯೇಕ ರಾಜ್ಯದ ಕಂಪನಿ (Company) ಅಲ್ಲ, ಇದು ರೈಲ್ವೆ ಕಂಪನಿಯಾಗಿದ್ದು ಈ ಸಂಸ್ಥೆಗೆ ಸಂಬಂಧಿಸಿದ ಅಂತಿಮ ಆಡಳಿತಾತ್ಮಕ ಅಧಿಕಾರ ಸಂಪೂರ್ಣವಾಗಿ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ ಎಂದು ತೀರ್ಪು ನೀಡಿದೆ.

ಅಷ್ಟಕ್ಕೂ ಈ ತೀರ್ಪು ಬಿಎಂಆರ್‌ಸಿಎಲ್ ಉದ್ಯೋಗಿಗಳ ಸಂಘ ಸಲ್ಲಿಸಿದ್ದ ಅರ್ಜಿಯ ಮೇಲೆ ಹೊರಬಂದಿದೆ. (High Court clarifies about metro)

ಕೈಗಾರಿಕಾ ವಿವಾದ ಕಾಯ್ದೆಯಡಿ ಮತ್ತು ಕರ್ನಾಟಕ ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆಯಡಿಯಲ್ಲಿ ಸರ್ಕಾರ ಹೊರಡಿಸಿದ್ದ ಅಧಿಸೂಚನೆ ಕಾನೂನುಬದ್ಧವಾಗಿಲ್ಲ ಎಂದು ವಾದಿಸಿ ಸಂಘವು ಹೈಕೋರ್ಟ್ (High Court) ಬಾಗಿಲು ತಟ್ಟಿತ್ತು.

ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ಏಕಸದಸ್ಯ ಪೀಠ, ರಾಜ್ಯ ಸರ್ಕಾರಕ್ಕೆ ಬಿಮ್‌ಆರ್‌ಸಿಎಲ್ ಸೇವೆಗಳನ್ನು ‘ಸಾರ್ವಜನಿಕ ಉಪಯುಕ್ತತೆ’ ಅಥವಾ ‘ಅಗತ್ಯ ಸೇವೆ’ ಎಂದು ಘೋಷಿಸುವಷ್ಟು ಅಧಿಕಾರವಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

ಇದಕ್ಕೆ ಕಾರಣವಾಗಿರುವುದು ಬಿಎಂಆರ್‌ಸಿಎಲ್ ಒಂದು ರೈಲ್ವೆ ಕಂಪನಿ ಎಂಬ ಕಾನೂನುಸ್ಥಿತಿ, ಮತ್ತು ರೈಲ್ವೆ ಸಂಬಂಧಿತ ನಿಯಂತ್ರಣ ಹಾಗೂ ನಿರ್ಣಯ ತೆಗೆದುಕೊಳ್ಳುವ ಅಧಿಕಾರ ಕೇಂದ್ರ ಸರ್ಕಾರದ್ದಾಗಿದೆ .

ಇನ್ನು ತೀರ್ಪಿನಲ್ಲಿ ಮತ್ತೊಂದು ಮುಖ್ಯ ಅಂಶವಿದೆ.

ಬಿಎಂಆರ್‌ಸಿಎಲ್‌ನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಲಾ 50% ಪಾಲುದಾರಿಕೆ ಹೊಂದಿದ್ದರೂ, ನಿರ್ಣಾಯಕ ಆಡಳಿತಾತ್ಮಕ ತೀರ್ಮಾನಗಳಲ್ಲಿ ಅಂತಿಮ ಮಾತು ಕೇಂದ್ರ ಸರ್ಕಾರದ್ದಾಗಿರುತ್ತದೆ.

ದೊಡ್ಡ ನೀತಿ ಬದಲಾವಣೆಗಳು, ಉದ್ಯೋಗಿಗಳ ಹಕ್ಕು ಸಂಬಂಧಿತ ನಿರ್ಧಾರಗಳು, ಮತ್ತು ಸೇವಾ ನಿಯಮಗಳಂತಹ ವಿಷಯಗಳಲ್ಲಿ ಕೇಂದ್ರ ಸರ್ಕಾರದ ಅನುಮೋದನೆ ಅಗತ್ಯ.

ಹೀಗಾಗಿ, ರಾಜ್ಯ ಸರ್ಕಾರವು ಏಕಪಕ್ಷೀಯವಾಗಿ ಎಸ್ಮಾ ಜಾರಿ ಮಾಡುವುದು ಅಥವಾ ಇತರೆ ಕಟ್ಟುನಿಟ್ಟಿನ ಆದೇಶಗಳನ್ನು ಹೊರಡಿಸುವಂತಿಲ್ಲ.

ಈ ತೀರ್ಪು ಮುಂದಿನ ದಿನಗಳಲ್ಲಿ ಮೆಟ್ರೋ ನೌಕರರ ಸಂಘಗಳ ಹೋರಾಟ, ಮುಷ್ಕರ ಅಥವಾ ಸೇವೆಯ

ಸ್ಥಗಿತದ ಸಂದರ್ಭದಲ್ಲಿ ಕಾನೂನು ಗೊಂದಲ ತಪ್ಪಿಸಲು ಸಹಾಯಕವಾಗಲಿದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪ್ರತಿದಿನ ಲಕ್ಷಾಂತರ ಪ್ರಯಾಣಿಕರನ್ನು ಸಾಗಿಸುವ ನಮ್ಮ ಮೆಟ್ರೋಗೆ (Metro) ಈ ತೀರ್ಪು ದೊಡ್ಡ ಆಡಳಿತಾತ್ಮಕ ಬೆಳವಣಿಗೆಯಂತೆ ಕಂಡಿದೆ.

ಸೇವೆ, ದರ, ವಿಸ್ತರಣಾ ಹಂತ ಹಾಗೂ ನೌಕರರ ಹಕ್ಕುಗಳ ಬಗ್ಗೆ ರಾಜ್ಯ–ಕೇಂದ್ರ ಸರಕಾರಗಳ ನಡುವೆ ಉಂಟಾಗುತ್ತಿದ್ದ ಕಾನೂನು ವಿವಾದಗಳಿಗೆ ಈ ತೀರ್ಪು ಸ್ಪಷ್ಟತೆ ನೀಡಿದೆ. ಸಾರ್ವಜನಿಕ ವಲಯದಲ್ಲೂ ಈ ತೀರ್ಪು ಚರ್ಚೆಗೆ ಗ್ರಾಸವಾಗಿದೆ.

ಇದನ್ನು ಓದಿ : ಬೆಂಗಳೂರು ಟ್ರಾಫಿಕ್ ನಿಯಂತ್ರಣಕ್ಕೆ ಹೊಸ ಪ್ಲಾನ್‌, ಕೋಬ್ರಾ ಬೀಟ್ ತಂತ್ರ ಅಳವಡಿಕೆ
Tags: bengaluruBMRCLGovernmenthighcourt

Related News

ಸ್ಕ್ವಾಷ್ ವಿಶ್ವಕಪ್; ಹಾಂಗ್‌ಕಾಂಗ್‌ ವಿರುದ್ಧ ಗೆದ್ದು ಬೀಗಿದ ಭಾರತ
Sports

ಸ್ಕ್ವಾಷ್ ವಿಶ್ವಕಪ್; ಹಾಂಗ್‌ಕಾಂಗ್‌ ವಿರುದ್ಧ ಗೆದ್ದು ಬೀಗಿದ ಭಾರತ

December 15, 2025
ಬೆಂಗಳೂರು ಜನತೆಗೆ ಜಲಮಂಡಳಿಯಿಂದ ಗುಡ್ ನ್ಯೂಸ್: ಜನವರಿಯಿಂದ ಒನ್ ಟೈಮ್ ಸೆಟಲ್‌ಮೆಂಟ್ ಜಾರಿ, ಫೈನ್ ಸಂಪೂರ್ಣ ಮನ್ನಾ
ಪ್ರಮುಖ ಸುದ್ದಿ

ಬೆಂಗಳೂರು ಜನತೆಗೆ ಜಲಮಂಡಳಿಯಿಂದ ಗುಡ್ ನ್ಯೂಸ್: ಜನವರಿಯಿಂದ ಒನ್ ಟೈಮ್ ಸೆಟಲ್‌ಮೆಂಟ್ ಜಾರಿ, ಫೈನ್ ಸಂಪೂರ್ಣ ಮನ್ನಾ

December 15, 2025
ಕೋಲ್ಕತ್ತಾ ಸ್ಟೇಡಿಯಂನಲ್ಲಿ ಮೆಸ್ಸಿ ಫ್ಯಾನ್ಸ್ ದಾಂಧಲೆ:ಮೆಸ್ಸಿ ಮೇನಿಯಾ ಅವ್ಯವಸ್ಥೆಯಿಂದ ಅಂತ್ಯ
ದೇಶ-ವಿದೇಶ

ಕೋಲ್ಕತ್ತಾ ಸ್ಟೇಡಿಯಂನಲ್ಲಿ ಮೆಸ್ಸಿ ಫ್ಯಾನ್ಸ್ ದಾಂಧಲೆ:ಮೆಸ್ಸಿ ಮೇನಿಯಾ ಅವ್ಯವಸ್ಥೆಯಿಂದ ಅಂತ್ಯ

December 13, 2025
ಪ್ರತಿ ತಿಂಗಳು ಹೂಡಿಕೆ ಮಾಡುವ SIP ನ ಅಸಲಿ ಸತ್ಯ
ಪ್ರಮುಖ ಸುದ್ದಿ

ಪ್ರತಿ ತಿಂಗಳು ಹೂಡಿಕೆ ಮಾಡುವ SIP ನ ಅಸಲಿ ಸತ್ಯ

December 13, 2025

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.