• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಮಾಹಿತಿ

ಡ್ರಂಕ್ & ಡ್ರೈವ್ ಪ್ರಕರಣಗಳಲ್ಲಿ ವಾಹನ ಸೀಜ್‌ಗೆ ಬ್ರೇಕ್: ಹೈಕೋರ್ಟ್ ಮಹತ್ವದ ತೀರ್ಪು

Teju Srinivas by Teju Srinivas
in ಮಾಹಿತಿ, ವಿಜಯ ಟೈಮ್ಸ್‌
ಡ್ರಂಕ್ & ಡ್ರೈವ್ ಪ್ರಕರಣಗಳಲ್ಲಿ ವಾಹನ ಸೀಜ್‌ಗೆ ಬ್ರೇಕ್: ಹೈಕೋರ್ಟ್ ಮಹತ್ವದ ತೀರ್ಪು
0
SHARES
17
VIEWS
Share on FacebookShare on Twitter
  • ಮದ್ಯಪಾನ ಮಾಡಿದ ಚಾಲಕರಿಗೆ ದಂಡ ಮಾತ್ರ, ವಾಹನ ಸೀಜ್‌ಗೆ ಅವಕಾಶ ಇಲ್ಲ
  • ವಾಹನ ಕಸಿದುಕೊಳ್ಳುವುದು ಕಾನೂನುಬಾಹಿರ – ಮಾರ್ಗಸೂಚಿ ಪ್ರಕಟಿಸಿದ ಹೈಕೋರ್ಟ್
  • ಸ್ನೇಹಿತರಿಗೆ ವಾಹನ ಹಸ್ತಾಂತರ ಮಾಡುವಂತೆ ಸೂಚನೆ (High Court issues verdict on vehicle seizure in drunk driving cases)

Hydrabad: ಹೈದರಾಬಾದ್‌ನಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ವಿರುದ್ಧ ಪೊಲೀಸರು ನಡೆಸುವ ‘ಡ್ರಂಕ್ ಅಂಡ್ ಡ್ರೈವ್’ (Drunk and drive) ತಪಾಸಣೆ ಕುರಿತು ಮಹತ್ವದ ತೀರ್ಪೊಂದನ್ನು ಹೈಕೋರ್ಟ್ (High Court) ನೀಡಿದೆ. (High Court issues verdict on vehicle seizure in drunk driving cases)

ಈ ತೀರ್ಪಿನ ಪ್ರಕಾರ, ಮದ್ಯ ಸೇವನೆ ಮಾಡಿದ ಚಾಲಕರ ವಾಹನಗಳನ್ನು ಪೊಲೀಸರು ಜಪ್ತಿ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಕೇವಲ ಮದ್ಯಪಾನ ಮಾಡಿದ ಕಾರಣಕ್ಕೆ ವಾಹನವನ್ನು ವಶಪಡಿಸಿಕೊಳ್ಳುವುದು ಕಾನೂನುಬಾಹಿರ ಎಂದು ನ್ಯಾಯಾಲಯ ಹೇಳಿದ್ದು,

High Court issues  verdict on vehicle seizure in drunk driving cases

ಇದು ಸಾಮಾನ್ಯ ಜನರಿಗೆ ದೊಡ್ಡ ಮಟ್ಟದ ಪರಿಹಾರವನ್ನು ನೀಡುವಂತಾಗಿದೆ.

ಈ ಪ್ರಕರಣವನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಇ.ವಿ. ವೇಣುಗೋಪಾಲ್ (Justice E.V. Venugopal) ಅವರು ಮೋಟಾರು ವಾಹನ ಕಾಯ್ದೆಯಡಿ ಪೊಲೀಸರ ಅಧಿಕಾರಗಳ ಮಿತಿಗಳನ್ನು ವಿವರಿಸಿದರು.

ಚಾಲಕ ಮದ್ಯದ ಅಮಲಿನಲ್ಲಿ ಇರುವುದನ್ನು ದೃಢಪಡಿಸಿದಲ್ಲಿ, ಸಂಬಂಧಿತ ಕಾನೂನು ಪ್ರಕಾರ ದಂಡ ವಿಧಿಸುವುದು

ಅಥವಾ ನ್ಯಾಯಾಲಯದ ಮುಂದೆ ಹಾಜರುಪಡಿಸುವುದು ಸರಿಯಾದ ಕ್ರಮ.

ಆದರೆ, ಈ ನೆಪದಲ್ಲಿ ವಾಹನವನ್ನು ಪೊಲೀಸ್ ಠಾಣೆಗೆ ಕೊಂಡೊಯ್ಯುವುದು ಅಥವಾ ಸೀಜ್ ಮಾಡುವುದು ನ್ಯಾಯಸಮ್ಮತವಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ಹೈಕೋರ್ಟ್ ತನ್ನ ಆದೇಶದಲ್ಲಿ ಕೆಲವು ಪ್ರಮುಖ ಮಾರ್ಗಸೂಚಿಗಳನ್ನು (guidelines) ಕೂಡ ನೀಡಿದೆ.

ಒಂದು ವೇಳೆ ಚಾಲಕ ಒಬ್ಬನೇ ಇದ್ದು, ಆತ ವಾಹನ ಚಾಲನೆ ಮಾಡಲು ಅಸಮರ್ಥನಾಗಿದ್ದರೆ,

ಪೊಲೀಸರು ತಕ್ಷಣವೇ ಅವನ ಸಂಬಂಧಿಕರಿಗೆ ಅಥವಾ ಸ್ನೇಹಿತರಿಗೆ ಮಾಹಿತಿ ನೀಡಬೇಕು.

ಅವರು ಬಂದು ವಾಹನವನ್ನು ಸುರಕ್ಷಿತವಾಗಿ ತೆಗೆದುಕೊಂಡು ಹೋಗುವಂತೆ ಅವಕಾಶ ಕಲ್ಪಿಸಬೇಕು.

ಅದೇ ರೀತಿ, ವಾಹನದಲ್ಲೇ ಇನ್ನೊಬ್ಬ ವ್ಯಕ್ತಿ ಇದ್ದು, ಅವನ ಬಳಿ ಮಾನ್ಯ ಚಾಲನಾ ಪರವಾನಗಿ (Driving license) ಇದ್ದರೆ ಮತ್ತು ಆತ ಮದ್ಯಪಾನ ಮಾಡಿರದಿದ್ದರೆ,

ಆತನಿಗೆ ವಾಹನವನ್ನು ಹಸ್ತಾಂತರಿಸಬಹುದು ಎಂದು ಕೋರ್ಟ್ ತಿಳಿಸಿದೆ. (High Court issues verdict on vehicle seizure in drunk driving cases)

ಇದಲ್ಲದೆ, ಪೊಲೀಸರು ಅನಗತ್ಯವಾಗಿ ವಾಹನಗಳನ್ನು ಸೀಜ್ (Siege) ಮಾಡಿ ಠಾಣೆಗಳ ಆವರಣದಲ್ಲಿ ನಿಲ್ಲಿಸುವುದರಿಂದ

ಜನರಿಗೆ ತೊಂದರೆ ಉಂಟಾಗುತ್ತಿದೆ ಎಂಬುದನ್ನು ನ್ಯಾಯಾಲಯ ಗಮನಿಸಿದೆ.

ಬಿಸಿಲು, ಮಳೆ ಮುಂತಾದ ಕಾರಣಗಳಿಂದ ವಾಹನಗಳು ಹಾನಿಗೊಳಗಾಗುತ್ತಿವೆ ಮತ್ತು ಇದರಿಂದ ಸಾರ್ವಜನಿಕರಿಗೆ ಆರ್ಥಿಕ ನಷ್ಟ ಉಂಟಾಗುತ್ತಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಯಾರೂ ಲಭ್ಯವಿಲ್ಲದ ಸಂದರ್ಭಗಳಲ್ಲಿ ವಾಹನವನ್ನು ಸುರಕ್ಷಿತ ಸ್ಥಳದಲ್ಲಿ ಪಾರ್ಕ್ ಮಾಡುವ ವ್ಯವಸ್ಥೆ ಮಾಡಬೇಕು,

ಆದರೆ ಕಾನೂನುಬಾಹಿರವಾಗಿ ಜಪ್ತಿ ಮಾಡಬಾರದು ಎಂದು ನ್ಯಾಯಮೂರ್ತಿಗಳು ಸೂಚಿಸಿದ್ದಾರೆ.

ಈ ತೀರ್ಪಿನ ಅರ್ಥ ಮದ್ಯಪಾನ ಮಾಡಿ ವಾಹನ ಚಲಾಯಿಸಲು ಅನುಮತಿ ಇದೆ ಎನ್ನುವುದಲ್ಲ ಎಂಬುದನ್ನು ಕೋರ್ಟ್ ಸ್ಪಷ್ಟಪಡಿಸಿದೆ.

ಮದ್ಯ ಸೇವಿಸಿ ವಾಹನ ಚಲಾಯಿಸುವುದು ಇನ್ನೂ ಅಪರಾಧವೇ ಆಗಿದ್ದು, ಅದರ ವಿರುದ್ಧ ಕಾನೂನುಬದ್ಧ ಕ್ರಮಗಳು ಮುಂದುವರಿಯುತ್ತವೆ.

ದಂಡ ವಿಧಿಸುವುದು, ಲೈಸೆನ್ಸ್ ಅಮಾನತು ಮಾಡುವುದು ಸೇರಿದಂತೆ ಕ್ರಮಗಳನ್ನು ಕೈಗೊಳ್ಳಬಹುದು. (High Court issues verdict on vehicle seizure in drunk driving cases)

ಆದರೆ, ದಂಡದ ಹೆಸರಿನಲ್ಲಿ ವಾಹನವನ್ನು ಕಸಿದುಕೊಳ್ಳುವುದು ಸಂವಿಧಾನಬಾಹಿರವಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

ಒಟ್ಟಿನಲ್ಲಿ, ಈ ತೀರ್ಪು ಪೊಲೀಸ್ ಅಧಿಕಾರದ ದುರುಪಯೋಗವನ್ನು ತಡೆಯುವ ಜೊತೆಗೆ, ಸಾರ್ವಜನಿಕರ ಹಕ್ಕುಗಳನ್ನು ರಕ್ಷಿಸುವತ್ತ ಮಹತ್ವದ ಹೆಜ್ಜೆಯಾಗಿದೆ.

ಮುಂದಿನ ದಿನಗಳಲ್ಲಿ ಪೊಲೀಸರು ಈ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅಗತ್ಯವಾಗಿದ್ದು,

ನಿಯಮ ಮೀರಿ ನಡೆದುಕೊಂಡರೆ ನಾಗರಿಕರು ನ್ಯಾಯಾಲಯದ ತೀರ್ಪನ್ನು ಉಲ್ಲೇಖಿಸಿ ನ್ಯಾಯ ಪಡೆಯಬಹುದು.

ಇದನ್ನು ಓದಿ: https://vijayatimes.com/rbi-plan-to-delay-on-upi-payments-above-10000/

Tags: "hyderabadDrunk And DrivehighcourtJustice EV Venugopaltelangana

Related News

ಅನಿಲ್ ಅಂಬಾನಿ ಕಂಪನಿಗಳಿಗೆ ಸಿಬಿಐ ಶಾಕ್: 27 ಸಾವಿರ ಕೋಟಿ ರೂ. ವಂಚನೆ ಪ್ರಕರಣಕ್ಕೆ ಹೊಸ ತಿರುವು
ದೇಶ-ವಿದೇಶ

ಅನಿಲ್ ಅಂಬಾನಿ ಕಂಪನಿಗಳಿಗೆ ಸಿಬಿಐ ಶಾಕ್: 27 ಸಾವಿರ ಕೋಟಿ ರೂ. ವಂಚನೆ ಪ್ರಕರಣಕ್ಕೆ ಹೊಸ ತಿರುವು

May 15, 2026
ನೀಟ್‌-ಯುಜಿ ಮರುಪರೀಕ್ಷೆಗೆ ದಿನಾಂಕ ಘೋಷಣೆ: ವಿದ್ಯಾರ್ಥಿಗಳ ಆತಂಕದ ನಡುವೆ ಕೇಂದ್ರದ ಮಹತ್ವದ ನಿರ್ಧಾರ
ದೇಶ-ವಿದೇಶ

ನೀಟ್‌-ಯುಜಿ ಮರುಪರೀಕ್ಷೆಗೆ ದಿನಾಂಕ ಘೋಷಣೆ: ವಿದ್ಯಾರ್ಥಿಗಳ ಆತಂಕದ ನಡುವೆ ಕೇಂದ್ರದ ಮಹತ್ವದ ನಿರ್ಧಾರ

May 15, 2026
ಷೇರುಪೇಟೆ ಗಮನ ಸೆಳೆದ 9 ಪ್ರಮುಖ ಷೇರುಗಳು; ಹೂಡಿಕೆದಾರರ ಕಣ್ಣು ಇಂದು ಈ ಸ್ಟಾಕ್‌ಗಳ ಮೇಲೆ!
ದೇಶ-ವಿದೇಶ

ಷೇರುಪೇಟೆ ಗಮನ ಸೆಳೆದ 9 ಪ್ರಮುಖ ಷೇರುಗಳು; ಹೂಡಿಕೆದಾರರ ಕಣ್ಣು ಇಂದು ಈ ಸ್ಟಾಕ್‌ಗಳ ಮೇಲೆ!

May 15, 2026
ವಾಹನ ಸವಾರರಿಗೆ ಬಿಗ್ ಶಾಕ್: ಪೆಟ್ರೋಲ್, ಡೀಸೆಲ್ ದರದಲ್ಲಿ ಭಾರಿ ಏರಿಕೆ
ದೇಶ-ವಿದೇಶ

ವಾಹನ ಸವಾರರಿಗೆ ಬಿಗ್ ಶಾಕ್: ಪೆಟ್ರೋಲ್, ಡೀಸೆಲ್ ದರದಲ್ಲಿ ಭಾರಿ ಏರಿಕೆ

May 15, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.