ಬೆಂಗಳೂರು, ಜೂ. 15: ಕೊರೊನಾ ಕಾರಣದಿಂದಾಗಿ ವಿದ್ಯಾಥಿ೯ಗಳ ಹಿತದೃಷ್ಟಿಯಿಂದ 2020-2021 ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ವಿದ್ಯಾಥಿ೯ಗಳಿಗೆ ಪರಿಕ್ಷೆಯಿಲ್ಲದೆ ಫಲಿತಾಂಶ ಪ್ರಕಟಿಸಲು ರಾಜ್ಯ ಸರ್ಕಾರ ಮುಂದಾಗಿತ್ತು. ಆದರೆ ಹೈಕೋಟ್೯ ಅದನ್ನು ತಡೆ ಹಿಡಿದಿದೆ.
ಫ್ರೆಶಸ್೯ ವಿದ್ಯಾರ್ಥಿಗಳನ್ನು ಮಾತ್ರ ಪಾಸ್ ಮಾಡಿ, ರಿಪಿಟಸ್೯ಗೆ ಮಾಮೂಲಿಯಂತೆ ಪರಿಕ್ಷೆ ನಡೆಸಲು ಮುಂದಾದ ಸಕಾ೯ರದ ವಿರುದ್ದ ರಿಪಿಟಸ್೯ ಧ್ವನಿ ಎತ್ತಿ ರೆಗ್ಯೂಲರ್ ವಿದ್ಯಾಥಿ೯ಗಳಿಗೊಂದು ನ್ಯಾಯ, ರಿಪಿಟಸ್೯ಗಳಿಗೊಂದು ನ್ಯಾಯ ಎಂದು ಹೈಕೋಟ್೯ ಮೆಟ್ಟಿಲೆರಿದ್ದಾರೆ.
ಪಾಸ್ ಮಾಡಿದರೆ ಎಲ್ಲರನ್ನು ಪಾಸ್ ಮಾಡಬೇಕು ಎಂದು ರಿಪೀಟಸ್೯ ಪರ ವಕೀಲರು ವಾದ ಮಂಡಿಸಿದ್ದಾರೆ. ಕೊರೊನಾ ಇರುವ ಕಾರಣಕ್ಕೆ ಪರೀಕ್ಷೆ ರದ್ದು ಮಾಡಿದ್ದಿರಾ ಆದರೆ ರಿಪಿಟಸ್೯ ವಿದ್ಯಾಥಿ೯ಗಳ ಆರೊಗ್ಯದ ಮೇಲೂ ಗಮನ ಹರಿಸಿ ಎಂದು ರಿಪಿಟಸ್೯ ಪರ ವಕೀಲ ಹೇಳಿದ್ದಾರೆ.
ಆದ್ದರಿಂದ ಗುರುವಾರದ ತನಕ ಪಿಯುಸಿ ಪ್ರಕಟನೆಗೆ ಹೈಕೋಟ್೯ ತಡೆ ಹಿಡಿದಿದೆ. ಈ ವಿಚಾರ ಕುರಿತು ಸಕಾ೯ರದ ಅಡ್ವೋಕೇಟ್ ಜನರಲ್ಗೆ ಗುರುವಾರದೊಳಗೆ ಮಾಹಿತಿ ನೀಡುವಂತೆ ಹೈಕೋಟ್೯ ಸೂಚನೆ ನೀಡಿದೆ.