Thiruvanthapuram : ‘ವರಾಹ ರೂಪಂ’ ಹಾಡನ್ನು(Varaha Roopam) ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಥವಾ ಚಿತ್ರಮಂದಿರಗಳಲ್ಲಿ ಪ್ಲೇ ಮಾಡದಂತೆ ಕೆಳ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆಯನ್ನು ತೆರವು ಮಾಡುವಂತೆ ಕಾಂತಾರ(Highcourt Dismissed Kantara Petition) ಚಿತ್ರದ ನಿರ್ಮಾಪಕರು ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್(Kerala Highcourt) ವಜಾಗೊಳಿಸಿದೆ.

ಕಾಂತಾರ ಚಿತ್ರದ ‘ವರಾಹ ರೂಪಂ’ ಹಾಡನ್ನು ತಮ್ಮ ಮೂಲ ಕೃತಿ ‘ನವರಸಂ’ನಿಂದ(Highcourt Dismissed Kantara Petition) ಕೃತಿಚೌರ್ಯ ಮಾಡಲಾಗಿದೆ ಎಂದು ಆರೋಪಿಸಿ ಕೇರಳ ಮೂಲದ ತೈಕ್ಕುಡಂ ಬ್ರಿಡ್ಜ್(Thaikkudam Bridge) ಎಂಬ ಮ್ಯೂಸಿಕ್ ಬ್ಯಾಂಡ್ ಸಂಸ್ಥೆ ಮನವಿ ಮಾಡಿದ ಹಿನ್ನೆಲೆಯಲ್ಲಿ .
ಪಾಲಕ್ಕಾಡ್ ಜಿಲ್ಲಾ ನ್ಯಾಯಾಲಯ ಮತ್ತು ಕೋಝಿಕ್ಕೋಡ್ ಜಿಲ್ಲಾ ನ್ಯಾಯಾಲಯ ಕಳೆದ ತಿಂಗಳು ತಡೆಯಾಜ್ಞೆ ನೀಡಿದ್ದವು.
ಇದೀಗ ಕೇರಳ ಹೈಕೋರ್ಟ್ ಕೂಡಾ ತಡೆಯಾಜ್ಞೆಯನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದು ಹೇಳಿದೆ.
ಕಾಂತಾರ ಚಿತ್ರದ ನಿರ್ಮಾಪಕರು ಕೆಲವು ದಿನಗಳ ಹಿಂದೆ ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ತಡೆಯಾಜ್ಞೆಯನ್ನು ತೆರವು ಮಾಡುವಂತೆ ಕೋರಿದ್ದರು. ಅರ್ಜಿಯನ್ನು ವಜಾಗೊಳಿಸಿದ ಕೇರಳ ಹೈಕೋರ್ಟ್, ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ.
ಇದನ್ನೂ ಓದಿ : https://vijayatimes.com/kantara-effect/
ಕೆಳ ನ್ಯಾಯಾಲಯಗಳಲ್ಲಿ ಈ ಸಮಸ್ಯೆಯ ವಿರುದ್ಧ ಹೋರಾಡುವಂತೆ ಚಲನಚಿತ್ರ ನಿರ್ಮಾಪಕರಿಗೆ ನಿರ್ದೇಶಿಸಿದೆ.
ತೈಕ್ಕುಡಂ ಬ್ರಿಡ್ಜ್ ಅನ್ನು ಪ್ರತಿನಿಧಿಸುತ್ತಿರುವ ಸುಪ್ರೀಂ ಕೋರ್ಟ್ ಅಡ್ವೊಕೇಟ್ ಸತೀಶ್ ಮೂರ್ತಿ ಅವರು ಹೈಕೋರ್ಟ್ ಆದೇಶವನ್ನು ತಡೆಯಾಜ್ಞೆಯ ದೃಢೀಕರಣವೆಂದು ತಿಳಿಸಿದ್ದಾರೆ.
https://youtu.be/9ouiEo3FiBs DIRTY FOOD SECRET | ನೋ….ನೋ…..ನೂಡಲ್ಸ್!
ಅಮೆಜಾನ್ ಪ್ರೈಮ್ ಒಟಿಟಿ ಪ್ಲಾಟ್‌ಫಾರ್ಮ್ ಪ್ರಸ್ತುತ ಹಾಡಿಲ್ಲದೆ ಚಲನಚಿತ್ರವನ್ನು ಸ್ಟ್ರೀಮ್ ಮಾಡುತ್ತಿವೆ.
ಸರಿಯಾದ ಅಂಗೀಕಾರವಿಲ್ಲದೆ ಚಿತ್ರದಲ್ಲಿನ ಹಾಡನ್ನು ಸ್ಟ್ರೀಮ್ ಮಾಡದಿರಲು ಅಮೆಜಾನ್ ಸಮಂಜಸವಾದ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ನಾನು ಭಾವಿಸುತ್ತೇನೆ ಎಂದು ತಿಳಿಸಿದ್ದಾರೆ.

ಈ ಮಧ್ಯೆ ಹೈಕೋರ್ಟಿನ ತೀರ್ಪನ್ನು ಸ್ವಾಗತಿಸಿರುವ ತೈಕ್ಕುಡಂ ಬ್ರಿಡ್ಜ್ “ಅಮೆಜಾನ್ ಪ್ರೈಮ್ ಕಾಂತಾರ ಚಲನಚಿತ್ರದಿಂದ ನಮ್ಮ ‘ನವರಸಂ’ ಹಾಡಿನ ಕೃತಿಚೌರ್ಯದ ಆವೃತ್ತಿಯನ್ನು ತೆಗೆದುಹಾಕಿದೆ.
ನ್ಯಾಯವು ಮೇಲುಗೈ ಸಾಧಿಸಿದೆ” ಎಂದು ಪೋಸ್ಟ್ ಮಾಡಿದೆ.
ಇದನ್ನೂ ಓದಿ : https://vijayatimes.com/cow-slaughter-act-karnataka/
ಇನ್ನು ಈ ಕುರಿತು ಕಾಂತಾರ ಚಿತ್ರತಂಡ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಕಾಂತಾರ ಚಿತ್ರ ಈಗಾಗಲೇ ವಿಶ್ವದಾದ್ಯಂತ ಸುಮಾರು 400 ಕೋಟಿ ರೂ. ಗಳಿಸಿದ್ದು, ಯಶಸ್ವಿ ಚಿತ್ರಗಳ ಸಾಲಿಗೆ ಸೇರಿದೆ.
- ಮಹೇಶ್.ಪಿ.ಎಚ್