ರಾಜ್ಯದಲ್ಲಿ ಈ ಹಿಂದೆ ಆನ್ಲೈನ್ ಗೇಮ್ಸ್‌ಗಳು ಬಹಳ ಪರಿಣಾಮಕಾರಿಯಾಗಿ ಯುವಜನರ ಮೇಲೆ ಪ್ರಭಾವ ಬೀರಿತ್ತು ಮತ್ತು ಅನೇಕ ಸಾವುಗಳು ಕೂಡ ಸಂಭವಿಸಿತ್ತು. ಆನ್ಲೈನ್ ಗೇಮ್ಸ್‌ಗಳ ಹಾವಳಿ ಹೆಚ್ಚಿದ್ದು, ಸಾವುಗಳ ಸಂಖ್ಯೆಯೂ ಗರಿಷ್ಠತೆಯನ್ನು ತಲುಪಿತ್ತು. ಈ ಕುರಿತಾಗಿ ರಾಜ್ಯ ಸರ್ಕಾರ ಆನ್ಲೈನ್ ಗೇಮ್ಸ್‌ಗೆ ನಿಷೇಧ ಹೇರುವ ಮುಖೇನ ರಾಜ್ಯದಲ್ಲಿ ಆನ್ಲೈನ್ ಗೇಮ್ಸ್‌ಗೆ ಇನ್ಮುಂದೆ ಅನುಮತಿ ನೀಡುವುದಿಲ್ಲ ಎಂದು ಪ್ರಕಟಿಸಿತ್ತು. ಆದರ ಇಂದು ಅದೇ ನಿಷೇಧ ಹೇರಿದ ಸರ್ಕಾರದ ಆದೇಶವನ್ನು ಹೈಕೋರ್ಟ್ ವಜಾಗೊಳಿಸಿದೆ.

ಹೌದು, ರಾಜ್ಯದಲ್ಲಿ ಆನ್ಲೈನ್ ಗೇಮ್ ನಿಷೇಧವನ್ನು ವಜಾಗೊಳಿಸಿದ ಹೈಕೋರ್ಟ್, ರದ್ದು ಮಾಡಿದ್ದ ಆನ್ಲೈನ್ ಗೇಮ್ಸ್‌ಗಳಿಗೆ ಗ್ರೀನ್ ಸಿಗ್ನಲ್ ನೀಡಿದೆ. ಈ ಮುಖಾಂತರ ರಾಜ್ಯದಲ್ಲಿ ಮತ್ತೊಮ್ಮೆ ಆನ್ಲೈನ್ ಗೇಮ್ಸ್‌ಗೆ ಚಾಲನೆ ನೀಡಿದೆ. ಇಂದು ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ರಾಜ್ಯ ಸರ್ಕಾರದಿಂದ ನೀಡಲಾಗಿದ್ದಂತ ಆನ್ಲೈನ್ ಗೇಮ್ ನಿಷೇಧದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಲಾಯಿತು. ಈ ಮೂಲಕ ಈ ಹಿಂದೆ ರದ್ದು ಮಾಡಿದ್ದ ಆನ್ಲೈನ್ ಗೇಮ್ಸ್‌ಗೆ ಈಗ ಹೈಕೋರ್ಟ್ ಅನುಮತಿ ನೀಡಿದೆ. ಈ ವರದಿ ನೋಡಿದ ಬಳಿಕ ಎಷ್ಟೋ ಪೋಷಕರು ಸದ್ಯ ಆತಂಕಕ್ಕೆ ಒಳಗಾಗಿದ್ದಾರೆ ಎನ್ನಬಹುದು.
ಕಾರಣ ಈಗ ಆನ್ಲೈನ್ ಗೇಮ್ಸ್‌ಗಳು ಮತ್ತೆ ಶುರುವಾದರೆ ಮಕ್ಕಳು ಪುಸ್ತಕ ಹಿಡಿಯುವ ಬದಲು ಮೊಬೈಲ್ ಹಿಡಿದು ಸಮಯ ವ್ಯರ್ಥ ಮಾಡುತ್ತಾರೆ ಮತ್ತು ಆಟಗಳ ಚಾಳಿಗೆ ಬಿದ್ದು ತಮ್ಮ ಜೀವನವನ್ನು ನಾಶ ಮಾಡಿಕೊಳ್ಳುತ್ತಾರೆ ಎಂಬುದರ ಬಗ್ಗೆ ಪೋಷಕರು ಈಗ ಚಿಂತಾಕ್ರಾಂತರಾಗಿದ್ದಾರೆ. ಒಟ್ಟಾರೆ ಮಕ್ಕಳು ಮತ್ತೊಮ್ಮೆ ಈ ಆನ್ಲೈನ್ ಆಟಗಳಿಗೆ ತಲೆಕಡಿಸಿಕೊಳ್ಳಬಹುದು ಹಾಗೂ ತಮ್ಮ ಜೀವನವನ್ನು ನಾಶ ಮಾಡಿಕೊಳ್ಳಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆನ್ಲೈನ್ ಗೇಮ್ಸ್‌ಗಳು ಪ್ರಾರಂಭವಾದರೂ ಮಕ್ಕಳು ಅದನ್ನು ಚಟವಾಗಿ ಮಾಡಿಕೊಳ್ಳದಿದ್ದರೆ ಒಳಿತು ಎನ್ನಬಹುದು.