ರಾಜ್ಯಾದ್ಯಂತ ತೀವ್ರ ವಿವಾದ(Controversy) ಸೃಷ್ಟಿಸಿದ್ದ ಹಿಜಾಬ್(Hijab)ವಿವಾದದ ಕುರಿತು ರಾಜ್ಯ ಹೈಕೋರ್ಟ್(Highcourt) ಇಂದು ಅಂತಿಮ(Final) ತೀರ್ಪು(Verdict) ನೀಡಿದೆ. ಮುಖ್ಯನ್ಯಾಯಮೂರ್ತಿ ರಿತು ರಾಜ್(Reethu Raj) ಅವಸ್ತಿ, ನ್ಯಾ. ಕೃಷ್ಣ ಎಸ್. ದೀಕ್ಷಿತ್, ಖಾಜಿ ಜೆಬುನ್ನಿಸಾ ನೇತೃತ್ವದ ತ್ರಿಸದಸ್ಯ ಸಾಂವಿಧಾನಿಕ ಪೀಠ ಇಂದು ಮಹತ್ವದ ತೀರ್ಪು ನೀಡಿದ್ದು, ಮೂವರು ನ್ಯಾಯಮೂರ್ತಿಗಳ ಪರವಾಗಿ ತೀರ್ಪು ಓದಿದ ಮುಖ್ಯನ್ಯಾಯಮೂರ್ತಿ ರಿತು ರಾಜ್ ಅವಸ್ತಿ ಅವರು “ಹಿಜಾಬ್ ಧರಿಸುವುದು ಅಗತ್ಯ ಧಾರ್ಮಿಕ ಆಚರಣೆ ಅಲ್ಲ” ಅಭಿಪ್ರಾಯಪಟ್ಟರು.

ಇನ್ನು ಹಿಜಾಬ್ ಧರಿಸುವುದು ಅಗತ್ಯ ಆಚರಣೆ ಎಂಬ ಯಾವ ಉಲ್ಲೇಖವು ಕುರಾನ್‍ನಲ್ಲಿ ಕಂಡುಬರುವುದಿಲ್ಲ. ಪವಿತ್ರ ಕುರಾನ್‍ನಲ್ಲಿ ಇದಕ್ಕೆ ಯಾವುದೇ ಆಧಾರವಿಲ್ಲ. ಹೀಗಾಗಿ ಹಿಜಾಬ್ ಧರಿಸಿ ಶಾಲಾ-ಕಾಲೇಜಿಗೆ ಬರುವುದು ಸಮವಸ್ತ್ರ ಸಂಹಿಂತೆಯ ಉಲ್ಲಂಘನೆಯಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ಕಾನೂನು ಬದ್ದವಾಗಿದೆ ಎಂದು ಪೀಠ ಹೇಳಿದೆ. ಕೇವಲ ಎಂಟು ನಿಮಿಷದಲ್ಲಿ ಮುಖ್ಯನ್ಯಾಯಮೂರ್ತಿಗಳು ತೀರ್ಪನ್ನು ಓದಿ ಮುಗಿಸಿದ್ದು ವಿಶೇಷವಾಗಿತ್ತು.

ಇನ್ನು ಹೈಕೋಟ್ ತ್ರಿಸದಸ್ಯ ಪೀಠ ನೀಡಿರುವ ತೀರ್ಪನ್ನು ಸ್ವಾಗತಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ “ಹೈಕೋರ್ಟ್‍ನ ತೀರ್ಪನ್ನು ಎಲ್ಲರೂ ಗೌರವಿಸಬೇಕು. ಯಾರಾದರು ವಿವಾದ ಸೃಷ್ಟಿಸಲು ಪ್ರಯತ್ನಿಸಿದರೆ ಕಠಿಣ ಕ್ರಮಕೈಗೊಳ್ಳಲಾಗುವುದು. ಎಲ್ಲರು ಶಾಂತಿ-ಸುವ್ಯವಸ್ಥೆಯನ್ನು ಕಾಪಾಡಬೇಕೆಂದು ಮನವಿ ಮಾಡಿದರು. ಇನ್ನು ತೀರ್ಪನ್ನು ಸ್ವಾಗತಿಸಿ ಟ್ವೀಟ್ ಮಾಡಿರುವ ಶಿಕ್ಷಣ ಸಚಿವ ನಾಗೇಶ್ ಅವರು, “ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ನಿಯಮ ವಿಚಾರವಾಗಿ ಕರ್ನಾಟಕ ಹೈಕೋರ್ಟ್‍ನ ಐತಿಹಾಸಿಕ ತೀರ್ಪನ್ನು ಸ್ವಾಗತಿಸುತ್ತೇನೆ. ಈ ನೆಲ, ಈ ನೆಲದ ಕಾನೂನು ಅಂತಿಮ” ಎಂದಿದ್ದಾರೆ.