India: ನಮ್ಮ ಭೂಮಿಯಲ್ಲಿ ಹಲವಾರು ಪ್ರಕೃತಿ ಸಹಜ ಎತ್ತರದ ಪರ್ವತಗಳನ್ನು(highest peaks in India) ಕಾಣಬಹುದು. ಭಾರತದಲ್ಲೂ ಕೂಡ ಇಂತಹ ಎತ್ತರದ ಗಿರಿಶಿಖರಗಳು ಕಂಡುಬರುತ್ತವೆ.
ಅಷ್ಟೆ ಅಲ್ಲದೇ, ಇಲ್ಲಿನ ಕೆಲ ಶಿಖರಗಳು ಜಗತ್ತಿನ ಮೊದಲ ಹತ್ತು ಎತ್ತರದ ಶಿಖರಗಳಲ್ಲೂ ತಮ್ಮ ಸ್ಥಾನವನ್ನು ಪಡೆದಿರುವುದು ನಮಗೆ ಹೆಮ್ಮೆಯ ಸಂಗತಿ.

ಕಂಚನಜುಂಗಾ: ಜಗತ್ತಿನ ಮೂರನೆಯ ಹಾಗು ಭಾರತದ ಮೊದಲ ಎತ್ತರದ ಶಿಖರ ಇದಾಗಿದೆ. ಹಿಮಾಲಯ ಪರ್ವತ ಶ್ರೇಣಿಯಲ್ಲಿ ಕಂಡುಬರುವ ಈ ಶಿಖರವು ಭಾರತದ ಸಿಕ್ಕಿಂ ಹಾಗು ನೇಪಾಳ ದೇಶದ ಗಡಿಯಲ್ಲಿ ನೆಲೆಸಿದೆ.
ಐದು ಪರ್ವತ ಶೃಂಗಗಳನ್ನು ಹೊಂದಿರುವ ಈ ಪರ್ವತದ ಅತ್ಯುನ್ನತ ಗಿರಿ ಶೃಂಗವು 8,586 ಮೀ (28,169 ಅಡಿಗಳು) ಎತ್ತರವನ್ನು ಹೊಂದಿದ್ದು ಸಿಕ್ಕಿಂ ಹಾಗು ದಾರ್ಜೀಲಿಂಗ್ ಪ್ರದೇಶಗಳ ಜನರಿಗೆ ಪವಿತ್ರವಾಗಿದೆ.
ನಂದಾದೇವಿ ಪರ್ವತ: ಉತ್ತರಾಖಂಡ ರಾಜ್ಯದ ಕುಮಾವೂನ್ ಪ್ರದೇಶದಲ್ಲಿದೆ ಭಾರತದ ಎರಡನೆಯ () ಅತಿ ಎತ್ತರದ ಈ ಶಿಖರ.
ಈ ಪರ್ವತದ ಕೆಳಗಿನ ಪ್ರದೇಶವು ಹಲವು ದೇವದಾರು ಮರಗಳಿಂದ ಸುತ್ತುವರೆದಿದ್ದು ಇದನ್ನು ನಂದಾದೇವಿ ರಾಷ್ಟ್ರೀಯ ಉದ್ಯಾನವನನ್ನಾಗಿ ಘೋಷಿಸಲಾಗಿದೆ.
ಈ ಪರ್ವತವು ಎರಡು ಗಿರಿ ಶೃಂಗಗಳನ್ನು ಹೊಂದಿದ್ದು ಇವುಗಳ ಮಧ್ಯದಲ್ಲಿನ ದೂರ 2 ಕಿ.ಮೀ. ಈ ಪರ್ವತವು ಸಮುದ್ರ ಮಟ್ಟದಿಂದ 25,643 ಅಡಿಗಳಷ್ಟು ಎತ್ತರವಿದ್ದು, ಇದರ ಒಟ್ಟಾರೆ ಎತ್ತರವು 10,299 ಅಡಿಗಳು.
ಇದನ್ನೂ ಓದಿ :https://vijayatimes.com/15-died-in-rewa/
ಹಾತಿ ಪರ್ವತ: ಉತ್ತರಾಖಂಡ್ ರಾಜ್ಯದ ಚಮೋಲಿ ಜಿಲ್ಲೆಯ ಗಡ್ವಾಲ್ ಹಿಮಾಲಯ ಪ್ರದೇಶದಲ್ಲಿದೆ ಈ ಭವ್ಯ ಪರ್ವತ. ಹಿಂದಿಯಲ್ಲಿ ಹಾತಿ ಎಂದರೆ ಆನೆಯಾಗಿದ್ದು ಇದರ ವಿಶಾಲ ಕಾಯವಾದ ಆಕಾರದಿಂದ ಈ ಹೆಸರು ಬಂದಿದೆ.
ಈ ಪರ್ವತದ ಮೇಲ್ಮೈ ಮೇಲೆ ಎರಡು ದೊಡ್ಡ ಬಂಡೆಗಳಿದ್ದು, ದಂತಕಥೆಯ ಪ್ರಕಾರ ಅವು ಕಾಗೆ ಹಾಗು ಹದ್ದುಗಳನ್ನು ಸೂಚಿಸುತ್ತವೆ. ಸಮುದ್ರ ಮಟ್ಟದಿಂದ ಇದರ ಎತ್ತರ 22,070 ಅಡಿಗಳು.
ಮುಳ್ಳಯ್ಯನಗಿರಿ: ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಮುಳ್ಳಯ್ಯನಗಿರಿ ಬೆಟ್ಟವನ್ನು ಕಾಣಬಹುದು. ಈ ಪರ್ವತವು ಕರ್ನಾಟಕದ ಅತ್ಯಂತ ಎತ್ತರದ ಪರ್ವತವಾಗಿದೆ. 6,330 ಅಡಿಗಳಷ್ಟು ಎತ್ತರವಿರುವ ಈ ಪರ್ವತವು ಪಶ್ಚಿಮ ಘಟ್ಟಗಳ ಉತ್ತಮ ನೋಟವನ್ನು ಕರುಣಿಸುತ್ತದೆ.

ಗುರುಶಿಖರ: ರಾಜಸ್ಥಾನ ರಾಜ್ಯದ ಮೌಂಟ್ ಅಬು ಗಿರಿಧಾಮದಿಂದ 15 ಕಿ.ಮೀ ದೂರದಲ್ಲಿ ಈ ಪರ್ವತವನ್ನು ಕಾಣಬಹುದು.
ಅರಾವಳಿ ಪರ್ವತ ಶ್ರೇಣಿಯ ಅತಿ ಎತ್ತರದ ಶೃಂಗವಾಗಿರುವ ಈ ಪರ್ವತದ ಎತ್ತರ (ಸಮುದ್ರ ಮಟ್ಟದಿಂದ) 5676 ಅಡಿಗಳು.
ಈ ಪರ್ವತದ ತುದಿಯವರೆಗೂ ಚಲಿಸಲು ರಸ್ತೆಯಿದ್ದು ತುದಿಯಲ್ಲಿ ಗುರು ದತ್ತಾತ್ರೇಯರಿಗೆ ಸಮರ್ಪಿತವಾದ ದೇವಾಲಯವೊಂದನ್ನು ಕಾಣಬಹುದು.
ಚಂದ್ರಶಿಲಾ: ಉತ್ತರಾಖಂಡ್ ರಾಜ್ಯದ (Uttarakhand State) ರುದ್ರಪ್ರಯಾಗ್ ಜಿಲ್ಲೆಯ ತುಂಗನಾಥ್ ಎಂಬಲ್ಲಿ ಈ ಪರ್ವತವಿದೆ.
ಸಮುದ್ರ ಮಟ್ಟದಿಂದ 4000 ಮೀ ಗಳಷ್ಟು ಎತ್ತರದಲ್ಲಿ ನೆಲೆಸಿರುವ ಈ ಪರ್ವತದ ಶೃಂಗದಿಂದ ನಂದಾ ದೇವಿ ಪರ್ವತ, ಚೌಖಂಬಾ, ಬಂದರ್ ಪೂಂಚ್ ಪರ್ವತಗಳ ಅತ್ಯುತ್ತಮ ನೋಟಗಳನ್ನು ಕಾಣಬಹುದು.
ದಂತಕಥೆಯ ಪ್ರಕಾರ, ಶ್ರೀರಾಮನು ರಾವಣನನ್ನು ಸಂಹರಿಸಿದ ನಂತರ ಇಲ್ಲಿ ಧ್ಯಾನಕ್ಕೆ ಕುಳಿತಿದ್ದನಂತೆ. ಮತ್ತೊಂದು ಕಥೆಯ ಪ್ರಕಾರ ಚಂದ್ರನು ಇಲ್ಲಿ ತಪಸ್ಸು ಆಚರಿಸಿದ್ದನಂತೆ. ಇದೊಂದು ಸುಂದರ ಅನುಭವ ನೀಡುವ ಚಾರಣ ತಾಣವೂ ಆಗಿದೆ.
- ಪವಿತ್ರ