Lucknow : 2022 ರಲ್ಲಿ ಈ ಒಂದೇ ರಾಜ್ಯದಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ 22,595 ಸಾವು ಸಂಭವಿಸಿದೆ. ಆ ಅಪಾಯಕಾರಿ ರಾಜ್ಯ ಯಾವುದು ಗೊತ್ತಾ? ಉತ್ತರ ಪ್ರದೇಶ(highest road accidents state). ಹೌದು ಅಧ್ಯಯನದ ಪ್ರಕಾರ 2022 ರಲ್ಲಿ ಸಂಭವಿಸಿರುವ ರಸ್ತೆ ಅಪಘಾತಗಳಲ್ಲಿ ಒಟ್ಟು 22,595 ಸಾವುಗಳು ದಾಖಲಾಗಿವೆ.
ಇದು 2021 ರಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿನ ಸಾವಿನ ಸಂಖ್ಯೆಗಿಂತ 1.3 ರಷ್ಟು ಹೆಚ್ಚಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ .
ಉತ್ತರಪ್ರದೇಶದ ಸಾರಿಗೆ ಇಲಾಖೆ ಪ್ರಕಟಿಸಿರುವ ಈ ವರದಿಯಲ್ಲಿ ಕಳೆದ ವರ್ಷ ರಸ್ತೆ ಅಪಘಾತದಲ್ಲಿ ಸಂಭವಿಸಿದ ಸಾವಿನ ಸಂಖ್ಯೆಯನ್ನು ಬಹಿರಂಗಪಡಿಸಲಾಗಿದ್ದು, ವಿಪರ್ಯಾಸವೆಂದರೆ,
ರಾಜ್ಯ ಸರ್ಕಾರವು ಜನವರಿ 4 ರಿಂದ ಫೆಬ್ರವರಿ 5 ರವರೆಗೆ ಒಂದು ತಿಂಗಳ ಅವಧಿಯ ರಸ್ತೆ ಸುರಕ್ಷತಾ ಅಭಿಯಾನವನ್ನು ನಡೆಸುವ ಮುನ್ನ ಈ ಡೇಟಾ(Data) ಹೊರಬಿದ್ದಿದೆ.
ಇದನ್ನೂ ಓದಿ: https://vijayatimes.com/man-dragged-old-man/
ರಸ್ತೆಯ ವ್ಯವಸ್ಥೆ, ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ತೆಗೆದುಕೊಳ್ಳುತ್ತಿರುವ ಸೂಕ್ತ ಕ್ರಮಗಳ ಬಗ್ಗೆ ಸರ್ಕಾರದ ಮಹತ್ವದ ಹೇಳಿಕೆಗಳು ಕೊಂಚ ವಿರುದ್ಧವಾಗಿದ್ದು,
ಅಪಘಾತಗಳು ಕಳೆದ ವರ್ಷದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸಂಭವಿಸುತ್ತಿದೆ ಏಕೆ? ಎಂದು ಜನಸಾಮಾನ್ಯರು ಪ್ರಶ್ನಿಸಿದ್ದಾರೆ.
ಈ ಮಧ್ಯೆ ಪ್ರಕಟವಾದ ಇತ್ತೀಚಿನ ವರದಿ ಕಂಡು ಜನಸಾಮಾನ್ಯರು ತೀವ್ರ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಸಾವಿನ ಸಂಖ್ಯೆಯಲ್ಲಿನ ಹೆಚ್ಚಳವು ಇದಕ್ಕೆ ಕಾರಣವಾಗಿದೆ! ವಾಸ್ತವವಾಗಿ, ಉತ್ತರ ಪ್ರದೇಶವು ಕೆಲವು ವರ್ಷಗಳಿಂದ ದೇಶದಲ್ಲಿ ಅತಿ ಹೆಚ್ಚು ರಸ್ತೆ ಅಪಘಾತ ಸಾವುಗಳನ್ನು ದಾಖಲಿಸುತ್ತಿದೆ.
ತಮಿಳುನಾಡು(Tamilnadu), ಮಹಾರಾಷ್ಟ್ರ(Maharashtra) ಮತ್ತು ಮಧ್ಯಪ್ರದೇಶದಂತಹ(Madhya padesh) ರಾಜ್ಯಗಳಲ್ಲಿ ಉತ್ತರ ಪ್ರದೇಶಕ್ಕಿಂತ ಹೆಚ್ಚು ರಸ್ತೆ ಅಪಘಾತಗಳು(highest road accidents state) ಸಂಭವಿಸಿದರೂ ಕೂಡ ಉತ್ತರಪ್ರದೇಶ ಮುನ್ನೆಲೆಗೆ ಬಂದಿದೆ!
ಹಲವಾರು ಪ್ರಯತ್ನಗಳ ಹೊರತಾಗಿಯೂ ಹೆಚ್ಚುತ್ತಿರುವ ರಸ್ತೆ ಅಪಘಾತಗಳು ಖಂಡಿತವಾಗಿಯೂ ನಮಗೆಲ್ಲರಿಗೂ ಗಂಭೀರವಾದ ವಿಷಯವಾಗಿದೆ.
ಈಗ, ನಿರ್ಣಾಯಕ ಸಮಯದೊಳಗೆ, ವಿಶೇಷವಾಗಿ ಹೆದ್ದಾರಿಗಳು ಮತ್ತು ಎಕ್ಸ್ಪ್ರೆಸ್ವೇಗಳಲ್ಲಿ(Express way) ಅಪಘಾತಕ್ಕೆ ಒಳಗಾಗುವವರಿಗೆ ಉತ್ತಮ ಮತ್ತು ತ್ವರಿತ ತುರ್ತು ಆರೈಕೆಯನ್ನು
ಒದಗಿಸಲು ನಾವು ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ರಸ್ತೆ ಸುರಕ್ಷತೆಯ ಉಪ ಆಯುಕ್ತ ಪಿ.ಎಸ್.ಸತ್ಯಾರ್ಥಿ(PS Sahyarthi) ಹೇಳಿದ್ದಾರೆ.
ಇದನ್ನೂ ಓದಿ: https://vijayatimes.com/bjp-tweets-to-congress/
ಸಾರಿಗೆ ಇಲಾಖೆ ವರದಿ ಪ್ರಕಾರ, ಉತ್ತರಪ್ರದೇಶದಲ್ಲಿ ಒಟ್ಟು 41,746 ರಸ್ತೆ ಅಪಘಾತಗಳು ಸಂಭವಿಸಿವೆ. ಜನವರಿ ಮತ್ತು ಡಿಸೆಂಬರ್ 2022ರ ನಡುವೆ, 22,595 ಜನರು ಸಾವನ್ನಪ್ಪಿದ್ದಾರೆ ಮತ್ತು 28,541 ಜನರು ಗಾಯಗೊಂಡಿದ್ದಾರೆ.
ಕಾನ್ಪುರ್(Kanpur) ರಾಜ್ಯದಲ್ಲಿ ಅತಿ ಹೆಚ್ಚು 640 ರಸ್ತೆ ಅಪಘಾತ ಸಾವುಗಳನ್ನು ದಾಖಲಿಸಿದೆ, ತದನಂತರ ಪ್ರಯಾಗರಾಜ್ (603), ಲಕ್ನೋ (587), ಆಗ್ರಾ (548), ಬುಲಂದ್ಶಹರ್ (542), ಗೋರಖ್ಪುರ (512), ಮತ್ತು ಉನ್ನಾವ್ (510) . ರಸ್ತೆ ಅಪಘಾತಗಳಲ್ಲಿ ಹೆಚ್ಚಿನ ಬೆಳವಣಿಗೆಯನ್ನು ಬಲರಾಂಪುರ್ (63.4%), ಡಿಯೋರಿಯಾ (61.2%), ಲಕ್ನೋ (54.1%), ಮತ್ತು ಪಿಲಿಭಿತ್ (49%) ದಾಖಲಿಸಿದೆ.