download app

FOLLOW US ON >

Saturday, May 28, 2022
Breaking News
ತೃತೀಯ ರಂಗಕ್ಕೆ ದೇವೇಗೌಡರ ಮಾರ್ಗದರ್ಶನ ; ಕೆಸಿಆರ್ ತಂತ್ರ!ಹಳೇ ಪಠ್ಯಪುಸ್ತಕವನ್ನೇ ಮುಂದುವರೆಸಲು ಕರವೇ ನಾರಾಯಣಗೌಡ ಆಗ್ರಹ!ಹಿಂದಿನ ಸರ್ಕಾರಗಳು ತಂತ್ರಜ್ಞಾನವನ್ನು ಬಡವರ ವಿರೋಧಿ ಎಂದು ಬಿಂಬಿಸಿದ್ದವು : ಮೋದಿ!ಬಿಜೆಪಿಗೆ ಡಿಕೆಶಿ ಅವರಂತ ಕಳ್ಳರ ಅವಶ್ಯಕತೆ ಇಲ್ಲ : ಯತ್ನಾಳ್!ಇಂದಿರಾ ಕ್ಯಾಂಟೀನ್ ನಿರ್ವಹಣೆ ಇಸ್ಕಾನ್‍ಗೆ ವಹಿಸಲು ಚಿಂತನೆ!ಮೋದಿ ಮೂಲಗುರಿ ಪ್ರಾದೇಶಿಕ ಪಕ್ಷಗಳ ಮೂಲೋತ್ಪಾಟನೆ : ಹೆಚ್.ಡಿ ಕುಮಾರಸ್ವಾಮಿ!ಚೆನ್ನಪಟ್ಟಣದಲ್ಲಿ ಡಿಕೆಶಿ ವಿರುದ್ದವೇ ಬಂಡಾಯ ಸಾರಿದ ಭಾವ ಶರತ್‍ಚಂದ್ರ!ಸಂವಿಧಾನಕ್ಕೆ ಶಿರಸಾಷ್ಟಾಂಗ ನಮಸ್ಕಾರ, ಇತ್ತ ‘ಆಪರೇಷನ್ ಕಮಲ’ : ಮೋದಿಗೆ ಹೆಚ್.ಡಿ.ಕೆ ಟಾಂಗ್!ಆರ್‍ಎಸ್‍ಎಸ್‍ನವರು ಮೂಲ ಭಾರತೀಯರಲ್ಲ : ಸಿದ್ದರಾಮಯ್ಯ!ದಾಳಿ ವೇಳೆ ನನ್ನ ಗೌಪ್ಯ ದಾಖಲೆಗಳನ್ನು ವಶಪಡಿಸಿಕೊಂಡಿದೆ ಸಿಬಿಐ : ಕಾರ್ತಿ ಚಿದಂಬರಂ!
English English Kannada Kannada

ಹಿಜಾಬ್‌ ಮೂಲಭೂತ ಹಕ್ಕಾ ? ಸಿಜೆ ಪ್ರಶ್ನೆ

ಹೈಕೋರ್ಟ್​ ಹಿಜಾಬ್ ವಿಚಾರಣೆಯನ್ನು ಇಂದು 2.30ಕ್ಕೆ ನಡೆಯಲಿದ್ದು, ಇಂದು ವಾದಮಂಡನೆ ಮುಕ್ತಾಯಗೊಳಿಸಬೇಕು ಮತ್ತು ಎರಡು ಮೂರು ದಿನಗಳಲ್ಲಿ ಲಿಖಿತ ವಾದಮಂಡನೆ ಸಲ್ಲಿಸಿವಂತೆ ವಾದ ಪ್ರತಿವಾದಿಗಳಿಗೆ ಹೈಕೋರ್ಟ್ ಸೂಚನೆ ನೀಡಿದೆ.ಅರ್ಜಿದಾರರ ಪರ ದೇವದತ್ ಕಾಮತ್ ವಾದ ಮಂಡನೆ ಮಾಡಿದ್ದು, ಹಿಜಾಬ್ ಧರಿಸಬೇಕೆಂಬುದು ವಿದ್ಯಾರ್ಥಿನಿಯರ ನಂಬಿಕೆಯಾಗಿದೆ.
High Court

ಹಿಜಾಬ್‌ ವಿಚಾರವಾಗಿ ಇಗಾಗಲೇ ಈ ವಿವಾದ ಹೈಕೋರ್ಟ್‌ ಮೆಟ್ಟಿಲೇರಿದ್ದು, ಈ ಸಂಬಂಧ ಹಿಜಾಬ್‌ ಮೂಲಭೂತ ಹಕ್ಕೇಂದು ಸಾಬೀತು ಪಡಿಸುವಂತೆ ಪ್ರತಿವಾದಿಗಳಿಗೆ ಸಿಜೆ ಸೂಚಿಸಿದ್ದಾರೆ.

ಸಮವಸ್ತ್ರ ಸಂಬಂಧ ನಡೆಯುತ್ತಿರುವ ಕಾನೂನು ಸಮರ ಇನ್ನೂ ಮುಂದುವರಿದಿದೆ. ತರಗತಿಗಳಲ್ಲಿ ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಅತ್ಯಗತ್ಯ ಆಚರಣೆಯೇ ಎಂಬ ಸಾಂವಿಧಾನಿಕ ಪ್ರಶ್ನೆಯ ಬಗ್ಗೆ 10 ನೇ ದಿನವಾದ ಇಂದೂ ಕೂಡ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಸಲಾಯಿತು. ಸರ್ಕಾರದ ಪರವಾಗಿ ಎಜಿ ಪ್ರಭುಲಿಂಗ ನಾವದಗಿ ವಾದ ಮಂಡನೆ ಮಾಡಿದರು. ಹಿಜಾಬ್ ಅರ್ಜಿ ವಿಚಾರವಾಗಿ ವಾದ ಪ್ರತಿವಾದವನ್ನು ಆಲಿಸಿದ ಹೈಕೋರ್ಟ್​ ವಿಚಾರಣೆಯನ್ನು ನಾಳೆ 2:30ಕ್ಕೆ ಮುಂದೂಡಿದ್ದಾರೆ. ಜೊತೆಗೆ ನಾಳೆ ವಾದ ಮಂಡನೆ ಮುಕ್ತಾಯಗೊಳಿಸಬೇಕು. ಎರಡು ಮೂರು ದಿನಗಳಲ್ಲಿ ಲಿಖಿತ ವಾದಮಂಡನೆ ಸಲ್ಲಿಸಿವಂತೆ ವಾದ ಪ್ರತಿವಾದಿಗಳಿಗೆ ಹೈಕೋರ್ಟ್ ಸೂಚನೆ ನೀಡಿದೆ.

ಹೈಕೋರ್ಟ್​ ಹಿಜಾಬ್ ವಿಚಾರಣೆಯನ್ನು ಇಂದು 2.30ಕ್ಕೆ ನಡೆಯಲಿದ್ದು, ಇಂದು ವಾದಮಂಡನೆ ಮುಕ್ತಾಯಗೊಳಿಸಬೇಕು ಮತ್ತು ಎರಡು ಮೂರು ದಿನಗಳಲ್ಲಿ ಲಿಖಿತ ವಾದಮಂಡನೆ ಸಲ್ಲಿಸಿವಂತೆ ವಾದ ಪ್ರತಿವಾದಿಗಳಿಗೆ ಹೈಕೋರ್ಟ್ ಸೂಚನೆ ನೀಡಿದೆ.ಅರ್ಜಿದಾರರ ಪರ ದೇವದತ್ ಕಾಮತ್ ವಾದ ಮಂಡನೆ ಮಾಡಿದ್ದು, ಹಿಜಾಬ್ ಧರಿಸಬೇಕೆಂಬುದು ವಿದ್ಯಾರ್ಥಿನಿಯರ ನಂಬಿಕೆಯಾಗಿದೆ. ಇದನ್ನು ನಿಯಂತ್ರಿಸಲು ಕಾನೂನಿನ ಬೆಂಬಲ ಎಲ್ಲಿದೆ. ಸಂವಿಧಾನ ರಚನಾ ಸಭೆಯಲ್ಲಿ ಧಾರ್ಮಿಕ ಗುರುತು ನಿರ್ಬಂಧಿಸುವ ಪ್ರಸ್ತಾಪವಿತ್ತು. ಆದರೆ ಸಂವಿಧಾನ ರಚನಕಾರರು ಇದಕ್ಕೆ ಸಮ್ಮತಿಸಲಿಲ್ಲ. ಸರ್ಕಾರ ಅದನ್ನು ಈಗ ಹೇರಲು ಯತ್ನಿಸುತ್ತಿದೆ ಎಂದರು.

ಶಿಕ್ಷಣ ಕಾಯ್ದೆಯ ಅಧಿಕಾರವನ್ನು ಸಿಡಿಸಿಗೆ ನೀಡಿರುವುದು ಸರಿಯಲ್ಲ ಎಂದು ದೇವದತ್ ವಾದ ಮಾಡಿದ್ದು, ಕಾಲೇಜಿನ ಸಮವಸ್ತ್ರ ನೀತಿಯಲ್ಲಿ ಹಿಜಾಬ್​ಗೆ ಅವಕಾಶ ನೀಡಿಲ್ಲ. ಈಗ ಹಿಜಾಬ್ ಮೂಲಭೂತ ಹಕ್ಕೆಂದು ನೀವು ಸಾಬೀತುಮಾಡಬೇಕು ಎಂದು ಸಿಜೆ ಮರುಪ್ರಶ್ನಿಸಿದ್ದಾರೆ. ಇಷ್ಟು ದೊಡ್ಡ ರಾಷ್ಟ್ರಕ್ಕೆ ಹಿಜಾಬ್ ಸಣ್ಣ ವಿಚಾರ. ಹಿಜಾಬ್ ಧರಿಸಲು ಅನುಮತಿ ನೀಡಬೇಕು. ಮಹಿಳೆಯರಿಗೆ ತಲೆ, ಮುಖ, ಎದೆ ಮುಚ್ಚುವುದು ಅತ್ಯಗತ್ಯ. ನೈತಿಕತೆ ಕಾಪಾಡಲು ಇದು ಅಗತ್ಯವಾಗಿದೆ. ಭಾರತ ಹಿಂದೂ ರಾಷ್ಟ್ರವಲ್ಲ, ಮುಸ್ಲಿಂ ರಿಪಬ್ಲಿಕ್ ಕೂಡಾ ಅಲ್ಲ. ಇದು ಜಾತ್ಯಾತೀತ ರಾಷ್ಟ್ರವಾಗಿದೆ ಎಂದು ವಿದ್ಯಾರ್ಥಿನಿಯರ ಪರ ಎ.ಎಂ ಧರ್ ವಾದ ಮಂಡಿಸಿದರು.

ಅರ್ಜಿದಾರರ ಪರ ಹಿರಿಯ ವಕೀಲೆ ಕೀರ್ತಿ ಸಿಂಗ್ ವಾದ ಮಾಡಿದ್ದು, ಹಿಜಾಬ್ ಧರಿಸುವುದು ಮೂಲಭೂತ ಹಕ್ಕಾಗಿದೆ. ವಿದ್ಯಾರ್ಥಿನಿಯರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಬಾರದು ಎಂದಿದ್ದಾರೆ. ಈಗಾಗಲೇ ವಿದ್ಯಾರ್ಥಿನಿಯರ ಪರ ವಾದಮಂಡನೆ ಆಗಿದೆ. ದೇಶ, ವಿದೇಶಗಳ ತೀರ್ಪುಗಳನ್ನು ಕೋರ್ಟ್ ಗೆ ನೀಡಿದ್ದಾರೆ. ಈಗ ಮತ್ತೆ ಇತರರ ವಾದಮಂಡನೆ ಕೇಳುವ ಅಗತ್ಯವಿಲ್ಲ ಎಂದು ಹೈಕೋರ್ಟ್ ನ್ಯಾ.ಕೃಷ್ಣ ದೀಕ್ಷಿತ್ ಅಭಿಪ್ರಾಯ ವ್ಯಕ್ತಪಡಿಸಿದರು.

ಉಪನ್ಯಾಸಕರ ಪರ ವಕೀಲ ಗುರು ಕೃಷ್ಣಕುಮಾರ್ ವಾದ ಮಂಡನೆ ಮಾಡಿದ್ದು, ವಿದ್ಯಾರ್ಥಿಗಳಿಗೆ ತಾರತಮ್ಯರಹಿತ ಶಿಕ್ಷಣಕ್ಕಾಗಿ ಸಮವಸ್ತ್ರ ಮಾಡಲಾಗಿದೆ. ಸಮವಸ್ತ್ರ ನಿಯಮವನ್ನು ಸಂವಿಧಾನದ 25(1) ಆಧರಿಸಿ ಪ್ರಶ್ನಿಸಬಾರದು. ಜಾತಿ, ಧರ್ಮ, ಅಂತಸ್ತುಗಳ ತಾರತಮ್ಯ ಇರಬಾರದು ಎಂದರು. ಹಿಜಾಬ್ ತಂಟೆಗೆ ಬಂದ್ರೆ ತುಂಡು ತುಂಡು ಮಾಡ್ತೇವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಕೈ ಮುಖಂಡ ಮುಕ್ರಂ ಖಾನ್ ಬಂಧನಕ್ಕೆ ಆಗ್ರಹಿಸಿ ಕಲಬುರಗಿ ನಗರದ ಎಸ್ಪಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಮುಕ್ರಂ ಖಾನ್ ವಿರುದ್ಧ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಜಾಬ್​ಗೆ ಅವಕಾಶ ಇಲ್ಲ ಅಂದರೆ ಟರ್ಬನ್ ಯಾಕೆ ಎಂದು ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ಆಡಳಿತ ಮಂಡಳಿಗೆ ವಿದ್ಯಾರ್ಥಿನಿಯರು ಪ್ರಶ್ನೆ ಮಾಡಿದ್ದಾರೆ. ಕೋರ್ಟ್ ಸೂಚನೆಯಂತೆ ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ವಸ್ತ್ರಸಂಹಿತೆ ಜಾರಿ ಮಾಡಲಾಗಿದೆ.

Share News on

Share on facebook
Facebook
Share on google
Google+
Share on twitter
Twitter
Share on linkedin
LinkedIn
Share on whatsapp
WhatsApp
error: Content is protected !!

Submit Your Article