Job News : ಹಿಂದುಸ್ತಾನ್ ಕಾಪರ್ ಲಿಮಿಟೆಡ್ (ಹೆಚ್‌ಸಿಎಲ್)(HCL) ಸಂಸ್ಥೆಯು ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ(Hindustan copper limited jobs), ಐಟಿಐ (ITI)
ಪಾಸಾದವರನ್ನು ನೇಮಿಸಿಕೊಳ್ಳಲು ಪ್ರಕಟಣೆ ಹೊರಡಿಸಿದೆ. ಈ ಹುದ್ದೆಗಳಿಗೆ ನಿಗದಿತ ಅವಧಿಯವರೆಗೆ ತರಬೇತಿ ನೀಡಲಾಗುತ್ತದೆ ಮತ್ತು ಈ ಹುದ್ದೆ ತಾತ್ಕಾಲಿಕವಾಗಿದ್ದು, ಜತೆಗೆ ಮಾಸಿಕ ಸ್ಟೈಫಂಡ್
(Stay Fund) ಕೂಡ ನೀಡಲಾಗುತ್ತದೆ. 184 ಟ್ರೇಡ್ ಅಪ್ರೆಂಟಿಸ್ (Apprentice) ಹುದ್ದೆಗಳ ನೇಮಕಾತಿಗೆ ಜಾಹೀರಾತು ಹೊರಡಿಸಿದೆ.ಆಗಸ್ಟ್ 19 ರಂದು ಈ ಹುದ್ದೆಗಳಲ್ಲಿ
ಆಸಕ್ತಿ ಇರುವವರು ಅರ್ಜಿ (Hindustan copper limited jobs) ಸಲ್ಲಿಸಬಹುದು.

ಹುದ್ದೆಗಳ ಹೆಸರು : ಟ್ರೇಡ್ ಅಪ್ರೆಂಟಿಸ್
ನೇಮಕಾತಿ ಪ್ರಾಧಿಕಾರ : ಹಿಂದುಸ್ತಾನ್ ಕಾಪರ್ ಲಿಮಿಟೆಡ್
ಹುದ್ದೆಗಳ ಸಂಖ್ಯೆ : 184
ಪ್ರಮುಖ ದಿನಾಂಕಗಳು
ಆನ್‌ಲೈನ್ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 06-07-2023
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 05-08-2023
ಶಾರ್ಟ್ ಲಿಸ್ಟ್ ಆದವರ ಪಟ್ಟಿ ಬಿಡುಗಡೆ ದಿನಾಂಕ: 19-08-2023
ವಿದ್ಯಾರ್ಹತೆ : ಮೆಟ್ರಿಕ್ಯೂಲೇಷನ್ ಪಾಸ್ ಜತೆಗೆ ಐಟಿಐ ಪಾಸ್ ಆಗಿರುವ ಸರ್ಟಿಫಿಕೇಟ್‌ಗಳನ್ನು ಹೊಂದಿರಬೇಕು
ವಯಸ್ಸಿನ ಅರ್ಹತೆಗಳು
ಕನಿಷ್ಠ 18 ವರ್ಷ ಅರ್ಜಿ ಸಲ್ಲಿಸಲು ಆಗಿರಬೇಕು ಮತ್ತು ಗರಿಷ್ಠ 25 ವರ್ಷ ಮೀರಿರಬಾರದು.
ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ 3 ವರ್ಷ ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

Apply Online
Hindustan Copper Limited Website
ಈ ಹುದ್ದೆಗಳನ್ನು ಮೇಟ್ (ಮೈನ್ಸ್), ಫಿಟ್ಟರ್,ಬ್ಲಾಸ್ಟರ್, ಡೀಸೆಲ್ ಮೆಕ್ಯಾನಿಕ್, ಟರ್ನರ್, ವೆಲ್ಡರ್,ಕಂಪ್ಯೂಟರ್ ಆಪರೇಟರ್ ಅಂಡ್ ಪ್ರೋಗ್ರಾಮಿಂಗ್ ಅಸಿಸ್ಟಂಟ್, ಇಲೆಕ್ಟ್ರೀಷಿಯನ್, ಸರ್ವೇಯರ್,
ಡ್ರಾಟ್ಸ್‌ಮನ್,ಹಾರ್ಟಿಕಲ್ಚರ್ ಅಸಿಸ್ಟಂಟ್, ಇನ್‌ಸ್ಟ್ರುಮೆಂಟ್ ಮೆಕ್ಯಾನಿಕ್ಸ್, ಕಾರ್ಪೆಂಟರ್, ಮೇಷನ್ ಟ್ರೇಡ್‌ಗಳಲ್ಲಿ ನೇಮಕ ಮಾಡಲಾಗುತ್ತದೆ.
ಇದನ್ನೂ ಓದಿ : ಪಿಡಿಒ ಹುದ್ದೆಗೆ ಅರ್ಜಿ ಅಹ್ವಾನ : ವೇತನ, ಅರ್ಹತೆ, ಅರ್ಜಿ ವಿಧಾನ, ಆಯ್ಕೆ ವಿಧಾನಗಳ ಬಗ್ಗೆ ಇಲ್ಲಿದೆ ಮಾಹಿತಿ
3 ವರ್ಷದ ಅವಧಿಗೆ ಮೇಟ್ಸ್ (ಮೈನ್ಸ್) ಟ್ರೇಡ್ ಹುದ್ದೆಗಳನ್ನು ಮತ್ತು ಒಂದು ವರ್ಷದ ಅವಧಿಗೆ ಇತರೆ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
ಆಯ್ಕೆ ವಿಧಾನ : ಅಂಕಗಳ ಆಧಾರದಲ್ಲಿ ವಿದ್ಯಾರ್ಹತೆ ಶಾರ್ಟ್ ಲಿಸ್ಟ್ ಮಾಡಿ, ಇಂಟರ್‌ವ್ಯೂ ನಡೆಸಿ ಆಯ್ಕೆ ಮಾಡಲಾಗುತ್ತದೆ.
ರಶ್ಮಿತಾ ಅನೀಶ್