ಹಲವಾರು ವಿಷಯಗಳಲ್ಲಿ ಹಿಂದುಳಿದಿರುವ ರಾಜ್ಯ ಬಿಹಾರ(Bihar). ಬಿಹಾರದ ರಾಜಧಾನಿ ಪಾಟ್ನಾ(Patna), ಪುರಾತನ ಕಾಲದಲ್ಲಿ ಪಾಟಲೀಪುತ್ರ(Pataliputra) ಎಂದು ಕರೆಯಲ್ಪಡುತ್ತಿದ್ದ ಪ್ರಮುಖ ಪ್ರದೇಶ ಇದು
ಭಾರತದ ಇತಿಹಾಸದಲ್ಲಿ ಪಾಟಲೀಪುತ್ರಕ್ಕೆ ಮಹತ್ವದ ಸ್ಥಾನವಿದೆ. ಇಂತಹ ನೆಲದಲ್ಲಿ ಪ್ರಮುಖ ಬಾವಿಯೊಂದಿದೆ. ಈ ಬಾವಿ ಇಂದಿಗೂ ಅಚ್ಚರಿಗೆ ಕಾರಣವಾಗಿದೆ.
ಆ ಬಾವಿಯೇ ಅಗಂ ಕುವಾ(Agam Kuva), ಅಗಂ ಅಂದರೆ ಪಾತಾಳ. ಹಾಗಾಗಿ ಈ ಬಾವಿಯ ಹೆಸರೂ ಅಗಂ ಕುವಾ! ಹಿಂದಿನ ಕಾಲದಲ್ಲಿ ಬಹಳ ಮೇಲುಸ್ತರದಲ್ಲಿಯೇ ಸುಲಭವಾಗಿ ನೀರು ಸಿಗುತ್ತಿತ್ತು.

ಇಷ್ಟು ಸುಲಭವಾಗಿ ನೀರು ಸಿಗುತ್ತಿದ್ದ ಸಂದರ್ಭದಲ್ಲಿ ಇಷ್ಟೊಂದು ಆಳಕ್ಕೆ ಬಾವಿ ಯಾಕೆ ನಿರ್ಮಿಸಿದ್ದರು ಎಂಬ ಪ್ರಶ್ನೆಯೂ ಜನರಲ್ಲಿ ಇದೆ. ಇನ್ನೊಂದು ಅಚ್ಚರಿಯೆಂದರೆ, ಸ್ರಾಮಾಟ್ ಅಶೋಕನ ಕಾಲದಿಂದಲೂ ಇರುವ ಈ ಬಾವಿಯ ನೀರು ಇಂದಿಗೂ ಬತ್ತಿ ಹೋಗಿಲ್ಲ.
ರಣ ಬಿಸಿಲು, ಅದೆಂಥ ಬರಗಾಲವಿದ್ದರೂ ಈ ಬಾವಿ ಬತ್ತಿ ಹೋದ ಉದಾಹರಣೆಯೇ ಇಲ್ಲ! ಇನ್ನು, ಬಾವಿಗಿಂತ ಸ್ವಲ್ಪ ದೂರದಲ್ಲಿ ಅಶೋಕನ ಅರಮನೆಯಿತ್ತು. ಸದ್ಯ ಜನರು ನಂಬಿರುವ ಪ್ರಕಾರ, ಈ ಅರಮನೆಗೂ ಬಾವಿಗೂ ಸುರಂಗ ಇಲ್ಲ ಮಾರ್ಗದ ಮೂಲಕ ಸಂಪರ್ಕವಿತ್ತಂತೆ.
ಈ ಸುರಂಗ ಮಾರ್ಗದ ಮೂಲಕ ಬಾವಿಯೊಳಗಿನ ಒಂದು ಕೋಣೆಯಲ್ಲಿ ಅಶೋಕನ ಎಲ್ಲಾ ಖಜಾನೆಗಳನ್ನು ಬಚ್ಚಿಡಲಾಗಿತ್ತಂತೆ.
ಈಗಲೂ ಅಶೋಕನ ಖಜಾನೆ ಇಲ್ಲಿದೆ ಎಂಬ ನಂಬಿಕೆಯಿದೆ. ಈ ಬಾವಿ ಎಷ್ಟು ಆಳ ಇದೆ ಎಂಬುದು ಇದುವರೆಗೆ ಯಾರಿಗೂ ಗೊತ್ತಿಲ್ಲ. ಈ ಬಾವಿಯ ಆಳ ತಿಳಿಯುವ ಪ್ರಯತ್ನ ಮೂರು ಬಾರಿ ವಿಫಲವಾಗಿದೆ ಎಂಬುದು ಇತಿಹಾಸದಲ್ಲಿ ದಾಖಲಾದ ಸತ್ಯ.
ಆದರೆ, ಈ ಬಾವಿಯಲ್ಲಿ ಸದಾಕಾಲ ನೀರು ತುಂಬಿರುವುದು ಹೇಗೆ? ಅದೆಷ್ಟೋ ಕಾಲದಿಂದಲೂ ನೀರಿನ ಮಟ್ಟ ಇಷ್ಟೇ ಇರುವುದು ಹೇಗೆ? ಈ ಪ್ರಶ್ನೆ ಆಗಲಿಂದಲೂ ಪ್ರಶ್ನೆಯಾಗಿಯೇ ಉಳಿದಿದೆ. ಸದ್ಯ ಈ ಜಾಗ ಪವಿತ್ರ ತಾಣವಾಗಿದೆ.
https://vijayatimes.com/mamata-banerjee-making-pachka-video-viral/
ಇದೇ ಆವರಣದಲ್ಲಿ ದೇವಿ ದೇವಸ್ಥಾನವಿದ್ದು, ಇಲ್ಲಿಗೆ ಬರುವ ಅದೆಷ್ಟೋ ಭಕ್ತರು ಈ ಬಾವಿಗೂ ಪೂಜೆ ಸಲ್ಲಿಸುತ್ತಿದ್ದಾರೆ.

ಈ ಬಾವಿಯ ನೀರಿನಲ್ಲಿ ವಿವಿಧ ರೋಗಗಳನ್ನು ಗುಣಪಡಿಸುವ ಶಕ್ತಿ ಇದೆ ಎಂಬ ನಂಬಿಕೆ ಭಕ್ತರದ್ದು. ಇಲ್ಲಿ ಅಶೋಕನ ಖಜಾನೆ ಇಲ್ಲಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಬತ್ತಿಯೇ ಹೋಗದೇ ಇರುವಂತಹ ಶಕ್ತಿ ಈ ಬಾವಿಗೆ ಬಂದಿದ್ದು ಹೇಗೆ?
ಈ ಬಾವಿ ನಿಜವಾಗಿಯೂ ಬೇರೆ ಎಲ್ಲಾದರೂ ಸಂಪರ್ಕ ಹೊಂದಿದೆಯಾ? ಇದರ ಆಳ ಎಷ್ಟು? ಇಂತಹ ಪ್ರಶ್ನೆಗಳಿಗೆ ಉತ್ತರ ಇಂದಿಗೂ ನಿಗೂಢವಾಗಿಯೇ ಉಳಿದಿದೆ.
- ಪವಿತ್ರ