Combodia : ಕಾಂಬೋಡಿಯಾದಲ್ಲಿರುವ (Combodia) ಈ ಅಪೂರ್ವ ದೇಗುಲದಲ್ಲಿ ಅಡಗಿದೆ ಒಂದು ಕುತೂಹಲಕಾರಿ ರಹಸ್ಯ. ಆ ರಹಸ್ಯ ಇಂದಿಗೂ ಇಲ್ಲಿ ಪ್ರಶ್ನೆಗಳ ಮೂಟೆಯಾಗಿದೆ, (History Of Angkor Wat Temple) ಕೌತುಕದ ಕಣಜವಾಗಿದೆ.
ಭಾರತದಿಂದ ಸುಮಾರು ಐದು ಸಾವಿರ ಕಿಲೋಮೀಟರ್ ದೂರದಲ್ಲಿರುವ ದೇಶ ಕಾಂಬೋಡಿಯಾ.

ಇಲ್ಲಿ ಒಂದು ಕಾಲದಲ್ಲಿ ಹಿಂದೂ ಧರ್ಮದ ಅನುಯಾಯಿಗಳು ಇದ್ದರು ಎಂಬುದಕ್ಕೆ ಈಗಲೂ ಅದೆಷ್ಟೋ ಸಾಕ್ಷಿಗಳಿವೆ. ಅದೂ ಅಲ್ಲದೆ,
ವಿಶ್ವದ ಅತೀ ದೊಡ್ಡ ಹಿಂದೂ ದೇಗುಲ ಸಂಕೀರ್ಣ ಇರುವುದು ಇದೇ ಕಾಂಬೋಡಿಯಾದಲ್ಲಿ, ಅದೇ ಅಂಕೋರ್ ವಾಟ್ ದೇಗುಲ, ಇದು ಅತ್ಯಂತ ಸುಂದರ ದೇಗುಲ.
12ನೇ ಶತಮಾನದಲ್ಲಿ ನಿರ್ಮಾಣವಾದ ದೇಗುಲ ತನ್ನ ಅಪೂರ್ವ ವಾಸ್ತುಶಿಲ್ಪದಿಂದಲೂ ಎಲ್ಲರನ್ನೂ ಕೈಬೀಸಿ ಕರೆಯುವಂತಿದೆ.
ಇದು ಒಂದು ಕಾಲದಲ್ಲಿ ಅತ್ಯಂತ ವೈಭವದ ದಿನಗಳನ್ನು ಕಂಡಿದ್ದ ದೇಗುಲ ಎಂಬುದರಲ್ಲಿ ಎಳ್ಳಷ್ಟು ಸಂಶಯವಿಲ್ಲ.
ಅದಕ್ಕೆ ಕಾರಣ ಈ ದೇಗುಲದ ಸೌಂದರ್ಯ, ವಿಸ್ತಾರ, ಕಲೆಯ ಸೊಬಗು.
ಇದನ್ನೂ ಓದಿ : https://vijayatimes.com/human-rights-situation-in-xinjiang-region/
ಭಗವಾನ್ ವಿಷ್ಣು ಇಲ್ಲಿನ ಪ್ರಧಾನ ದೇವರಾಗಿದ್ದು, ಈ ದೇಗುಲ ಕಾಂಬೋಡಿಯಾವನ್ನೂ ವಿಶ್ವ ಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ.
ರಾಜಾ ಸೂರ್ಯವರ್ಮನ್ ದ್ವಿತೀಯ ಆಳ್ವಿಕೆಯ ಕಾಲದಲ್ಲಿ ನಿರ್ಮಾಣವಾದ ದೇಗುಲ ಇದು.
ಆಗ ಈ ಪ್ರದೇಶ ಯಶೋಧರಾಪುರ ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು, ಆಗ ಕಾಂಬೋಡಿಯಾವನ್ನೂ ಕಂಬುಜ್ ಎಂದು ಕರೆಯಲಾಗುತ್ತಂತೆ.
ಲಭ್ಯ ಮಾಹಿತಿ ಪ್ರಕಾರ ಈ ಭವ್ಯ ದೇಗುಲದ ನಿರ್ಮಾಣಕ್ಕೆ 37 ವರ್ಷ ಹಿಡಿದಿತ್ತಂತೆ,
ತ್ರಿಮೂರ್ತಿಗಳನ್ನು ಆರಾಧಿಸುತ್ತಿದ್ದ ದೇಗುಲವಿದು. ಇಲ್ಲಿ ವಿಷ್ಣುವಿನ ಜೊತೆಗೆ ಬ್ರಹ್ಮ ಮತ್ತು ಮಹೇಶ್ವರರ ಪೂಜೆಯೂ ನಡೆಯುತ್ತಿತ್ತು.
ಈ ದೇಗುಲ ಎಷ್ಟು ಅಪೂರ್ವವೂ, ಸುಂದರವಾಗಿದೆಯೋ ಅಷ್ಟೇ ಇದು ರಹಸ್ಯಮಯ ಕೂಡಾ ಆಗಿದೆ.

ಏಕೆಂದರೆ, ಅದೆಷ್ಟೋ ರಹಸ್ಯಗಳನ್ನು ಈ ದೇಗುಲ ತನ್ನೊಡಲಿನಲ್ಲಿ ಇಂದಿಗೂ ಬಚ್ಚಿಟ್ಟುಕೊಂಡಿದೆ (History Of Angkor Wat Temple). ಈಗಲೂ ಇಲ್ಲಿಗೆ ಬರುವ ಸಾವಿರಾರು ಪ್ರವಾಸಿಗರು ಈ ದೇಗುಲದ ಸೌಂದರ್ಯಕ್ಕೇ ಮಂತ್ರಮುಗ್ಧರಾಗುತ್ತಾರೆ.
ಈ ದೇಗುಲವನ್ನು ಕಂಡಾಗ ಇಂತಹ ಅಪೂರ್ವ ತಾಣ ಈ ಭೂಮಿ ಮೇಲೆ ಇದೆಯಾ, ಇದನ್ನು ಮನುಷ್ಯರಿಂದ ನಿರ್ಮಿಸಲು ಸಾಧ್ಯನಾ ಎಂಬ ಸಂಶಯ ಮೂಡಿದರೂ ಅಚ್ಚರಿಯಲ್ಲ, ಅತಿಶಯೋಕ್ತಿಯೂ ಅಲ್ಲ.
ಆದರೆ, ಈ ಸೌಂದರ್ಯರಾಶಿಯ ನಡುವೆ ಇಲ್ಲಿ ಈಗಲೂ ಹಿಂದಿನ ಕಾಲದ ಖಜಾನೆ ಇದೆ ಎಂಬ ನಂಬಿಕೆ ಇದೆ. ಒಂದಷ್ಟು ಪುರಾತತ್ವ ತಜ್ಞರೂ ಇಲ್ಲಿ ಖಜಾನೆ ಇರಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆದರೆ, ಕಾಂಬೋಡಿಯಾ ಸರ್ಕಾರ ಈ ಖಜಾನೆ ಶೋಧಕ್ಕೆ ಅಷ್ಟಾಗಿ ಮನಸ್ಸು ಮಾಡಿಲ್ಲ.
ಇದನ್ನೂ ಓದಿ : https://vijayatimes.com/health-tips-of-drum-stick/
ಕಾರಣ, ಎಷ್ಟೋ ವರ್ಷಗಳ ಕಾಲ ಕಾಡಿನಲ್ಲಿ ಮರೆಯಾಗಿದ್ದ ಈ ದೇಗುಲ ಮರಳಿ ಕಾಣಸಿಕ್ಕಿದೆ. ಈಗ ಈ ಖಜಾನೆ ಶೋಧಕ್ಕಿಳಿದರೆ ಈ ದೇಗುಲಕ್ಕೇನಾದರೂ ತೊಂದರೆಯಾದರೆ ಎಂಬ ಸಹಜ ಭಯ ಸರ್ಕಾರದ್ದು.
ಅದು ನಿಜ ಕೂಡಾ. ಐತಿಹಾಸಿಕ ಮಹತ್ವವುಳ್ಳ ಈ ದೇಗುಲಕ್ಕಿಂತ ಬೇರೆ ಖಜಾನೆ ಬೇಕಾಗಿಲ್ಲ, ಇದೇ ಪ್ರತ್ಯಕ್ಷ ಖಜಾನೆಯಂತಿದೆ.
ಈ ಕಾರಣಕ್ಕೆ ಈ ಭವ್ಯ ದೇಗುಲದ ರಕ್ಷಣೆಯ ಸಲುವಾಗಿ ಸರ್ಕಾರ ಕೂಡಾ ಸಂಪತ್ತಿನ ಶೋಧದತ್ತ ಅಷ್ಟೇನು ಆಸಕ್ತಿ ವಹಿಸಿಲ್ಲ. ಹೀಗಾಗಿ, ಆ ಗುಪ್ತನಿಧಿಯ ವಿಚಾರ ಇನ್ನೂ ನಿಗೂಢವಾಗಿಯೇ ಉಳಿದಿದೆ. ಪ್ರಶ್ನೆಯಾಗಿಯೇ ಕಾಡುತ್ತಿದೆ.
- ಪವಿತ್ರ