India : ಮೊಬೈಲ್(History Of Nokia 1100) ಎಂಬ ಮಾಯಾಜಾಲ ನಮ್ಮನ್ನು ಆವರಿಸಿ ಗತಕಾಲವೇ ಆಯಿತೇನೋ ಎನ್ನುವ ಭಾವನೆ ನಮಗೆಲ್ಲಾ ಮೂಡಿಬಿಟ್ಟಿದೆ.
ಆದರೆ, ಇಂದು ಹದಿಹರಯಕ್ಕೆ ಕಾಲಿಟ್ಟಿರುವ ಎಷ್ಟೋ ಯುವಕರ ವಯಸ್ಸಿನಷ್ಟೂ(History Of Nokia 1100) ಸಹ ಭಾರತದ ಮೊಬೈಲ್ ಪ್ರಪಂಚಕ್ಕೆ ವಯಸ್ಸಾಗಿಲ್ಲ ಎಂದರೆ ಆಶ್ಚರ್ಯವಾಗಬಹುದು.

ಏಕೆಂದರೆ, ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಮೊಬೈಲ್ ಕರೆ ಮಾಡಿದ್ದು, ಕೇವಲ 27 ವರ್ಷಗಳ ಹಿಂದೆ. ಹೌದು, ಇಂದು ಭಾರತದಲ್ಲಿ 77 ಕೋಟಿಗೂ ಹೆಚ್ಚು ಜನ ಮೊಬೈಲ್ ಬಳಕೆ ಮಾಡುತ್ತಿದ್ದಾರೆ.
ನೂರು ಕೋಟಿಗೂ ಹೆಚ್ಚು ಮೊಬೈಲ್ ಸಿಮ್(Mobile Sim) ಬಳಕೆಯಾಗುತ್ತಿವೆ.
46.20 ಕೋಟಿ ಜನರು ಅಂತರ್ಜಾಲವನ್ನು ಬಳಸುತ್ತಿದ್ದಾರೆ. 25 ಕೋಟಿ ಜನರು ಸಾಮಾಜಿಕ ಜಾಲತಾಣಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ಆದರೆ, ಮೊದಲ ಕರೆಯನ್ನು ಮಾಡಿ ಮಾತನಾಡಿದ್ದು,
ಕೇವಲ 27 ವರ್ಷಗಳ ಹಿಂದೆ ಅಷ್ಟೇ. ಹೌದು, 1995ರಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದ ಜ್ಯೋತಿ ಬಸು ಅವರು ಆಗಿನ ಕೇಂದ್ರ ದೂರಸಂಪರ್ಕ ಸಚಿವರಾಗಿದ್ದ ಸುಖರಾಮ್ ಅವರೊಂದಿಗೆ ಮೊದಲ ಬಾರಿ ಮೊಬೈಲ್ ಕರೆ ಮಾಡಿ ಮಾತನಾಡಿದ್ದರು.
ಇದನ್ನೂ ಓದಿ : https://vijayatimes.com/vande-bharat-express-details/
ಇಂದು ಇತಿಹಾಸದಲ್ಲಿ(History) ದಾಖಲಾಗಿರುವ ಭಾರತದ ಈ ಮೊದಲ ಮೊಬೈಲ್ ಕರೆಯನ್ನು ಕೋಲ್ಕತ್ತಾದಿಂದ ದೆಹಲಿಗೆ ಮಾಡಲಾಗಿತ್ತು.
ಇಂಟರ್‌ನೆಟ್(Internet) ಪಡೆದರೆ ಅನ್‌ಲಿಮಿಟೆಡ್ ಉಚಿತ ಕರೆಗಳನ್ನು ಮಾಡಬಹುದಾದ ಇಂದಿನ ದಿನಕ್ಕೂ ಮತ್ತು 27 ವರ್ಷಗಳ ಹಿಂದಿನ ಸಮಯಕ್ಕೂ ಬಹಳಷ್ಟು ವ್ಯತ್ಯಾಸವಿತ್ತು.
ಇದನ್ನೂ ಓದಿ : https://vijayatimes.com/health-tips-for-body-temperature/
ಆಗ ಹೊರಹೋಗುವ ಕರೆಗಳಿಗೆ ಒಂದು ನಿಮಿಷಕ್ಕೆ 16 ರೂ.ಗಳನ್ನೂ ವಿಧಿಸಲಾಗುತ್ತಿತ್ತು. ಒಳಬರುವ ಕರೆಗಳಿಗೂ ಸಹ ಹಣ ತೆರಬೇಕಾಗಿತ್ತು. ಇದರಿಂದ ಮೊಬೈಲ್ ಎಂಬುದು ಕೇವಲ ಶ್ರೀಮಂತರ ಸ್ವತ್ತಾಗಿತ್ತು.
ಇನ್ನು, ನೋಕಿಯಾ ಮೊಬೈಲ್(Nokia Mobile) ಫೋನಿನಲ್ಲಿ ಭಾರತದ ಮೊದಲ ಮೊಬೈಲ್ ಫೋನ್ ಕರೆಯನ್ನು ಮಾಡಲಾಯಿತು.

1998 ರಲ್ಲಿ ದೇಶದ ಮೊದಲ ರಿಂಗ್ ಟೋನ್ ಅನ್ನು ನೋಕಿಯಾ 5110 ಮೊಬೈಲ್‌ನಲ್ಲಿ ಪರಿಚಯಿಸಲಾಯಿತು. ‘ಸಾರೆ ಜಹಾನ್ ಸೆ ಅಚ್ಚಾ’ ಗೀತೆ ಮೊದಲ ರಿಂಗ್ ಟೋನ್ ಆಗಿತ್ತು.
ಸ್ಮಾರ್ಟ್‌ಫೋನ್(Smartphone) ಬರುವುದಕ್ಕೂ ಮುಂಚೆ ನೊಕಿಯಾ ಸಂಸ್ಥೆಯೇ ವಿಶ್ವದ ಮೊಬೈಲ್ ಸಾಮ್ರಾಟನಾಗಿತ್ತು.
ನೊಕಿಯಾದ ಜನಪ್ರಿಯ 1100 ಮಾಡೆಲ್ ನ ಹ್ಯಾಂಡ್ ಸೆಟ್ ಗಳು ಬರೋಬ್ಬರಿ 25 ಕೋಟಿ ಸಂಖ್ಯೆಯಲ್ಲಿ ಮಾರಾಟ ಕಂಡಿವೆ. ಇದು ವಿಶ್ವದಲ್ಲಿ ಅತೀ ಹೆಚ್ಚು ಮಾರಾಟವಾಗಿರುವ ಎಲೆಕ್ಟ್ರಾನಿಕ್ ಸಾಧನವೆನಿಸಿದೆ.
ಭಾರತದಲ್ಲಿ ಮೊದಲ ಕ್ಯಾಮೆರಾ ಫೋನ್ ಅನ್ನು ಕೂಡ ನೋಕಿಯಾ ಕಂಪೆನಿಯೇ ಪರಿಚಯಿಸಿತು.
ನೋಕಿಯಾ 7650 ಮೊಬೈಲ್ ಫೋನ್ ಭಾರತದಲ್ಲಿ ಬಿಡುಗಡೆಯಾದ ಮೊದಲ ಮೊಬೈಲ್ ಕ್ಯಾಮೆರಾ ಫೋನ್ ಆಗಿತ್ತು.
ಈ ಮೊಬೈಲ್ ಫೋನ್ ನಂತರವೇ ಮೊಬೈಲ್‌ನಲ್ಲಿ ಮಲ್ಟಿ ಮೀಡಿಯಾ ಬಳಕೆ ಮಾಡಬಹುದು ಎಂಬುದನ್ನು ಹೆಚ್ಚಿನ ಭಾರತಿಯರು ತಿಳಿದುಕೊಂಡರು.
- ಪವಿತ್ರ