India : ಭಾರತದಲ್ಲಿ(India) ಒಬ್ಬ ವಿಚಿತ್ರ ಸಾಧು ಇದ್ದಾರೆ. ಅವರ ಹೆಸರು ಸಾಧು ಅಮರ್ ಭಾರತಿ(Sadhu Amar Bharathi). ಆ ಮಹಾ ಪುರುಷ 1970ರಲ್ಲಿ ತಮ್ಮ ಬಲಗೈ ಎತ್ತಿದ್ದರು. ಆದರೆ ಅಲ್ಲಿಂದ ಇಲ್ಲಿವರೆಗೆ ಅವರು ಆ ಕೈಯನ್ನು ಇಳಿಸಿಯೇ ಇಲ್ಲ.

ಇಷ್ಟು ವರ್ಷಗಳಿಂದ ಇವರ ಕೈ ಆಕಾಶವನ್ನೇ ನೋಡುತ್ತಿದೆ. ಇದು ಅಚ್ಚರಿ ಎನಿಸಿದರೂ ನಿಜ. 1970ರಲ್ಲೇ ಕೈಯನ್ನು ಎತ್ತಿದ ಸಾಧು ಅಮರ್ ಭಾರ್ತಿ, ಇಂದಿನವರೆಗೂ ಅದನ್ನು ಕೆಳಗಿಸಿಲ್ಲ. ಅಲ್ಲದೇ ಅದನ್ನು ಕೆಳಗಿಳಿಸುವುದಿಲ್ಲ ಎಂದು ಹೇಳುವ ಮೂಲಕ ಕಠೋರ ನಿರ್ಧಾರ ಕೈಗೊಂಡಿದ್ದಾರೆ.
ಇದರಿಂದಾಗಿ ಅಮರ್ ಭಾರ್ತಿ ಸ್ವಾಮೀಜಿಯನ್ನು ಅಲ್ಲಿನ ಭಕ್ತರು ದೇವರ ಸ್ವರೂಪ ಎಂದು ಭಾವಿಸಿದ್ದಾರೆ. ಏಕೆಂದರೆ, ಇಷ್ಟು ವರ್ಷಗಳಲ್ಲಿ ಇವರು ಕೈಯನ್ನು ಒಂದು ಕ್ಷಣವೂ ಕೆಳಗಿಳಿಸಿಲ್ಲ! ವೆಬ್‌ಸೈಟ್(Website) ಒಂದರ ಮಾಹಿತಿಯ ಪ್ರಕಾರ, ಅಮರ್ ಭಾರತಿಗೆ ಸನ್ಯಾಸಿಯಾಗಲು ಇಷ್ಟವಿರಲಿಲ್ಲ.

ಮೊದಲು ಅವರು ಬ್ಯಾಂಕ್ ಉದ್ಯೋಗಿಯಾಗಿದ್ದರು, ಅಮರ್ ಭಾರತಿಯವರಿಗೆ ಹೆಂಡತಿ, ಮಕ್ಕಳು, ಮನೆ, ಉದ್ಯೋಗವೂ ಇತ್ತು. ಆದರೆ ಇದ್ದಕ್ಕಿದ್ದ ಹಾಗೆ ಒಂದು ದಿನ ಆಧ್ಯಾತ್ಮದತ್ತ ಅವರ ಮನಸ್ಸು ವಾಲಿತು. ಇಂತಹ ಪರಿಸ್ಥಿತಿಯಲ್ಲಿ ಎಲ್ಲವನ್ನೂ ತ್ಯಜಿಸಿ, ಧರ್ಮದ ಹಾದಿ ಹಿಡಿದ ಅವರು ತಮ್ಮ ಜೀವನದ ಉಳಿದ ಸಮಯವನ್ನು ಭೋಲೆನಾಥ ಭಗವಾನ್ ಶಿವನಿಗೆ ಅರ್ಪಿಸಿದರು.
ನೀವೂ ಒಮ್ಮೆ ನಿಮ್ಮ ಕೈಯನ್ನು ಗಾಳಿಯಲ್ಲಿ ಎತ್ತಿಹಿಡಿಯಲು ಪ್ರಯತ್ನಿಸಿ ನೋಡಿ. ಖಂಡಿತವಾಗಿಯೂ 2 ಅಥವಾ 3 ನಿಮಿಷಗಳಿಗಿಂತ ಹೆಚ್ಚು ಕಾಲ ಗಾಳಿಯಲ್ಲಿ ಕೈಯನ್ನು ಹಾಗೆಯೇ ಹಿಡಿದುಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ಈ ಸಾಧು ಶಿವಭಕ್ತಿ ಮತ್ತು ಲೋಕಶಾಂತಿಗಾಗಿ ಈ ಕೆಲಸವನ್ನು ಮಾಡುತ್ತಿದ್ದಾರೆ.

ತಮ್ಮ ಸಂದರ್ಶನವೊಂದರಲ್ಲಿ, ಅಮರ್ ಭಾರತಿ ಅವರು ಈ ಕೆಲಸವನ್ನು ಮಾಡಲು ಶಿವನಿಂದ ಶಕ್ತಿಯನ್ನು ಪಡೆದಿದ್ದೇನೆ ಎಂದು ಹೇಳಿದ್ದರು. ಇದಲ್ಲದೇ ಈ ಮೂಲಕ ಜಗತ್ತಿನಲ್ಲಿ ಶಾಂತಿ ನೆಲೆಸಬೇಕೆಂದರು. ಆರಂಭದಲ್ಲಿ, ಅವರು ಈ ಕೆಲಸ ಮಾಡಲು ತುಂಬಾ ನೋವಿನಿಂದ ಬಳಲುತ್ತಿದ್ದರಂತೆ, ಆದರೆ ನಂಬಿಕೆಯ ಬಲದ ಮೇಲೆ, ಅಮರ್ ಭಾರತಿಯವರು ಇದನ್ನು ಸಾಧಿಸಿದ್ದಾರೆ.
ಸಾಧು ಅಮರ್ ಭಾರ್ತಿ ಸುಮಾರು 50 ವರ್ಷಗಳಿಂದ ಕೈಯನ್ನು ಮೇಲೆತ್ತಿರುವುದರಿಂದ ಅದಕ್ಕೆ ರಕ್ತ ಸಂಚಾರವೂ ಇಲ್ಲದಂತಾಗಿದೆ. ಹಾಗಾಗಿ, ಆ ಕೈಯಲ್ಲಿ ಕೇವಲ ಮೂಳೆ ಬಿಟ್ಟರೆ ಮತ್ತಿನ್ನೇನೂ ಇಲ್ಲ ಎಂದು ವೈದ್ಯರು ಹೇಳುತ್ತಾರೆ.
- Pavitra