Bengaluru: ಕಳೆದ ಕೆಲ ದಿನಗಳಿಂದ ಚೀನಾದಲ್ಲಿ (China) ಹೊಸ ಹ್ಯೂಮನ್ ಮೆಟಾ ಫ್ನ್ಯೊಮೋ ವೈರಸ್ (Human Metapneumovirus) (HMPV) ಅಬ್ಬರಿಸಿ ಆತಂಕ ಸೃಷ್ಟಿಸಿರುವ ಬೆನ್ನಲ್ಲೇ ಮುನ್ನೆಚ್ಚರಿಕಾ ಕ್ರಮವಾಗಿ (Precautionary measure) ರಾಜ್ಯ ಸರ್ಕಾರ (State Govt) ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುವ ಮೂಲಕ ಜನರ ಗಮನ ಸೆಳೆದಿದೆ.ಚೀನಾದಲ್ಲಿ ಕಾಣಿಸಿಕೊಂಡಿರುವ ಹೆಚ್‌ಎಂಪಿವಿ (HMPV) ವೈರಸ್ ಬಗ್ಗೆ ಎಚ್ಚರಿಕೆಯಿಂದಿರುವಂತೆ ಕೇಂದ್ರ ಸರ್ಕಾರ (Central Govt) ರಾಜ್ಯಗಳಿಗೆ ಸೂಚನೆ ನೀಡಿರುವ ಬೆನ್ನಲ್ಲೆ ರಾಜ್ಯ ಆರೋಗ್ಯ ಇಲಾಖೆ (State Health Department) ವೈರಸ್ ನಿಯಂತ್ರಿಸಲು ಕೆಲವು ಮಾರ್ಗಸೂಚಿಗಳನ್ನು ಪಾಲಿಸುವಂತೆ ಜನತೆ ಬಳಿ ಮನವಿ ಮಾಡಿಕೊಂಡಿದೆ.
ಅಲ್ಲದೆ, ಕರ್ನಾಟಕದಲ್ಲಿ (Karnataka) ಒಂದೇ ಒಂದು ಪ್ರಕರಣ ದಾಖಲಾಗಿದೆ . ಹಾಗಾಗಿ ಈಗಲೇ ಮುನ್ನೆಚ್ಚರಿಕೆ ವಹಿಸಬೇಕಿದೆ ಅದರ ಹೊರತಾಗಿ ಆತಂಕ ಪಡುವ ಅಗತ್ಯವಿಲ್ಲ ಎಂದೂ ಹೇಳಿದೆ.ಹೆಚ್‌ಎಂಪಿವಿ (HMPV) ಒಂದು ಉಸಿರಾಟದ ಕಾಯಿಲೆಯಾಗಿದ್ದು, ಚಳಿಗಾಲದಲ್ಲಿ (Winter) ಶೀತ ಮತ್ತು ಜ್ವರದ ತರಹದ ಲಕ್ಷಣಗಳನ್ನು ಉಂಟು ಮಾಡುತ್ತದೆ, ವಿಶೇಷವಾಗಿ ಮಕ್ಕಳು ಮತ್ತು ವಯಸ್ಸಾದ ವ್ಯಕ್ತಿಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ರಾಜ್ಯದ ಸಮಗ್ರ ರೋಗ ಕಣ್ಗಾವಲು ಕಾರ್ಯಕ್ರಮದ ಯೋಜನಾ ನಿರ್ದೇಶಕ (Project Director of State Integrated Disease Surveillance Program) ಡಾ. ಅನ್ಸಾರ್ ಅಹ್ಮದ್ (Dr. Ansar Ahmed) ಹೇಳಿದ್ದಾರೆ.

ಸರ್ಕಾರದ ಹೊಸ ಮಾರ್ಗಸೂಚಿ ಹೀಗಿವೆ (The new guidelines of the government are as follows):
- ಜ್ವರ ಇದ್ದರೆ ಜನನಿಬಿಡ ಪ್ರದೇಶಕ್ಕೆ ಹೋಗದಂತೆ ಹಾಗೂ ಅನಗತ್ಯ ಓಡಾಟ ತಪ್ಪಿಸಿ.
- ಆಗಾಗ್ಗ್ಯೆ ಕೈಗಳನ್ನೂ ಸಾಬೂನು (Soap) ಹಾಗೂ ಸ್ಯಾನಿಟೈಸರ್‌ಗಳಿಂದ (Sanitizers) ಸ್ವಚ್ಛಗೊಳಿಸಿ.
- ಜ್ವರ, ಕೆಮ್ಮು, ನೆಗಡಿ ಇರುವವರು ಆದಷ್ಟು ಹೊರಗೆ ಓಡಾಡದೆ ಮನೆಯಲ್ಲೇ ಇದ್ದು, ಚಿಕಿತ್ಸೆ (Treatment) ಪಡೆಯಿರಿ.
- ಇಂತಹವರು ಬಳಿಸಿದ ಟವಲ್ ಮತ್ತು ಬಟ್ಟೆಗಳನ್ನು ಬೇರೆಯವರು ಬಳಸದಿರಿ.
- ಸಾರ್ವಜನಿಕ ಸ್ಥಳಗಳಲ್ಲಿ (Public places) ಉಗುಳುವುದನ್ನು ತಪ್ಪಿಸಿ ಸ್ವಯಂ ಔಷಧಗಳನ್ನು ಸೇವಿಸದೆ ನೆಗಡಿ, ಕೆಮ್ಮು ಕಾಣಿಸಿಕೊಂಡರೆ ವೈದ್ಯರನ್ನು ಭೇಟಿ ಮಾಡಿ, ಚಿಕಿತ್ಸೆ ಪಡೆಯಿರಿ.
- ಮನೆ ಮತ್ತು ಸುತ್ತಲಿನ ಪ್ರದೇಶಗಳಲ್ಲಿ, ಕಚೇರಿಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಿ (Cleanliness).
- ಪೌಷ್ಠಿಕಾಂಶವಿರುವ ಆಹಾರ (Nutritious food) ಸೇವಿಸಿ,
- ಮಕ್ಕಳು ಹಾಗೂ ಹಿರಿಯರ ಬಗ್ಗೆ ಹೆಚ್ಚಿನ ಜಾಗೃತೆ ವಹಿಸಿ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಡಿಸೆಂಬರ್‌ನಲ್ಲಿ ಸಾಮಾನ್ಯ ಶೀತ (Common cold), ಐಎಲ್‌ಯ ಮತ್ತು ಸಾರಿ ಪ್ರಕರಣಗಳಲ್ಲಿ ಯಾವುದೇ ಗಮನಾರ್ಹ ಏರಿಕೆ ಇಲ್ಲ ಎಂದು ಆರೋಗ್ಯ ಅಧಿಕಾರಿಗಳು (Health authorities) ಹೇಳಿದ್ದಾರೆ.