• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಮಾಹಿತಿ

ಜನ ಸ್ನೇಹಿ ಆಡಳಿತ ಜಾರಿಗೆ ತರಲು ಮನೆ-ಮನೆಗೆ ಪೊಲೀಸ್ ಎಂಬ ವಿನೂತನ ಕಾರ್ಯಕ್ರಮ: ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಚಾಲನೆ

Shwetha Mohan by Shwetha Mohan
in ಮಾಹಿತಿ, ರಾಜಕೀಯ, ರಾಜ್ಯ, ವಿಜಯ ಟೈಮ್ಸ್‌
ಜನ ಸ್ನೇಹಿ ಆಡಳಿತ ಜಾರಿಗೆ ತರಲು ಮನೆ-ಮನೆಗೆ ಪೊಲೀಸ್ ಎಂಬ ವಿನೂತನ ಕಾರ್ಯಕ್ರಮ: ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಚಾಲನೆ
0
SHARES
18
VIEWS
Share on FacebookShare on Twitter
  • ಪೊಲೀಸರು ಜನಸ್ನೇಹಿಯಾಗಲು ಹೊಸ ಯೋಜನೆ ( Home Minister Dr G Parameshwara launches door to door police system in karnataka)
  • ದೇಶದಲ್ಲೇ ಪ್ರಥಮ ಬಾರಿಗೆ ಜನರ ಮನೆ ಬಾಗಿಲಿಗೆ ಅಹವಾಲು ಆಲಿಸಲು ಪೊಲೀಸರು ಬರ್ತಾರೆ
  • ಕ್ರಿಯಾಶೀಲವಾಗಿ ಕೆಲಸ ಮಾಡುವ ಪೊಲೀಸ್ ಇಲಾಖೆಗೆ ಹೊಸ ಜವಾಬ್ದಾರಿ.

Bengaluru: ಬೆಂಗಳೂರು ಮಹಾ ನಗರದಲ್ಲಿ ಇತ್ತೀಚಿಗೆ ಅಪರಾಧಗಳು ಹೆಚ್ಚುತ್ತಿವೆ.

ಅವುಗಳಲ್ಲಿ ಕೆಲವು ಪ್ರಕರಣಗಳು ಸುಖಾಂತ್ಯ ಕಂಡರೆ ಇನ್ನು ಕೆಲವು ಪ್ರಕರಣಗಳು ಮುನ್ನೆಲೆಗೆ ಬಾರದೇ ಉಳಿಯುತ್ತಿರುವ ಕಾರಣದಿಂದಾಗಿ ಹಾಗೂ ಜನರ ಮನದಲ್ಲಿ ಪೊಲೀಸ್ ಮತ್ತು ಕಾನೂನಿನ ಕುರಿತು ಹೆಚ್ಚಿನ ಜಾಗೃತಿ ಮೂಡಿಸಲು ರಾಜ್ಯ ಪೊಲೀಸ್ ಇಲಾಖೆ ಹೊಸ ಯೋಜನೆಯೊಂದು ರೂಪಿಸಿದೆ.

ಮನೆ-ಮನೆಗೆ ಪೊಲೀಸ್ ಎಂಬ ವಿನೂತನ ಕಾರ್ಯಕ್ರಮಕ್ಕೆ ಶುಕ್ರವಾರ ನಾಂದಿ ಹಾಡಿದೆ.ಈ ಯೋಜನೆಯನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ (Dr. G. Parameshwar) ಅವರು ಶುಕ್ರವಾರ ಚಾಲನೆ ನೀಡಿದ್ದಾರೆ.

ಇನ್ನು ಈ ಕುರಿತಾಗಿ ಗೋವಿಂದರಾಜನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಾಲನೆ ನೀಡಿದ ಅವರು

ಅಪರಾಧ , ಮಾದಕ ವಸ್ತುಮಾರಾಟ,ಕಳ್ಳತನ, ಮಾನಹಾನಿ ಸೇರಿ ನೋವಿನಲ್ಲಿರುವ ಜನರ ದುಃಖ-ದುಮ್ಮಾನ ಕೇಳಲು ಬರುವ ಪೊಲೀಸರ ಕಾರ್ಯಕ್ಕೆ ಹಸಿರು ಬಾವುಟ ತೋರಿಸಿ ಸಚಿವರು ಯೋಜನೆ ಆರಂಭಿಸಿದರು.

ಇನ್ನು ಈ ವಿನೂತನ ಕಾರ್ಯಕ್ರಮದ ಭಾಗವಾಗಿ, ಗೃಹ ಸಚಿವ ಡಾ. ಜಿ .ಪರಮೇಶ್ವರ, ಗೋವಿಂದರಾಜನಗರ ಶಾಸಕ ಪ್ರಿಯಾಕೃಷ್ಣ, ಬೆಂಗಳೂರು ನಗರದ ಡಿಜಿ ಮತ್ತು ಐಜಿಪಿ ಎಂಎ ಸಲೀಂ,

ಅಲ್ಲದೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ ರಾವ್ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಹಲವಾರು ಮನೆಗಳಿಗೆ ಭೇಟಿ ನೀಡಿ ಹೊಸ ಯೋಜನೆಗೆ ಚಾಲನೆ ನೀಡಿದ್ದಾರೆ.

An innovative program called Door to Door Police
Dr. G. Parameshwara launches innovative program
ಇನ್ನು ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪೊಲೀಸ್ ಸಿಬ್ಬಂದಿ ಮನೆಗಳಿಗೆ ಭೇಟಿ ನೀಡಿ ನಿವಾಸಿಗಳ ಕುಂದುಕೊರತೆಗಳನ್ನು ಪರಿಹರಿಸುತ್ತಾರೆ ಎಂದರು.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ದೇಶದಲ್ಲಿ ಇಂತಹ ಜನೋಪಯೋಗಿ ಕ್ರಮವನ್ನು ಜಾರಿಗೆ ತರುತ್ತಿರುವುದು ನಮ್ಮಲ್ಲೇ ಮೊದಲು.

ಬೇರೆ ಯಾವುದೇ ರಾಜ್ಯಗಳಲ್ಲೂ ಕೂಡ ಈ ರೀತಿಯ ಜನೋಪಯೋಗಿ ಕಾರ್ಯಕ್ರಮವನ್ನು ಪರಿಚಯಿಸಿಲ್ಲ.

ಇದು ರಾಷ್ಟ್ರವ್ಯಾಪಿ ಯಶಸ್ವಿ ಮಾದರಿಯಾಗುವುದರಲ್ಲಿ ಅನುಮಾನವಿಲ್ಲ ಎಂದಿದ್ದಾರೆ.

ಇನ್ಮುಂದೆ ಹೊಸ ಯೋಜನೆಯ ಅಡಿಯಲ್ಲಿ ಪ್ರತಿ ದಿನ ಪೊಲೀಸರು ಮನೆ ಮನೆಗೆ ಗಸ್ತು ನಡೆಸುತ್ತಾರೆ.

ಯಾವ ಮನೆಯಲ್ಲಿ ಯಾರು ಇದ್ದಾರೆ, ಹೊಸದಾಗಿ ಯಾರು ಬಂದಿದ್ದಾರೆ, ಯಾರು ಎಲ್ಲಿ ಕೆಲಸ ಮಾಡುತ್ತಾರೆ, ಯಾರಿಗೆ ಯಾವ ಸಮಸ್ಯೆಗಳಿವೆ ಎಂಬ ಮಾಹಿತಿಗಳನ್ನು ಪೊಲೀಸರು ಸಂಗ್ರಹಿಸುತ್ತಾರೆ.

ಈ ಎಲ್ಲ ಡೇಟಾ ಪೊಲೀಸರ ಬಳಿ ಉಳಿಯುತ್ತದೆ. ಒಂದುವೇಳೆ ಹೇಳಿಕೊಳ್ಳಲು ಸಾಧ್ಯವಾಗದಂತಹ ವಿಷಯಗಳಿದ್ದರೆ ಇಲ್ಲವೇ ನೆರೆಹೊರೆಯಲ್ಲಿ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿದ್ದರೆ

ಇದರಿಂದ ನಿಮ್ಮ ಮಕ್ಕಳಿಗೆ ತೊಂದರೆಯಾಗುತ್ತಿದ್ದರೆ, ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಡ್ರಗ್ಸ್ (drugs) ಚಟುವಟಿಕೆ ಸೇರಿದಂತೆ ಎಲ್ಲ ಮಾಹಿತಿಯನ್ನು ಪೊಲೀಸರೊಂದಿಗೆ ಮುಕ್ತವಾಗಿ ಹಂಚಿಕೊಳ್ಳಬಹುದು.

ನಂತರದಲ್ಲಿ ಈ ಎಲ್ಲ ದತ್ತಾಂಶವನ್ನು ಡಿಜಿಟಲೈಸ್ ಮಾಡಿಕೊಳ್ಳಲಾಗುತ್ತದೆ. ಇದನ್ನೆಲ್ಲಾ ಮಾಡಲು ಬೀಟ್ ಸಿಬ್ಬಂದಿಗೆ ಟ್ಯಾಬ್‌ಗಳನ್ನು ನೀಡಲಾಗುತ್ತದೆ.

ಅಷ್ಟೇ ಅಲ್ಲದೆ ಸಮಾಜದಲ್ಲಿ ಕೆಲವು ಬಾರಿ ನಮ್ಮೊಂದಿಗೆ ವಾಸವಾಗಿರುವ ಜನಪ್ರತಿನಿಧಿಗಳು, ಉದ್ಯಮಿಗಳು ಹಾಗೂ ಸಾಹಿತಿಗಳು ದುಷ್ಟರ ಟಾರ್ಗೆಟ್ ಆಗಿರುತ್ತಾರೆ.

ಹಾಗಾಗಿ ಈ ಬಗ್ಗೆ ನಿಗಾವಹಿಸಬಹುದಾಗಿದೆ. ಈಗಾಗಲೇ ಪೊಲೀಸ್ ಇಲಾಖೆ ಕ್ರಿಯಾಶೀಲವಾಗಿ ಕೆಲಸ ಮಾಡುವ ಇಲಾಖೆ ಎಂಬ ಬಿರುದು ಪಡೆದಿದೆ.

ಈ ಯೋಜನೆಯಿಂದ ಪೊಲೀಸ್ ಇಲಾಖೆ ಇನ್ನಷ್ಟು ಜನಮನ್ನಣೆ ಗಳಿಸುವುದರಲ್ಲಿ ಅನುಮಾನವಿಲ್ಲ ಎಂದಿದ್ದಾರೆ.

ಇದನ್ನು ಓದಿ : ಚಿನ್ನಸ್ವಾಮಿ ಸ್ಟೇಡಿಯಂನ ಕಾಲ್ತುಳಿತ ದುರಂತಕ್ಕೆ ಆರ್​ಸಿಬಿ, ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ರಾಜ್ಯದ ಸಚಿವ ಸಂಪುಟ ಸಭೆ ಒಪ್ಪಿಗೆ

ನಂತರದಲ್ಲಿ ಗೃಹ ಸಚಿವ ಪರಮೇಶ್ವರ ಅವರು ವಿವಿಧ ಜಿಲ್ಲೆಗಳ ಇತರಹಿರಿಯ ಪೊಲೀಸ್ ಆಯುಕ್ತರು ಮತ್ತು ಎಸ್‌ಪಿಗಳ ಜೊತೆಯಲ್ಲಿ ವೀಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿ ಹೊಸ ಯೋಜನೆಯ ಕುರಿತಾಗಿ ಮಾಹಿತಿ ನೀಡಿದ್ದಾರೆ.( Home Minister Dr G Parameshwara launches door to door police system in karnataka)

Tags: bangalore policebengaluruDr G parameshwarKarnatakaMLA Priyakrishna

Related News

ಏಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ನಿಯಮಗಳು ಜಾರಿ: ಸಂಬಳದಿಂದ ಷೇರು ಹೂಡಿಕೆವರೆಗೂ ಎಲ್ಲದರ ಮೇಲೂ ಸರ್ಕಾರದ ಕಣ್ಣು
ದೇಶ-ವಿದೇಶ

ಏಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ನಿಯಮಗಳು ಜಾರಿ: ಸಂಬಳದಿಂದ ಷೇರು ಹೂಡಿಕೆವರೆಗೂ ಎಲ್ಲದರ ಮೇಲೂ ಸರ್ಕಾರದ ಕಣ್ಣು

February 9, 2026
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ದರ ಏರಿಕೆ ನಿರ್ಧಾರ ಹಿಂಪಡೆದ BMRCL
ಪ್ರಮುಖ ಸುದ್ದಿ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ದರ ಏರಿಕೆ ನಿರ್ಧಾರ ಹಿಂಪಡೆದ BMRCL

February 9, 2026
ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಕಳ್ಳರ ಕೈಚಳಕ:ಫ್ಲಿಪ್‌ಕಾರ್ಟ್ ಕಂಪನಿಗೆ ಸೇರಿದ 24 ಲಕ್ಷದ ಮೊಬೈಲ್ ಸೇರಿ, ಇತರೆ ಗೂಡ್ಸ್‌ ಕಳವು
ಪ್ರಮುಖ ಸುದ್ದಿ

ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಕಳ್ಳರ ಕೈಚಳಕ:ಫ್ಲಿಪ್‌ಕಾರ್ಟ್ ಕಂಪನಿಗೆ ಸೇರಿದ 24 ಲಕ್ಷದ ಮೊಬೈಲ್ ಸೇರಿ, ಇತರೆ ಗೂಡ್ಸ್‌ ಕಳವು

February 7, 2026
ತಿರುಮಲ ಲಡ್ಡು ವಿವಾದ: ಬಾತ್‌ರೂಮ್ ಕ್ಲೀನಿಂಗ್ ಕೆಮಿಕಲ್ ಆರೋಪದಿಂದ ರಾಜ್ಯ ರಾಜಕಾರಣದಲ್ಲಿ ಭಾರಿ ಗದ್ದಲ
ದೇಶ-ವಿದೇಶ

ತಿರುಮಲ ಲಡ್ಡು ವಿವಾದ: ಬಾತ್‌ರೂಮ್ ಕ್ಲೀನಿಂಗ್ ಕೆಮಿಕಲ್ ಆರೋಪದಿಂದ ರಾಜ್ಯ ರಾಜಕಾರಣದಲ್ಲಿ ಭಾರಿ ಗದ್ದಲ

February 7, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.