ಹೆಣ್ಣಿನ ಸೌಂದರ್ಯವನ್ನು ಹೆಚ್ಚಿಸುವುದು ಆಕೆಯ ಕಣ್ಣು. ಆದರೆ ಒತ್ತಡ ನಿದ್ರಾಹೀನತೆಯಿಂದಾಗಿ ಕಣ್ಣಿನ ಕೆಳಗೆ ಕಪ್ಪಾಗುತ್ತದೆ. ಅದನ್ನು ಡಾರ್ಕ್ ಸರ್ಕಲ್ ಎಂದು ಕರೆಯುತ್ತೇವೆ. ಅದೂ ಅಲ್ಲದೆ ಮುಖದಲ್ಲಿ ಒಮ್ಮೆ ಡಾರ್ಕ್ ಸರ್ಕಲ್ ಕಾಣಿಸಿಕೊಂಡರೆ ಸಾಕು ಅದು ನಮ್ಮನ್ನು ವಯಸ್ಸಾದಂತೆ ಬಿಂಬಿಸುತ್ತದೆ. ಅದರಲ್ಲೂ ಕೆಲವರಿಗೆ ಅನುವಂಶಿಕವಾಗಿಯೂ ಕೂಡ ಬಂದಿರುತ್ತದೆ. ಆಗಿದ್ರೆ ಡಾರ್ಕ್ ಸರ್ಕಲ್ ಅನ್ನು ಹೋಗಲಾಡಿಸಲು ಏನು ಮಾಡಬೇಕು ಎಂದು ಯೋಚಿಸುತ್ತಿದ್ದರೆ ಈ ಕೆಳಗಿನ ವಿಧಾನಗಳನ್ನು ಓದಿ ನಿಮ್ಮ ಡಾರ್ಕ್ ಸರ್ಕಲ್ ಗೆ ಗುಡ್ ಬೈ ಹೇಳಿ.

1.ನಿದ್ರೆ :
ಮನುಷ್ಯನಿಗೆ ನಿದ್ರೆ ಬಹಳ ಮುಖ್ಯ. ನಾವು 6 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡಿದರೆ ನಮಗೆ ಯಾವ ಸಮಸ್ಯೆಯೂ ಕೂಡ ಬರುವುದಿಲ್ಲ.ಆದರೆ ಇಂದಿನ ಪೀಳಿಗೆಯ ಯುವಕರು ರಾತ್ರಿ ಸಮಯದಲ್ಲಿ ಮಲಗದೆ ಮೊಬೈಲ್ ನೋಡಿಕೊಂಡು ಕಾಲಹರಣ ಮಾಡುತ್ತಾರೆ.ಇದರ ಪರಿಣಾಮವೇ ಡಾರ್ಕ್ ಸರ್ಕಲ್. ನಿದ್ರೆ ಸರಿಯಾಗಿ ಮಾಡದೆ ಯಾವುದೇ ಕ್ರೀಮ್ ಹಚ್ಚಿದರೆ ಕೂಡ ವ್ಯರ್ಥ.ಆದ್ದರಿಂದ ಹೆಚ್ಚು ನಿದ್ರೆ ಮಾಡಿ ಆರೋಗ್ಯ ಹೆಚ್ಚಿಸಿಕೊಳ್ಳುವುದರ ಜೊತೆಗೆ ಡಾರ್ಕ್ ಸರ್ಕಲ್ ನಿಂದ ದೂರವಿರಬಹುದು.
2.ಬಾದಾಮಿ ಎಣ್ಣೆ:
ಪ್ರತಿನಿತ್ಯ ದಿನಕ್ಕೆ 2 ಬಾರಿ ಎಂದರೆ ಬೆಳಿಗ್ಗೆ ಮತ್ತು ರಾತ್ರಿ ಮಲಗುವ ಮುನ್ನ ಈ ಬಾದಾಮಿ ಎಣ್ಣೆಯಿಂದ ನಿಮ್ಮ ಕಣ್ಣಿನ ಕೆಳ ಭಾಗವನ್ನು 2-3ನಿಮಿಷ ಮಸಾಜ್ ಮಾಡಿಕೊಳ್ಳಿ.ಆನಂತರ ಅದನ್ನು ಹತ್ತು ನಿಮಿಷಗಳ ಕಾಲ ಹಾಗೆಯೇ ಬಿಟ್ಟು ತದನಂತರ ತಣ್ಣಗಿನ ನೀರಿನಿಂದ ಮುಖ ತೊಳೆದುಕೊಳ್ಳಿ.ಹೀಗೆ ಮಾಡುವುದರಿಂದ ಡಾರ್ಕ್ ಸರ್ಕಲ್ ಕಡಿಮೆಯಾಗುತ್ತಾ ಬರುತ್ತದೆ.

3. ಸೌತೆಯ ರಸವನ್ನು ಬಳಸಿ:
ಎಳೆಯ ಸೌತೆ ಕಾಯಿಯಲ್ಲಿ astringent ಗುಣವಿದೆ.ಇದು ನಮ್ಮ ಚರ್ಮವನ್ನು ಕಾಂತಿಯುತವಾಗಿ ಇಡಲು ಸಹಾಯ ಮಾಡುತ್ತದೆ.ಈ ರಸವನ್ನು ತೆಗೆಯುವ ವಿಧಾನ ಎಂದರೆ ಸೌತೆಕಾಯಿ ತುದಿಯನ್ನು ಕತ್ತರಿಸಿಕೊಳ್ಳಿ ಆನಂತರ ಆ ಎರಡೂ ತುದಿಯನ್ನು ಚೆನ್ನಾಗಿ ಉಜ್ಜಿ.ಅದರಲ್ಲಿ ಬರುವ ರಸವನ್ನು ಚಮಚದಿಂದ ತೆಗೆಯಿರಿ.ಇದೇ ರೀತಿ ಮಾಡುತ್ತಾ ಬಂದರೆ 1 ಚಮಚದ ರಸವನ್ನು ನಾವು ಸಂಗ್ರಹಿಸಬಹುದು.ಆ ಸಂಗ್ರಹಿಸಿದ ರಸವನ್ನು ಕಣ್ಣುಗಳ ಕೆಳ ಭಾಗಕ್ಕೆ ಹಚ್ಚಿ ಹತ್ತರಿಂದ ಹದಿನೈದು ನಿಮಿಷಗಳ ಕಾಲ ಹಾಗೆ ಬಿಟ್ಟು ತದನಂತರ ತರಣಿ ತಣ್ಣೀರಿನಿಂದ ತೊಳೆಯಿರಿ.ಹೀಗೆ ಮಾಡುವುದರಿಂದ ನಿಧಾನವಾಗಿ ನಾವು ಈ ಡಾರ್ಕ್ ಸರ್ಕಲ್ ನಿಂದ ದೂರವಿರಬಹುದು.

4 ಅಲೋವೆರಾ ಜೆಲ್:
1ಚಮಚ ಅಲೋವೆರಾ ಜೆಲ್ ಅನ್ನು ತೆಗೆದುಕೊಳ್ಳಿ ತದನಂತರ ಈ ಜೊಲ್ಲನ್ನು ಡಾರ್ಕ್ ಸರ್ಕಲ್ ಗೆ ಹಚ್ಚಿ ಹತ್ತರಿಂದ ಹದಿನೈದು ನಿಮಿಷ ಮಸಾಜ್ ಮಾಡಿ.ಅದನ್ನು ರಾತ್ರಿಯಿಡೀ ಹಾಗೆಯೇ ಬಿಟ್ಟು ಬೆಳಿಗ್ಗೆ ಎದ್ದ ನಂತ್ರ ಅದನ್ನು ತೊಳೆಯಿರಿ.ಹೀಗೆ ಡಾರ್ಕ್ ಸರ್ಕಲ್ ಹೋಗುವವರೆಗೂ ಪ್ರತಿನಿತ್ಯ ಈ ಟಿಪ್ಸ್ ಪಾಲಿಸಿ.
5.ಮೊಸರು:
2ಚಮಚ ಮೊಸರನ್ನು ತೆಗೆದುಕೊಳ್ಳಿ ಅದಕ್ಕೆ 1ಟೀ ಚಮಚ ನಿಂಬೆ ರಸವನ್ನು ಸೇರಿಸಿ.ಆ ನಂತರ ಅದನ್ನು ಚೆನ್ನಾಗಿ ಮಿಕ್ಸ್ ಮಾಡಿ ಈ ಪೇಸ್ಟ್ ಅನ್ನು ಕಣ್ಣಿನ ಕೆಳಗೆ ಹಚ್ಚಿ 5 ರಿಂದ 10 ನಿಮಿಷಗಳ ಕಾಲ ಬಿಟ್ಟು ತೊಳೆಯಿರಿ.ಹೀಗೆ ವಾರಕ್ಕೆ 2ಬಾರಿ ಈ ವಿಧಾನವನ್ನು ಅನುಸರಿಸಿ.ಪರಿಹಾರವನ್ನು ಪ್ರಯತ್ನಿಸುವ ಮೊದಲು ಪ್ಯಾಚ್ ಟೆಸ್ಟ್ ಮಾಡುವುದು ಉತ್ತಮ.
6.ಗ್ರೀನ್ ಟೀ ಬ್ಯಾಗ್ :
2ಗ್ರೀನ್ ಟೀ ಬ್ಯಾಗ್ ಗಳನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ನೆನೆಯಲು ಬಿಡಿ.ಆನಂತರ ಈ ಗ್ರೀನ್ ಟೀ ಬ್ಯಾಗ್ ಗಳನ್ನು ಸ್ವಲ್ಪ ಸಮಯದ ಕಾಲ ನಿಮ್ಮ ಕಣ್ಣುಗಳ ಮೇಲೆ ಹಿಡಿ. 10 ರಿಂದ 15 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ಆನಂತರ ಅದನ್ನು ತಣ್ಣಗಿನ ನೀರಿನಿಂದ ಸ್ವಚ್ಛ ಮಾಡಿಕೊಳ್ಳಿ ಹೀಗೆ ಪ್ರತಿನಿತ್ಯ ಮಾಡುವುದರಿಂದ ನಿಮ್ಮ ಡಾರ್ಕ್ ಸರ್ಕಲ್ ಗಳನ್ನು ದೂರ ಮಾಡಿಕೊಳ್ಳಬಹುದು.
7 .ನಿಂಬೆ ರಸ:

ಸ್ವಲ್ಪ ಪ್ರಮಾಣದ ಅಕ್ಕಿಯನ್ನು ತೆಗೆದುಕೊಂಡು ಅದನ್ನು ನಿಂಬೆರಸ ಯಲ್ಲಿ 5ನಿಮಿಷ ನೆನೆಯಲು ಬಿಡಿ.ಆ ನೆನೆದ ಹತ್ತಿಯನ್ನು ತೆಗೆದುಕೊಂಡು ನಿಮ್ಮ ಕಣ್ಣಿನ ಕೆಳಗೆ ಅಪ್ಲೈ ಮಾಡಿ.ಹೀಗೆ ಪ್ರತಿನಿತ್ಯ ಮಾಡುತ್ತ ಬಂದರೆ ನಿಮ್ಮ ಡಾರ್ಕ್ ಸರ್ಕಲ್ ಮಾಯವಾಗುತ್ತದೆ