Home Remedy for Pink Lips: ಸಾಮಾನ್ಯವಾಗಿ ತುಟಿಯ (Lips) ಬಣ್ಣ ಕಪ್ಪಾಗಿದ್ದು, ಕೆಲವರ ತುಟಿ ಮಾತ್ರ ಗುಲಾಬಿ ಬಣ್ಣದಿಂದ ಕೂಡಿರುತ್ತೆ ಅದನ್ನು ತುಟಿಯ ನೈಸರ್ಗಿಕ ಬಣ್ಣ ಎಂದು ಕರೆಯಲಾಗುತ್ತೆ.
ಇದರ ಹೊರತಾಗಿ ತುಟಿಯ ಬಣ್ಣ ಗಾಢ ಅಥವಾ ತೆಳುವಾಗಬಹುದು. (Home Remedy for Pink Lips) ಕೆಲವರಲ್ಲಿ ಆನುವಂಶಿಕ ಕೊರತೆಗಳಿಂದಾಗಿ ನೈಸರ್ಗಿಕವಾಗಿಯೇ ಕಪ್ಪು ತುಟಿಗಳು ಕಂಡುಬಂದಿರಬಹುದು.
ಧೂಮಪಾನ, ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು ಅಥವಾ ನಿರ್ಜಲೀಕರಣದಿಂದಾಗಿ ತುಟಿ ಬೇರೆ ಬೇರೆ ಬಣ್ಣಕ್ಕೆ ತಿರುಗಿರಬಹುದು.ಇನ್ನು ಕೆಲವರಲ್ಲಿ ಆನುವಂಶಿಕ ಕೊರತೆಗಳಿಂದಾಗಿ
ನೈಸರ್ಗಿಕವಾಗಿಯೇ ಕಪ್ಪು ತುಟಿಗಳು (Black Lips) ಕಂಡುಬರುತ್ತದೆ. ಆದರೆ ಮತ್ತೆ ಗುಲಾಬಿ ತುಟಿಗಳನ್ನು ಪಡೆಯಲು, ನೀವು ಸರಳ ಮನೆಮದ್ದುಗಳನ್ನು ಪ್ರಯತ್ನಿಸಬಹುದಾಗಿದ್ದು,
ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
- ಕಾರಣಗಳು:
• ಸರಿಯಾದ ಜಲಸಂಚಯನದ ಕೊರತೆಯು ತುಟಿಗಳು ಒಣಗಿ, ಬಿರುಕು ಮತ್ತು ಮಸುಕಾದಂತೆ ಕಾಣಲು ಕಾರಣವಾಗಬಹುದು ತಂಬಾಕಿನಲ್ಲಿರುವ ರಾಸಾಯನಿಕಗಳು ಕಾಲಾನಂತರದಲ್ಲಿ
ತುಟಿಗಳು ಕಪ್ಪಾಗಲು ಕಾರಣವಾಗಬಹುದು.
• ಕೆಂಪು ರಕ್ತ ಕಣಗಳು ಅಥವಾ ಹಿಮೋಗ್ಲೋಬಿನ್ (Hemoglobin) ಕೊರತೆಯಿಂದ ರಕ್ತಹೀನತೆ ಉಂಟಾಗಿ ತುಟಿಗಳ ಮಸುಕಾದಂತಾಗಲು ಕಾರಣವಾಗಬಹುದು. - • ಸೈನೋಸಿಸ್ (Synopsis), ಇದು ರಕ್ತದಲ್ಲಿ ಸಾಕಷ್ಟು ಆಮ್ಲಜನಕವಿಲ್ಲದಿದ್ದಾಗ ಸಂಭವಿಸುತ್ತದೆ, ಇದು ತುಟಿಗಳು ನೀಲಿ ಬಣ್ಣಕ್ಕೆ ತಿರುಗಲು ಕಾರಣವಾಗುತ್ತದೆ.
• ಸೂರ್ಯನಿಂದ ಬರುವ ನೇರಳಾತೀತ ಕಿರಣಗಳಿಗೆ ಅತಿಯಾಗಿ ಒಡ್ಡಿಕೊಳ್ಳುವುದರಿಂದ ವರ್ಣದ್ರವ್ಯ ಬದಲಾವಣೆಗಳು ಉಂಟಾಗುತ್ತವೆ,
ಇದರಿಂದಾಗಿ ತುಟಿಗಳು ಗಾಢ ಬಣ್ಣಕ್ಕೆ ತಿರುಗುತ್ತದೆ. - • ಕೆಲವು ಆಹಾರಗಳು, ಔಷಧಿಗಳು ಅಥವಾ ಪರಿಸರದ ಅಂಶಗಳಿಂದ ಅಲರ್ಜಿ, ಕೆಂಪಾಗುವಿಕೆ, ಊತ ಅಥವಾ ತುಟಿಯ ಬಣ್ಣದಲ್ಲಿ ಬದಲಾವಣೆಗಳಿಗೆ ಕಾರಣವಾಗಬಹುದು.
• ಕ್ಯಾಂಡಿಡಿಯಾಸಿಸ್ (Candidiasis) ನಂತಹ ಶಿಲೀಂಧ್ರ ಅಥವಾ ಬ್ಯಾಕ್ಟೀರಿಯಾದ (Bacteria) ಸೋಂಕುಗಳು ತುಟಿಯ ಬಣ್ಣ ಮತ್ತು ವಿನ್ಯಾಸದಲ್ಲಿ ಆಗುವ ಬದಲಾವಣೆಗಳಿಗೆ ಕಾರಣವಾಗಬಹುದು.
• ಯಕೃತ್ತು ಅಥವಾ ಮೂತ್ರಪಿಂಡದ ಸಮಸ್ಯೆಗಳು ಕೆಲವೊಮ್ಮೆ ತುಟಿಯ ಬಣ್ಣದಲ್ಲಿ ಬದಲಾವಣೆ ಮಾಡಬಹುದು.
ನೈಸರ್ಗಿಕ ಮಾರ್ಗಗಳು
- ನಿಂಬೆ ರಸ: ನಿಂಬೆ ರಸವು ಸಿಟ್ರಿಕ್ (Citric) ಆಮ್ಲವನ್ನು ಹೊಂದಿರುತ್ತದೆ, ಇದು ಕಪ್ಪು ತುಟಿಗಳ ಬಣ್ಣ ಮಂದವಾಗಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ತಾಜಾ ನಿಂಬೆ
ರಸವನ್ನು ತುಟಿಗಳಿಗೆ ಹಚ್ಚಿ, ಕೆಲವು ನಿಮಿಷಗಳ ಕಾಲ ಬಿಡಿ, ನಂತರ ತೊಳೆದುಕೊಳ್ಳಿ. - ರೋಸ್ ವಾಟರ್: ರೋಸ್ ವಾಟರ್ (Rose Water) ಅದರ ಹೈಡ್ರೇಟಿಂಗ್ ಮತ್ತು ಹಿತವಾದ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಹತ್ತಿ ಉಂಡೆಯನ್ನು ಬಳಸಿ ನಿಮ್ಮ ತುಟಿಗಳಿಗೆ
ರೋಸ್ ವಾಟರ್ ಹಚ್ಚಿ, ಕೆಲವು ನಿಮಿಷಗಳ ನಂತರ ತೊಳೆಯಿರಿ.
- ಜೇನುತುಪ್ಪ: ತುಟಿಗಳಿಗೆ ಜೇನುತುಪ್ಪವನ್ನು (Honey) ಹಚ್ಚಿ ಮತ್ತು ತೊಳೆಯುವ ಮೊದಲು 15 ರಿಂದ 20 ನಿಮಿಷಗಳ ಕಾಲ ಬಿಡಬೇಕು. ಜೇನುತುಪ್ಪವು ನೈಸರ್ಗಿಕ ಹ್ಯೂಮೆಕ್ಟಂಟ್
(Humectant) ಎಂದು ಹೆಸರುವಾಸಿಯಾಗಿದ್ದು, ಇದು ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. - ತೆಂಗಿನ ಎಣ್ಣೆ: ತೆಂಗಿನ ಎಣ್ಣೆ ಮಾಯಿಶ್ಚರೈಸಿಂಗ್ ಆಗಿದೆ ಮತ್ತು ತುಟಿಯ ವಿನ್ಯಾಸವನ್ನು ಸುಧಾರಿಸಲು ಇದು ಸಹಾಯ ಮಾಡುತ್ತದೆ. ರಾತ್ರಿ ಸಮಯದಲ್ಲಿ ತುಟಿಗಳಿಗೆ ಸ್ವಲ್ಪ ತೆಂಗಿನ
ಎಣ್ಣೆಯನ್ನು ಹಚ್ಚಿ ಮತ್ತು ಅದನ್ನು ಹಾಗೆಯೇ ಬಿಡಿ. - ಸೌತೆಕಾಯಿ: ಸೌತೆಕಾಯಿ, ಹಿತವಾದ ಮತ್ತು ಹೈಡ್ರೇಟಿಂಗ್ (Hydrating) ಗುಣಗಳನ್ನು ಹೊಂದಿದೆ, ಆದ್ದರಿಂದ ಸೌತೆಕಾಯಿ ರಸ ಅಥವಾ ಸೌತೆಕಾಯಿಯ ತೆಳುವಾದ ತುಂಡುಗಳನ್ನು
ತುಟಿಗಳಿಗೆ ಹಚ್ಚಿಕೊಳ್ಳಿ ನಂತರ 10 ರಿಂದ 15 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ಬಳಿಕ ತೊಳೆದುಕೊಳ್ಳಿ.
- ಅಲೋವೆರಾ ಜೆಲ್: ಅಲೋವೆರಾ (Aloevera Gel) ತುಟಿಯ ಅಂದವನ್ನು ಹೆಚ್ಚಿಸುವ ಮತ್ತು ಮಾಯಿಶ್ಚರೈಸಿಂಗ್ ಗುಣಗಳನ್ನು ಹೊಂದಿದೆ. ಶುದ್ಧ ಅಲೋವೆರಾ ಜೆಲ್ ಅನ್ನು ತುಟಿಗಳಿಗೆ
ಹಚ್ಚಿ ನಂತರ 15 ರಿಂದ 20 ನಿಮಿಷಗಳ ಬಳಿಕ ತೊಳೆಯಿರಿ. - ಬೀಟ್ರೂಟ್: ಬೀಟ್ರೂಟ್ (Beetroot) ನೈಸರ್ಗಿಕ ವರ್ಣದ್ರವ್ಯಗಳನ್ನು ಹೊಂದಿರುತ್ತದೆ, ಅದು ತುಟಿಗಳಿಗೆ ಒಳ್ಳೆಯ ಬಣ್ಣವನ್ನು ಸೇರಿಸಬಹುದು. ಬೀಟ್ರೂಟ್ ರಸವನ್ನು ತೆಂಗಿನ ಎಣ್ಣೆಯೊಂದಿಗೆ
ಬೆರೆಸಿ, ನೈಸರ್ಗಿಕ ಲಿಪ್ ಬಾಮ್ ತಯಾರಿಸಿಟ್ಟುಕೊಳ್ಳಿ ಮತ್ತು ಅಗತ್ಯಕ್ಕೆ ತಕ್ಕಂತೆ ನಿಮ್ಮ ತುಟಿಗಳಿಗೆ ಹಚ್ಚಿ. - ಬಾದಾಮಿ ಎಣ್ಣೆ: ಬಾದಾಮಿ ಎಣ್ಣೆಯಲ್ಲಿ ವಿಟಮಿನ್ ಗಳು (Vitamins) ಸಮೃದ್ಧವಾಗಿದ್ದು, ಹಾಗಾಗಿ ಇವು ತುಟಿಗಳನ್ನು ತೇವಗೊಳಿಸಲು ಮತ್ತು ಪೋಷಿಸಲು ಸಹಾಯ ಮಾಡುತ್ತದೆ. ತುಟಿಗಳಿಗೆ
ಸ್ವಲ್ಪ ಪ್ರಮಾಣದ ಬಾದಾಮಿ ಎಣ್ಣೆಯನ್ನು ಹಚ್ಚಿ ಮತ್ತು ತೊಳೆಯುವ ಮೊದಲು ಕೆಲವು ನಿಮಿಷಗಳ ಕಾಲ ಬಿಡಿ. ಹೆಚ್ಚುವರಿ ಪ್ರಯೋಜನಗಳಿಗಾಗಿ ನೀವು ಎಣ್ಣೆಯನ್ನು ಜೇನುತುಪ್ಪದೊಂದಿಗೆ ಬೆರೆಸಬಹುದು.
- ಪುದೀನಾ: ಪುದೀನಾ ನಿಮ್ಮ ತುಟಿಯನ್ನು ತಂಪಾಗಿಸುವ ಗುಣವನ್ನು ಹೊಂದಿದೆ, ಹಾಗಾಗಿ ಪುದೀನಾ ಎಲೆಗಳನ್ನು ಪುಡಿ ಮಾಡುವ ಮೂಲಕ ನೀವು ಅದನ್ನು ಬಳಸಬಹುದು. ಅದರ ರಸ ಅಥವಾ
ಎಲೆಗಳನ್ನು ತುಟಿಗಳಿಗೆ ಹಚ್ಚಿಕೊಳ್ಳಬಹುದು, ತೊಳೆಯುವ ಮೊದಲು 10 ರಿಂದ 15 ನಿಮಿಷಗಳ ಕಾಲ ಬಿಡಬೇಕು. - ಅರಿಶಿನ: ಅರಿಶಿನವು ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು, ಅರಿಶಿನ ಪುಡಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ಒಂದು ಪೇಸ್ಟ್ ತಯಾರಿಸಿ.
ಇದನ್ನು ನಿಮ್ಮ ತುಟಿಗಳಿಗೆ ಹಚ್ಚಿ, ಕೆಲವು ನಿಮಿಷಗಳ ಕಾಲ ಬಿಡಿ, ನಂತರ ತೊಳೆಯಿರಿ.
ಇದನ್ನು ಓದಿ: ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕಮಾಂಡ್ ಸೆಂಟರ್ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ
- ಭವ್ಯಶ್ರೀ ಆರ್ ಜೆ