ಬೆಳಗಾವಿ, ಮೇ. 25: ರಾಜ್ಯದಲ್ಲಿ ಆತಂಕ ಮೂಡಿಸಿರುವ ಮಹಾಮಾರಿ ಕೊರೊನಾ ಎರಡನೇ ಅಲೆಯ ಆರ್ಭಟ ತಗ್ಗಿಸುವ ನಿಟ್ಟಿನಲ್ಲಿ ವೈದ್ಯಕೀಯ ಲೋಕ ಭಾರೀ ಕಸರತ್ತು ನಡೆಸುತ್ತಿದ್ದರೆ. ಇತ್ತ ಕೊರೊನಾ ಸೋಂಕು ಓಡಿಸುವ ಸಲಯವಾಗಿ ವಾತಾವರಣ ಶುದ್ಧಿ ಮಾಡಲು ಬಿಜೆಪಿ ಶಾಸಕ ಅಭಯ್ ಪಾಟೀಲ್ ಹೋಮ, ಹವನ ಮೊರೆ ಹೋಗಿದ್ದಾರೆ.
ಬೆಳಗಾವಿ ದಕ್ಷಿಣ ಮತಕ್ಷೇತ್ರದ ಪ್ರತಿ ಗಲ್ಲಿ, ಬಡಾವಣೆಯಲ್ಲಿ ಅಭಯ ಪಾಟೀಲ್ ನೇತೃತ್ವದಲ್ಲಿ ಹೋಮ, ಹವನ ಕಾರ್ಯ ನಡೆಸಲಾಗಿದೆ. ದಕ್ಷಿಣ ಮತಕ್ಷೇತ್ರದ ಎಲ್ಲ ಗಲ್ಲಿ, ಬಡಾವಣೆಗಳ ಮನೆಗಳ ಮುಂದೆ ಅಗ್ನಿಕುಂಡ ಸ್ಥಾಪನೆ, ಅಗ್ನಿಕುಂಡದಲ್ಲಿ ಭೆರಣಿ, ಕರ್ಪೂರ, ತುಪ್ಪ, ಗುಗ್ಗಳ, ಬೇವಿನ ಎಲೆ, ಅಕ್ಕಿ, ಕವಡಿ ಧೂಪ ಹಾಗೂ ಲವಂಗ ಹಾಕಿ ಹೋಮ ಮಾಡಲಾಗಿದೆ.
ಹೋಮ ಹವನದಿಂದ ವಾತಾವರಣ ಶುದ್ಧಿಯಾಗಿ ಸೋಂಕು ನಿವಾರಣೆ ಆಗಲಿದೆ ಎಂಬ ನಂಬಿಕೆಯಿಂದ ಒಂದೇ ದಿನ 50 ಕಡೆಗಳಲ್ಲಿ ಹೋಮ ಮಾಡಲಾಗಿದೆ. ಅಲ್ಲದೇ ಜೂನ್ 15ರವರೆಗೆ ಕ್ಷೇತ್ರದ ಎಲ್ಲ ಕಡೆಯಲ್ಲಿ ಹೋಮ ಮಾಡಲಾಗುವುದು ಎಂದು ಅಭಯ ಪಾಟೀಲ್ ಹೇಳಿದ್ದಾರೆ.
ಇನ್ನೂ ಲಾಕ್ ಡೌನ್ ನಡುವೆ ಬಿಜೆಪಿ ಶಾಸಕರ ನೇತೃತ್ವದಲ್ಲಿ ಹಲವಾರು ಮಂದಿ ಒಂದೆಡೆ ಸೇರಿ ಹೋಮ, ಹವನ ನಡೆಸಿರುವುದಕ್ಕೆ ಆಕ್ಷೇಪ ಸಹ ವ್ಯಕ್ತವಾಗಿದೆ.